ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಪ್ರಮುಖ ಕ್ಷೇತ್ರಗಳಲ್ಲಿ ಎಫ್.ಡಿ.ಐ. ನೀತಿ ಮತ್ತಷ್ಟು ಸರಳೀಕರಣ ಎಫ್.ಡಿ.ಐ. ನೀತಿಯಲ್ಲಿ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ
Posted On:
10 JAN 2018 1:08PM by PIB Bengaluru
ಪ್ರಮುಖ ಕ್ಷೇತ್ರಗಳಲ್ಲಿ ಎಫ್.ಡಿ.ಐ. ನೀತಿ ಮತ್ತಷ್ಟು ಸರಳೀಕರಣ
ಎಫ್.ಡಿ.ಐ. ನೀತಿಯಲ್ಲಿ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ
ಏಕ ಬ್ರಾಂಡ್ ಚಿಲ್ಲರೆ ಮಾರಾಟಕ್ಕೆ ಸ್ವಯಂಚಾಲಿತ ಮಾರ್ಗದಡಿ ಶೇ.100 ಎಫ್.ಡಿ.ಐ.
ನಿರ್ಮಾಣ ಅಭಿವೃದ್ಧಿಯಲ್ಲಿ ಸ್ವಯಂಚಾಲಿತ ಮಾರ್ಗದಡಿ ಶೇ.100 ಎಫ್.ಡಿ.ಐ.
ಏರ್ ಇಂಡಿಯಾದ ಅನುಮೋದಿತ ಮಾರ್ಗಗಳಲ್ಲಿ ಶೇ.49ರವರೆಗೆ ಹೂಡಿಕೆಗೆ ವಿದೇಶೀ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ.
ಎಫ್.ಐಐ.ಗಳು/ಎಫ್.ಪಿ.ಐ.ಗಳಿಗೆ ಪ್ರಾಥಮಿಕ ಮಾರುಕಟ್ಟೆ ಮೂಲಕ ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿ ಹೂಡಿಕೆಗೆ ಅವಕಾಶ.
ಎಫ್.ಡಿ.ಐ. ನೀತಿಯಲ್ಲಿ ವೈದ್ಯಕೀಯ ಸಲಕರಣೆಯ ವ್ಯಾಖ್ಯೆಯ ತಿದ್ದುಪಡಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಫ್.ಡಿ.ಐ. ನೀತಿಯಲ್ಲಿ ಹಲವು ತಿದ್ದುಪಡಿಗಳಿಗೆ ತನ್ನ ಅನುಮೋದನೆ ನೀಡಿದೆ. ಇವು ದೇಶದಲ್ಲಿ ಸುಗಮವಾಗಿ ವಾಣಿಜ್ಯ ನಡೆಸುವುದಕ್ಕಾಗಿ ಎಫ್.ಡಿ.ಐ. ನೀತಿಗಳನ್ನು ಸರಳೀಕರಿಸುವ ಮತ್ತು ಉದಾರೀಕರಿಸುವ ಉದ್ದೇಶವನ್ನು ಹೊಂದಿವೆ. ಇದರೊಂದಿಗೆ ಇದು, ಹೂಡಿಕೆ, ಆದಾಯ ಮತ್ತು ಉದ್ಯೋಗದ ವೃದ್ಧಿಗೆ ಕೊಡುಗೆ ನೀಡುವ ಹೆಚ್ಚಿನ ಎಫ್.ಡಿ.ಐ. ಹೂಡಿಕೆಗೆ ನೆರವಾಗಲಿದೆ.
