ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಪಾಲರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 05 JUN 2018 3:05PM by PIB Bengaluru

ರಾಜ್ಯಪಾಲರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಭಾಷಣ 
 

ರಾಷ್ಟ್ರಪತಿ ಭವನದಲ್ಲಿ ಏರ್ಪಟ್ಟ ರಾಜ್ಯಪಾಲರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.

ಪ್ರಧಾನ ಮಂತ್ರಿಯವರು ಸಮ್ಮೇಳನದ ಅವಧಿಯಲ್ಲಿ ನಡೆದ ವಿವಿಧ ಚರ್ಚೆ ಮತ್ತು ಸಂವಾದಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಭಾಗಿತ್ವ, ಸಾಂಸ್ಕೃತಿಕ ವಿನಿಮಯ, ರಾಜ್ಯಗಳ ಜನತೆಯ ನಡುವೆ ಪರಸ್ಪರ ಸಂಪರ್ಕ ಬೆಸೆಯುವ ’ಏಕ್ ಭಾರತ್, ಶ್ರೇಷ್ಟ ಭಾರತ್’ ಉಪಕ್ರಮವನ್ನು ಬಲಪಡಿಸಲು ರಾಜ್ಯಪಾಲರು ಮುಂದಾಗಬೇಕು ಎಂದು ಪ್ರಧಾನ ಮಂತ್ರಿಗಳು ಕರೆ ನೀಡಿದರು. ಭಾರತದ ವಿವಿಧ ರಾಜ್ಯಗಳ ನಡುವೆ ಸೌಹಾರ್ದ ಮತ್ತು ಸಮಗ್ರತೆಯನ್ನು ಉತ್ತೇಜಿಸುವ ಹೊಸ ವಿಧಾನಗಳನ್ನು ರೂಪಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವುದರಿಂದ ಅಕಾಡೆಮಿಕ್ಸ್ ನ ವಿವಿಧ ವಲಯಗಳಲ್ಲಿ ಪ್ರಾವೀಣ್ಯತೆಯನ್ನು ಉತ್ತೇಜಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ ಪ್ರಧಾನ ಮಂತ್ರಿಯವರು ವಿಶ್ವದ ಶ್ರೇಷ್ಟ ವಿಶ್ವವಿದ್ಯಾಲಯಗಳಾಗುವತ್ತ ಭಾರತೀಯ ವಿಶ್ವವಿದ್ಯಾಲಯಗಳು ಆಶೋತ್ತರಗಳನ್ನು ಹೊಂದಿರಬೇಕು, ಮತ್ತು ಇವುಗಳ ಪರಿವರ್ತನೆಯಲ್ಲಿ ವೇಗ ತರಲು ರಾಜ್ಯಪಾಲರು ಪ್ರಮುಖ ಪಾತ್ರವಹಿಸಲು ಸಾಧ್ಯವಿದೆ ಎಂದರು. ಈ ನಿಟ್ಟಿನಲ್ಲಿ ಅವರು ಐ.ಐ.ಎಂ.ಗಳಿಗೆ ಸ್ವಾಯತ್ತೆ, 10 ಅತ್ಯುನ್ನತ ಸಾರ್ವಜನಿಕ ಮತ್ತು 10 ಅತ್ಯುನ್ನತ ಖಾಸಗಿ ವಿಶ್ವವಿದ್ಯಾಲಯಗಳಲ್ಲೂ ಈ ಕ್ರಮ ಜಾರಿಗೆ ತರುವ ಬಗ್ಗೆ ಸರಕಾರ ಕೈಗೊಂಡಿರುವ ಆರಂಭಿಕ ಉಪಕ್ರಮಗಳನ್ನು ಪ್ರಸ್ತಾವಿಸಿದರು.

ಜನ ಸಾಮಾನ್ಯರಿಗೆ“ಜೀವಿಸಲು ಅನುಕೂಲಕರ” ವಾತಾವರಣವನ್ನು ನಿರ್ಮಾಣ ಮಾಡುವತ್ತ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ರಾಜ್ಯಪಾಲರು ತಮ್ಮ ಸಾರ್ವಜನಿಕ ಬದುಕಿನ ವಿಸ್ತಾರ ವ್ಯಾಪ್ತಿಯ ಅನುಭವವನ್ನು ನಾಗರಿಕ ಏಜೆನ್ಸಿಗಳು ಮತ್ತು ಸರಕಾರಿ ಇಲಾಖೆಗಳು ಈ ನಿಟ್ಟಿನಲ್ಲಿ ಬದ್ದತೆಯಿಂದ ಕಾರ್ಯಮಗ್ನವಾಗುವಂತೆ ಮಾಡಲು ಬಳಸಿಕೊಳ್ಳಬೇಕು ಎಂದೂ ಪ್ರಧಾನ ಮಂತ್ರಿ ಹೇಳಿದರು.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆರೋಗ್ಯ ಭರವಸೆ ಯೋಜನೆಯಾದ ಆಯುಷ್ಮಾನ್ ಭಾರತ್ ಕುರಿತಂತೆಯೂ ಪ್ರಧಾನ ಮಂತ್ರಿಯವರು ಪ್ರಸ್ತಾಪ ಮಾಡಿದರು.

ಸ್ವಾತಂತ್ರ್ಯೋತ್ಸವದ 75 ನೇ ವಾರ್ಷಿಕೋತ್ಸವ 2022ರಲ್ಲಿ ಬರಲಿದೆ ಮತ್ತು ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮದಿನ 2019 ರಲ್ಲಿ ಬರಲಿದೆ . ಈ ಅವಕಾಶಗಳು ಅಭಿವೃದ್ಧಿಯ ಗುರಿಯನ್ನು ತಲುಪಲು ಪ್ರಚೋದನೆಯ ಮೈಲಿಗಲ್ಲುಗಳಾಗಬಲ್ಲವು ಎಂದು ಹೇಳಿದ ಪ್ರಧಾನ ಮಂತ್ರಿಗಳು ಬರಲಿರುವ ಕುಂಭ ಮೇಳ ರಾಷ್ಟ್ರೀಯವಾಗಿ ಮಹತ್ವದ ವಿಷಯಗಳನ್ನು ಪ್ರೋತ್ಸಾಹಿಸಲು ಒಂದು ಪ್ರಮುಖ ಅವಕಾಶವಾಗಬಲ್ಲದು ಎಂದೂ ಹೇಳಿದರು.



(Release ID: 1535162) Visitor Counter : 71