ಹಣಕಾಸು ಸಚಿವಾಲಯ

ವೈರಿಯ ಶೇರುಗಳನ್ನು ಮಾರಾಟ ಮಾಡಲು ಪ್ರಕ್ರಿಯೆ ಮತ್ತು ಪರಸ್ಪರ ಹೊಂದಿಸಿಕೊಂಡು ಕೆಲಸ ಮಾಡುವ ವ್ಯವಸ್ಥೆ ರೂಪಿಸಲು ಸಂಪುಟದ ಅಂಗೀಕಾರ.

Posted On: 08 NOV 2018 8:41PM by PIB Bengaluru

ವೈರಿಯ ಶೇರುಗಳನ್ನು ಮಾರಾಟ ಮಾಡಲು ಪ್ರಕ್ರಿಯೆ ಮತ್ತು ಪರಸ್ಪರ ಹೊಂದಿಸಿಕೊಂಡು ಕೆಲಸ ಮಾಡುವ ವ್ಯವಸ್ಥೆ ರೂಪಿಸಲು ಸಂಪುಟದ ಅಂಗೀಕಾರ.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ವೈರಿಯು ಉದ್ಯಮಗಳಲ್ಲಿ ತೊಡಗಿಸಿರುವ ಪಾಲು ಬಂಡವಾಳವಾದ ಶೇರುಗಳನ್ನು  ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಮತ್ತು ಪರಸ್ಪರ ಹೊಂದಿಸಿಕೊಂಡು ಕೆಲಸ ಮಾಡುವ ವ್ಯವಸ್ಥೆಯನ್ನು ರೂಪಿಸಲು ತನ್ನ ಅನುಮೋದನೆಯನ್ನು ನೀಡಿತು. ವಿವರಗಳು ಈ ಕೆಳಗಿನಂತಿವೆ:

 

i.       ವೈರಿಯ ಆಸ್ತಿ ಕಾಯ್ದೆ 1968 ರಡಿಯಲ್ಲಿ ಸೆಕ್ಷನ್ 8 ಎ ಯ ಉಪ ಸೆಕ್ಷನ್ 1 ರಡಿಯಲ್ಲಿ ಗೃಹ ವ್ಯವಹಾರಗಳು/ ಭಾರತದ ವೈರಿ ಆಸ್ತಿಗಳ ಕಸ್ಟೋಡಿಯನ್ (ಸಿ.ಇ.ಪಿ.ಐ.) ಅಡಿಯಲ್ಲಿರುವ ವೈರಿ ಶೇರುಗಳನ್ನು ಮಾರಾಟ ಮಾಡಲು ’ತಾತ್ವಿಕ ಅನುಮೋದನೆ’ ನೀಡಲಾಗಿದೆ.

 

ii.     ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ಆಡಳಿತ ಇಲಾಖೆಗೆ ವೈರಿ ಆಸ್ತಿ ಕಾಯ್ದೆ 1968 ರಡಿಯಲ್ಲಿ ಸೆಕ್ಷನ್ 8 ಎ ಯ ಉಪ ಸೆಕ್ಷನ್ 7ರ ಪ್ರಸ್ತಾವನೆಗಳನ್ವಯ ಅವುಗಳನ್ನು ಮಾರಾಟ ಮಾಡಲು ಅಧಿಕಾರ ನೀಡಲಾಗಿದೆ.

 

iii.    ಮಾರಾಟದಿಂದ ಬಂದ ಆದಾಯವನ್ನು ಹಣಕಾಸು ಸಚಿವಾಲಯ ನಿರ್ವಹಿಸುವ ಸರಕಾರಿ ಖಾತೆಯಲ್ಲಿ  ಹೂಡಿಕೆ ಹಿಂತೆಗೆತ ಆದಾಯವಾಗಿ ಠೇವಣಿ ಮಾಡತಕ್ಕದ್ದು.

 

ವಿವರಗಳು:

 

1.      

1.      

