ಸಂಪುಟ
ಬಿಲಾಸ್ಪುರದಲ್ಲಿ ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ಸಂಪುಟದ ಸಮ್ಮತಿ
Posted On:
03 JAN 2018 2:34PM by PIB Bengaluru
ಬಿಲಾಸ್ಪುರದಲ್ಲಿ ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ಸಂಪುಟದ ಸಮ್ಮತಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬಿಲಾಸ್ಪುರ (ಹಿಮಾಚಲ ಪ್ರದೇಶ)ದಲ್ಲಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿ.ಎಂ.ಎಸ್.ಎಸ್.ವೈ.) ಅಡಿಯಲ್ಲಿ ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯ ವೆಚ್ಚ 1351 ಕೋಟಿ ರೂಪಾಯಿ ಆಗಿದೆ.
ಪ್ರಮುಖ ಅಂಶಗಳು:
· ಹೊಸ ಎಐಐಎಂಗಳು 12 ತಿಂಗಳುಗಳ ನಿರ್ಮಾಣಪೂರ್ವ ಹಂತ, 30 ತಿಂಗಳ ನಿರ್ಮಾಣ ಹಂತ ಮತ್ತು 6 ತಿಂಗಳುಗಳ ಸ್ಥಿರತೆ /ಅನುಷ್ಠಾನ ಹಂತದೊಂದಿಗೆ 48 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.
· ಈ ಸಂಸ್ಥೆಯು 750 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಮತ್ತು ಟ್ರಾಮಾ ಕೇಂದ್ರದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
· ಇದು ವಾರ್ಷಿಕ 100 ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಪ್ರವೇಶಾವಕಾಶದ ವೈದ್ಯಕೀಯ ಕಾಲೇಜನ್ನು ಹೊಂದಿರುತ್ತದೆ.
· ವಾರ್ಷಿಕ 60 ಬಿಎಸ್ಸಿ (ನರ್ಸಿಂಗ್) ವಿದ್ಯಾರ್ಥಿಗಳ ಪ್ರವೇಶಾವಕಾಶ ಒಳಗೊಂಡ ನರ್ಸಿಂಗ್ ಕಾಲೇಜು.
· ನವದೆಹಲಿಯ ಏಮ್ಸ್ ಮಾದರಿಯಲ್ಲೇ ಪೂರಕ ಸೌಲಭ್ಯಗಳಿಗೆ/ಸೇವೆಗಳಿಗೆ ವಸತಿ ಸಮುಚ್ಚಯಗಳನ್ನು ಒಳಗೊಂಡಿರುತ್ತದೆ.
· ಆಸ್ಪತ್ರೆಯು 15 ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ 20 ಸ್ಪೆಷಾಲಿಟಿ/ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಒಳಗೊಂಡಿರುತ್ತದೆ.
· ಇದು ಸಾಂಪ್ರದಾಯಿಕ ವೈದ್ಯಪದ್ಧತಿಯ ಚಿಕಿತ್ಸೆಗಾಗಿ 30 ಹಾಸಿಗೆಗಳ ಆಯುಷ್ ವಿಭಾಗವನ್ನೂ ಒಳಗೊಂಡಿರುತ್ತದೆ.
ಪರಿಣಾಮ:
ಹೊಸ ಏಮ್ಸ್ ಸ್ಥಾಪನೆಯು ಎರಡು ಉದ್ದೇಶದಿಂದ ಕಾರ್ಯನಿರ್ವಹಿಸಲಿದ್ದು, ಜನರಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಯನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಸೌಲಭ್ಯಗಳಡಿಯಲ್ಲಿ ಸ್ಥಾಪಿಸಲಾಗುವ ಪ್ರಾಥಮಿಕ ಮತ್ತು ಮಾಧ್ಯಮಿಕ ಮಟ್ಟದ ಸಂಸ್ಥೆಗಳಿಗೆ / ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ದೊಡ್ಡ ಪಡೆಯನ್ನು ರಚಿಸಲು ಸಹಾಯ ಮಾಡುತ್ತದೆ.
ಹಿನ್ನೆಲೆ:
ಈ ಯೋಜನೆಯಡಿಯಲ್ಲಿ, ಏಮ್ಸ್ ಗಳನ್ನು ಭುವನೇಶ್ವರ್, ಭೋಪಾಲ್, ರಾಯ್ಪುರ, ಜೋದ್ಪುರ, ಋಷಿಕೇಶ್ ಮತ್ತು ಪಾಟ್ನಾಗಳಲ್ಲಿ ಸ್ಥಾಪಿಸಲಾಗಿದೆ ಮತ್ತು ರಾಯ್ ಭರೇಲಿಯಲ್ಲಿ ಏಮ್ಸ್ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ನಾಗಪುರ (ಮಹಾರಾಷ್ಟ್ರ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಗುಂಟೂರಿನ ಮಂಗಳಗಿರಿ (ಆಂಧ್ರಪ್ರದೇಶ)ಯಲ್ಲಿನ ಮೂರು ಏಮ್ಸ್ ಗಳಿಗೆ 2015ರಲ್ಲಿ ಮಂಜೂರಾತಿ ನೀಡಲಾಗಿದೆ. 2016ರಲ್ಲಿ ಭಟಿಂಡಾ ಮತ್ತು ಗೋರಖ್ಪುರದ ಎರಡು ಏಮ್ಸ್ ಮತ್ತು ಕಾಮರೂಪ (ಅಸ್ಸಾಂ) ಏಮ್ಸ್ ಮಂಜೂರು ಮಾಡಲಾಗಿದೆ.
******
(Release ID: 1515431)
Visitor Counter : 125