ಸಂಪುಟ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳಿಗೆ ಪರಿಷ್ಕೃತ ವೇತನ, ಗ್ರಾಚ್ಯುಯಿಟಿ, ಭತ್ಯೆಗಳು ಮತ್ತು ಪಿಂಚಣಿಗೆ ಸಂಪುಟದ ಅನುಮೋದನೆ

Posted On: 22 NOV 2017 4:15PM by PIB Bengaluru

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳಿಗೆ ಪರಿಷ್ಕೃತ ವೇತನಗ್ರಾಚ್ಯುಯಿಟಿ,  ಭತ್ಯೆಗಳು ಮತ್ತು  ಪಿಂಚಣಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳ ಹಾಗೂ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳ ನಿವೃತ್ತ ನ್ಯಾಯಮೂರ್ತಿಗಳ  ವೇತನಗ್ರಾಚ್ಯುಯಿಟಿ,  ಭತ್ಯೆಗಳು ಮತ್ತು  ಪಿಂಚಣಿ ಇತ್ಯಾದಿಗಳ ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ. ನಾಗರಿಕ ಸೇವೆಯಲ್ಲಿರುವವರಿಗೆ 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ ಬಳಿಕ ಈ ಅನುಮೋದನೆ ನೀಡಲಾಗಿದೆ.

ಈ ಅನುಮೋದನೆಯು, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ), ಭಾರತದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳು ಮತ್ತು ಎಲ್ಲ ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ನಿರ್ವಹಿಸುವ  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಾವಳಿಗಳು) ಕಾಯಿದೆ 1958 ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಗಳು) ಕಾಯಿದೆ 1954, ಈ ಎರಡು ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ತರಲು ಅವಕಾಶ ಕಲ್ಪಿಸುತ್ತದೆ. 
ಭಾರತದ ಸುಪ್ರೀಂ ಕೋರ್ಟ್ ನ 31 (ಮುಖ್ಯ ನ್ಯಾಯಮೂರ್ತಿ ಸೇರಿದಂತೆ) ಮತ್ತು ಹೈಕೋರ್ಟ್ ಗಳ 1079 ನ್ಯಾಯಮೂರ್ತಿಗಳ (ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ) ವೇತನ ಮತ್ತು ಭತ್ಯೆ ಇತ್ಯಾದಿಗಳನ್ನು ಹೆಚ್ಚಳ ಮಾಡುತ್ತದೆ. ಜೊತೆಗೆ ಸುಮಾರು 2500 ನಿವೃತ್ತ ನ್ಯಾಯಮೂರ್ತಿಗಳು ಈ ಪರಿಷ್ಕರಣೆಯಿಂದ ಪಿಂಚಣಿ/ಗ್ರಾಚ್ಯುಯಿಟಿ ಇತ್ಯಾದಿ ಪ್ರಯೋಜನ ಪಡೆಯಲಿದ್ದಾರೆ.

01.01.2016ರಿಂದ ಅನ್ವಯವಾಗುವಂತೆ ವೇತನ, ಗ್ರಾಚ್ಯುಯಿಟಿ, ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಣೆಯಿಂದ ಬರಬೇಕಾದ ಬಾಕಿಯನ್ನು ಒಂದು ಬಾರಿಗೆ ನೀಡಲಾಗುತ್ತದೆ. 
ಹಿನ್ನೆಲೆ
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ವೇತನ, ಗ್ರಾಚ್ಯುಯಿಟಿ, ಪಿಂಚಣಿ, ಭತ್ಯೆ ಇತ್ಯಾದಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಾವಳಿಗಳು) ಕಾಯಿದೆ 1958 ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳ ವೇತನ ಇತ್ಯಾದಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಯಮಗಳು) ಕಾಯಿದೆ 1954 ನಿರ್ವಹಿಸುತ್ತದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದಂತೆ ವೇತನ/ಪಿಂಚಣಿ, ಗ್ರಾಚ್ಯುಯಿಟಿ, ಭತ್ಯೆ ಇತ್ಯಾದಿ ಪರಿಷ್ಕರಣೆಯ ಯಾವುದೇ ಪ್ರಸ್ತಾಪ ಬಂದಾಗ ಅದಕ್ಕೆ ಕಾಯಿದೆಗೆ ತಿದ್ದುಪಡಿ ತರಬೇಕಾಗುತ್ತದೆ. ಹೀಗಾಗಿ ಮುಂಬರುವ ಅಧಿವೇಶನದಲ್ಲಿ, ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿ ತರಲು ಮಸೂದೆಯನ್ನು ಮಂಡಿಸಲು ಸರ್ಕಾರ ಉದ್ದೇಶಿಸಿದೆ
*****



(Release ID: 1510486) Visitor Counter : 67


Read this release in: English , Tamil