ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪಿ.ಐ.ಬಿ. ಮತ್ತು ಆರ್.ಎನ್.ಐ.ಗೆ ಹೆಚ್ಚುವರಿ ಮಹಾನಿರ್ದೇಶಕರಾಗಿ ಶ್ರೀ ಎಂ. ನಾಗೇಂದ್ರಸ್ವಾಮಿ ಅಧಿಕಾರ ಸ್ವೀಕಾರ
प्रविष्टि तिथि:
29 OCT 2018 2:28PM by PIB Bengaluru

ಪಿ.ಐ.ಬಿ. ಮತ್ತು ಆರ್.ಎನ್.ಐ.ಗೆ ಹೆಚ್ಚುವರಿ ಮಹಾನಿರ್ದೇಶಕರಾಗಿ ಶ್ರೀ ಎಂ. ನಾಗೇಂದ್ರಸ್ವಾಮಿ ಅಧಿಕಾರ ಸ್ವೀಕಾರ
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಶಾಖೆ (ಪಿಐಬಿ) ಮತ್ತು ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ, ಕರ್ನಾಟಕ ಇದರ ಹೆಚ್ಚುವರಿ ಮಹಾನಿರ್ದೇಶಕರಾಗಿ ಹಾಗೂ ಭಾರತೀಯ ಪತ್ರಿಕಾ ನೋಂದಣಾ ಕಚೇರಿಯ (ಆರ್ಎನ್ಐ) ಹೆಚ್ಚುವರಿ ಪತ್ರಿಕಾ ನೋಂದಣಾಧಿಕಾರಿಯಾಗಿ ಶ್ರೀ ಎಂ. ನಾಗೇಂದ್ರಸ್ವಾಮಿ ಅವರು ಇಂದು ಅಧಿಕಾರ ಸ್ವೀಕರಿಸಿದರು.
1993ನೇ ಬ್ಯಾಚ್ನ ಭಾರತೀಯ ವಾರ್ತಾ ಸೇವೆಯ (ಐಐಎಸ್) ಹಿರಿಯ ಅಧಿಕಾರಿಗಳಾದ ಎಂ. ನಾಗೇಂದ್ರಸ್ವಾಮಿ ಅವರು ಈ ಹಿಂದೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಕಾಶವಾಣಿ, ಪಿಐಬಿ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಜಾಹಿರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ ಹಾಗೂ ಕೇಂದ್ರ ಚಲನಚಿತ್ರ ಪ್ರಾಮಾಣೀಕರಣ ಮಂಡಳಿ ಸೇರಿದಂತೆ ವಿವಿಧ ಮಾಧ್ಯಮ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಸೇರಿದಂತೆ ಮುಂಬಯಿ, ಹೈದರಾಬಾದ್ ಹಾಗೂ ನವದೆಹಲಿಯ ಕಾರ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದು, ಈಗ ನವದೆಹಲಿಯ ಪಿಐಬಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆ, (ಎಫ್ಟಿಐಐ) ಪುಣೆಯಲ್ಲಿ ತರಬೇತಿ ಹೊಂದಿರುವ ಇವರು ಅಂತರಾಷ್ಟ್ರೀಯ ಚಿತ್ರೋತ್ಸವ, ಸಾಕ್ಷ್ಯ-ಚಿತ್ರೋತ್ಸವಗಳ ಆಯೋಜನೆ ಮತ್ತು ಯಶಸ್ಸಿಗೂ ಶ್ರಮಿಸಿದ್ದಾರೆ. ವಿವಿಧ ನವಮಾಧ್ಯಮ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಯುನೈಟೆಡ್ ಕಿಂಗ್ಡಮ್ ಮತ್ತು ಆಸ್ಟ್ರೇಲಿಯಾದಲ್ಲಿ ತರಬೇತಿ ಸಹ ಪಡೆದಿದ್ದಾರೆ.
(रिलीज़ आईडी: 1551075)
आगंतुक पटल : 158
इस विज्ञप्ति को इन भाषाओं में पढ़ें:
English