ಆಯುಷ್

ಸಾಂಪ್ರದಾಯಿಕ ಔಷಧ ಪದ್ಧತಿಯ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಭಾರತ ಮತ್ತು ಕೊಲಂಬಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

Posted On: 16 MAY 2018 3:41PM by PIB Bengaluru

ಸಾಂಪ್ರದಾಯಿಕ ಔಷಧ ಪದ್ಧತಿಯ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಭಾರತ ಮತ್ತು ಕೊಲಂಬಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಕೊಲಂಬಿಯಾ ನಡುವೆ ಸಾಂಪ್ರದಾಯಿಕ ಔಷಧ ಪದ್ಧತಿ ಕುರಿತ ಸಹಕಾರ ಸ್ಥಾಪನೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಸಮ್ಮತಿ ಸೂಚಿಸಿದೆ. 

ಇದು ಕೊಲಂಬಿಯಾದಲ್ಲಿ ಭಾರತದ ಸಾಂಪ್ರದಾಯಿಕ ವೈದ್ಯ ಪದ್ಥತಿಗಳ ಪ್ರಚಾರ ಮತ್ತು ಪ್ರಸರಣಕ್ಕೆ ಇಂಬು ನೀಡುತ್ತದೆ. ಈ ತಿಳಿವಳಿಕೆ ಒಪ್ಪಂದದ ಪರಿಣಾಮವಾಗಿ, ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ವೃತ್ತಿಪರರಿಗೆ ತರಬೇತಿ ನೀಡಲು ತಜ್ಞರ ವಿನಿಮಯ, ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಸಹಯೋಗದ ಸಂಶೋಧನೆ, ಔಷಧಿ ಅಭಿವೃದ್ಧಿಯಲ್ಲಿ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. 
 

***


(Release ID: 1532359) Visitor Counter : 97
Read this release in: English , Tamil , Telugu