ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯ (2024-25) ಫಲಿತಾಂಶಗಳ ಬಿಡುಗಡೆ


ದೇಶದ ಆರ್ಥಿಕ ಅಭಿವೃದ್ಧಿಗೆ ಚಾಲನೆ ನೀಡುತ್ತಿರುವ 2.67 ಲಕ್ಷ ನೋಂದಾಯಿತ ಉತ್ಪಾದನಾ ಸಂಸ್ಥೆಗಳು

ಸ್ಥಿರ ಬಂಡವಾಳದಲ್ಲಿ ಶೇಕಡಾ 10.54 ರಷ್ಟು ಬೆಳವಣಿಗೆ

ಮೊತ್ತ ಮೌಲ್ಯವರ್ಧನೆಯಲ್ಲಿ  ಶೇಕಡಾ 9.59 ರಷ್ಟು ಪ್ರಗತಿ

14 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಸೇರ್ಪಡೆ; ಒಟ್ಟು ಉದ್ಯೋಗದ ಅಂದಾಜು ಸಂಖ್ಯೆ 2 ಕೋಟಿ ದಾಟಿದೆ

ಪ್ರಕಟಣಾ ದಿನಾಂಕ: 30 SEP 2026 4:00PM by PIB Bengaluru

 

ಮುಖ್ಯಾಂಶಗಳು:

  • ನೋಂದಾಯಿತ ಉತ್ಪಾದನಾ ವಲಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ, 2024-25 ರ ಸಾಲಿನಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಶೇಕಡಾ 7.81, ಒಟ್ಟು ಉದ್ಯೋಗದಲ್ಲಿ ಶೇಕಡಾ 7.19 ಮತ್ತು ಸಂಭಾವನೆಯಲ್ಲಿ (Emoluments) ಶೇಕಡಾ 12.08 ರಷ್ಟು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ.
  • ಕಳೆದ ಸಮೀಕ್ಷೆಯ ಅವಧಿಗೆ ಹೋಲಿಸಿದರೆ, ಈ ವಲಯವು ತೊಡಗಿಸಿದ ಬಂಡವಾಳದಲ್ಲಿ (ಸ್ಥಿರ ಬಂಡವಾಳ + ಭೌತಿಕ ದುಡಿಯುವ ಬಂಡವಾಳ) ಶೇಕಡಾ 11.10 ರಷ್ಟು ವಿಸ್ತರಣೆಯನ್ನು ವರದಿ ಮಾಡಿದೆ.
  • ಇದೇ ಅವಧಿಯಲ್ಲಿ, ನಿವ್ವಳ ಆದಾಯವು ಶೇಕಡಾ 9.68 ರಷ್ಟು ಹೆಚ್ಚಾಗಿದ್ದರೆ, ನಿವ್ವಳ ಲಾಭವು ಶೇಕಡಾ 7.73 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
  • ಪ್ರಮುಖ ಐದು ಕೈಗಾರಿಕೆಗಳಾದ ಮೂಲ ಲೋಹಗಳು, ಮೋಟಾರು ವಾಹನಗಳು, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ಜೈವಿಕ ಔಷಧೀಯ ಉತ್ಪನ್ನಗಳು ಮತ್ತು ಆಹಾರ ಉತ್ಪನ್ನಗಳು ಒಟ್ಟಾಗಿ 2024-25 ರಲ್ಲಿ ದೇಶದ ಒಟ್ಟು ಉತ್ಪಾದನಾ ಜಿವಿಎಗೆ (GVA) ಶೇಕಡಾ 45 ಕ್ಕಿಂತ ಹೆಚ್ಚಿನ ಕೊಡುಗೆ ನೀಡಿವೆ.
  • 2024-25 ರಲ್ಲಿ ದೇಶದ ಒಟ್ಟು ಉತ್ಪಾದನಾ ಉದ್ಯೋಗದಲ್ಲಿ ಶೇಕಡಾ 56 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಹರಿಯಾಣ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ 5 ರಾಜ್ಯಗಳಾಗಿ ಹೊರಹೊಮ್ಮಿವೆ.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗಿನ (ಅಂದರೆ ಹಣಕಾಸು ವರ್ಷ 2024-25) ಉಲ್ಲೇಖಿತ ಅವಧಿಗೆ ಸಂಬಂಧಿಸಿದ ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯ (ASI) ಫಲಿತಾಂಶಗಳನ್ನು ಫ್ಯಾಕ್ಟ್‌ಶೀಟ್ ಮೂಲಕ ಬಿಡುಗಡೆ ಮಾಡಿದೆ. ಈ ಪತ್ರಿಕಾ ಟಿಪ್ಪಣಿಯಲ್ಲಿ, ಈ ಸಮೀಕ್ಷೆಯನ್ನು ಎಎಸ್‌ಐ (ASI) 2024-25 ಎಂದು ಉಲ್ಲೇಖಿಸಲಾಗಿದೆ. ಎಎಸ್‌ಐ 2024-25ರ ಸಮೀಕ್ಷೆಯ ಕ್ಷೇತ್ರಕಾರ್ಯವನ್ನು (field work) ಅಕ್ಟೋಬರ್ 2025 ರಿಂದ ಜೂನ್ 2026 ರ ಅವಧಿಯಲ್ಲಿ ನಡೆಸಲಾಯಿತು. ಎಎಸ್‌ಐ 2024-25 ಸಮೀಕ್ಷೆಯ ಕುರಿತು ಸಂಕ್ಷಿಪ್ತ ಟಿಪ್ಪಣಿಯನ್ನು ಅಂತಿಮ ಟಿಪ್ಪಣಿಯಲ್ಲಿ ಒದಗಿಸಲಾಗಿದೆ.