1.      996 ಕಂಪೆನಿಗಳಲ್ಲಿ 20,323  ಶೇರುದಾರರು ಹೊಂದಿರುವ  ಒಟ್ಟು 6,50,75,877 ಶೇರುಗಳು ಸಿ.ಇ.ಪಿ.ಐ. ವಶದಲ್ಲಿವೆ. 996  ಕಂಪೆನಿಗಳಲ್ಲಿ 588 ಕಾರ್ಯಾಚರಿಸುತ್ತಿವೆ/ಕ್ರಿಯಾಶೀಲ ಕಂಪೆನಿಗಳಾಗಿವೆ. ಇವುಗಳಲ್ಲಿ 139  ಕಂಪೆನಿಗಳು ಲಿಸ್ಟೆಡ್ ಆಗಿದ್ದರೆ ಇನ್ನುಳಿದವು ಅನ್ ಲಿಸ್ಟೆಡ್ ಆಗಿವೆ. ಈ ಶೇರುಗಳನ್ನು ಮಾರಾಟ ಮಾಡಲು ಹಣಕಾಸು ಸಚಿವರ ಅಧ್ಯಕ್ಷತೆಯ ಮತ್ತು ರಸ್ತೆ ಸಾರಿಗೆ ಸಚಿವರ ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿ ಸಚಿವರು ಮತ್ತು ಗೃಹ ಸಚಿವರನ್ನು  ಒಳಗೊಂಡ ಪರ್ಯಾಯ ವ್ಯವಸ್ಥೆ (ಎ.ಎಂ.) ಒಪ್ಪಿಗೆ ನೀಡಬೇಕಾಗಿದೆ. ಈ ಎ.ಎಂ.ಗೆ ಡಿ.ಐ.ಪಿ.ಎ.ಎಂ. ಕಾರ್ಯದರ್ಶಿ, ಎಂ.ಎಚ್.ಎ. ಯ ಕಾರ್ಯದರ್ಶಿ (ಡಿ.ಇ.ಎ., ಡಿ.ಎಲ್.ಎ. , ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ  ಮತ್ತು ಸಿ.ಇ.ಪಿ.ಐ.ಗಳ ಪ್ರತಿನಿಧಿಗಳನ್ನು ಒಳಗೊಂಡ) ಸಹ ಅಧ್ಯಕ್ಷರಾಗಿರುವ ಉನ್ನತಾಧಿಕಾರದ ಸಮಿತಿಯು ಬೆಂಬಲ ನೀಡಲಿದ್ದು, ಮಾರಾಟ ಮಾಡುವ ಶೇರುಗಳ ಪ್ರಮಾಣ, ದರ, ದರ-ವ್ಯಾಪ್ತಿ,  ಅದಕ್ಕೆ ಸಂಬಂಧಿಸಿದ ತತ್ವಗಳು/ಹೊಂದಿಕೊಂಡು ಕೆಲಸ ಮಾಡುವ ವ್ಯವಸ್ಥೆಗಳು ಇತ್ಯಾದಿಗಳ ಬಗ್ಗೆ ತನ್ನ ಶಿಫಾರಸುಗಳನ್ನು ನೀಡಲಿದೆ.  

 

1.      

1.      

2.     ವೈರಿ ಶೇರುಗಳನ್ನು ಮಾರಾಟ ಮಾಡುವ ಯಾವುದೇ ಕ್ರಮ ಆರಂಭಿಸುವುದಕ್ಕೆ ಮೊದಲು ಸಿ.ಇ.ಪಿ.ಐ. ಯು ವೈರಿ ಶೇರುಗಳ ಮಾರಾಟ ಈಗಿರುವ ಕಾನೂನುಗಳ ವ್ಯಾಪ್ತಿಯಲ್ಲಿ  ಯಾವುದೇ ನ್ಯಾಯಾಲಯದ, ನ್ಯಾಯ ಮಂಡಳಿಯ, ಅಥವಾ ಇನ್ಯಾವುದೇ ಪ್ರಾಧಿಕಾರದ ತೀರ್ಪಿನ  ಯಾ ಡಿಕ್ರಿ ಅಥವಾ ಆದೇಶದ ಉಲ್ಲಂಘನೆಯಾಗುವುದಿಲ್ಲ ಮತ್ತು ಸರಕಾರ ಅದನ್ನು ಮಾರಾಟ ಮಾಡಬಹುದು ಎಂಬ ಬಗ್ಗೆ ಪ್ರಮಾಣೀಕರಿಸಬೇಕಾಗುತ್ತದೆ. 

