ಪ್ರಧಾನ ಮಂತ್ರಿಯವರ ಕಛೇರಿ
ಪರಾಕ್ರಮ ಪರ್ವವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು, ಕೊನಾರ್ಕ್ ಯುದ್ದ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು
Posted On:
07 OCT 2018 4:16PM by PIB Bengaluru
ಪರಾಕ್ರಮ ಪರ್ವವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು, ಕೊನಾರ್ಕ್ ಯುದ್ದ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕಮಾಂಡರುಗಳ ಸಂಯೋಜಿತ ಸಮಾವೇಶದಲ್ಲಿ ಭಾಗವಹಿಸಲು ಜೋಧಪುರಕ್ಕೆ ಆಗಮಿಸಿದರು.
ಜೋಧಪುರದ ವಾಯುಸೇನಾ ಕೇಂದ್ರಕ್ಕೆ ಆಗಮಿಸಿದ ಅವರು ಮೂರೂ ಸೇನೆಗಳ ರಕ್ಷಾ ಗೌರವವನ್ನು ವೀಕ್ಷಿಸಿದರು.
ಪ್ರಧಾನಮಂತ್ರಿ ಅವರು ಕೊನಾರ್ಕ್ ಯುದ್ದ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು. ನಮ್ಮ ತಾಯಿನಾಡನ್ನು ಸಂರಕ್ಷಿಸಲು ಸಮರ್ಪಿತ ಮತ್ತು ಪ್ರತಿಬದ್ಧವಾಗಿರುವ ಸಶಸ್ತ್ರ ಪಡೆಗಳ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ ಎಂದು ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಮಂತ್ರಿ ಅವರು ಬರೆದರು. ಜೀವತ್ಯಾಗ ಮಾಡಿದ ಧೈರ್ಯಶಾಲಿ ವೀರಯೋಧರನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ಅವರು, ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಕೋನಾರ್ಕ್ ಕ್ರೀಡಾಂಗಣದಲ್ಲಿ ಪ್ರಧಾನಮಂತ್ರಿ ಅವರು ಪರಾಕ್ರಮ ಪರ್ವವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದರು.
(Release ID: 1549412)
Visitor Counter : 87