ಸಂಪುಟ

ತುಂಗಭದ್ರಾ ಉಕ್ಕು ಉತ್ಪನ್ನ ನಿಯಮಿತ ಮುಚ್ಚುವ ಸಿಸಿಇಎ ನಿರ್ಧಾರದ ಜಾರಿಗೆ ಸಂಪುಟದ ಅನುಮೋದನೆ

Posted On: 10 JAN 2018 1:11PM by PIB Bengaluru

ತುಂಗಭದ್ರಾ ಉಕ್ಕು ಉತ್ಪನ್ನ ನಿಯಮಿತ ಮುಚ್ಚುವ ಸಿಸಿಇಎ ನಿರ್ಧಾರದ ಜಾರಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತುಂಗಭದ್ರಾ ಉಕ್ಕು ಉತ್ಪನ್ನ ನಿಯಮಿತ (ಟಿ.ಎಸ್.ಪಿ.ಎಲ್.) ಮುಚ್ಚಬೇಕೆಂಬ ಹಾಗೂ ಅದರ ಸ್ಥಿರ ಆಸ್ತಿಗಳ ವಿಲೇವಾರಿಯ ಸಿಸಿಇಎ ನಿರ್ಧಾರದ ಜಾರಿಗೆ ತನ್ನ ಅನುಮೋದನೆ ನೀಡಿದೆ. ಟಿ.ಎಸ್.ಪಿ.ಎಲ್.ನ ಋಣಗಳಿಗೆ ಸಮತೋಲನ ಸ್ಥಾಪಿಸಿದ ನಂತರ ಕಂಪನಿ ಹೆಸರನ್ನು ಕಂಪನಿಗಳ  ರಿಜಿಸ್ಟ್ರಾರ್ ನಿಂದ  ಹೊಡೆದು ಹಾಕಲು ಇದು ಅವಕಾಶ ನೀಡುತ್ತದೆ.

ನೌಕರರ/ಕಾರ್ಮಿಕರ ಮತ್ತು ಸಾಲಗಾರರಿಗೆ ಇರುವ ಬಾಕಿ ಚುಕ್ತಾ ಮಾಡಿದ ತರುವಾಯ ಕಂಪನಿಯನ್ನು ಮುಚ್ಚಲು ಸಿಸಿಇಎ 2015ರ ಡಿಸೆಂಬರ್ ನಲ್ಲಿ ಅನುಮೋದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. 20,000 ಚದರ ಮೀಟರ್ ಭೂಮಿಯೊಂದಿಗೆ ಎಂ.ಎಂ.ಎಚ್. ಘಟಕವನ್ನು ಕರ್ನಾಟಕ ಸರ್ಕಾರಕ್ಕೆ ವರ್ಗಾವಣೆ ಮಾಡಲು ಸಂಪುಟ ತನ್ನ ಅನುಮೋದನೆ ನೀಡಿದೆ. ಹೊಸಪೇಟೆಯಲ್ಲಿರುವ ಕಂಪನಿಯ 82.37 ಎಕರೆ ಭೂಮಿಯನ್ನು ಕರ್ನಾಟಕ ರಾಜ್ಯ ಗೃಹ ಮಂಡಳಿಯ ಬಳಕೆಗಾಗಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಲೂ ತನ್ನ ಒಪ್ಪಿಗೆ ನೀಡಿದೆ. ಕರ್ನಾಟಕ ಸರ್ಕಾರಕ್ಕೆ ಈ ಭೂಮಿಯನ್ನು ಸರ್ಕಾರ ಕೇಳಿರುವ ಎಕರೆಗೆ 66 ಲಕ್ಷ ರೂಪಾಯಿ ಬೆಲೆಯಲ್ಲಿ ಮಾರಾಟ ಮಾಡಲಾಗುವುದು.

 *****



(Release ID: 1516137) Visitor Counter : 133


Read this release in: English , Telugu