 

1.      

1.      

3 ಮರ್ಚಂಟ್ ಬ್ಯಾಂಕರ್  ಗಳು, ಕಾನೂನು ಸಲಹೆಗಾರರು, ಮಾರಾಟ ಮಾಡುವ ದಲ್ಲಾಳಿಗಳು ಇತ್ಯಾದಿ ಸೇರಿದಂತೆ ವೈರಿಯ ಚರ ಆಸ್ತಿಗಳನ್ನು ವಿಲೇವಾರಿ ಮಾಡಲು ಅವಶ್ಯವಿರುವ ಸಲಹೆಗಾರರು ಮತ್ತು ಮಧ್ಯವರ್ತಿಗಳನ್ನು ಡಿ.ಐ.ಪಿ.ಎ.ಎಂ. ಮೂಲಕ ಮುಕ್ತ ಟೆಂಡರ್/ ಮಿತಿ ವಿಧಿಸಿದ ಟೆಂಡರ್ ಪ್ರಕ್ರಿಯೆಯ ಅನ್ವಯ ನೇಮಿಸಿಕೊಳ್ಳಲಾಗುವುದು. ಮಾರಾಟ ಪ್ರಕ್ರಿಯೆಯನ್ನು ಅಂತರ-ಸಚಿವಾಲಯ ಗುಂಪು (ಐ.ಎಂ.ಜಿ.) ನಿರ್ದೇಶಿಸಲಿದೆ.

 

1968 ರ ಕಾಯ್ದೆಯಲ್ಲಿ ’ವೈರಿ’ ಎಂಬುದಕ್ಕೆ ವ್ಯಾಖ್ಯೆ ಈ ಕೆಳಗಿನಂತಿದೆ.

 

“ವೈರಿ” ಅಥವಾ ’ವೈರಿ ವ್ಯಕ್ತಿ’ ಅಥವಾ ’ವೈರಿ ಸಂಸ್ಥೆ” , ಅಂದರೆ ಓರ್ವ ವ್ಯಕ್ತಿ ಅಥವಾ ದೇಶ,  ಆ ಪ್ರಕರಣದಲ್ಲಿ ಹೇಗಿದೆಯೋ ಹಾಗೆ ಭಾರತದ ರಕ್ಷಣಾ ಕಾಯ್ದೆ ಮತ್ತು ನಿಯಮಾವಳಿಗಳ ಅನ್ವಯ ವೈರಿಯಾಗಿದ್ದರೆ, ವೈರಿ ಪ್ರಭುತ್ವಕ್ಕೆ ಒಳಪಟ್ಟ ವ್ಯಕ್ತಿಯಾಗಿದ್ದರೆ    ಅಥವಾ ವೈರಿ ಸಂಸ್ಥೆಯಾಗಿದ್ದರೆ ಎಂದು ಹೇಳುತ್ತದೆ. ಆದರೆ ಇದು ಭಾರತದ ನಾಗರಿಕನನ್ನು ಒಳಗೊಂಡಿರುವುದಿಲ್ಲ. 2017ರ ತಿದ್ದುಪಡಿಯಲ್ಲಿ ಇದಕ್ಕೆ “..ಆತನ ಕಾನೂನು ಬದ್ದ ಉತ್ತರಾಧಿಕಾರಿ ಅಥವಾ ಉತ್ತರಾಧಿಕಾರಿ ಸೇರಿದಂತೆ ಆತ ಭಾರತದ ನಾಗರಿಕನಾಗಿರಲಿ ಅಥವಾ ಇಲ್ಲದಿರಲಿ ಅಥವಾ ವೈರಿ ದೇಶವಲ್ಲದ ದೇಶದ ನಾಗರಿಕನಾಗಿರಲಿ, ಅಥವಾ ವೈರಿ....ರಾಷ್ಟ್ರೀಯತೆಯನ್ನು ಬದಲಿಸಿದ ವ್ಯಕ್ತಿಯಾಗಿರಲಿ “ ಎಂದು ಸೇರಿಸಲಾಗಿದೆ.

