ಪ್ರಧಾನ ಮಂತ್ರಿಯವರ ಕಛೇರಿ

ಸೆಪ್ಟೆಂಬರ್ 17-18ರಂದು ವಾರಾಣಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ 

Posted On: 16 SEP 2018 5:16PM by PIB Bengaluru

ಸೆಪ್ಟೆಂಬರ್ 17-18ರಂದು ವಾರಾಣಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018ರ ಸೆಪ್ಟೆಂಬರ್ 17 ಮತ್ತು 18ರಂದು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದಾರೆ. 

ಸೆಪ್ಟೆಂಬರ್ 17ರ ಮಧ್ಯಾಹ್ನ ನಗರಕ್ಕೆ ಅವರು ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ನಾರೂರ್ ಗ್ರಾಮಕ್ಕೆ ತೆರಳಲಿದ್ದು, ಅಲ್ಲಿ "ರೂಂ ಟು ರೀಡ್" ಲಾಭರಹಿತ ಸಂಸ್ಥೆ ನೆರವು ನೀಡಿರುವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಡಿ.ಎಲ್.ಡಬ್ಲ್ಯು. ಸಮುಚ್ಛಯದಲ್ಲಿ ಪ್ರಧಾನಮಂತ್ರಿಯವರು ಕಾಶಿ ವಿದ್ಯಾಪೀಠದ ವಿದ್ಯಾರ್ಥಿಗಳೊಂದಿಗೆ ಮತ್ತು ಅವರಿಂದ ನೆರವು ಪಡೆದ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. 

18ರಂದು ಬಿ.ಎಚ್.ಯು. ಆಂಪಿ ಥಿಯೇಟರ್ ನಲ್ಲಿ ಪ್ರಧಾನಮಂತ್ರಿಯವರು ಒಟ್ಟು 500 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉದ್ಘಾಟನೆಗೊಳ್ಳಲಿರುವ ಯೋಜನೆಗಳ ಪೈಕಿ ಹಳೆ ಕಾಶಿಗಾಗಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್); ಮತ್ತು ಬಿ.ಎಚ್.ಯುನಲ್ಲಿ ಅಟಲ್ ಇಂಕ್ಯುಬೇಷನ್ ಕೇಂದ್ರ ಸೇರಿದೆ. ಶಂಕುಸ್ಥಾಪನೆ ನೆರವೇರಿಸಲಿರುವ ಯೋಜನೆಗಳಲ್ಲಿ ಬಿ.ಎಚ್.ಯು.ನಲ್ಲಿ ಪ್ರಾದೇಶಿಕ ನೇತ್ರವಿಜ್ಞಾನ ಕೇಂದ್ರ ಸೇರಿದೆ. ಪ್ರಧಾನಮಂತ್ರಿಯವರು ಸಭಿಕರನ್ನುದ್ದೇಶಿಸಿ ಭಾಷಣವನ್ನೂ ಮಾಡಲಿದ್ದಾರೆ. 
 

***



(Release ID: 1546460) Visitor Counter : 65