ಪ್ರಧಾನ ಮಂತ್ರಿಯವರ ಕಛೇರಿ

ನವ ದೆಹಲಿಯಲ್ಲಿ ಎ.ಎಸ್.ಐ.ನ ನೂತನ ಕೇಂದ್ರ ಕಚೇರಿ ಉದ್ಘಾಟಿಸಿದ ಪ್ರಧಾನಿ

Posted On: 12 JUL 2018 1:03PM by PIB Bengaluru

ನವ ದೆಹಲಿಯಲ್ಲಿ ಎ.ಎಸ್.ಐ.ನ ನೂತನ ಕೇಂದ್ರ ಕಚೇರಿ ಉದ್ಘಾಟಿಸಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರಿಂದು ನವದೆಹಲಿಯ ತಿಲಕ್ ಮಾರ್ಗ್ ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನೂತನ ಕೇಂದ್ರ ಕಚೇರಿ ಕಟ್ಟಡ – ಧರೋಹರ್ ಭವನವನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 150ವರ್ಷಗಳ ಅವಧಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಗಣನೀಯ ಸೇವೆ ಮಾಡಿದೆ ಎಂದು ಹೇಳಿದರು. 

ನಮ್ಮ ಇತಿಹಾಸ, ನಮ್ಮ ಶ್ರೀಮಂತ ಪುರಾತತ್ವ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕಾದ ಮಹತ್ವವನ್ನು ಪ್ರಧಾನಿ ಪ್ರತಿಪಾದಿಸಿದರು. ಸ್ಥಳೀಯ ಇತಿಹಾಸ ಮತ್ತು ತಮ್ಮ ಪಟ್ಟಣ, ನಗರ ಮತ್ತು ವಲಯದ ಪುರಾತತ್ವದ ಬಗ್ಗೆ ಜನರು ತಿಳಿಯಲು ಮುಂದಾಗಬೇಕು ಎಂದರು. ಸ್ಥಳೀಯ ಪುರಾತತ್ವಶಾಸ್ತ್ರ ಶಾಲಾ ಪಠ್ಯಕ್ರಮದ ಭಾಗವಾಗಬೇಕು ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಉತ್ತಮವಾಗಿ ತರಬೇತಿ ಹೊಂದಿದ ಸ್ಥಳೀಯ ಪ್ರವಾಸಿ ಮಾರ್ಗದರ್ಶಕರ ಮಹತ್ವವನ್ನು ಪ್ರಸ್ತಾಪಿಸಿ, ಅವರು ತಮ್ಮ ಪ್ರದೇಶದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಚ್ಚು ಅರಿತಿರುತ್ತಾರೆ ಎಂದರು. 

ಪ್ರತಿಯೊಂದು ಪುರಾತತ್ವ ಸಂಶೋಧನೆಯನ್ನೂ ಪುರಾತತ್ವಶಾಸ್ತ್ರಜ್ಞರು ದೀರ್ಘ ಸಮಯದವರೆಗೆ ನೋವನುಭವಿಸಿ ಮಾಡಿರುತ್ತಾರೆ ಅದು ತನ್ನದೇ ಕಥೆಯನ್ನು ಸಾರುತ್ತದೆ ಎಂದರು. ಈ ನಿಟ್ಟಿನಲ್ಲಿ, ಭಾರತ ಮತ್ತು ಫ್ರೆಂಚ್ ತಂಡ ಜಂಟಿಯಾಗಿ ಮಾಡಿದ್ದ ಪುರಾತತ್ವ ಅನ್ವೇಷಣೆಯ ಖುದ್ದು ಮಾಹಿತಿ ಪಡೆಯಲು ತಾವು ಮತ್ತು ಅಂದಿನ ಫ್ರೆಂಚ್ ಅಧ್ಯಕ್ಷರು ಕೆಲವು ವರ್ಷಗಳ ಹಿಂದೆ ಚಂಡೀಗಢಕ್ಕೆ ಪ್ರಯಾಣ ಮಾಡಿದ್ದನ್ನು ಸ್ಮರಿಸಿದರು. 

ಭಾರತವು ಹೆಮ್ಮೆ ಮತ್ತು ವಿಶ್ವಾಸದೊಂದಿಗೆ ತನ್ನ ಶ್ರೇಷ್ಠ ಪರಂಪರೆಯನ್ನು ವಿಶ್ವಕ್ಕೆ ಪ್ರದರ್ಶಿಸಬೇಕು ಎಂದು ಪ್ರಧಾನಿ ಹೇಳಿದರು. 

ಎ.ಎಸ್.ಐ.ನ ನೂತನ ಕೇಂದ್ರ ಕಚೇರಿ ಕಟ್ಟಡವು ಇಂಧನ ದಕ್ಷತೆಯ ವಿದ್ಯುತ್ ದೀಪ ಮತ್ತು ಮಳೆ ನೀರು ಕೊಯ್ಲು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇದರಲ್ಲಿ 1.5 ಲಕ್ಷ ಪುಸ್ತಕ ಮತ್ತು ನಿಯತಕಾಲಿಕಗಳನ್ನು ಒಳಗೊಂಡ ಕೇಂದ್ರೀಯ ಪುರಾತತ್ವ ಗ್ರಂಥಾಲಯವೂ ಸೇರಿದೆ. 



(Release ID: 1538469) Visitor Counter : 100