ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ, 2019 ರ ತಿದ್ದುಪಡಿಗಳ ಮಾಹಿತಿಗೆ ಸಂಪುಟದ ಅನುಮೋದನೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಾಜ್ಯಸಭೆ ಅಂಗೀಕರಿಸಿದ 2019 ರ ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆಗೆ ತರಲಾಗಿರುವ ತಿದ್ದುಪಡಿಗಳ ಬಗೆಗಿನ ಮಾಹಿತಿಗೆ ಅನುಮೋದನೆ ನೀಡಿದೆ.
ಈ ತಿದ್ದುಪಡಿಗಳಿಂದಾಗಿ, ರಾಷ್ಟ್ರೀಯ ಸಾರಿಗೆ ನೀತಿಯನ್ನು ರೂಪಿಸುವಾಗ ಮತ್ತು ಕೇಂದ್ರ ಸರ್ಕಾರದಿಂದ ಸರಕು ಮತ್ತು ಪ್ರಯಾಣಿಕರ ರಾಷ್ಟ್ರೀಯ, ಮಲ್ಟಿಮೋಡಲ್ ಮತ್ತು ಅಂತರರಾಜ್ಯ ಸಾಗಣೆಗೆ ಯೋಜನೆಗಳನ್ನು ರೂಪಿಸುವಾಗ ರಾಜ್ಯ ಸರ್ಕಾರಗಳ ಸಮ್ಮತಿಯನ್ನು ಖಚಿತಪಡಿಸುತ್ತದೆ.
ಹಿನ್ನೆಲೆ
ಮೋಟಾರು ವಾಹನ (ತಿದ್ದುಪಡಿ) ಮಸೂದೆ, 2019 ನ್ನು ಲೋಕಸಭೆಯಲ್ಲಿ ಮರು ಮಂಡನೆಗಾಗಿ 2019 ರ ಜೂನ್ 24 ರಂದು ಸಂಉಟ ಸಭೆಯು ಅನುಮೋದನೆ ನೀಡಿತ್ತು. ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆಯು, 2019 ರ ಜುಲೈ 23 ರಂದು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ನಂತರ, ಈ ಮಸೂದೆಯನ್ನು ರಾಜ್ಯಸಭೆಯಲ್ಲಿ 2019 ರ ಜುಲೈ 31 ರಂದು ಮಂಡಿಸಲಾಯಿತು. 31 ಜುಲೈ, 2019 ರಂದು ತಿದ್ದುಪಡಿಗಳೊಂದಿಗೆ ಮಸೂದೆಯನ್ನು ರಾಜ್ಯಸಭೆಯು ಅಂಗೀಕರಿಸಿತು. ಇದಲ್ಲದೆ, ತಿದ್ದುಪಡಿಗಳನ್ನು ಲೋಕಸಭೆಯ ಮುಂದೆ ಪ್ರಸ್ತಾಪಿಸಲಾಯಿತು ಮತ್ತು 2019 ರ ಆಗಸ್ಟ್ 5 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.