ಆರೋಗ್ಯ ರಕ್ಷಣ ಮೂಲಸೌಕರ್ಯಕ್ಕೆ ಉತ್ತೇಜನ
3 ಹೊಸ ಎ.ಐ.ಐ.ಎಂ. ಗಳ ಸ್ಥಾಪನೆಗೆ ಸಂಪುಟ ಅನುಮೋದನೆ. ಹೊಸ ಎ.ಐ.ಐ.ಎಂ. ಗಳು 1. ಜಮ್ಮುವಿನ ಸಾಂಬಾದ ವಿಜಯನಗರ, 2. ಕಾಶ್ಮೀರದ ಪುಲ್ವಾಮಾದ ಅವಂತಿಪುರ, 3.ಗುಜರಾತಿನ ರಾಜಕೋಟ್ ಗಳಲ್ಲಿ ಅಸ್ತಿತ್ವಕ್ಕೆ ಬರಲಿವೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಈ ಕೆಳಗಿನವುಗಳಿಗೆ ತನ್ನ ಅನುಮೋದನೆಯನ್ನು ನೀಡಿತು, ಅವುಗಳೆಂದರೆ:
ಎ. ಮೂರು ಹೊಸ ಎ.ಐ.ಐ.ಎಂ.ಗಳ ಸ್ಥಾಪನೆ (i) ಜಮ್ಮುವಿನ ಸಾಂಬಾದ ವಿಜಯನಗರದಲ್ಲಿ , 1661 ಕೋ.ರೂ. ವೆಚ್ಚ. (ii) ಕಾಶ್ಮೀರದ ಪುಲ್ವಾನಾದ ಅವಂತಿಪುರದಲ್ಲಿ , 1828 ಕೋ.ರೂ. ವೆಚ್ಚ ಮತ್ತು (iii) ಗುಜರಾತಿನ ರಾಜ್ ಕೋಟ್ ನಲ್ಲಿ 1195 ಕೋ.ರೂ. ವೆಚ್ಚ. ಈ ಎ.ಐ.ಐ.ಎಂ.ಗಳನ್ನು ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ (ಪಿ.ಎಂ.ಎಸ್.ಎಸ್.ವೈ.) ಅಡಿಯಲ್ಲಿ ಸ್ಥಾಪಿಸಲಾಗುವುದು.
ಬಿ. ಈ ಮೇಲಿನ ಮೂರು ಎ.ಐ.ಐ.ಎಂ.ಎಸ್. ಗಳಿಗೆ ತಲಾ ಒಂದೊಂದು ನಿರ್ದೇಶಕ ಹುದ್ದೆ ಮೂಲ ವೇತನ ರೂ. 2,25,000 ಮತ್ತು ಎನ್.ಪಿ.ಎ. (ಆದಾಗ್ಯೂ ವೇತನ + ಎನ್.ಪಿ.ಎ. ಗಳು ಒಟ್ಟು 2,37,500 ರೂ. ದಾಟದಂತೆ ) ವೇತನ ಶ್ರೇಣಿಯಲ್ಲಿ ಸೃಜನೆ.
ಸಮಯದ ಚೌಕಟ್ಟು:
|
ಕ್ರಮಸಂಖ್ಯೆ
|
ಹೊಸ ಎ.ಐ.ಐ.ಎಂ.ಎಸ್.
|
ನಿರ್ಮಾಣಕ್ಕೆ ಕಾಲಮಿತಿ ಚೌಕಟ್ಟು ಮತ್ತು ವಿವರಗಳು
|
|
1.
|
ವಿಜಯನಗರ, ಸಂಬಾ,ಜಮ್ಮು
|
48 ತಿಂಗಳು
ನಿರ್ಮಾಣ ಪೂರ್ವ ಹಂತ -12 ತಿಂಗಳು, ನಿರ್ಮಾಣ ಹಂತ 30 ತಿಂಗಳು ಮತ್ತು ಕಾರ್ಯಾನುಷ್ಟಾನ ಹಂತ 6 ತಿಂಗಳು.
|
|
2.