 

ಪರಿಣಾಮ:

 

1 .ಈ ನಿರ್ಧಾರ  1968 ರಲ್ಲಿ ವೈರಿ ಆಸ್ತಿ ಕಾಯ್ದೆ ಜಾರಿಗೆ ಬಂದ ಬಳಿಕ ದಶಕಗಳಿಂದ ಸುಪ್ತಾವಸ್ಥೆಯಲ್ಲಿರುವ ವೈರಿಯ ಶೇರುಗಳ ವಿಕ್ರಯ ಮತ್ತು  ನಗದೀಕರಣಕ್ಕೆ ಅವಕಾಶ ಒದಗಿಸಲಿದೆ.

 

2 .2017ರ ತಿದ್ದುಪಡಿಯೊಂದಿಗೆ ವೈರಿ ಆಸ್ತಿಯನ್ನು ವಿಲೇವಾರಿ ಮಾಡಲು ಶಾಸನಾತ್ಮಕ ಪ್ರಸ್ತಾವನೆಯನ್ನು ರೂಪಿಸಲಾಗಿದೆ.

 

3. ಇದರ ಅನುಮೋದನೆಯೊಂದಿಗೆ , ಈಗ, ವೈರಿಯ ಶೇರುಗಳನ್ನು ಮಾರಾಟ ಮಾಡಲು ಪ್ರಕ್ರಿಯೆ ಮತ್ತು ವ್ಯವಸ್ಥೆಯನ್ನು ಒಳಗೊಂಡ ಚೌಕಟ್ಟನ್ನು ಸಾಂಸ್ಥಿಕವಾಗಿ ನಿರ್ಮಾಣ ಮಾಡಲಾಗಿದೆ. 

 

ಪ್ರಮುಖ ಪರಿಣಾಮ :

 

ದಶಕಗಳಿಂದ ಸುಪ್ತಾವಸ್ಥೆಯಲ್ಲಿರುವ ವೈರಿಯ ಚರಾಸ್ತಿಗಳ ನಗದೀಕರಣಕ್ಕೆ ಈ ನಿರ್ಧಾರದಿಂದ ಸಹಾಯವಾಗಲಿದೆ. ಇದರ ಮಾರಾಟದಿಂದ ಬರುವ ಆದಾಯವನ್ನು ಅಭಿವೃದ್ದಿ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಬಹುದಾಗಿದೆ.

 

ಹಿನ್ನೆಲೆ:

 

1.      

i.       ವೈರಿ ಆಸ್ತಿ ಕಾಯ್ದೆ , 1968 ಅನ್ವಯ   ಸಿ.ಇ.ಪಿ.ಐ. ಯು ಭಾರತದ ರಕ್ಷಣಾ ನಿಯಮಗಳು 1962 ರ ಅಡಿಯಲ್ಲಿ ಮತ್ತು ಭಾರತದ ರಕ್ಷಣಾ ನಿಯಮಗಳು 1971  (27.09.1997ರಿಂದ  ಜಾರಿಯಲ್ಲಿರುವಂತೆ  ) ಹೊಂದಿರುವ  ವೈರಿ ಆಸ್ತಿಗಳನ್ನು ಅದರಲ್ಲೇ ಮುಂದುವರಿಸಿಕೊಂಡು ಹೋಗಲು ಆಸ್ಪದ ನೀಡುತ್ತದೆ.

