ಸಂಪುಟ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕೆನಡಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
Posted On:
10 JAN 2018 1:13PM by PIB Bengaluru
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕೆನಡಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕೆನಡಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಕೆನಡಾದ ಶೈಕ್ಷಣಿಕ ಸಂಸ್ಥೆಗಳ ನಡುವೆ ಆರ್ ಮತ್ತು ಡಿ ಮತ್ತು ವೈಜ್ಞಾನಿಕ ಸಹಕಾರವನ್ನು ಬೆಳೆಸಲು ಮತ್ತು ಒಂದು ವ್ಯವಸ್ಥೆಯನ್ನು ಒದಗಿಸಲು ಸಹಕಾರಿಯಾಗಿದೆ. .
ಪ್ರಮುಖ ಅಂಶಗಳು :
ಕೆನಡಾದ ಸ್ವಾಭಾವಿಕ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎನ್.ಎಸ್.ಇ.ಆರ್.ಸಿ.)ಯೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಖಾರುಗೊಳಿಸುರುವ ಎಂ.ಓ.ಯು. ಅಡಿಯಲ್ಲಿ ಭಾರತ ಮತ್ತು ಕೆನಡಾ ನಡುವೆ ಒಂದು ನಾವಿನ್ಯಪೂರ್ಣ ಸಂಶೋಧನೆ ಮತ್ತು ಅಭಿವೃದ್ಧಿಯ ಮಾದರಿಯನ್ನು ಜಾರಿಗೊಳಿಸಲಾಗುತ್ತದೆ.
· ಈ ಎಂ.ಓ.ಯು. ಅಡಿಯಲ್ಲಿ ಸಮುದಾಯದ ಪರಿವರ್ತನೆಯನ್ನು ವೇಗಗೊಳಿಸಲು ಮತ್ತು ಸುಸ್ಥಿರಗೊಳಿಸುವ ಕಾರ್ಯಕ್ರಮಕ್ಕಾಗಿ ನಾವಿನ್ಯಪೂರ್ಣ ಬಹು ಸಂಸ್ಕೃತಿಯ ಸಹಭಾಗಿತ್ವ ಕುರಿತ ಭಾರತ- ಕೆನಡಾ ಕೇಂದ್ರ(ಐಸಿ- ಇಂಪ್ಯಾಕ್ಟ್ಸ್)ವು ಭಾರತ-ಕೆನಡಾ ಬಹು ಸಂಸ್ಕೃತಿಯ ಸಂಶೋಧನಾ ಸಹಭಾಗಿತ್ವ ಬೆಂಬಲಿಸುತ್ತದೆ.
· ಆರ್.ಅಂಡ್ ಡಿ ಯೋಜನೆಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಆನ್ವಯಿಕಗಳ ಮೂಲಕ ಪರಿಹಾರ ಒದಗಿಸಿ ಸಾಮಾಜಿಕ ಪರಿವರ್ತನೆಯನ್ನು ವೇಗವರ್ಧಕಗೊಳಿಸುವ ಗುರಿಯನ್ನು ಹೊಂದಿವೆ.
· ಇದರಲ್ಲಿ ಪಾಲ್ಗೊಳ್ಳುವವರು ಭಾರತ ಮತ್ತು ಕೆನಡಾದ ವೈಜ್ಞಾನಿಕ ಸಂಸ್ಥೆಗಳ, ಶಿಕ್ಷಣ ಸಂಸ್ಥೆಗಳ ಮತ್ತು ಆರ್. ಅಂಡ್ ಡಿ ಪ್ರಯೋಗಾಲಯಗಳ ಸಂಶೋಧಕರಾಗಿರುತ್ತಾರೆ.
· ಬಹುಪಕ್ಷೀಯ ಸಹಕಾರಕ್ಕಾಗಿ ಗುರಿತಿಸಲಾದ ಕ್ಷೇತ್ರಗಳಲ್ಲಿ ಸುರಕ್ಷಿತ ಮತ್ತು ಸುಸ್ಥಿರ ಮೂಲಸೌಕರ್ಯ ಮತ್ತು ಸಮಗ್ರ ಜಲ ನಿರ್ವಹಣೆಯೂ ಸೇರಿದೆ.
· ಇದು ಸಾಂಸ್ಥಿಕ ಜಾಲ ಅಭಿವೃದ್ಧಿಪಡಿಸಲು ನೆರವಾಗುತ್ತದೆ ಮತ್ತು ಭಾರತ ಮತ್ತು ಕೆನಡಾದ ವೈಜ್ಞಾನಿಕ ಸಂಸ್ಥೆಗಳು, ವಿಜ್ಞಾನಿಗಳು ಮತ್ತು ವಿಶೇಷಜ್ಞರ ನಡುವೆ ಸಂಪರ್ಕ ಸ್ಥಾಪನೆಗೆ ಬೆಂಬಲ ನೀಡುತ್ತದೆ.
ಹಿನ್ನೆಲೆ:
ಈ ತಿಳಿವಳಿಕೆ ಒಪ್ಪಂದವು, ಭಾರತ ಮತ್ತು ಕೆನಡಾ ನಡುವೆ 2005ರ ನವೆಂಬರ್ ನಲ್ಲಿ ಆಖಾರುಗೊಂಡ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಕುರಿತ ಅಂತರ ಸರ್ಕಾರೀಯ ಒಪ್ಪಂದದ ಅನುಸರಣೆಯೊಂದಿಗೆ ಆಖೈರುಗೊಂಡಿದೆ.
******
(Release ID: 1516171)
Visitor Counter : 156