ಪ್ರಧಾನ ಮಂತ್ರಿಯವರ ಕಛೇರಿ

ಬಹುಮುಖ ನಟ ಶಶಿಕಪೂರ್ ನಿಧನಕ್ಕೆ ಪ್ರಧಾನಿ ಸಂತಾಪ

ಪ್ರಕಟಣಾ ದಿನಾಂಕ: 04 DEC 2017 7:21PM by PIB Bengaluru

ಬಹುಮುಖ ನಟ ಶಶಿಕಪೂರ್ ನಿಧನಕ್ಕೆ ಪ್ರಧಾನಿ ಸಂತಾಪ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹುಮುಖ ಪ್ರತಿಭೆಯ ನಟ ಶಶಿ ಕಪೂರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

“ಶಶಿ ಕಪೂರ್ ಅವರ ಬಹುಮುಖ ಪ್ರತಿಭೆಯನ್ನು ಅವರ ಚಲನಚಿತ್ರಗಳಲ್ಲಿ ಮತ್ತು ರಂಗಭೂಮಿಯಲ್ಲಿ ಕಾಣಬಹುದು, ಅದನ್ನು ಅವರು ಭಾವಾಭಿನಯದಿಂದ ಮಾಡುತ್ತಿದ್ದರು. ಅವರ ಅದ್ಭುತ ನಟನೆ ಮುಂದಿನ ಪೀಳಿಗೆಯವರೆಗೆ ಸ್ಮರಿಸಲ್ಪಡುತ್ತದೆ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಸಲ್ಲಿಸುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ 

***


(ಪ್ರಕಟಣೆ ಐ.ಡಿ.: 1511809) ವಿಸಿಟರ್ ಕೌಂಟರ್ : 92
ಪ್ರಕಟಣೆಯನ್ನು ಇದರಲ್ಲಿ ಓದಿ: English , Telugu