ಉತ್ಪಾದನೆ, ಮೌಲ್ಯವರ್ಧನೆ, ಉದ್ಯೋಗ, ಬಂಡವಾಳ ರಚನೆ ಮತ್ತು ಇತರ ಹಲವಾರು ನಿಯತಾಂಕಗಳ ಪರಿಭಾಷೆಯಲ್ಲಿ ವಿವಿಧ ಉತ್ಪಾದನಾ ಕೈಗಾರಿಕೆಗಳ ಸಂಯೋಜನೆ, ಬೆಳವಣಿಗೆ ಮತ್ತು ರಚನೆಯಲ್ಲಿನ ಬದಲಾವಣೆಯ ಚಲನಶೀಲತೆಯ ಬಗ್ಗೆ ಅರ್ಥಪೂರ್ಣ ಒಳನೋಟವನ್ನು ಒದಗಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಈ ಸಮೀಕ್ಷೆಯ ದತ್ತಾಂಶವು ನೀತಿ ನಿರೂಪಣೆಗೆ ಪ್ರಮುಖ ಒಳಹರಿವಾಗಿ ಕಾರ್ಯನಿರ್ವಹಿಸುತ್ತದೆ, ರಾಷ್ಟ್ರೀಯ ಖಾತೆಗಳ ಅಂಕಿಅಂಶಗಳ ಕ್ರೋಢೀಕರಣಕ್ಕೆ ಬೆಂಬಲ ನೀಡುತ್ತದೆ ಮತ್ತು ಭಾಗಿದಾರರು ಜ್ಞಾನಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುವ ಜೊತೆಗೆ ವಿವಿಧ ಸಚಿವಾಲಯಗಳ ಮಾಹಿತಿಯ ಅಗತ್ಯತೆಗಳನ್ನು ಪೂರೈಸುತ್ತದೆ. ಫಲಿತಾಂಶಗಳನ್ನು ರಾಜ್ಯ ಮತ್ತು ಪ್ರಮುಖ ಕೈಗಾರಿಕಾ ಮಟ್ಟದಲ್ಲಿ ಸಿದ್ಧಪಡಿಸಲಾಗುತ್ತದೆ. ಈ ವರದಿಯು ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://www.mospi.gov.in) ಲಭ್ಯವಿದೆ.

