ಸಂಪುಟ

ಹೈದ್ರಾಬಾದ್ ನಲ್ಲಿ ಸಾಗರ ಶಾಸ್ತ್ರ ಕಾರ್ಯಕಾಚರಣೆಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರ ಸ್ಥಾಪನೆಗಾಗಿ ಯುನೆಸ್ಕೋದೊಂದಿಗಿನ ಒಪ್ಪಂದಕ್ಕೆಸಂಪುಟದ ಅನುಮೋದನೆ

Posted On: 15 DEC 2017 5:39PM by PIB Bengaluru

ಹೈದ್ರಾಬಾದ್ ನಲ್ಲಿ  ಸಾಗರ ಶಾಸ್ತ್ರ ಕಾರ್ಯಕಾಚರಣೆಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರ ಸ್ಥಾಪನೆಗಾಗಿ ಯುನೆಸ್ಕೋದೊಂದಿಗಿನ ಒಪ್ಪಂದಕ್ಕೆಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹೈದ್ರಾಬಾದ್ ನಲ್ಲಿ ಯುನೆಸ್ಕೋದ ಪ್ರವರ್ಗ-2 ಕೇಂದ್ರ (ಸಿ 2 ಸಿ) ಆಗಿ ಸಮುದ್ರಶಾಸ್ತ್ರ ಕಾರ್ಯಚರಣೆಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರವನ್ನು ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ.