|
ಅವಂತಿಪುರ, ಪುಲ್ವಾನಾ, ಕಾಶ್ಮೀರ
|
72 ತಿಂಗಳು
ನಿರ್ಮಾಣ ಪೂರ್ವ ಹಂತ -12 ತಿಂಗಳು, ನಿರ್ಮಾಣ ಹಂತ 54 ತಿಂಗಳು ಮತ್ತು ಕಾರ್ಯಾನುಷ್ಟಾನ ಹಂತ 6 ತಿಂಗಳು.
|
|
3.
|
ರಾಜ್ ಕೋಟ್, ಗುಜರಾತ್
|
45 ತಿಂಗಳು
ನಿರ್ಮಾಣ ಪೂರ್ವ ಹಂತ -10 ತಿಂಗಳು, ನಿರ್ಮಾಣ ಹಂತ 32 ತಿಂಗಳು ಮತ್ತು ಕಾರ್ಯಾನುಷ್ಟಾನ ಹಂತ 3 ತಿಂಗಳು.
|
ವಿವರಗಳು:
ಎ. ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಯಲ್ಲಿ ಆಸ್ಪತ್ರೆ ನಿರ್ಮಾಣ, ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸುಗಳಿಗಾಗಿ ಬೋಧನಾ ಬ್ಲಾಕ್, ನಿವಾಸಿ ಸಂಕೀರ್ಣ ನಿರ್ಮಾಣ ಮತ್ತು ಇತರ ಸೇವೆಗಳು/ಸೌಲಭ್ಯಗಳು ಒಳಗೊಂಡಿವೆ. ಇವು ಸ್ಥೂಲವಾಗಿ ಹೊಸದಿಲ್ಲಿಯಲ್ಲಿರುವ ಎ.ಐ.ಐ.ಎಂ. ಎಸ್. ಮತ್ತು ಪಿ.ಎಂ.ಎಸ್.ಎಸ್. ವೈ. ಹಂತ-1 ರಡಿಯಲ್ಲಿ ಕೈಗೆತ್ತಿಕೊಂಡ ಇತರ ಎ.ಐ.ಐ.ಎಂ.ಎಸ್. ಗಳಂತೆ ಇರುತ್ತವೆ. ಆಯಾ ವಲಯದಲ್ಲಿ ಗುಣಮಟ್ಟದ ತೃತೀಯ ಹಂತದ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ,ನರ್ಸಿಂಗ್ ಶಿಕ್ಷಣ ಮತ್ತು ಸಂಶೋಧನೆಯ ಅವಕಾಶಗಳನ್ನು ಒದಗಿಸುವುದು ರಾಷ್ಟ್ರೀಯ ಮಹತ್ವದ ಸಂಸ್ಥೆಗಳಾದ ಎ.ಐ.ಐ.ಎಂ.ಗಳ ಉದ್ದೇಶ.
ಬಿ. (i) ಪ್ರತೀ ಹೊಸ ಎ.ಐ.ಐ.ಎಂ.ಎಸ್. ನಿಂದಾಗಿ 100 ಎಂ.ಬಿ.ಬಿ.ಎಸ್. ಪದವಿ ಮತ್ತು ಬಿ.ಎಸ್ಸಿ (ನರ್ಸಿಂಗ್) ಶಿಕ್ಷಣದ 60 ಸೀಟುಗಳು ಸೃಷ್ಟಿಯಾಗುತ್ತವೆ.
(ii) ಪ್ರತೀ ಎ.ಐ.ಐ.ಎಂ.ಎಸ್. 15-20 ವಿಶೇಷ ತಜ್ಞತಾ ವಿಭಾಗಗಳನ್ನು ಹೊಂದಿರುತ್ತದೆ.
(iii) ಪ್ರತೀ ಹೊಸ ಎ.ಐ.ಐ.ಎಂ.ಎಸ್. ತುರ್ತು ಚಿಕಿತ್ಸೆ ಮತ್ತು ಟ್ರೂಮಾ ಹಾಸಿಗೆಗಳು, ಆಯುಷ್ ಹಾಸಿಗೆಗಳು, ಖಾಸಗಿ ಹಾಸಿಗೆಗಳು ಮತ್ತು ಐ.ಸಿ.ಯು. ಸ್ಪೆಷಾಲಿಯಿ ಹಾಗು ಸೂಪರ್ ಸ್ಪೆಷಾಲಿಟಿ ಹಾಸಿಗೆಗಳ ಸಹಿತ ಸುಮಾರು 750 ಹಾಸಿಗೆಗಳ ಆಸ್ಪತ್ರೆಯನ್ನು ಹೊಂದಿರುತ್ತದೆ.
