ಸಂಪುಟ

ಭಾರತದಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗ 2017 (ಜಿಇಎಸ್ -2017) ಸಹ ಆಯೋಜನೆಗಾಗಿ ಭಾರತ ಮತ್ತು ಅಮೆರಿಕಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 03 JAN 2018 2:42PM by PIB Bengaluru

ಭಾರತದಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗ 2017 (ಜಿಇಎಸ್ -2017) ಸಹ ಆಯೋಜನೆಗಾಗಿ ಭಾರತ ಮತ್ತು ಅಮೆರಿಕಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತದಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗಸಭೆ 2017 (ಜಿಇಎಸ್ -2017)ನ್ನು ಸಹ ಆಯೋಜನೆಗಾಗಿ ಭಾರತ ಮತ್ತು ಅಮೆರಿಕಾ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಶೃಂಗಸಭೆಯನ್ನು ಸುಗಮವಾಗಿ ನಡೆಸಲು ಪಕ್ಷಕಾರರ ನಡುವೆ ಸಾರಿಗೆ ಮತ್ತು ಕಾರ್ಯಕ್ರಮದ ಸ್ಥಳಕ್ಕೆ ಸಂಬಂಧಿಸಿದ ಅಗತ್ಯಗಳೂ ಸೇರಿದಂತೆ ಸಹಕಾರದ ಕ್ಷೇತ್ರಗಳ ಅಗತ್ಯಗಳ ಜವಾಬ್ದಾರಿಗಳನ್ನು ಈ ತಿಳಿವಳಿಕೆ ಒಪ್ಪಂದ ನಿರೂಪಿಸುತ್ತದೆ.

ಜಿ.ಇ.ಎಸ್. 2017, ಜಾಗತಿಕ ಕೈಗಾರಿಕಾ ನಾಯಕರೊಂದಿಗೆ, ನೆಟ್ ವರ್ಕಿಂಗ್  ಅಧಿವೇಶನಗಳು, ಪಿಚಿಂಗ್ ಸ್ಪರ್ಧೆಗಳು, ಕಾರ್ಯತಂತ್ರದ ಕಾರ್ಯಾಗಾರಗಳು ಮತ್ತು ಹೊಸ ಸಹಭಾಗಿತ್ವಗಳನ್ನು ರೂಪಿಸಲು ಸೆಕ್ಟರ್-ನಿರ್ದಿಷ್ಟ ಕಾರ್ಯಕ್ರಮಗಳೊಂದಿಗೆ ಸಭೆಗಳನ್ನು ನಡೆಸಲು.ಉದ್ಯಮಶೀಲರಿಗೆ ಮತ್ತು ಹೂಡಿಕೆದಾರರಿಗೆ ಅದ್ಭುತ ಅವಕಾಶಗಳನ್ನು ಒದಗಿಸಿತ್ತು. ಈ ಶೃಂಗಸಭೆಯು ಯುವ ಉದ್ಯಮಶೀಲರಿಗೆ ಅದರಲ್ಲೂ ಮಹಿಳಾ ಉದ್ಯಮಶೀಲರಿಗೆ ಮತ್ತು ಅಂಚಿನಲ್ಲಿರುವ ಗುಂಪುಗಳಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಈ ವೇದಿಕೆ ಒದಗಿಸಲಿದೆ.

 ಹಿನ್ನೆಲೆ

ಜಿಇಎಸ್ 2017 2017ರ ನವೆಂಬರ್ 28-30ರ ಅವಧಿಯಲ್ಲಿ ಹೈದ್ರಾಬಾದ್ ನಲ್ಲಿ ನಡೆದಿತ್ತು. ಇದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಸಿಇಓಗಳು, ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳಲ್ಲದೆ 150 ರಾಷ್ಟ್ರಗಳ 1500 ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.  ಜಿಇಎಸ್ 2017ರ 18ನೇ ಆವೃತ್ತಿಯನ್ನು ಭಾರತದಲ್ಲಿ ಆಯೋಜಿಸುವ ನಿರ್ಧಾರವನ್ನು 2016ರ ಜೂನ್ 7ರಂದು ಅಮೆರಿಕದ ಅಂದಿನ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಮತ್ತು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಡುವಿನ ಜಂಟಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 2017ರ ಜೂನ್ 25 ರಿಂದ 27 ರವರೆಗೆ ಪ್ರಧಾನಮಂತ್ರಿಯವರು ಅಮೆರಿಕಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ಇದನ್ನು ಪುನರುಚ್ಚರಿಸಿದರು ಮತ್ತು ಅಮೆರಿಕದ ಅಧ್ಯಕ್ಷರ ಸಲಹೆಗಾರರಾದ ಇವಾಂಕ ಟ್ರಂಪ್ ಅವರನ್ನು ಭಾರತದ ಜಿಎಸ್ಇ ನಲ್ಲಿ ಯುಎಸ್ ನಿಯೋಗದ ನೇತೃತ್ವ ವಹಿಸುವಂತೆ ಆಹ್ವಾನಿಸಿದ್ದರು. .

ಜಿ..ಇ.ಎಸ್. ಉದಯೋನ್ಮುಕ ಉದ್ದಿಮೆದಾರರಿಗೆ   ಮುಂಚೂಣಿಯ ವೇದಿಕೆಯಾಗಿತ್ತು. ಈ ಶೃಂಗಸಭೆಯು ಜಾಗತಿಕ ಕೈಗಾರಿಕಾ ನಾಯಕರು, ಅಂತಾರಾಷ್ಟ್ರೀಯ ಉದ್ಯಮಶೀಲರ ಜಾಲ, ನಾವಿನ್ಯದಾರು, ಹೂಡಿಕೆದಾರರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿತ್ತು. ಈ ಶೃಂಗಸಭೆಯು ಉದ್ಯಮಶೀಲರು ಮತ್ತು ಹೂಡಿಕೆದಾರರಿಗೆ ಹೊಸ ಸಹಯೋಗಕ್ಕೆ ನೆರವಾಗುವಂಥ ಸ್ಪರ್ಧೆ, ವ್ಯೂಹಾತ್ಮಕ ಕಾರ್ಯಾಗಾರಗಳು ಮತ್ತು ಸೆಕ್ಟರ್ – ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಿತ್ತು. ಯುವ ಉದ್ಯಮದಾರರಿಗೆ ಅದರಲ್ಲೂ ಮಹಿಳಾ ಉದ್ಯಮಶೀಲರಿಗೆ ಮತ್ತು ನವೋದ್ಯಮಗಳಿಗೆ ಗಣನೀಯವಾಗಿ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಈ ಶೃಂಗಸಭೆ ಒದಗಿಸಿತ್ತು.

 ******


(Release ID: 1515426) Visitor Counter : 123


Read this release in: English , Telugu