ಪ್ರಧಾನ ಮಂತ್ರಿಯವರ ಕಛೇರಿ

ನೇಪಾಳ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ 

Posted On: 29 AUG 2018 7:07PM by PIB Bengaluru

ನೇಪಾಳ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳಕ್ಕೆ ತೆರಳುವ ಮುನ್ನ ನೀಡಿದ ಹೇಳಿಕೆಯ ಪಠ್ಯ .

“ನಾಲ್ಕನೇ ಬಿ.ಐ.ಎಂ.ಎಸ್.ಟಿ.ಇ.ಸಿ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ನಾನು ಆಗಸ್ಟ್ 30-31 ರಂದು ಕಾಠ್ಮಂಡುವಿಗೆ ಎರಡು ದಿನಗಳ ಭೇಟಿ ನೀಡುತ್ತಿದ್ದೇನೆ.

ಶೃಂಗಸಭೆಯಲ್ಲಿ ನನ್ನ ಭಾಗವಹಿಸುವಿಕೆ ನೆರೆ ಹೊರೆಯ ರಾಷ್ಟ್ರಗಳ ಜೊತೆ ನಮ್ಮ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸುವ ಇರಾದೆಯನ್ನು ಮತ್ತು ಆಗ್ನೇಯ ಏಶ್ಯಾದ ಜೊತೆಗಿನ ಉತ್ತಮ ಬಾಂಧವ್ಯವನ್ನು ವಿಸ್ತರಿಸುವುದಕ್ಕೆ ಭಾರತ ಗರಿಷ್ಟ ಆದ್ಯತೆ ನೀಡುತ್ತಿರುವುದನ್ನು ಸಾಂಕೇತಿಸುತ್ತದೆ . 

ಶೃಂಗಸಭೆಯ ಅವಧಿಯಲ್ಲಿ , ನಾನು ಬಿ.ಐ.ಎಂ.ಎಸ್.ಟಿ.ಇ.ಸಿ.ಯ ಎಲ್ಲಾ ನಾಯಕರುಗಳ ಜೊತೆ ಪ್ರಾದೇಶಿಕ ಸಹಕಾರ ವರ್ಧನೆ, ನಮ್ಮ ವ್ಯಾಪಾರ ಸಂಬಂಧಗಳ ವರ್ಧನೆ ಮತ್ತು ಶಾಂತಿಯುತ ಹಾಗು ಸಮೃದ್ದ ಬಂಗಾಳ ಕೊಲ್ಲಿ ವಲಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಮುದಾಯಿಕ ಪ್ರಯತ್ನಗಳನ್ನು ಮಾಡುವ ಬಗ್ಗೆ ಮಾತುಕತೆ ನಡೆಸುತ್ತೇನೆ. 

“ಶಾಂತಿಯುತ, ಸಮೃದ್ದ ಮತ್ತು ಸಹ್ಯ ಬಂಗಾಳ ಕೊಲ್ಲಿ ವಲಯದತ್ತ” ಎಂಬುದು ಶೃಂಗದ ಶೀರ್ಷಿಕೆಯಾಗಿದ್ದು, ಇದು ನಮ್ಮ ಸಮಾನ ಆಶೋತ್ತರಗಳು ಮತ್ತು ಸವಾಲುಗಳನ್ನು ನಿಭಾಯಿಸಲು ಸಾಮುದಾಯಿಕ ಪ್ರತಿಕ್ರಿಯೆಯನ್ನು ರೂಪಿಸಲು ಸಹಾಯ ಮಾಡುತ್ತದೆ.

ನಾಲ್ಕನೇ ಬಿ.ಐ.ಎಂ.ಎಸ್.ಟಿ.ಇ.ಸಿ. ಶೃಂಗಸಭೆ ಇದುವರೆಗೆ ಬಿ.ಐ.ಎಂ.ಎಸ್.ಟಿ.ಇ.ಸಿ.ಯಡಿ ಮಾಡಲಾದ ಪ್ರಗತಿಗೆ ಇನ್ನಷ್ಟು ಶಕ್ತಿ ತುಂಬಲಿದೆ ಮತ್ತು ಶಾಂತಿಯುತ ಹಾಗು ಸಮೃದ್ದ ಬಂಗಾಳ ಕೊಲ್ಲಿ ವಲಯವನ್ನು ಕಟ್ಟುವಲ್ಲಿ ಕಾರ್ಯ ಯೋಜನೆಯನ್ನು ರೂಪಿಸಲಿದೆ ಎಂಬ ಬಗ್ಗೆ ನನಗೆ ಭರವಸೆ ಇದೆ. 

ಬಿ.ಐ.ಎಂ.ಎಸ್.ಟಿ.ಇ.ಸಿ. ಶೃಂಗಸಭೆಯ ಸಂಧರ್ಭದಲ್ಲಿ ನನಗೆ ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥೈಲ್ಯಾಂಡ್ ಗಳ ನಾಯಕರ ಜೊತೆಗೂ ಸಂವಾದ ನಡೆಸುವ ಅವಕಾಶವಿದೆ.

ನೇಪಾಳ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ. ಕೆ.ಪಿ.ಶರ್ಮಾ ಓಲಿ ಅವರ ಭೇಟಿಯನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು 2018 ರ ಮೇ ತಿಂಗಳಲ್ಲಿ ನಾನು ನೇಪಾಳಕ್ಕೆ ಭೇಟಿ ನೀಡಿದ ಬಳಿಕ ನಮ್ಮ ದ್ವಿಪಕ್ಷೀಯ ಸಂಬಂಧ ವರ್ಧನೆಯ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪರಾಮರ್ಶಿಸುವ ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ.

ಪ್ರಧಾನಮಂತ್ರಿ ಶ್ರೀ ಓಲಿ ಮತ್ತು ನಾನು ಪಶುಪತಿನಾಥ ದೇವಾಲಯ ಸಂಕೀರ್ಣದಲ್ಲಿ ನೇಪಾಳ ಭಾರತ ಮೈತ್ರಿ ಧರ್ಮಶಾಲಾವನ್ನು ಉದ್ಘಾಟಿಸುವ ಗೌರವ ಮತ್ತು ಸೌಭಾಗ್ಯದ ಅವಕಾಶವನ್ನೂ ಹೊಂದಿದ್ದೇವೆ. 



(Release ID: 1544631) Visitor Counter : 103