ವಿದೇಶೀ ನೇರ ಬಂಡವಾಳ (ಎಫ್.ಡಿ.ಐ.) ಆರ್ಥಿಕ ಪ್ರಗತಿಯ ಪ್ರಮುಖ ಚಾಲನಶಕ್ತಿಯಾಗಿದೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಲ ರಹಿತ ಹಣಕಾಸಿನ ಮೂಲವಾಗಿದೆ. ಸರ್ಕಾರವು ಎಫ್.ಡಿ.ಐ.ನಲ್ಲಿ ಹೂಡಿಕೆದಾರ ಸ್ನೇಹಿ ನೀತಿಯನ್ನು ತಂದಿದೆ, ಇದರಡಿ ಹಲವು ಕ್ಷೇತ್ರ/ಚಟುವಟಿಕೆಗಳಲ್ಲಿ ಶೇಕಡ 100ರಷ್ಟು ಎಫ್.ಡಿ.ಐ.ಗೆ. ಸ್ವಯಂಚಾಲಿತ ಮಾರ್ಗದಲ್ಲೇ ಅವಕಾಶವಿದೆ. ಇತ್ತೀಚೆಗೆ, ಸರ್ಕಾರ, ರಕ್ಷಣೆ, ನಿರ್ಮಾಣ ಅಭಿವೃದ್ಧಿ, ವಿಮೆ, ಪಿಂಚಣಿ, ಇತರ ಹಣಕಾಸು ಸೇವೆಗಳು, ಆಸ್ತಿ ಮರು ನಿರ್ಮಾಣ ಕಂಪನಿಗಳು, ಪ್ರಸಾರ, ನಾಗರಿಕ ವಿಮಾನಯಾನ, ಔಷಧ, ವಾಣಿಜ್ಯ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಎಫ್.ಡಿ.ಐ. ನೀತಿಯಲ್ಲಿ ಸುಧಾರಣೆ ತಂದಿದೆ.
ಸರ್ಕಾರದ ಕ್ರಮಗಳ ಫಲವಾಗಿ ದೇಶದಲ್ಲಿ ಎಫ್.ಡಿ.ಐ. ಹರಿವಿನಲ್ಲಿ ಹೆಚ್ಚಳವಾಗಿದೆ. 2014-15ನೇ ಸಾಲಿನಲ್ಲಿ ಒಟ್ಟಾರೆಯಾಗಿ 45.15 ಶತಕೋಟಿ ಅಮೆರಿಕನ್ ಡಾಲರ್ ಎಫ್.ಡಿ.ಐ. ಹರಿವು ಬಂದಿದೆ, 2013-14ರಲ್ಲಿ ಇದು 35.05 ಶತಕೋಟಿ ಅಮೆರಿನ್ ಡಾಲರ್ ಆಗಿತ್ತು. 2015-16ರಲ್ಲಿ ದೇಶ ಒಟ್ಟಾರೆಯಾಗಿ 55.46 ಶತಕೋಟಿ ಅಮೆರಿಕನ್ ಡಾಲರ್ ಎಫ್.ಡಿ.ಐ. ಸ್ವೀಕರಿಸಿದೆ. 2016-17ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ 60.08 ಶತಕೋಟಿ ಅಮೆರಿಕನ್ ಡಾಲರ್ ಎಫ್.ಡಿ.ಐ. ಹರಿದು ಬಂದಿದೆ, ಇದು ಸಾರ್ವಕಾಲಿಕ ಹೆಚ್ಚಳವಾಗಿದೆ.
ದೇಶವು ಇನ್ನೂ ಹೆಚ್ಚಿನ ವಿದೇಶೀ ಬಂಡವಾಳ ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ಎಫ್.ಡಿ.ಐ. ನೀತಿಯಲ್ಲಿ ಹೆಚ್ಚಿನ ಉದಾರೀಕರಣ ಮತ್ತು ಸರಳೀಕರಣದ ಮೂಲಕ ಸಾಧಿಸಬಹುದಾಗಿದೆ. ಆ ಪ್ರಕಾರವಾಗಿ, ಸರ್ಕಾರ ಎಫ್.ಡಿ.ಐ. ನೀತಿಗೆ ಹಲವು ತಿದ್ದುಪಡಿಗಳನ್ನು ತರಲು ನಿರ್ಧರಿಸಿದೆ.