ಎಎಸ್‌ಐ 2024-25 ರ ಫಲಿತಾಂಶಗಳ ಪ್ರಮುಖ ಮುಖ್ಯಾಂಶಗಳು

ನೋಂದಾಯಿತ ಉತ್ಪಾದನಾ ವಲಯವು 2024-25 ರ ಹಣಕಾಸು ವರ್ಷದಲ್ಲಿ ವ್ಯಾಪಕ ಆಧಾರಿತ ಬೆಳವಣಿಗೆಯನ್ನು ದಾಖಲಿಸಿದೆ, ತೊಡಗಿಸಿದ ಬಂಡವಾಳ, ಇನ್‌ಪುಟ್, ಉತ್ಪಾದನೆ, ಒಟ್ಟು ಮೌಲ್ಯವರ್ಧನೆ (GVA), ಉದ್ಯೋಗ ಮತ್ತು ವೇತನಗಳಂತಹ ಹೆಚ್ಚಿನ ಪ್ರಮುಖ ಆರ್ಥಿಕ ಸೂಚಕಗಳು ಹಿಂದಿನ ವರ್ಷಕ್ಕಿಂತ ಹೆಚ್ಚಳ ಕಂಡಿವೆ.

ಸಂಸ್ಥೆಗಳು, ಒಟ್ಟು ಮೌಲ್ಯವರ್ಧನೆ ಮತ್ತು ಉದ್ಯೋಗದ ಮಾಪನಗಳಲ್ಲಿನ ಅಭಿವೃದ್ಧಿ:

ಈ ವಲಯದಲ್ಲಿನ ಒಟ್ಟು ಸಂಸ್ಥೆಗಳ ಸಂಖ್ಯೆಯು ಎಎಸ್‌ಐ 2023-24 ರಲ್ಲಿ 2.60 ಲಕ್ಷಗಳಿಂದ ಎಎಸ್‌ಐ 2024-25 ರಲ್ಲಿ 2.67 ಲಕ್ಷಗಳಿಗೆ ಹೆಚ್ಚಾಗಿದ್ದು, ಶೇಕಡಾ 2.64 ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಅತ್ಯಧಿಕ ಸಂಖ್ಯೆಯ ಸಂಸ್ಥೆಗಳು ತಮಿಳುನಾಡಿನಲ್ಲಿ (41,221) ವರದಿಯಾಗಿದ್ದು, ನಂತರದ ಸ್ಥಾನಗಳಲ್ಲಿ ಗುಜರಾತ್ (33,084) ಮತ್ತು ಮಹಾರಾಷ್ಟ್ರ (27,379) ಇವೆ.

ಚಿತ್ರ-1: ಎಎಸ್‌ಐ 2024-25 ರಲ್ಲಿ ಪ್ರಮುಖ ರಾಜ್ಯಗಳಾದ್ಯಂತ ಕಾರ್ಖಾನೆಗಳ ಸಂಖ್ಯೆಯನ್ನು ತೋರಿಸುವ ಬಾರ್ ಚಾರ್ಟ್: ಅಖಿಲ ಭಾರತ

ಇದೇ ಅವಧಿಯಲ್ಲಿ, ಜಿವಿಎ (GVA) ₹2,458.3 ಸಾವಿರ ಕೋಟಿಯಿಂದ ₹2,69,4.2 ಸಾವಿರ ಕೋಟಿಗೆ ಹೆಚ್ಚಾಗಿದ್ದು, ಕೈಗಾರಿಕಾ ಮೌಲ್ಯವರ್ಧನೆಯಲ್ಲಿ ಸುಸ್ಥಿರ ಬೆಳವಣಿಗೆಯನ್ನು (9.59%) ಸೂಚಿಸುತ್ತದೆ. ಅಖಿಲ ಭಾರತ ಜಿವಿಎಯಲ್ಲಿ ರಾಜ್ಯಗಳ ವೈಯಕ್ತಿಕ ಪಾಲಿನ ದೃಷ್ಟಿಯಿಂದ, ಮಹಾರಾಷ್ಟ್ರವು 2024-25 ರಲ್ಲಿ ಅತ್ಯಧಿಕ ಜಿವಿಎಯನ್ನು ದಾಖಲಿಸಿದೆ, ನಂತರದ ಸ್ಥಾನಗಳಲ್ಲಿ ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶ ಇವೆ. ಒಟ್ಟಾರೆಯಾಗಿ, ಈ ಐದು ರಾಜ್ಯಗಳು ದೇಶದ ಒಟ್ಟು ಉತ್ಪಾದನಾ ಜಿವಿಎಯ ಶೇಕಡಾ 54 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. ಅಖಿಲ ಭಾರತ ಮಟ್ಟದಲ್ಲಿ ಒಟ್ಟು ಸಂಸ್ಥೆಗಳಲ್ಲಿ ಈ ಐದು ರಾಜ್ಯಗಳು ಶೇಕಡಾ 53.30 ರಷ್ಟು ಪಾಲನ್ನು ಹೊಂದಿವೆ.

