ರೈಲ್ವೇ ಸಚಿವಾಲಯ
ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ಗೆ (PLB) ಕೇಂದ್ರ ಸಂಪುಟ ಅನುಮೋದನೆ
ಪ್ರಕಟಣಾ ದಿನಾಂಕ:
14 OCT 2026 4:10PM by PIB Bengaluru
ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಸಾಧನೆಯನ್ನು ಗುರುತಿಸಿ, 11,40,770 ರೈಲ್ವೆ ಉದ್ಯೋಗಿಗಳಿಗೆ ₹2009.61 ಕೋಟಿ ವೆಚ್ಚದಲ್ಲಿ 78 ದಿನಗಳ ಪಿಎಲ್ಬಿ (PLB - Productivity Linked Bonus) ಪಾವತಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ.
ಅರ್ಹ ರೈಲ್ವೆ ಉದ್ಯೋಗಿಗಳಿಗೆ ಪಿಎಲ್ಬಿ ಪಾವತಿಯನ್ನು ಪ್ರತಿ ವರ್ಷ ದುರ್ಗಾಪೂಜೆ/ದಸರಾ ರಜಾದಿನಗಳಿಗೆ ಮುಂಚಿತವಾಗಿ ಮಾಡಲಾಗುತ್ತದೆ. ಈ ವರ್ಷವೂ ಸುಮಾರು 11.40 ಲಕ್ಷ ಗೆಜೆಟೆಡ್-ಯೇತರ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಪಿಎಲ್ಬಿ ಮೊತ್ತವನ್ನು ಪಾವತಿಸಲಾಗುತ್ತಿದೆ. ಪಿಎಲ್ಬಿ ಪಾವತಿಯು ರೈಲ್ವೆಯ ಕಾರ್ಯಕ್ಷಮತೆಯ ಸುಧಾರಣೆಗೆ ಶ್ರಮಿಸಲು ರೈಲ್ವೆ ಉದ್ಯೋಗಿಗಳನ್ನು ಪ್ರೇರೇಪಿಸುವ ಪ್ರೋತ್ಸಾಹಕವಾಗಿ ಕಾರ್ಯನಿರ್ವಹಿಸುತ್ತದೆ.
ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತವು 78 ದಿನಗಳಿಗೆ ₹17,951/- ಆಗಿದೆ. ಮೇಲ್ಕಂಡ ಮೊತ್ತವನ್ನು ಟ್ರ್ಯಾಕ್ ಮೇಂಟೇನರ್ಗಳು, ಲೋಕೋ ಪೈಲಟ್ಗಳು, ಟ್ರೈನ್ ಮ್ಯಾನೇಜರ್ಗಳು (ಗಾರ್ಡ್ಗಳು), ಸ್ಟೇಷನ್ ಮಾಸ್ಟರ್ಗಳು, ಸೂಪರ್ವೈಸರ್ಗಳು, ಟೆಕ್ನಿಷಿಯನ್ಗಳು, ಟೆಕ್ನಿಷಿಯನ್ ಹೆಲ್ಪರ್ಗಳು, ಪಾಯಿಂಟ್ಸ್ಮ್ಯಾನ್, ಮಿನಿಸ್ಟೀರಿಯಲ್ ಸಿಬ್ಬಂದಿ ಮತ್ತು ಇತರ ಗ್ರೂಪ್ 'ಸಿ' ಸಿಬ್ಬಂದಿಯಂತಹ ವಿವಿಧ ವರ್ಗದ ರೈಲ್ವೆ ನೌಕರರಿಗೆ ಪಾವತಿಸಲಾಗುವುದು.
2025-26ನೇ ಸಾಲಿನಲ್ಲಿ ರೈಲ್ವೆಯ ಸಾಧನೆ ಅತ್ಯುತ್ತಮವಾಗಿತ್ತು. ರೈಲ್ವೆಯು ದಾಖಲೆಯ 1670 ಮಿಲಿಯನ್ ಟನ್ ಸರಕನ್ನು ಸಾಗಣೆ ಮಾಡಿದೆ ಮತ್ತು ಸುಮಾರು 7.41 ಬಿಲಿಯನ್ (741 ಕೋಟಿ) ಪ್ರಯಾಣಿಕರನ್ನು ತಲುಪಿಸಿದೆ.
*****
(ಪ್ರಕಟಣೆ ಐ.ಡಿ.: 2323419)
ವಿಸಿಟರ್ ಕೌಂಟರ್ : 9