ವಿವರಗಳು:
ಏಕ ಬ್ರಾಂಡ್ ಚಿಲ್ಲರೆ ಮಾರಾಟಕ್ಕೆ ಸರ್ಕಾರದ ಅನುಮೋದನೆ ಇನ್ನು ಅಗತ್ಯವಿಲ್ಲ (ಎಸ್.ಬಿ.ಆರ್.ಟಿ)
ಎಸ್.ಬಿ.ಆರ್.ಟಿ. ಮೇಲಿನ ಎಫ್.ಡಿ.ಐ. ನೀತಿ ಶೇ.49ರಷ್ಟು ಎಫ್.ಡಿ.ಐ.ಗೆ ಸ್ವಯಂ ಚಾಲಿತ ಮಾರ್ಗದಲ್ಲಿ ಮತ್ತು ಶೇ.49ಕ್ಕೆ ಮೇಲ್ಪಟ್ಟ ಶೇ.100ರವರೆಗಿನ ಎಫ್.ಡಿ.ಐ.ಗೆ ಸರ್ಕಾರದ ಅನುಮೋದನೆ ಮಾರ್ಗದಲ್ಲಿ ಅವಕಾಶ ನೀಡಿತ್ತು. ಈಗ ಎಸ್.ಬಿ.ಆರ್.ಟಿ.ಗೆ ಸ್ವಯಂಚಾಲಿತ ಮಾರ್ಗದಲ್ಲಿಯೇ ಶೇ.100ರಷ್ಟು ಎಫ್.ಡಿ.ಐ.ಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಏಕ ಬ್ರಾಂಡ್ ಚಿಲ್ಲರೆ ಮಾರಾಟ ಕಾಯಗಳಿಗೆ, ಜಾಗತಿಕ ಕಾರ್ಯಾಚರಣೆಗಳಿಗಾಗಿ ಭಾರತದಿಂದ ಸರಕುಗಳ ಹೆಚ್ಚಳ ಸರಿಹೊಂದಿಸಲು, ತಮ್ಮ ಮೊದಲ ಮಳಿಗೆ ತೆರೆದ ಏಪ್ರಿಲ್ 1 ರಿಂದ ಆರಂಭವಾಗುವ ಮೊದಲ ಐದು ವರ್ಷಗಳಿಗೆ ಭಾರತದಿಂದ ಶೇ.30ರಷ್ಟು ಕಡ್ಡಾಯ ಸಂಗ್ರಹಣೆ ಅಗತ್ಯವನ್ನು ಕೈಬಿಡಲು ನಿರ್ಧರಿಸಲಾಗಿದೆ. ಈ ಉದ್ದೇಶಕ್ಕಾಗಿ ಹೆಚ್ಚಿದ ಸೋರ್ಸಿಂಗ್ ದೃಷ್ಟಿಯಿಂದ, ಹಿಂದಿನ ಹಣಕಾಸಿನ ವರ್ಷಕ್ಕೆ ಹೋಲಿಸಿದರೆ ಒಂದು ನಿರ್ದಿಷ್ಟ ಹಣಕಾಸಿನ ವರ್ಷದಲ್ಲಿ ಏಕ ಬ್ರಾಂಡ್ (ಐ.ಎನ್.ಆರ್. ಟರ್ಮ್ಸ್ ನಲ್ಲಿ) ಗಾಗಿ ಭಾರತದಿಂದ ಅಂತಹ ಜಾಗತಿಕ ಸೋರ್ಸಿಂಗ್ ಮೌಲ್ಯದಲ್ಲಿ, ತಮ್ಮ ಸಮೂಹದ ಕಂಪನಿಯ ಮೂಲಕ ಅಥವಾ ನೇರವಾಗಿ ಏಕ ಬ್ರಾಂಡ್ ಚಿಲ್ಲರೆ ವ್ಯವಹಾರ ಮಾಡುವ ಅನಿವಾಸಿ ಸಂಸ್ಥೆಗಳು ಹೆಚ್ಚಳದಿಂದ ಹೆಚ್ಚಾಗಿದೆ. ಐದು ವರ್ಷಗಳ ಈ ಅವಧಿಯ ನಂತರ, ಎಸ್.ಬಿ.ಆರ್.ಟಿ. ಕಾಯಗಳು ವಾರ್ಷಿಕ ಆಧಾರದ ಮೇಲೆ ಭಾರತೀಯ ಕಾರ್ಯಾಚರಣೆಗಳಿಗೆ ನೇರವಾಗಿ ಶೇ.30 ರಷ್ಟು ಸೋರ್ಸಿಂಗ್ ನಿಯಮ ಪಾಲಿಸುವುದು ಕಡ್ಡಾಯವಾಗಿದೆ.
