ಪ್ರಧಾನ ಮಂತ್ರಿಯವರ ಕಛೇರಿ

ಅಡ್ವಾಂಟೇಜ್ ಅಸ್ಸಾಂ – ಜಾಗತಿಕ ಹೂಡಿಕೆದಾರರ ಮೇಳ 2018ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ

Posted On: 02 FEB 2018 6:29PM by PIB Bengaluru
ಅಡ್ವಾಂಟೇಜ್ ಅಸ್ಸಾಂ – ಜಾಗತಿಕ ಹೂಡಿಕೆದಾರರ ಮೇಳ 2018ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗುವಾಹಟಿಯಲ್ಲಿ ನಾಳೆ ಅಡ್ವಾಂಟೇಜ್ ಅಸ್ಸಾಂ – ಜಾಗತಿಕ ಹೂಡಿಕೆದಾರರ ಮೇಳ 2018ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಎರಡು ದಿನಗಳ ಈ ಶೃಂಗಸಭೆಯು ಅಸ್ಸಾಂ ಸರ್ಕಾರ ಹೂಡಿಕೆ ಉತ್ತೇಜನ ಮತ್ತು ಅವಕಾಶ ಒದಗಿಸುವ ಉಪಕ್ರಮದ ಸಲುವಾಗಿ ನಡೆಸುತ್ತಿರುವ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ಈ ಶೃಂಗಸಭೆಯು ಹೂಡಿಕೆದಾರರಿಗೆ ಅಸ್ಸಾಂ ಒದಗಿಸಲುದ್ದೇಶಿಸಿರುವ ಭೂ ವ್ಯೂಹಾತ್ಮಕ ಅನುಕೂಲತೆಗಳನ್ನು ಪ್ರಮುಖವಾಗಿ ತಿಳಿಸುವ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಿಗೆ ರಾಜ್ಯ ಸರ್ಕಾರ ರಫ್ತು ಕೇಂದ್ರಿತ ಉತ್ಪಾದನೆ ಮತ್ತು ಸೇವೆಗಳ ವಿಚಾರದಲ್ಲಿ ಒದಗಿಸಲಿರುವ ಅವಕಾಶಗಳು ಮತ್ತು ಉತ್ಪಾದನಾ ಶಕ್ತಿಯನ್ನು ಪ್ರದರ್ಶಿಸಲಿದೆ. ಈ ಶೃಂಗಸಭೆಯು ವಿದ್ಯುತ್, ಕೃಷಿ ಮತ್ತು ಆಹಾರ ಸಂಸ್ಕರಣೆ, ಐಟಿ ಮತ್ತು ಐಟಿಇಎಸ್, ನದಿ ಸಾರಿಗೆ ಮತ್ತು ಬಂದರು ಟೌನ್ ಶಿಪ್, ಪ್ಲಾಸ್ಟಿಕ್ ಮತ್ತು ಪೆಟ್ರೋಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಮತ್ತು ವೈದ್ಯಕೀಯ ಉಪಕರಣ, ಕೈಮಗ್ಗ, ಜವಳಿ ಮತ್ತು ಕರಕುಶಲ, ಪ್ರವಾಸೋದ್ಯಮ, ಆತಿಥ್ಯ ಮತ್ತು ಉತ್ತಮಿಕೆ, ನಾಗರಿಕ ವಿಮಾನಯಾನ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಮೇಲೆ ಗಮನ ಹರಿಸಿ, ರಾಜ್ಯದಲ್ಲಿನ ಹೂಡಿಕೆಯ ಅವಕಾಶಗಳನ್ನು ಒತ್ತಿ ಹೇಳಲಿದೆ. ****

(Release ID: 1519124) Visitor Counter : 72


Read this release in: English , Assamese