ಕೋಷ್ಟಕ 1: ಎಎಸ್‌ಐ 2024-25 ರಲ್ಲಿ ಜಿವಿಎ ಗೆ ಸಂಬಂಧಿಸಿದಂತೆ ಪ್ರಮುಖ ಐದು ರಾಜ್ಯಗಳು: ಜಿವಿಎ ಮತ್ತು ಸಂಸ್ಥೆಗಳ ಪಾಲು (ಶೇಕಡಾವಾರಿನಲ್ಲಿ)

ರಾಜ್ಯ

ಜಿವಿಎ

ಸಂಸ್ಥೆಗಳು

ಎಎಸ್‌ಐ 2023-24

ಎಎಸ್‌ಐ 2024-25

ಎಎಸ್‌ಐ 2023-24

ಎಎಸ್‌ಐ 2024-25

ಮಹಾರಾಷ್ಟ್ರ

15.95

15.92

10.20

10.26

ಗುಜರಾತ್

14.20

14.10

12.81

12.39

ತಮಿಳುನಾಡು

10.26

10.90

15.43

15.44

ಕರ್ನಾಟಕ

7.47

7.31

5.76

5.86

ಉತ್ತರ ಪ್ರದೇಶ

6.80

6.64

8.51

9.35

ನೋಂದಾಯಿತ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ ವಿಸ್ತರಿಸುವುದನ್ನು ಮುಂದುವರಿಸಿದೆ. ಈ ವಲಯದಲ್ಲಿ ತೊಡಗಿಸಿಕೊಂಡಿರುವ ಅಂದಾಜು ವ್ಯಕ್ತಿಗಳ ಸಂಖ್ಯೆಯು ಎಎಸ್‌ಐ 2023-24 ರಲ್ಲಿದ್ದ 1.96 ಕೋಟಿಯಿಂದ 2024-25 ರಲ್ಲಿ ಶೇಕಡಾ 7.19 ರಷ್ಟು ಬೆಳವಣಿಗೆಯೊಂದಿಗೆ 2.10 ಕೋಟಿಗೆ ಗಮನಾರ್ಹ ಹೆಚ್ಚಳ ಕಂಡಿದೆ. ಕಾರ್ಯಪಡೆಗೆ ಪಾವತಿಸಿದ ಒಟ್ಟು ಸಂಭಾವನೆಯು 2023-24 ಕ್ಕೆ ಹೋಲಿಸಿದರೆ 2024-25 ರಲ್ಲಿ ಶೇಕಡಾ 12.08 ರಷ್ಟು ಹೆಚ್ಚಾಗಿದೆ. 2024-25 ರಲ್ಲಿ ಉತ್ಪಾದನಾ ವಲಯದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಸಂಖ್ಯೆಯ ವಿಷಯದಲ್ಲಿ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಹರಿಯಾಣ ಪ್ರಮುಖ ಐದು ರಾಜ್ಯಗಳಾಗಿವೆ. ಒಟ್ಟಾರೆಯಾಗಿ, ಈ ರಾಜ್ಯಗಳು ವರ್ಷದಲ್ಲಿ ಒಟ್ಟು ಉತ್ಪಾದನಾ ಉದ್ಯೋಗದ ಸುಮಾರು 56 ಪ್ರತಿಶತ ಪಾಲನ್ನು ಹೊಂದಿವೆ.

ಚಿತ್ರ-2: ಎಎಸ್‌ಐ 2024-25 ರಲ್ಲಿ ಪ್ರಮುಖ ಕೈಗಾರಿಕಾ ವಿಭಾಗಗಳ ಮೂಲಕ ತೊಡಗಿಸಿಕೊಂಡಿರುವ ಒಟ್ಟು ವ್ಯಕ್ತಿಗಳ ಸಂಖ್ಯೆ (ಸಾವಿರಗಳಲ್ಲಿ): ಅಖಿಲ ಭಾರತ