ಅನಿವಾಸಿ ಕಾಯಗಳು ಅಥವಾ ಕಾಯಗಳು, ತಾವೇ ಬ್ರ್ಯಾಂಡ್ ಮಾಲೀಕರಾಗಿದ್ದರೂ ಅಥವಾ ಅಲ್ಲದಿದ್ದರೂ, ನಿರ್ದಿಷ್ಟ ಬ್ರ್ಯಾಂಡ್ ಗಾಗಿ 'ಏಕ ಬ್ರ್ಯಾಂಡ್' ಉತ್ಪನ್ನದ ಚಿಲ್ಲರೆ ವ್ಯಾಪಾರವನ್ನು ದೇಶದಲ್ಲಿ ಮಾಡಲು ಅವಕಾಶ ನೀಡಲಾಗುತ್ತದೆ. ಈ ಚಿಲ್ಲರೆ ವ್ಯಾಪಾರವನ್ನು ನೇರವಾಗಿ ಭಾರತೀಯ ಕಾಯ ಮತ್ತು ಬ್ರ್ಯಾಂಡ್ ನ ಮಾಲೀಕರು ಮತ್ತು ಬ್ರ್ಯಾಂಡ್ ನ ಒಂದು ಬ್ರ್ಯಾಂಡ್ ನ ಚಿಲ್ಲರೆ ವ್ಯಾಪಾರದ ಮಾಲೀಕತ್ವದ ನಡುವಿನ ಕಾನೂನುಬದ್ಧ ಒಪ್ಪಂದದಿಂದ ನೇರವಾಗಿ ಮಾಡಬಹುದಾಗಿದೆ.
ನಾಗರಿಕ ವಿಮಾನ ಯಾನ
ಪ್ರಸ್ತುತ ನೀತಿಯ ಪ್ರಕಾರ, ವಿದೇಶೀ ವಾಯುಯಾನ ಕಂಪನಿಗಳಿಗೆ, ಸರ್ಕಾರದ ಅನುಮತಿಯ ಮಾರ್ಗದಲ್ಲಿ ಸೂಚಿತ ಮತ್ತು ಸೂಚಿತವಲ್ಲದ ವಾಯು ಸಾರಿಗೆ ಸೇವೆ ನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳಲ್ಲಿ ಶೇ.49ರವರೆಗೆ ಬಂಡವಾಳ ಹೂಡಲು ಅನುಮತಿ ನೀಡಲಾಗಿದೆ. ಆದಾಗ್ಯೂ, ಈ ನಿಯಮವು ಪ್ರಸ್ತುತ ಏರ್ ಇಂಡಿಯಾಗೆ ಅನ್ವಯಿಸುವುದಿಲ್ಲ, ಹೀಗಾಗಿ ವಿದೇಶೀ ವಿಮಾನಯಾನ ಸಂಸ್ಥೆಗಳು ಏರ್ ಇಂಡಿಯಾದಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ. ಈಗ ಈ ನಿರ್ಬಂಧವನ್ನು ತೆರವು ಮಾಡಿ, ಏರ್ ಇಂಡಿಯಾದಲ್ಲಿ ಈ ಕೆಳಗಿನ ಷರತ್ತುಗಳ ಮೇಲೆ ವಿದೇಶೀ ವಿಮಾನಯಾನ ಸಂಸ್ಥೆಗಳಿಗೆ ಶೇ.49ವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ:
ಏರ್ ಇಂಡಿಯಾದಲ್ಲಿ ವಿದೇಶೀ ವಿಮಾನ ಯಾನ ಸಂಸ್ಥೆ(ಗಳು) ಸೇರಿದಂತೆ ವಿದೇಶೀ ಹೂಡಿಕೆ(ಗಳು) ನೇರವಾಗಿ ಅಥವಾ ಪರೋಕ್ಷವಾಗಿ ಶೇ.49 ಮೀರುವಂತಿಲ್ಲ.
