ರೈಲ್ವೇ ಸಚಿವಾಲಯ

ವಡೋದರದಲ್ಲಿ ಭಾರತದ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟದ ಅನುಮೋದನೆ

Posted On: 20 DEC 2017 8:09PM by PIB Bengaluru

ವಡೋದರದಲ್ಲಿ ಭಾರತದ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟದ ಅನುಮೋದನೆ

ತಂತ್ರಜ್ಞಾನ ಮತ್ತು ಮೂಲಸೌಕರ್ಯದ ವ್ಯಾಪಕ ಮೇಲ್ದರ್ಜೆ ಮೂಲಕ ಆಧುನೀಕರಣದ ಪಥದಲ್ಲಿ ಭಾರತೀಯ ರೈಲ್ವೆ.
ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ನೆರವಾಗುವುದರ ಜೊತೆಗೆ ಮೇಕ್ ಇನ್ ಇಂಡಿಯಾ ಮತ್ತು ಕೌಶಲ ಭಾರತಕ್ಕೂ ಕೊಡುಗೆ.
ನಾವಿನ್ಯಪೂರ್ಣ ಉದ್ಯಮಶೀಲತೆಗೆ ವೇಗ ಮತ್ತು ನವೋದ್ಯಮ ಉಪಕ್ರಮಗಳಿಗೆ ಬೆಂಬಲ.
ಇತ್ತೀಚಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅನ್ವಯಿಕೆಗಳ ಬಳಕೆ: ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡಲು ಇತ್ತೀಚಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅನ್ವಯಿಕೆಗಳನ್ನು ಬಳಸಿಕೊಳ್ಳುವ ಅತ್ಯುತ್ತಮ-ದರ್ಜೆಯ ಸಂಸ್ಥೆ ಎಂದು ಪರಿಗಣಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೌಶಲಪೂರ್ಣ ಮಾನವಶಕ್ತಿಯ ಮೂಲಕ ಸಾಗಣೆಯ ಕ್ಷೇತ್ರದಲ್ಲಿ ವಿಶ್ವದ ನಾಯಕನಾಗಿ ಹೊರ ಹೊಮ್ಮುತ್ತಿರುವ ಭಾರತ.
 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ತನ್ನ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವರ್ಧನೆಗಾಗಿ ವಡೋದರದಲ್ಲಿ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ (ಎನ್.ಆರ್.ಟಿ.ಯು) ಸ್ಥಾಪಿಸುವ  ರೈಲ್ವೆ ಸಚಿವಾಲಯದ ಪರಿವರ್ತನಾತ್ಮಕ ಉಪಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ಈ ನಾವಿನ್ಯಪೂರ್ಣ ಕಲ್ಪನೆಗೆ ಪ್ರಧಾನಮಂತ್ರಿಯವರ ಪ್ರೇರಣೆ ಕಾರಣವಾಗಿದ್ದು, ನವ ಭಾರತಕ್ಕೆ ರೈಲ್ವೆ ಮತ್ತು ಸಾರಿಗೆ ವಲಯವನ್ನು ಪರಿವರ್ತಿಸುವ ವೇಗವರ್ಧಕವಾಗಿದೆ.

 ಯುಜಿಸಿ (ಸ್ವಾಯತ್ತ ವಿಶ್ವವಿದ್ಯಾಲಯಗಳ) ನಿಯಂತ್ರಣ, 2016ರ ಅನ್ವಯ ನವ ಪ್ರವರ್ಗದಡಿಯಲ್ಲಿ ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತದೆ. 2018ರ ಏಪ್ರಿಲ್ ಒಳಗಾಗಿ ಎಲ್ಲ ಅನುಮೋದನೆಗಳನ್ನೂ ಪಡೆಯಲು ಸರ್ಕಾರ ಕಾರ್ಯೋನ್ಮುಕವಾಗಿದ್ದು, 2018ರ ಜುಲೈನಿಂದ ಪ್ರಥಮ ಶೈಕ್ಷಣಿಕ ಕಾರ್ಯಕ್ರಮ ಆರಂಭವಾಗಲಿದೆ.