(iv) ಪ್ರತೀ ಹೊಸ ಎ.ಐ.ಐ.ಎಂ.ಎಸ್. ದಿನಕ್ಕೆ 1500 ಹೊರರೋಗಿಗಳು ಮತ್ತು ತಿಂಗಳಿಗೆ 1000 ಒಳರೋಗಿಗಳ ಚಿಕಿತ್ಸಾ ಆವಶ್ಯಕತೆಯನ್ನು ಈಡೇರಿಸುವ ನಿರೀಕ್ಷೆ ಇದೆ.
(v) ಅಲ್ಲಿ ವೈದ್ಯಕೀಯ ಕಾಲೇಜು, ಆಯುಷ್ ಬ್ಲಾಕ್, ಸಭಾಂಗಣ, ರಾತ್ರಿ ತಂಗುವಿಕೆ ವ್ಯವಸ್ಥೆ, ಅತಿಥಿ ಗೃಹಗಳು, ಹಾಸ್ಟೆಲ್ ಗಳು ಮತ್ತು ನಿವಾಸಿ ಸೌಲಭ್ಯಗಳು ಇರುತ್ತವೆ.
ಖರ್ಚು:
ಹೊಸ ಎ.ಐ.ಐ.ಎಂ.ಎಸ್. ಗಳ ನಿರ್ಮಾಣಕ್ಕೆ ಹಣಕಾಸನ್ನು ಪೂರ್ಣವಾಗಿ ಕೇಂದ್ರ ಸರಕಾರವೇ ಒದಗಿಸಲಿದೆ. ಹೊಸ ಎ.ಐ.ಐ.ಎಂ.ಎಸ್. ಗಳ ಕಾರ್ಯಾಚರಣಾ ಮತ್ತು ನಿರ್ವಹಣಾ ವೆಚ್ಚಗಳನ್ನೂ ಕೇಂದ್ರ ಸರಕಾರವೇ ಭರಿಸಲಿದೆ.
ಹೊಸ ಎ.ಐ.ಐ.ಎಂ.ಎಸ್. ಗಳ ಸ್ಥಾಪನೆ ಬಂಡವಾಳ ಆಸ್ತಿಯನ್ನು ನಿರ್ಮಾಣ ಮಾಡಲಿದೆ, ಅದರ ನಿರ್ವಹಣೆ ಮತ್ತು ನಿಭಾವಣೆಗೆ ಅವಶ್ಯ ವಿಶೇಷ ತಜ್ಞತೆಯ ಮಾನವ ಸಂಪನ್ಮೂಲವನ್ನು ಆರು ಹೊಸ ಎ.ಐ.ಐ.ಎಂ.ಎಸ್. ಗಳ ಮಾದರಿಯಲ್ಲಿ ರೂಪಿಸಲಾಗುತ್ತದೆ.
ಪರಿಣಾಮ:
· ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಆರೋಗ್ಯ ಶಿಕ್ಷಣ ಮತ್ತು ತರಬೇತಿಯಲ್ಲಿ ಪರಿವರ್ತನೆಯಾಗಲಿದೆ ಹಾಗು ಆಯಾ ವಲಯದಲ್ಲಿ ಆರೋಗ್ಯ ರಕ್ಷಣಾ ವೃತ್ತಿಪರರ ಕೊರತೆ ನಿವಾರಣೆಯಾಗಲಿದೆ.
· ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಜನತೆಗೆ ವಿಶೇಷ ತಜ್ಞತೆಯ ಆರೋಗ್ಯ ರಕ್ಷಣಾ ಸೌಲಭ್ಯ ಒದಗಿಬರಲಿದೆ.