ಏರ್ ಇಂಡಿಯಾದ ಗಣನೀಯ ಮಾಲಿಕತ್ವ ಮತ್ತು ಸಮರ್ಥ ನಿಯಂತ್ರಣವು ಭಾರತೀಯ ರಾಷ್ಟ್ರೀಯರಲ್ಲೇ ಉಳಿಯುತ್ತದೆ.
ನಿರ್ಮಾಣ ಅಭಿವೃದ್ಧಿ:ಟೌನ್ ಷಿಪ್ ಗಳು, ವಸತಿ, ನಿರ್ಮಾಣ ಮಾಡಲಾಗುವ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ದಲ್ಲಾಳಿ ಸೇವೆಗಳು
ರಿಯಲ್ ಎಸ್ಟೇಟ್ ದಲ್ಲಾಳಿ ಸೇವೆಗಳು ರಿಯಲ್ ಎಸ್ಟೇಟ್ ವಾಣಿಜ್ಯ ಆಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ನಿರ್ಧರಿಸಲಾಗಿದೆ ಮತ್ತು ಆ ಮೂಲಕ ಸ್ವಯಂಚಾಲಿತ ಮಾರ್ಗದಲ್ಲಿ ಶೇ.100ರಷ್ಟು ಎಫ್.ಡಿ.ಐ. ಅರ್ಹವಾಗಲಿದೆ.
ವಿದ್ಯುತ್ ವಿನಿಮಯ ಕೇಂದ್ರಗಳು
ಪ್ರಸಕ್ತ ನೀತಿಯು, ಕೇಂದ್ರೀಯ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ವಿದ್ಯುತ್ ಮಾರುಕಟ್ಟೆ) ನಿಯಂತ್ರಣ 2010ರಡಿಯಲ್ಲಿ ನೋಂದಣಿಯಾಗಿರುವ ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿ ಸ್ವಯಂ ಚಾಲಿತ ಮಾರ್ಗದಲ್ಲಿ ಶೇ.49ರಷ್ಟು ಎಫ್.ಡಿ.ಐ.ಗೆ ಅವಕಾಶ ಕಲ್ಪಿಸುತ್ತದೆ. ಆದಾಗ್ಯೂ, ಎಫ್.ಐಐ/ಎಫ್.ಪಿ.ಐ ಖರೀದಿಗಳನ್ನು ಮರು ಖರೀದಿ ಮಾರುಕಟ್ಟೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈಗ ಈ ನಿಬಂಧನೆಯನ್ನು ತೆಗೆಯಲು ನಿರ್ಧರಿಸಲಾಗಿದ್ದು, ಎಫ್.ಐಐ/ಎಫ್.ಪಿ.ಐ.ಗಳಿಗೆ ವಿದ್ಯುತ್ ವಿನಿಮಯ ಕೇಂದ್ರಗಳ ಪ್ರಾಥಮಿಕ ಮಾರುಕಟ್ಟೆಯಲ್ಲಿ ಕೂಡ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಎಫ್.ಡಿ.ಐ. ನೀತಿಯ ಅಡಿಯಲ್ಲಿ ಇತರ ಅನುಮೋದನೆ ಅಗತ್ಯಗಳು:
ಪ್ರಸಕ್ತ ಎಫ್.ಡಿ.ಐ. ನೀತಿಯಡಿ, ಸರ್ಕಾರದ ಅನುಮೋದನೆ ಮಾರ್ಗದಲ್ಲಿ ಸ್ಥಾಪನಾ ಪೂರ್ವ ವೆಚ್ಚಗಳು, ಯಂತ್ರಗಳ ಆಮದು ಮುಂತಾದ ನಗದು ರಹಿತ ಮೊತ್ತಕ್ಕೆ ಪ್ರತಿಯಾಗಿ ಈಕ್ವಿಟಿ ಷೇರುಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ. ಸ್ವಯಂಚಾಲಿತ ಮಾರ್ಗ ಕ್ಷೇತ್ರಗಳಲ್ಲಿ, ಪೂರ್ವ-ಸ್ಥಾಪನೆ ಮೊತ್ತ, ಯಂತ್ರದ ಆಮದು ಮುಂತಾದ ನಗದು ರಹಿತ ಮೊತ್ತಕ್ಕೆ ಸಂಬಂಧಿಸಿದಂತೆ ಸ್ವಯಂಚಾಲಿತ ಮಾರ್ಗಗಳ ಮೂಲಕ ಷೇರುಗಳನ್ನು ವಿತರಿಸುವ ಅನುಮತಿಯನ್ನು ನೀಡಲು ಈಗ ನಿರ್ಧರಿಸಲಾಗಿದೆ.
ಸರ್ಕಾರದ ಪೂರ್ವಾನುಮತಿಯೊಂದಿಗೆ ಇತರ ಭಾರತೀಯ ಕಂಪೆನಿ/ಗಳು/ಎಲ್ ಎಲ್ ಪಿ ಯ ಬಂಡವಾಳ ಹೂಡಿಕೆಯ ಚಟುವಟಿಕೆಯಲ್ಲಿ ಮಾತ್ರ ತೊಡಗಿರುವ ಭಾರತೀಯ ಹೂಡಿಕೆ ಕಂಪನಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯು, ಪ್ರಸ್ತುತ ಹೂಡಿಕೆದಾರ ಕಂಪನಿಗಳೊಂದಿಗೆ ಶೇ.100ರವರೆಗೂ ಅನುಮತಿಸಲಾಗಿದೆ. ಆದರೆ, ಈಗ ಈ ವಲಯಗಳಲ್ಲಿ ಇತರ ಹಣಕಾಸು ಸೇವೆಗಳ ಕುರಿತಂತೆ ಎಫ್.ಡಿ.ಐ. ನೀತಿಯ ನಿಬಂದನೆಗಳನ್ನು ಎಫ್.ಡಿ.ಐ. ನೀತಿಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಮೇಲಿನ ಚಟುವಟಿಕೆಗಳನ್ನು ಯಾವುದೇ ಹಣಕಾಸು ವಲಯದ ನಿಯಂತ್ರಕರು ನಿಯಂತ್ರಿಸಿದಲ್ಲಿ, ಆಗ, ಸ್ವಯಂ ಚಾಲಿತ ಮಾರ್ಗದಲ್ಲಿ ಶೇ.100ರವರೆಗಿನ ವಿದೇಶೀ ಹೂಡಿಕೆಗೆ ಅನುಮತಿ ನೀಡಲಾಗಿದೆ; ಮತ್ತು ಅವರು, ಯಾವುದೇ ಹಣಕಾಸು ವಲಯದ ನಿಯಂತ್ರಕರಿಂದ ಅವರು ನಿಯಂತ್ರಿಸಲ್ಪಡದಿದ್ದರೆ ಅಥವಾ ಭಾಗಶಃ ನಿಯಂತ್ರಣಕ್ಕೆ ಒಳಪಟ್ಟಿದ್ದರೆ ಅಥವಾ ನಿಯಂತ್ರಣದ ಮೇಲ್ನೋಟಕ್ಕೆ ಸಂಬಂಧಿಸಿದಂತೆ ಅನುಮಾನಗಳಿದ್ದ ಪಕ್ಷದಲ್ಲಿ, ಶೇ.100ರವರೆಗೆ ವಿದೇಶೀ ಹೂಡಿಕೆಯನ್ನು ಸರ್ಕಾರದ ಅನುಮೋದನೆ ಮಾರ್ಗದಲ್ಲಿ, ಸರ್ಕಾರ ನಿರ್ಧರಿಸುವಂತೆ ಕನಿಷ್ಠ ಹಣಕಾಸು ಅಗತ್ಯದ ಷರತ್ತೂ ಸೇರಿದಂತೆ ಅನುಮತಿಸಲಾಗುತ್ತೆ.