ಕಂಪನಿಗಳ ಕಾಯಿದೆ 2013 ಸೆಕ್ಷನ್ 8ರ ಅಡಿಯಲ್ಲಿ ಲಾಭ ರಹಿತ ಕಂಪನಿಯಾಗಿ ರಚಿಸಲಾಗುವ ಈ ಪ್ರಸ್ತಾವಿತ ವಿಶ್ವವಿದ್ಯಾಲಯಕ್ಕೆ  ರೈಲ್ವೆ ಸಚಿವಾಲಯವು ವ್ಯವಸ್ಥಾಪಕ ಕಂಪನಿಯಾಗಿರುತ್ತದೆ. ಕಂಪನಿಯು ಹಣಕಾಸು ಮತ್ತು ಮೂಲಸೌಕರ್ಯದ ಬೆಂಬಲವನ್ನು ವಿಶ್ವವಿದ್ಯಾಲಯಕ್ಕೆ ಒದಗಿಸುತ್ತದೆ ಮತ್ತು ವಿಶ್ವವಿದ್ಯಾಲಯಕ್ಕೆ ಕುಲಪತಿ ಮತ್ತು ಪ್ರೋ ಚಾನ್ಸಲರ್ ಗಳನ್ನು ನೇಮಕ ಮಾಡುತ್ತದೆ. ಆಡಳಿತ ಮಂಡಳಿಯು ಶೈಕ್ಷಣಿಕ ಮತ್ತು ವೃತ್ತಿಪರರನ್ನು ಒಳಗೊಂಡು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿಭಾಯಿಸಲು ಸಂಪೂರ್ಣ ಸ್ವಾಯತ್ತ ಕಂಪನಿಯಾಗಿ ನಿರ್ವಹಣೆ ಮಾಡುತ್ತದೆ.

ವಿಶ್ವವಿದ್ಯಾಲಯದ ಉದ್ದೇಶಕ್ಕಾಗಿ ಗುಜರಾತ್ ನ ವಡೋದರದ ಭಾರತೀಯ ರಾಷ್ಟ್ರೀಯ ರೈಲು ಅಕಾಡಮಿ (ಎನ್.ಎ.ಐ.ಆರ್.)ಯಲ್ಲಿರುವ ಹಾಲಿ ಜಮೀನು ಮತ್ತು ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ ಮತ್ತು  ಸೂಕ್ತವಾಗಿ ಪರಿವರ್ತನೆ ಮತ್ತು ಆಧುನೀಕರಣ ಮಾಡಿಕೊಳ್ಳಲಾಗುತ್ತದೆ. ಇದರ ಪೂರ್ಣ ದಾಖಲಾತಿಯಲ್ಲಿ 3 ಸಾವಿರ ಪೂರ್ಣಕಾಲಿಕ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಅಂದಾಜಿದೆ. ಹೊಸ ವಿಶ್ವವಿದ್ಯಾಲಯ/ಸಂಸ್ಥೆಗೆ ರೈಲ್ವೆ ಸಚಿವಾಲಯವು ಸಂಪೂರ್ಣ ಹಣಕಾಸು ಒದಗಿಸುತ್ತದೆ.

ಈ ವಿಶ್ವವಿದ್ಯಾಲಯವು ಭಾರತೀಯ ರೈಲ್ವೆಯನ್ನು ಆಧುನೀಕರಣದ ಪಥದಲ್ಲಿ ಸಾಗುವಂತೆ ಮಾಡಲಿದೆ ಮತ್ತು ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡುವುದರ ಜೊತೆಗೆ ಉತ್ಪಾದಕತೆ ಹೆಚ್ಚಿಸಿ ಭಾರತವನ್ನು ಸಾರಿಗೆ ವಲಯದಲ್ಲಿ ಜಾಗತಿಕ ನಾಯಕನಾಗಿ ಪರಿವರ್ತಿಸುತ್ತದೆ.  ಇದು ನುರಿತ ಮಾನವ ಸಂಪನ್ಮೂಲ ಸೃಷ್ಟಿಸುತ್ತದೆ ಮತ್ತು ಭಾರತೀಯ ರೈಲ್ವೆಗೆ ಉತ್ತಮ ಸುರಕ್ಷತೆ, ವೇಗ ಮತ್ತು ಸೇವೆ ಪೂರೈಸಲು ಅತ್ಯಾಧುನಿಕ ತಂತ್ರಜ್ಞಾನ ಒದಗಿಸುತ್ತದೆ. ತಂತ್ರಜ್ಞಾನ ಮತ್ತು ಜ್ಞಾನವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ಇದು ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಕೌಶಲ ಭಾರತಕ್ಕೆ ಬೆಂಬಲ ನೀಡುತ್ತದೆ ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಹಾಗೂ ಉದ್ಯಮಶೀಲತೆಯನ್ನು ತ್ವರಿತಗೊಳಿಸುತ್ತದೆ. ಇದು ಪ್ರಯಾಣಿಕರ ಮತ್ತು ಸರಕಿನ ತ್ವರಿತ ಸಾಗಣೆಗೆ ಅವಕಾಶ ಕಲ್ಪಿಸಿ ರೈಲ್ವೆ ಮತ್ತು ಸಾರಿಗೆ ವಲಯದ  ಪರಿವರ್ತನೆಗೆ ಇಂಬು ನೀಡುತ್ತದೆ. ಜಾಗತಿಕ ಪಾಲುದಾರಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ನಿರ್ಧರಣೆ ಮೂಲಕ ಭಾರತವು ತಜ್ಞತೆಯ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ.

