ಸಂಪುಟ

ಎಫ್.ಎಂ. III ನೇ ಹಂತದ III ನೇ ತಂಡದ ಇ- ಹರಾಜು ನಡೆಸಲು ಸಂಪುಟದ ಅನುಮೋದನೆ

Posted On: 20 DEC 2017 7:52PM by PIB Bengaluru

ಎಫ್.ಎಂ. III ನೇ ಹಂತದ III ನೇ ತಂಡದ ಇ- ಹರಾಜು ನಡೆಸಲು ಸಂಪುಟದ ಅನುಮೋದನೆ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 236 ನಗರಗಳಲ್ಲಿ ನಂತರದ ಬ್ಯಾಚ್ ಗಳಲ್ಲಿ 683 ವಾಹಿನಿಗಳ ಹರಾಜನ್ನು ನಡೆಸುವುದಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಅಧಿಕ ನಗರಗಳಲ್ಲಿ ಎಫ್.ಎಂ. ರೇಡಿಯೋದ ಹೊಸ/ಹೆಚ್ಚಿನ ಅನುಭವ ನೀಡುತ್ತದೆ.

2011ರಲ್ಲಿ  ಸಂಪುಟವು ನೀಡಿದ ಅನುಮೋದನೆಯಂತೆ ಬ್ಯಾಚ್ –I ಮತ್ತು ಬ್ಯಾಚ್ –IIರ ಖಾಸಗಿ ಎಫ್.ಎಂ. ರೇಡಿಯೋ ಕೇಂದ್ರಗಳನ್ನು ಎಫ್.ಎಂ. ನೀತಿಯ ಮಾರ್ಗಸೂಚಿಯಂತೆ 3ನೇ ಹಂತದಲ್ಲಿ ಅನುಕ್ರಮವಾಗಿ 2015 ಮತ್ತು 2016ರಲ್ಲಿ ನಡೆಸಲಾಗಿತ್ತು. 56 ನಗರಗಳಲ್ಲಿ 97 ವಾಹಿನಿಗಳನ್ನು ಬ್ಯಾಚ್ Iರಲ್ಲಿ ಮಾರಾಟ ಮಾಡಲಾಗಿತ್ತು. 66 ವಾಹಿನಿಗಳನ್ನು 48 ನಗರಗಳಲ್ಲಿ ಬ್ಯಾಚ್ II ರಲ್ಲಿ ವಿಕ್ರಯ ಮಾಡಲಾಗಿತ್ತು.
ಮೂರನೇ ಬ್ಯಾಚ್ ನ ಹರಾಜಿನೊಂದಿಗೆ ದೇಶಾದ್ಯಂತ ಖಾಸಗಿ ಎಫ್ಎಂ ರೇಡಿಯೋ ಚಾನಲ್ ಗಳಿಲ್ಲದೆ ಇರುವ ಹೆಚ್ಚಿನ ನಗರಗಳು ಇದರ ಪ್ರಯೋಜನ ಪಡೆಯಲಿವೆ, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಹಲವಾರು ನಗರಗಳೂ ಸೇರಿದ್ದು, ಅಲ್ಲಿ ಜನಸಂಖ್ಯೆಯು ಒಂದು ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಈ ತಂಡದ ಹರಾಜು ಎಡ ಪಂಥೀಯ ವಿಧ್ವಂಸಕತೆಯಿಂದ ತೀವ್ರವಾಗಿ ಬಾಧಿತವಾಗಿರುವ ಜಿಲ್ಲೆಗಳಲ್ಲಿನ ನಗರಗಳನ್ನೂ ಒಳಗೊಂಡಿದೆ. ಇದು ಶ್ರೋತೃಗಳಿಗೆ ಉತ್ತಮ ವಿಷಯಗಳ ಆಯ್ಕೆಯ ಜೊತೆಗೆ ಹೊಸ ನಗರಗಳಿಗೆ ಎಫ್ಎಂ ರೇಡಿಯೋ ಪ್ರಸಾರವನ್ನು ಒದಗಿಸುತ್ತದೆ.
ಎಫ್.ಎಂ. IIIನೇ ಹಂತದ ಸಂಪೂರ್ಣ ಹರಾಜಿನೊಂದಿಗೆ ಎಲ್ಲ 29 ರಾಜ್ಯಗಳು ಮತ್ತು 7ರ ಪೈಕಿ ಆರು (ದಾದ್ರಾ ಮತ್ತು ನಗರ್ ಹವೇಲಿ ಹೊರತುಪಡಿಸಿ) ಕೇಂದ್ರಾಡಳಿತ ಪ್ರದೇಶಗಳು ಖಾಸಗಿ ಎಫ್.ಎಂ. ರೇಡಿಯೋ ಪ್ರಸಾರದ ವ್ಯಾಪ್ತಿಗೆ ಬರುತ್ತವೆ. ಇದು ಭಾರತದಾದ್ಯಂತದ ಆಧಾರದ ಮೇಲೆ 10 ಸಾವಿರಕ್ಕೂ ಅಧಿಕ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಸುವ ಸಾಧ್ಯತೆಯೂ ಇದೆ. ಈ ಹರಾಜು 1,100 ಕೋಟಿ ರೂಪಾಯಿಗಳ ಆದಾಯವನ್ನು ತರುವ ಅಂದಾಜಿದೆ.
ಇದರಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಸಲುವಾಗಿ, ಏಕಕಾಲದಲ್ಲಿ ಬಹು ಸುತ್ತಿನ ಆರೋಹಣ (ಎಸ್.ಎಂ.ಆರ್.ಎ.) ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ.
*****


(Release ID: 1513776) Visitor Counter : 90


Read this release in: English , Hindi