57th International Film Festival of India 2026
20 – 28 Nov 2026

ಗಡಿಗಳಿಲ್ಲದ ಕಥೆಗಳು, ಈಗ ಮುದ್ರಣ ಮತ್ತು ಡಿಜಿಟಲ್ ರೂಪದಲ್ಲಿ: 57ನೇ ‘ಐಎಫ್‌ಎಫ್‌ಐ’ಗಾಗಿ ಮರಳಿದ 'ಇಫಿಲಾಯ್ಡ್'


ಚಲನಚಿತ್ರೋತ್ಸವದ ನಿರ್ದೇಶಕರಾದ ಶ್ರೀ ಅಶುತೋಷ್ ಗೌರಿಕರ್‌ ಅವರಿಂದ ‘ಪಿಐಬಿ’ಯ ದೈನಂದಿನ ಉತ್ಸವದ ಸುದ್ದಿಪತ್ರದ 5ನೇ ಸಂಪುಟ, 1ನೇ ಸಂಚಿಕೆ ಬಿಡುಗಡೆ

ಚಲನಚಿತ್ರೋತ್ಸವದ ಮುಖ್ಯಾಂಶಗಳು, ಸಿನಿಮಾ ಕುರಿತ ಸಂವಾದಗಳು ಮತ್ತು ತೆರೆಮರೆಯ ಕ್ಷಣಗಳನ್ನು ಸೆರೆಹಿಡಿಯಲಿರುವ ಸುದ್ದಿಪತ್ರ

ಪ್ರಕಟಣಾ ದಿನಾಂಕ: 20 NOV 2026 12:53PMby PIB Bengaluruಪ್ರಕಟಣೆ ಐ.ಡಿ.: 2338984Views: 9

ಗೋವಾದಲ್ಲಿ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಐಎಫ್ಎಫ್‌ಐ) ಚಾಲನೆ ದೊರೆಯುತ್ತಿದ್ದಂತೆಯೇ, ಉತ್ಸವದ ನಿರ್ದೇಶಕರು ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕರಾದ ಶ್ರೀ ಅಶುತೋಷ್ ಗೌರಿಕರ್‌ ಅವರು ಇಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಪ್ರಕಟಿಸುವ ದೈನಂದಿನ ಚಲನಚಿತ್ರೋತ್ಸವದ ಸುದ್ದಿಪತ್ರ 'ಇಫಿಲಾಯ್ಡ್'ನ 5ನೇ ಸಂಪುಟ, 1ನೇ ಸಂಚಿಕೆಯನ್ನು ಬಿಡುಗಡೆ ಮಾಡಿದರು.

‘ಐಐಎಫ್‌ಐ’ನ ಮತ್ತೊಂದು ಆವೃತ್ತಿಯೊಂದಿಗೆ ಮರಳಿರುವ 'ಇಫಿಲಾಯ್ಡ್', ಚಲನಚಿತ್ರೋತ್ಸವವನ್ನು ಕಥೆ ಹೇಳುವ ಸಂಭ್ರಮವನ್ನಾಗಿಸತ್ತದೆ. ಚಲನಚಿತ್ರಗಳು, ಚಿತ್ರ ನಿರ್ಮಾಪಕರು, ಸಂವಾದಗಳು ಮತ್ತು ಅವಿಸ್ಮರಣೀಯ ಕ್ಷಣಗಳನ್ನು ಒಟ್ಟುಗೂಡಿಸುವ ಮೂಲಕ ತನ್ನ ಓದುಗರಿಗೆ ಸಿನಿಮಾದ ವರ್ಣರಂಜಿತ ಪ್ರಪಂಚದ ಒಂದು ನೋಟವನ್ನು ನೀಡುತ್ತದೆ.