ಉದ್ಯೋಗ ಸಾಧನೆ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ವಿಶ್ವವಿದ್ಯಾಲಯವು ಇತ್ತೀಚಿನ ಶೈಕ್ಷಣಿಕ ಮತ್ತು ತಂತ್ರಜ್ಞಾನದ ಆನ್ವಯಿಕ  (ಉಪಗ್ರಹ ಆಧಾರಿತ ಜಾಡೀಕರಣ, ರೇಡಿಯೊ ತರಂಗಾಂತರ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆ)  ಬಳಕೆ ಮಾಡಿಕೊಳ್ಳಲು ಯೋಜಿಸಿದೆ. ಭಾರತೀಯ ರೈಲ್ವೆಯೊಂದಿಗಿನ ಆಪ್ತ ಸಹಯೋಗವು ಬಾಧ್ಯಸ್ಥರಿಗೆ ರೈಲ್ವೆ ಸೌಲಭ್ಯಗಳು ಲಭಿಸುವುದನ್ನು ಖಾತ್ರಿಪಡಿಸುತ್ತದೆ, ಇದು ಜೀವಂತ ಪ್ರಯೋಗಾಲಯದಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಇವು ಜೀವನದ ನೈಜ ತೊಂದರೆಗಳನ್ನು ಪರಿಹರಿಸಲು ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ. ಇದು ಉನ್ನತ ದರ್ಜೆಯ,  ಅತಿ ವೇಗದ ರೈಲಿನಂಥ ಆಧುನಿಕ ತಂತ್ರಜ್ಞಾನ ಪ್ರದರ್ಶಿಸುವ ತಜ್ಞತೆಯ ಕೇಂದ್ರಗಳನ್ನೂ ಒಳಗೊಂಡಿರುತ್ತದೆ.

ಹಿನ್ನೆಲೆ:

ಭಾರತದ ಸರ್ಕಾರವು ಮುಂದಿನ ಶತಮಾನದದ ಮೇಲೆ ಪರಿಣಾಮ ಬೀರುವಂಥ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ವಡೋದರದಲ್ಲಿ ದೇಶದ ಮೊದಲ ರೈಲ್ವೇ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು ತೀರ್ಮಾನಿಸಿದೆ. - 2016 ರ ಅಕ್ಟೋಬರ್ ನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ರೈಲ್ವೆ ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡಿದರು.

ಭಾರತೀಯ ರೈಲ್ವೆ ಮಹತ್ವಾಕಾಂಕ್ಷೆಯ ಯೋಜನೆಗಳಾದ ಅತಿ ವೇಗದ ರೈಲು (ಬುಲೆಟ್ ರೈಲು ಎಂದೇ ಖ್ಯಾತವಾದ)ಗಳು, ಬೃಹತ್ ಮೂಲಸೌಕರ್ಯ ಆಧುನೀಕರಣ, ಸಮರ್ಪಿತ ಸರಕು ಕಾರಿಡಾರ್ ಗಳು (ಡಿಎಫ್.ಸಿ.ಗಳು), ಸುರಕ್ಷತೆಯ ಮೇಲೆ ಹೆಚ್ಚಿನ ಗಮನ ಇತ್ಯಾದಿಗಳನ್ನು ಕೈಗೊಳ್ಳಲು ಮುಂದಾಗಿದೆ. ಭಾರತೀಯ ರೈಲ್ವೆಗೆ ಉನ್ನತ ದರ್ಜೆಯ ಕೌಶಲ ಮತ್ತು ವೃತ್ತಿಪರತೆಯ ಅಗತ್ಯವಿದೆ. ಜೊತೆಗೆ ಭಾರತದ ಸಾರಿಗೆ ವಲಯದಲ್ಲಿನ ಅಭೂತಪೂರ್ವ ವೃದ್ಧಿಯು, ಅರ್ಹ ಮಾನವ ಶಕ್ತಿಯ ಮತ್ತು ಕೌಶಲ ಮೇಲ್ದರ್ಜೆಗೇರಿಸುವ ಅಗತ್ಯ ಹೆಚ್ಚಿಸಿದೆ ಮತ್ತು ಭಾರತೀಯ ರೈಲ್ವೆಯ ಅಗತ್ಯಕ್ಕೆ  ವಿಶ್ವ-ಮಟ್ಟದ ತರಬೇತಿ ಕೇಂದ್ರ ಅನಿವಾರ್ಯವಾಗಿದೆ.

 ****



(Release ID: 1513545) Visitor Counter : 90


Read this release in: Telugu , English