ಕಾಳಜಿಯ ದೇಶಗಳ ಎಫ್.ಡಿ.ಐ. ಪ್ರಸ್ತಾಪಗಳನ್ನು ಪರಿಗಣಿಸಲು ಸಕ್ಷಮ ಪ್ರಾಧಿಕಾರ
ಹಾಲಿ ಇರುವ ಪ್ರಕ್ರಿಯೆಗಳ ಪ್ರಕಾರ, ಕಾಳಜಿಯ ದೇಶಗಳಿಂದ ಹೂಡಿಕೆಯನ್ನು ಒಳಗೊಂಡ ಅರ್ಜಿಗಳಿಗೆ ಕಾಲಕಾಲಕ್ಕೆ ತಿದ್ದುಪಡಿಯಾಗಿರುವ ವರ್ತಮಾನದ ಫೆಮಾ 20, ಎಫ್.ಡಿ.ಐ. ನೀತಿ ಮತ್ತು ಭದ್ರತಾ ಮಾರ್ಗಸೂಚಿಯಂತೆ ಅನುಮತಿಯ ಅಗತ್ಯವಿರುತ್ತದ್ದು, ಸ್ವಯಂ ಚಾಲಿತ ವಲಯ/ಚಟುವಟಿಕೆಯಡಿ ಬರುವ ಹೂಡಿಕೆಗಳನ್ನು ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ನಿರ್ವಹಿಸುತ್ತದೆ, ಸರ್ಕಾರದ ಅನುಮೋದನೆ ಮಾರ್ಗದ ವಲಯಗಳು/ಚಟುವಟಿಕೆಗಳಿಗೆ ಭದ್ರತೆಯ ಅನುಮತಿ ಅಗತ್ಯವಾಗಿದೆ, ಇದನ್ನು ಪ್ರಕರಣಕ್ಕೆ ಅನುಗುಣವಾಗಿ ಆಯಾ ಸಚಿವಾಲಯ/ಇಲಾಖೆಗಳು ಮಾಡುತ್ತವೆ. ಆದರೆ, ಈಗ ಸ್ವಯಂಚಾಲಿತ ವಲಯದಲ್ಲಿನ ಹೂಡಿಕೆಗಳಿಗೆ ಕಾಳಜಿಯ ರಾಷ್ಟ್ರದಿಂದ ಹೂಡಿಕೆ ಕುರಿತ ವಿಚಾರದ ಅನುಮೋದನೆ ಮಾತ್ರ ಅಗತ್ಯವಾಗಿರುತ್ತದೆ, ಎಫ್.ಡಿ.ಐ. ಅರ್ಜಿಗಳನ್ನು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ (ಡಿಐಪಿಪಿ) ಸರ್ಕಾರದ ಅನುಮೋದನೆಯ ಮಾರ್ಗಕ್ಕೆ ಅನುಮತಿಸುತ್ತದೆ. ಸರ್ಕಾರದ ಅನುಮೋದನೆ ಮಾರ್ಗದ ಪ್ರಕರಣಗಳಲ್ಲಿ, ಕಾಳಜಿಯ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಭದ್ರತೆಯ ಅನುಮತಿ ಅಗತ್ಯವಾಗಿದ್ದು, ಅದನ್ನು ಸಂಬಂಧಿತ ಸಚಿವಾಲಯ/ಇಲಾಖೆಯ ಆಡಳಿತ ನಿರ್ವಹಿಸುತ್ತದೆ.