ಈ ಸುದ್ದಿಪತ್ರವು ಉತ್ಸವದ ಮುಖ್ಯಾಂಶಗಳು, ಆಕರ್ಷಕ ಲೇಖನಗಳು, ಛಾಯಾಚಿತ್ರಗಳು, ಕಾರ್ಯಕ್ರಮಗಳ ವೇಳಾಪಟ್ಟಿ ಮತ್ತು ಪ್ರಮುಖ ಘಟನೆಗಳ ಮಾಹಿತಿಯನ್ನು ಒಳಗೊಂಡಿರುತ್ತದೆ. ಸಿನಿಮಾ ಪ್ರದರ್ಶನಗಳು ಮತ್ತು ಚಿತ್ರ ನಿರ್ಮಾಪಕರೊಂದಿಗಿನ ಸಂವಾದಗಳಿಂದ ಹಿಡಿದು ಚಲನಚಿತ್ರ ಪ್ರದರ್ಶನಗಳು ಮತ್ತು ಇತರ ಉತ್ಸವದ ಚಟುವಟಿಕೆಗಳವರೆಗೆ, ಉತ್ಸವದ ಉದ್ದಕ್ಕೂ ನಡೆಯುವ ವೈವಿಧ್ಯಮಯ ಅನುಭವಗಳನ್ನು ಇದು ಸೆರೆಹಿಡಿಯಲಿದೆ.

57ನೇ ‘ಐಎಫ್‌ಎಫ್‌ಐ’ನ ಧ್ಯೇಯವಾಕ್ಯವಾದ 'ಗಡಿಗಳಿಲ್ಲದ ಕಥೆಗಳು' ಎಂಬುದನ್ನು ಪ್ರತಿಬಿಂಬಿಸುತ್ತಾ, ಈ ಸುದ್ದಿಪತ್ರವು ಜನರು,ಸಂಸ್ಕೃತಿಗಳು ಮತ್ತು ದೃಷ್ಟಿಕೋನಗಳನ್ನು ಬೆಸೆಯುವ ಸಿನಿಮಾದ ಶಕ್ತಿಯನ್ನು ಸಂಭ್ರಮಿಸುತ್ತದೆ. ಇದು ಉತ್ಸವವನ್ನು ಪ್ರದರ್ಶನದ ಸ್ಥಳಗಳಿಗಿಂತ ಆಚೆಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದು, ಸಿನಿಮಾ ಆಸಕ್ತರು ಮತ್ತು ಓದುಗರು ‘ಐಎಫ್‌ಎಫ್‌ಐ’ನ ಇತ್ತೀಚಿನ ವಿದ್ಯಮಾನಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ.

ನವೆಂಬರ್ 20 ರಿಂದ 29 ರವರೆಗೆ ಚಲನಚಿತ್ರೋತ್ಸವದ ಅವಧಿಯಲ್ಲಿ ಪ್ರತಿದಿನ ಪ್ರಕಟವಾಗುವ 'ಇಫಿಲಾಯ್ಡ್', ಉತ್ಸವದ ಮಾಹಿತಿ ಮತ್ತು ಮುಖ್ಯಾಂಶಗಳನ್ನು ಸುಲಭವಾಗಿ ಅರ್ಥವಾಗುವ ಮತ್ತು ಆಕರ್ಷಕವಾದ ಸ್ವರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ‘ಐಎಫ್‌ಎಫ್‌ಐ’ ಕುರಿತ ‘ಪಿಐಬಿ’ಯ ಅಧಿಕೃತ ವರದಿಗಾರಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

'ಇಫಿಲಾಯ್ಡ್'ನ ಮೊದಲ ಸಂಚಿಕೆಯು ‘ಪಿಐಬಿ’, ‘ಐಎಫ್‌ಎಫ್‌ಐ’ನ ಅಧಿಕೃತ ಪೋರ್ಟಲ್‌ನಲ್ಲಿ ಲಭ್ಯವಿದೆ. ಆಸಕ್ತ ಓದುಗರು ಈ ಸುದ್ದಿಪತ್ರವನ್ನು ವೀಕ್ಷಿಸಬಹುದು ಮತ್ತು ಚಲನಚಿತ್ರೋತ್ಸವದ ಉದ್ದಕ್ಕೂ ಮುಂದಿನ ಸಂಚಿಕೆಗಳನ್ನು ಅನುಸರಿಸಬಹುದು.

'ಇಫಿಲಾಯ್ಡ್'ನ ಅನ್ನು ಇಲ್ಲಿ ಓದಬಹುದು: here: https://www.pib.gov.in/iffi/57/iffiLoid.aspx?yr=2026&lang=1&reg=48

 

*****

 


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2338984
•
Media Centre: Goa
•
Festival Dates: Nov 20 – 28, 2026