ರೈಲ್ವೇ ಸಚಿವಾಲಯ

ಭಾರತ ಮತ್ತು ಇಂಡೋನೇಷ್ಯಾ ನಡುವೆ ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತ ಒಪ್ಪಂದಕ್ಕೆ ಕೇಂದ್ರ ಸಂಪುಟ ಅಂಗೀಕಾರ

प्रविष्टि तिथि: 27 JUN 2018 3:42PM by PIB Bengaluru

ಭಾರತ ಮತ್ತು ಇಂಡೋನೇಷ್ಯಾ ನಡುವೆ ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತ ಒಪ್ಪಂದಕ್ಕೆ ಕೇಂದ್ರ ಸಂಪುಟ ಅಂಗೀಕಾರ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವೆ ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತ ಒಪ್ಪಂದಕ್ಕೆ ನಿರ್ಣಯ ಕೈಗೊಳ್ಳಲಾಗಿದೆ. ಈ ಒಡಂಬಡಿಕೆಗೆ 2018ರ ಮೇ 29ರಂದು ಸಹಿ ಹಾಕಲಾಯಿತು.

 

ಈ ಒಪ್ಪಂದದನ್ವಯ ಈ ಕೆಳಗಿನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಮತ್ತು ವಿಶೇಷ ಗಮನಹರಿಸಬಹುದಾಗಿದೆ.

 

 

1. ಜ್ಞಾನ, ತಂತ್ರಜ್ಞಾನ, ಸಾಂಸ್ಥಿಕ ಸಹಕಾರ ಸೇರಿದಂತೆ ಸಾಮರ್ಥ್ಯವೃದ್ಧಿ. 

 

2. ರೈಲ್ವೆಯಲ್ಲಿ ಸಂವಹನ ವ್ಯವಸ್ಥೆ ಮತ್ತು ಸಿಗ್ನಲ್ ವ್ಯವಸ್ಥೆ ಸೇರಿದಂತೆ ಇತರೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು. 

 

3. ರೈಲ್ವೆ ಕಾರ್ಯಾಚರಣೆ, ನಿರ್ವಹಣೆ ಮತ್ತು ನಿಯಂತ್ರಣಗಳನ್ನು ಆಧುನೀಕರಣಗೊಳಿಸುವುದು. 

 

4. ಅಂತರ ಮಾದರಿ ಸಾರಿಗೆ ವ್ಯವಸ್ಥೆ, ಲಾಜಿಸ್ಟಿಕ್ ಪಾರ್ಕ್ ಮತ್ತು ವಿಮಾನ ಟರ್ಮಿನಲ್ ಗಳನ್ನು ಅಭಿವೃದ್ಧಿಗೊಳಿಸುವುದು. 

 

5. ವಿದ್ಯುತ್ ಪೂರೈಕೆ ವ್ಯವಸ್ಥೆ ವಿದ್ಯುದೀಕರಣ, ಸುರಂಗ ಮಾರ್ಗಗಳ ನಿರ್ಮಾಣ, ಸೇತುವೆಗಳ ನಿರ್ಮಾಣ ಮತ್ತು ರಸ್ತೆ ನಿರ್ಮಾಣ ಸೇರಿದಂತೆ ಎಲ್ಲ ಮೂಲಸೌಕರ್ಯ ಕಾಮಗಾರಿಗಳ ನಿರ್ಮಾಣ ಮತ್ತು ನಿರ್ವಹಣಾ ತಂತ್ರಜ್ಷಾನ ವಿನಿಮಯ  

 

    ಮಾಡಿಕೊಳ್ಳುವುದು.

 

 6. ಇತರೆ ವಲಯಗಳ ಸಹಕಾರದ ಬಗ್ಗೆ ಉಭಯ ದೇಶಗಳು ಕುಳಿತು ಜಂಟಿಯಾಗಿ ನಿರ್ಧಾರ ಕೈಗೊಳ್ಳುವುದು.

 

 

 

ಹಿನ್ನೆಲೆ:

 

 

 

          ರೈಲ್ವೆ ಸಚಿವಾಲಯ, ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರ ಪಡೆಯುವ ಸಲುವಾಗಿ ಹಲವು ವಿದೇಶಿ ಸರ್ಕಾರಗಳು ಮತ್ತು ರಾಷ್ಟ್ರೀಯ ರೈಲ್ವೆ ಜತೆ ಒಪ್ಪಂದಗಳಿಗೆ ಸಹಿ ಹಾಕಿದೆ. ಹೈಸ್ಪೀಡ್ ಕಾರಿಡಾರ್ ಯೋಜನೆ, ಹಾಲಿ ಇರುವ ಮಾರ್ಗಗಳಲ್ಲಿ ವೇಗದ ರೈಲು ಚಾಲನೆ, ವಿಶ್ವದರ್ಜೆಯ ರೈಲು ನಿಲ್ದಾಣಗಳ ನಿರ್ಮಾಣ, ಒಟ್ಟಾರೆ ಕಾರ್ಯಾಚರಣೆಗಳ ಪರಿಶೀಲನೆ, ರೈಲ್ವೆ ಮೂಲಸೌಕರ್ಯ ಆಧುನೀಕರಣ ಮತ್ತಿತರ ವಲಯಗಳಲ್ಲಿ ಪರಸ್ಪರ ಸಹಕಾರ ಸಾಧಿಸಲು ಗುರುತಿಸಲಾಗಿದೆ.

 

           ರೈಲ್ವೆ ತಂತ್ರಜ್ಞಾನ ಮತ್ತು ಕಾರ್ಯಾಚರಣೆ ವಲಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಗುರಿಯನ್ನು ಸಾಧಿಸಲಾಗುತ್ತಿದ್ದು, ಅದರಡಿ ಪರಸ್ಪರ ಹಿತಾಸಕ್ತಿಯ ವಲಯಗಳಲ್ಲಿ ಜ್ಞಾನ ಹಂಚಿಕೆ, ತಾಂತ್ರಿಕ ಭೇಟಿಗಳು, ತರಬೇತಿ ಮತ್ತು ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಗಳು ಸೇರಿವೆ.

 

 ************


(रिलीज़ आईडी: 1537175) आगंतुक पटल : 126
इस विज्ञप्ति को इन भाषाओं में पढ़ें: English , Tamil , Telugu