· ಇದರಿಂದ ವೈದ್ಯರ ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸಮೂಹ ಈ ವಲಯದಲ್ಲಿ ನಿರ್ಮಾಣವಾಗಲಿದ್ದು, ಇದು ರಾಷ್ಟ್ರೀಯ ಆರೋಗ್ಯ ಮಿಷನ್ನಿನಡಿ (ಎನ್.ಎಚ್.ಎಂ.) ನಿರ್ಮಾಣವಾಗುವ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಸಂಸ್ಥೆಗಳು/ ಸವಲತ್ತುಗಳಿಗೆ ಲಭ್ಯವಾಗಲಿದೆ.
ಉದ್ಯೋಗ ಸೃಷ್ಟಿ:
· ಜಮ್ಮು ಕಾಶ್ಮೀರ ಮತ್ತು ಗುಜರಾತ್ ಗಳಲ್ಲಿ ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಪ್ರತೀ ಎ.ಐ.ಐ.ಎಂ.ಎಸ್. ಗಳಲ್ಲಿ ವಿವಿಧ ಬೋಧನಾ ಮತ್ತು ಬೋಧಕೇತರ ವಿಭಾಗಗಳಲ್ಲಿ ಸುಮಾರು 3000 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
· ಶಾಪಿಂಗ್ ಸೆಂಟರ್, ಕ್ಯಾಂಟೀನುಗಳು, ಇತ್ಯಾದಿಗಳು ಹೊಸ ಎ.ಐ.ಐ.ಎಂ.ಎಸ್. ಗಳ ಆ ಪ್ರದೇಶದಲ್ಲಿ ತಲೆ ಎತ್ತುವುದರಿಂದ ಪರೋಕ್ಷ ಉದ್ಯೋಗಗಳ ಸೃಷ್ಟಿಯೂ ಆಗಲಿದೆ.
· ವಿವಿಧ ಹೊಸ ಎ.ಐ.ಐ.ಎಂ. ಎಸ್. ಗಳಿಗೆ ಭೌತಿಕ ಮೂಲಸೌಕರ್ಯ ರೂಪಿಸುವ ನಿರ್ಮಾಣ ಕಾರ್ಯಚಟುವಟಿಕೆ ನಿರ್ಮಾಣ ಕ್ಷೇತ್ರದಲ್ಲಿಯೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ.
ಹಿನ್ನೆಲೆ:
ಕೇಂದ್ರೀಯ ವಲಯದ ಯೋಜನೆಯಾದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ (ಪಿ.ಎಂ.ಎಸ್.ಎಸ್. ವೈ.) ವು ದೇಶದ ವಿವಿಧ ಭಾಗಗಳಲ್ಲಿ ಕೈಗೆಟಕುವ ದರದಲ್ಲಿ ತೃತೀಯ ಹಂತದ ಆರೋಗ್ಯ ರಕ್ಷಣಾ ಸೇವೆಯನ್ನು ಒದಗಿಸುವ ಮತ್ತು ನಿರ್ದಿಷ್ಟವಾಗಿ ಕೊರತೆ ಇರುವ ರಾಜ್ಯಗಳಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಿಕೊಂಡುವ ಉದ್ದೇಶವನ್ನು ಹೊಂದಿದೆ.
ಜಮ್ಮು ಕಾಶ್ಮೀರ ರಾಜ್ಯದ ಜಮ್ಮು ವಲಯ ಮತ್ತು ಕಾಶ್ಮೀರ ವಲಯದಲ್ಲಿ ತಲಾ ಒಂದರಂತೆ ಎರಡು ಹೊಸ ಎ.ಐ.ಐ. ಎಂ.ಎಸ್. ಗಳನ್ನು ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜಿನಡಿ 07-11-2015ರಂದು ಪ್ರಧಾನ ಮಂತ್ರಿ ಅವರು ಘೋಷಿಸಿದ್ದರು. ಗುಜರಾತಿನಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪನೆಯ ಬಗ್ಗೆ ಹಣಕಾಸು ಸಚಿವರು 2017-18 ರ ತಮ್ಮ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದರು.
(Release ID :187413)