ಔಷಧ:
ಔಷಧೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎಫ್.ಡಿ.ಐ. ನೀತಿಯಲ್ಲಿರುವ ಇತರ ವಿಷಯಗಳ ಜೊತೆಗೆ, ಎಫ್.ಡಿ.ಐ. ನೀತಿಯಲ್ಲಿನ ವೈದ್ಯಕೀಯ ಸಾಧನಗಳ ವ್ಯಾಖ್ಯಾನವು ಔಷಧ ಮತ್ತು ಪ್ರಸಾದನಗಳ ಕಾಯಿದೆಯಡಿ ಮಾಡಿದ ತಿದ್ದುಪಡಿಗಳಿಗೆ ಅನುಗುಣವಾಗಿರುವುದನ್ನು ಉಲ್ಲೇಖಿಸಲಾಗಿದೆ. ನೀತಿಯಲ್ಲಿ ನೀಡಲಾದ ವ್ಯಾಖ್ಯಾನವು ಸ್ವತಃ ಪೂರ್ಣಗೊಂಡ ಕಾರಣ, ಎಫ್.ಡಿ.ಐ ನೀತಿಯಿಂದ ಔಷಧಿ ಮತ್ತು ಸೌಂದರ್ಯವರ್ಧಕಗಳ ಉಲ್ಲೇಖವನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರ ಜೊತೆಗೆ, ಎಫ್.ಡಿ.ಐ ನೀತಿಯಲ್ಲಿ ನೀಡಲಾದ 'ವೈದ್ಯಕೀಯ ಸಲಕರಣೆಗಳ' ವ್ಯಾಖ್ಯಾನವನ್ನು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ.
ಆಡಿಟ್ ಸಂಸ್ಥೆಗಳಿಗೆ ನಿರ್ಬಂಧಿತ ಷರತ್ತುಗಳ ನಿಷೇಧ:
ವರ್ತಮಾನದ ಎಫ್.ಡಿ.ಐ. ನೀತಿಯಲ್ಲಿ, ವಿದೇಶಿ ಬಂಡವಾಳವನ್ನು ಪಡೆದ ಭಾರತೀಯ ಹೂಡಿಕೆದಾರ ಕಂಪನಿಗಳಿಗೆ ತಾನು ನೇಮಕ ಮಾಡುವ ಲೆಕ್ಕಪರಿಶೋಧಕರ ವಿವರಣೆಯಲ್ಲಿ ಯಾವುದೇ ನಿಬಂಧನೆ ಇಲ್ಲ. ವಿದೇಶಿ ಹೂಡಿಕೆದಾರರು ಒಂದು ನಿರ್ದಿಷ್ಟ ಆಡಿಟರ್ / ಆಡಿಟ್ ಸಂಸ್ಥೆಯೊಂದನ್ನು ಭಾರತೀಯ ಹೂಡಿಕೆದಾರರ ಕಂಪೆನಿಗೆ ಅಂತಾರಾಷ್ಟ್ರೀಯ ಜಾಲದೊಂದಿಗೆ ನಿರ್ದಿಷ್ಟಪಡಿಸಬೇಕೆಂದು ಬಯಸಿದರೆ, ಅಂತಹ ಹೂಡಿಕೆಯನ್ನು ಸ್ವೀಕರಿಸುವ ಕಂಪನಿಗಳಿಗೆ. ಆಡಿಟ್ ನಂತಹ ಜಂಟಿ ಲೆಕ್ಕಪರಿಶೋಧನೆಯಡಿಯಲ್ಲಿ ಲೆಕ್ಕ ಪರಿಶೋಧನೆ ನಡೆಸಲೇಬೇಕೆಂಬುದನ್ನು ಎಫ್.ಡಿ.ಐ. ನೀತಿಯಲ್ಲಿ ಉಲ್ಲೇಖಿಸಲು ನಿರ್ಧರಿಸಲಾಗಿದೆ
***
(Release ID: 1516409)
Visitor Counter : 138