ಹಿಂದೂ ಮಹಾಸಾಗರದ ಅಂಚಿನ (ಐಓಆರ್) ರಾಷ್ಟ್ರಗಳು, ಹಿಂದೂ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರದ ಗಡಿಯ ಆಫ್ರಿಕಾ ದೇಶಗಳು, ಯುನೆಸ್ಕೋ ಚೌಕಟ್ಟಿನಡಿಯಲ್ಲಿ ಬರುವ ಸಣ್ಣ ದ್ವೀಪಗಳ ಸಾಮರ್ಥ್ಯ ಅಭಿವೃದ್ಧಿಯ ನಿಟ್ಟಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಸಾಗರಶಾಸ್ತ್ರ ಕಾರ್ಯಚರಣೆಯು ಮೀನುಗಾರ, ವಿಪತ್ತು ನಿರ್ವಹಣೆ, ಹಡಗು, ಬಂದರುಗಳು, ಕರಾವಳಿ ರಾಷ್ಟ್ರಗಳು, ನೌಕಾಪಡೆ, ಕರಾವಳಿ ಭದ್ರತೆ, ಪರಿಸರ, ಕಡಲಾಚೆಯ ಉದ್ಯಮಗಳ ದೈನಂದಿನ ಕಾರ್ಯಾಚರಣೆ ಒಳಗೊಂಡಂತೆ ವಿವಿಧ ಕ್ಷೇತ್ರಗಳಿಗೆ ಮಾಹಿತಿ ಸೇವೆಗಳನ್ನು ಒದಗಿಸುವ ಸಲುವಾಗಿ ವ್ಯವಸ್ಥಿತ ಸಮುದ್ರಶಾಸ್ತ್ರದ ಅಧ್ಯಯನಗಳನ್ನು ನಡೆಸುವ ಒಂದು ಚಟುವಟಿಕೆಯಾಗಿದೆ. 
ಈ ಕೇಂದ್ರವು ಸಾಮರ್ಥ್ಯವರ್ಧನೆ ಮತ್ತು ತರಬೇತಿ, ಜ್ಞಾನ ವಿನಿಮಯ ಮತ್ತು ಮಾಹಿತಿಯ ವಿನಿಮಯ ಕ್ಷೇತ್ರದಲ್ಲಿ ನೆರವು ಒದಗಿಸುತ್ತದೆ ಮತ್ತು ಯುನೆಸ್ಕೋದ ಕ್ರಮದ ಪರಿಣಾಮ ಮತ್ತು  ಯುನೆಸ್ಕೋದ ಮತ್ತು ದೃಷ್ಟಿಯನ್ನು ಹೆಚ್ಚಿಸುವ ಮೂಲಕ ಅದರ ಅಂತರ ಸರ್ಕಾರೀಯ ಸಾಗರಶಾಸ್ತ್ರ ಆಯೋಗ (ಐಓಸಿ) ಮೌಲ್ಯಯುತ ಸಂಪನ್ಮೂಲ ಪ್ರತಿನಿಧಿಸುತ್ತದೆ.
ಯುನೆಸ್ಕೋ ಪ್ರವರ್ಗ -2 ಕೇಂದ್ರ ಸ್ಥಾಪನೆಯು ಭಾರತಕ್ಕೆ ಹಿಂದೂ ಮಹಾಸಾಗರದಲ್ಲಿ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಲು ಅವಕಾಶ ಒದಗಿಸುತ್ತದೆ. ಇದು ಹಿಂದೂ ಮಹಾಸಾಗರದ ಗಡಿಯ  ಆಫ್ರಿಕಾ ದೇಶಗಳು ಹಾಗೂ ದಕ್ಷಿಣ ಏಷ್ಯಾ ಸೇರಿದಂತೆ ಹಿಂದೂ ಮಹಾಸಾಗರದಂಚಿನ ರಾಷ್ಟ್ರಗಳೊಂದಿಗೆ ಸಹಕಾರ ಮತ್ತು ಕಾರ್ಯಕ್ರಮಗಳ ಸುಧಾರಣೆ ಸಾಧಿಸಲು ಭಾರತಕ್ಕೆ ನೆರವಾಗಲಿದೆ. ಕೇಂದ್ರದ ಸ್ಥಾಪನೆಯು ಸಾಗರ ಮತ್ತು ಕರಾವಳಿ ಸಮರ್ಥನೀಯತೆಯ ಸಮಸ್ಯೆಗಳನ್ನು ಬಗೆಹರಿಸಲು ವಿಶ್ವಾದ್ಯಂತ ಹೆಚ್ಚುತ್ತಿರುವ ತಾಂತ್ರಿಕ ಮತ್ತು ನಿರ್ವಹಣಾ ಸಾಮರ್ಥ್ಯವನ್ನು ನಿರ್ಮಿಸುವ ಅಗತ್ಯಕ್ಕೆ ಸ್ಪಂದಿಸುತ್ತದೆ ಮತ್ತು ಸಾಗರ ನೈಸರ್ಗಿಕ ಅಪಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಜ್ಜುಗೊಳಿಸುತ್ತದೆ. ಈ ಕೇಂದ್ರವು,ಭೌಗೋಳಿಕ ಪ್ರದೇಶದಲ್ಲಿ ಸಾಗರ ವೈಜ್ಞಾನಿಕ ಸಂಶೋಧನಾ ಸಾಮರ್ಥ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಸ್ಥಿರ ಅಭಿವೃದ್ಧಿ ಗುರಿ -14 (ಎಸ್.ಡಿ.ಜಿ 14) ಗುರಿ ಸಾಧನೆಗೂ ಕೊಡುಗೆ ನೀಡಲಿದೆ, ಇದು ಮುಂದುವರಿಯುತ್ತಿರುವ ಸಣ್ಣ ದ್ವೀಪರಾಷ್ಟ್ರಗಳು, ಅತಿ ಕಡಿಮೆ ಅಭಿವೃದ್ದಿ ಹೊಂದಿರುವ ರಾಷ್ಟ್ರಗಳಿಗೆ ಬೆಂಬಲ ನೀಡುವ ಬದ್ಧತೆಯನ್ನೂ ಪೂರೈಸಲಿದೆ.  
ಈ ಸಿ2ಸಿ ವಿದ್ಯಾರ್ಥಿಗಳ ಮತ್ತು ಇತರ ಸ್ಪರ್ಧಿಗಳ ಕೌಶಲ ಸುಧಾರಣೆಯ ಇಂಗಿತ ಹೊಂದಿದೆ, ಇದು ಭಾರತದೊಳಗೆ ಮತ್ತು ಹೊರಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ. ಸಿ2ಸಿ ಸ್ಥಾಪನೆಯು ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕ ಬೆಳವಣಿಗೆ ಒದಗಿಸುತ್ತದೆ ಎಂದೂ ನಿರೀಕ್ಷಿಸಲಾಗಿದೆ. ಈ ಕೇಂದ್ರವು ಪ್ರಸ್ತುತ ಹೈದ್ರಾಬಾದ್ ನ ಭಾರತೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಐಎನ್.ಸಿ.ಓ.ಐ.ಎಸ್.)ದಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಕಾರ್ಯಾರಂಭ ಮಾಡುತ್ತಿದೆ. ಈವರೆಗೆ ಭಾರತದ 576 ಮತ್ತು ಇತರ 34 ರಾಷ್ಟ್ರಗಳ 105 ವಿಜ್ಞಾನಿಗಳು ಸೇರಿ 681ಕ್ಕೂಹೆಚ್ಚು ವಿಜ್ಞಾನಿಗಳು ಈ ಕೇಂದ್ರದಲ್ಲಿ ಸಾಗರಶಾಸ್ತ್ರದ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದಿದ್ದಾರೆ. ಇತರ ಮೂಲಸೌಕರ್ಯ ಸೌಲಭ್ಯಗಳಾದ ಕಟ್ಟಡ ಮತ್ತು ತರಬೇತಿ ಹಾಸ್ಟೆಲ್ ಸ್ಥಾಪಿಸಲಾಗಿದೆ. ಇದು ಪ್ರಪಂಚದಾದ್ಯಂತದ ವಿಶ್ವ ದರ್ಜೆಯ (ಆಕಾಂಕ್ಷಿಗಳು ಮತ್ತು ತರಬೇತಿಪಡೆಯುವವರು) ಆಹ್ವಾನಿಸಲು ಮತ್ತು ದೀರ್ಘಕಾಲದ ಶಿಕ್ಷಣಕ್ಕಾಗಿ (3-9 ತಿಂಗಳ) ಪಠ್ಯಕ್ರಮವನ್ನು ತಯಾರಿಸಲು ಸಹ ಯೋಜಿಸಿದೆ.

*****



(Release ID: 1512999) Visitor Counter : 142


Read this release in: English , Telugu