ಪ್ರಧಾನ ಮಂತ್ರಿಯವರ ಕಛೇರಿ

ಇಂಡೋನೇಶಿಯಾದ ರಾಜಕೀಯ, ಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಹಕಾರ ಸಚಿವ ಡಾ. ಹೆಚ್.ವೈರಾಂಟೊ ಅವರಿಂದ ಪ್ರಧಾನಿ ಭೇಟಿ

Posted On: 09 JAN 2018 7:05PM by PIB Bengaluru

ಇಂಡೋನೇಶಿಯಾದ ರಾಜಕೀಯಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಹಕಾರ ಸಚಿವ ಡಾ. ಹೆಚ್.ವೈರಾಂಟೊ ಅವರಿಂದ ಪ್ರಧಾನಿ ಭೇಟಿ

ಇಂಡೋನೇಶಿಯಾದ ರಾಜಕೀಯಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಹಕಾರ ಸಚಿವ ಡಾ. ಹೆಚ್.ವೈರಾಂಟೊ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರು ಇಂಡೋನೇಷಿಯಾದ ಅಧ್ಯಕ್ಷ ಜೋಕೋ ವಿಡೋಡೋ ಅವರು 2016ರ ಡಿಸೆಂಬರ್ ನಲ್ಲಿ ಭಾರತಕ್ಕೆ ನೀಡಿದ್ದ ಯಶಸ್ವೀ ಭೇಟಿಯನ್ನು ಸ್ಮರಿಸಿದರು ಮತ್ತು ಆಸಿಯಾನ್ ರಾಷ್ಟ್ರಗಳ ನಾಯಕರು ಆಸಿಯಾನ್ – ಭಾರತ ಸ್ಮಾರಕ ಶೃಂಗದಲ್ಲಿ ಭಾಗವಹಿಸಲು ಮತ್ತು ನಂತರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲು ಈ ತಿಂಗಳಾಂತ್ಯದಲ್ಲಿ ಆಗಮಿಸಲಿರುವ ಸಂದರ್ಭದಲ್ಲಿ ಮತ್ತೊಮ್ಮೆ ಅಧ್ಯಕ್ಷ ಜೋಕೋ ವಿಡೋಡೋ ಅವರನ್ನು ಭಾರತದಲ್ಲಿ ಸ್ವಾಗತಿಸಲು ಎದಿರು ನೋಡುತ್ತಿರುವುದಾಗಿ ಹೇಳಿದರು.

ಕಡಲಾಚೆಯ ನೆರೆಯವರಾಗಿ ಭಾರತ ಮತ್ತು ಇಂಡೋನೇಷಿಯಾ ನಡುವೆ ನೀಲಿ ಆರ್ಥಿಕತೆಯ ಅಭಿವೃದ್ಧಿಗೆ ಮತ್ತು ಕಡಲ ಸುರಕ್ಷತೆಯಲ್ಲಿ ವ್ಯಾಪಕ ವ್ಯಾಪ್ತಿಯಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಭಾರತ ಮತ್ತು ಇಂಡೋನೇಷಿಯಾ ನಡುವೆ ಪ್ರಥಮ ಭದ್ರತಾ ಮಾತುಕತೆಯ ಸಭೆಯನ್ನು ಸ್ವಾಗತಿಸಿದರು.

 ***



(Release ID: 1516132) Visitor Counter : 101


Read this release in: English