 

a.      

ii.    2017 ರಲ್ಲಿ ಈ ಕಾಯ್ದೆಗೆ ಸೆಕ್ಷನ್ 8 ಎ ಗೆ  ವಿಧಿರೂಪದ ತಿದ್ದುಪಡಿ ತಂದು ಸಿ.ಇ.ಪಿ.ಐ. ಗೆ ವೈರಿ ಆಸ್ತಿಯನ್ನು ಮಾರಾಟ ಮಾಡಲು ಅಧಿಕಾರ ನೀಡಲಾಗಿದೆ. ಮುಂದುವರೆದು,

 

b.    ಹಾಗಿದ್ದರೂ  ಯಾವುದೇ ನ್ಯಾಯಾಲಯದ , ನ್ಯಾಯ ಮಂಡಳಿಯ ಅಥವಾ ಇತರ ಯಾವುದೇ ಪ್ರಾಧಿಕಾರದ  ತೀರ್ಪು, ಡಿಕ್ರಿ, ಅಥವಾ ಆದೇಶ ಏನೇ ಒಳಗೊಂಡಿದ್ದರೂ , ಅಥವಾ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನಡಿ, ಕಸ್ಟೋಡಿಯನ್ , ಕೇಂದ್ರ ಸರಕಾರ ಇದಕ್ಕಾಗಿ ನಿರ್ದಿಷ್ಟಪಡಿಸಿದ  ಅವಧಿಯೊಳಗೆ ಮಾರಾಟ ಅಥವಾ ಇತರ ಮಾರ್ಗದ ಮೂಲಕ , ಆ ಪ್ರಕರಣ ಹೇಗಿದೆಯೋ ಹಾಗೆ, ಕೇಂದ್ರ ಸರಕಾರದ ಸಾಮಾನ್ಯ ಆದೇಶ ಅಥವಾ ವಿಶೇಷ ಆದೇಶದ ಮೂಲಕ ಪೂರ್ವಾನುಮತಿ ಪಡೆದು ತನ್ನ ಬಳಿ ಇರುವ ವೈರಿ ಆಸ್ತಿಗಳನ್ನು ವೈರಿ ಆಸ್ತಿ (ತಿದ್ದುಪಡಿ ಮತ್ತು ಮೌಲ್ಯಮಾಪನ) ಕಾಯ್ದೆ ,2017 ರ ಅಡಿಯಲ್ಲಿ , ವೈರಿ ಆಸ್ತಿ (ತಿದ್ದುಪಡಿ ಮತ್ತು ಮೌಲ್ಯಮಾಪನ ) ಕಾಯ್ದೆ ,2017ರ  ಕಾನೂನಿನ ನಿಯಮಾನುಸಾರ ವಿಲೇವಾರಿ ಮಾಡಬಹುದಾಗಿದೆ.   

 

b. ಈ ತಿದ್ದುಪಡಿಯನ್ವಯ , ವೈರಿ ಆಸ್ತಿ ಕಾಯ್ದೆ 1968 ರ ಸೆಕ್ಷನ್ 8 ಎ ಯ ಉಪಸೆಕ್ಷನ್ 7 ರಲ್ಲಿರುವಂತೆ , ಕಸ್ಟೋಡಿಯನ್ ಹೊರತಾಗಿಯೂ ವೈರಿಯ ಆಸ್ತಿಯ ವಿಲೇವಾರಿಯನ್ನು ಯಾವುದೇ ಇತರ ಪ್ರಾಧಿಕಾರ ಅಥವಾ ಸಚಿವಾಲಯ ಅಥವಾ ಇಲಾಖೆಯು ಮಾಡುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಬಹುದಾಗಿದೆ.  

 

********** 



(Release ID: 1552233) Visitor Counter : 81


Read this release in: English , Tamil , Telugu