ಕೋಷ್ಟಕ 2: ಎಎಸ್‌ಐ 2024-25 ರಲ್ಲಿ ತೊಡಗಿಸಿಕೊಂಡಿರುವ ಒಟ್ಟು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಐದು ರಾಜ್ಯಗಳು: ತೊಡಗಿಸಿಕೊಂಡಿರುವ ಒಟ್ಟು ವ್ಯಕ್ತಿಗಳು ಮತ್ತು ಸಂಭಾವನೆಯ ಪಾಲು (ಶೇಕಡಾವಾರಿನಲ್ಲಿ)

ರಾಜ್ಯ

ತೊಡಗಿಸಿಕೊಂಡಿರುವ ಒಟ್ಟು ವ್ಯಕ್ತಿಗಳು

ಸಂಭಾವನೆ

ಎಎಸ್‌ಐ 2023-24

ಎಎಸ್‌ಐ 2024-25

ಎಎಸ್‌ಐ 2023-24

ಎಎಸ್‌ಐ 2024-25

ತಮಿಳುನಾಡು

15.24

14.99

13.16

13.02

ಮಹಾರಾಷ್ಟ್ರ

12.95

13.08

17.48

17.64

ಗುಜರಾತ್

13.07

12.99

13.13

12.99

ಉತ್ತರ ಪ್ರದೇಶ

8.30

8.72

7.61

7.82

ಹರಿಯಾಣ

6.08

6.44

6.74

6.82

ಚಿತ್ರ-3: 2024-25 ರಲ್ಲಿ ಸಂಸ್ಥೆಯ ಪ್ರಕಾರದ ಮೂಲಕ ತೊಡಗಿಸಿಕೊಂಡಿರುವ ಒಟ್ಟು ವ್ಯಕ್ತಿಗಳ ಹಂಚಿಕೆಯನ್ನು ತೋರಿಸುವ ಪೈ ಚಾರ್ಟ್: ಅಖಿಲ ಭಾರತ

ಕೋಷ್ಟಕ 3: ಪ್ರಸ್ತುತ ಬೆಲೆಗಳಲ್ಲಿ 2020-21 ರಿಂದ 2024-25 ರವರೆಗಿನ ಎಎಸ್‌ಐ ನ ಕೆಲವು ಪ್ರಮುಖ ನಿಯತಾಂಕಗಳ ಮೌಲ್ಯ (ಮೌಲ್ಯದ ಅಂಕಿಅಂಶಗಳು ರೂ. ಲಕ್ಷಗಳಲ್ಲಿ)

ವರ್ಷ

2020-21

2021-22

2022-23

2023-24

2024-25

ವೈಶಿಷ್ಟ್ಯಗಳು

ಕಾರ್ಖಾನೆಗಳು

250,454

249,987

253,334

260,061

266,931

ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳು

200,395

200,576

206,523

212,990

218,543

ಸ್ಥಿರ ಬಂಡವಾಳ

369,438,562

372,635,444

412,179,458

462,409,035

511,166,407

ತೊಡಗಿಸಿದ ಬಂಡವಾಳ

519,114,310

554,493,175

613,921,255

680,132,999

755,643,072

ಕಾರ್ಮಿಕರು

12,594,563

13,609,931

14,616,971

15,519,957

16,653,810

ತೊಡಗಿಸಿಕೊಂಡಿರುವ ಒಟ್ಟು ವ್ಯಕ್ತಿಗಳು

16,089,700

17,215,350

18,494,962

19,589,131

20,996,913

ಕಾರ್ಮಿಕರ ವೇತನ

22,261,548

26,455,930

29,990,380

33,598,653

37,976,781

ಒಟ್ಟು ಸಂಭಾವನೆ

48,389,031

56,082,801

64,049,070

71,646,903

80,302,971

ಇನ್‌ಪುಟ್

719,206,541

987,917,996

1,228,954,623

1,286,883,003

1,382,964,338

ಔಟ್‌ಪುಟ್

880,921,387

1,192,715,147

1,448,660,228

1,532,716,609

1,652,384,144

ಜಿವಿಎ

161,714,846

204,797,151

219,705,605

245,833,605

269,419,806

ಸವಕಳಿ

28,135,986

29,964,685

31,664,493

35,519,270

39,425,596

ಎನ್‌ವಿಎ

133,578,860

174,832,466

188,041,113

210,314,335

229,994,210

ನಿವ್ವಳ ಆದಾಯ

115,747,714

157,994,016

169,282,621

187,387,599

205,524,799

ನಿವ್ವಳ ಲಾಭ

61,405,752

95,071,368

97,634,628

107,285,987

115,583,603

ಅವಲೋಕನ:

ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯ (ASI) 2024-25 ರ ಕುರಿತು ಸಂಕ್ಷಿಪ್ತ ಟಿಪ್ಪಣಿ

A. ಎಎಸ್‌ಐ ನ ವ್ಯಾಪ್ತಿ:

ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯು ವಿಶಾಲವಾಗಿ ಕೆಳಗಿನವುಗಳನ್ನು ಒಳಗೊಳ್ಳುತ್ತದೆ:

  1. ಕಾರ್ಖಾನೆಗಳ ಕಾಯ್ದೆ, 1948 ರ ಸೆಕ್ಷನ್ 2m(i) ಮತ್ತು 2m(ii) ಅಡಿಯಲ್ಲಿ ನೋಂದಾಯಿಸಲಾದ ಕಾರ್ಖಾನೆಗಳು
  2. ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗದ ಷರತ್ತುಗಳು) ಕಾಯ್ದೆ, 1966 ರ ಅಡಿಯಲ್ಲಿ ನೋಂದಾಯಿಸಲಾದ ಬೀಡಿ ಮತ್ತು ಸಿಗಾರ್ ಉತ್ಪಾದನಾ ಸಂಸ್ಥೆಗಳು
  3. ಕೇಂದ್ರ ವಿದ್ಯುತ್ ಪ್ರಾಧಿಕಾರದಲ್ಲಿ (CEA) ನೋಂದಾಯಿಸಲ್ಪಡದ, ವಿದ್ಯುತ್ ಉತ್ಪಾದನೆ, ಸಾಗಣೆ ಮತ್ತು ವಿತರಣೆಯಲ್ಲಿ ತೊಡಗಿರುವ ವಿದ್ಯುತ್ ಸಂಸ್ಥೆಗಳು
  4. ಆಯಾ ರಾಜ್ಯ ಸರ್ಕಾರಗಳು ಪಟ್ಟಿಯನ್ನು ಹಂಚಿಕೊಂಡಾಗ, ರಾಜ್ಯ ಸರ್ಕಾರಗಳು ಸಿದ್ಧಪಡಿಸಿದ ಮತ್ತು ನಿರ್ವಹಿಸುವ ಉದ್ಯಮಗಳ ವ್ಯಾಪಾರ ನೋಂದಣಿಯಲ್ಲಿ (BRE) ನೋಂದಾಯಿಸಲಾದ 100 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಘಟಕಗಳು.

B. ಎಎಸ್‌ಐ ಚೌಕಟ್ಟು ಮತ್ತು ಅದರ ನವೀಕರಣ

ಎಎಸ್‌ಐ ಚೌಕಟ್ಟು ಪ್ರತಿ ರಾಜ್ಯದ ಮುಖ್ಯ ಕಾರ್ಖಾನೆಗಳ ಪರೀಕ್ಷಕರು (CIF) ನಿರ್ವಹಿಸುವ ನೋಂದಾಯಿತ ಕಾರ್ಖಾನೆ/ಘಟಕಗಳ ಪಟ್ಟಿಗಳು ಮತ್ತು ಬೀಡಿ ಮತ್ತು ಸಿಗಾರ್ ಸಂಸ್ಥೆಗಳು ಹಾಗೂ ವಿದ್ಯುತ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನೋಂದಣಿ ಪ್ರಾಧಿಕಾರಗಳು ನಿರ್ವಹಿಸುವ ಪಟ್ಟಿಗಳನ್ನು ಆಧರಿಸಿದೆ. ರಾಜ್ಯದ ಮುಖ್ಯ ಕಾರ್ಖಾನೆಗಳ ಪರೀಕ್ಷಕರೊಂದಿಗೆ ಸಮಾಲೋಚಿಸಿ ಎನ್‌ಎಸ್‌ಒ ನ ಫೀಲ್ಡ್ ಆಪರೇಷನ್ಸ್ ವಿಭಾಗದ ಪ್ರಾದೇಶಿಕ ಕಚೇರಿಗಳಿಂದ ಈ ಚೌಕಟ್ಟನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಪರಿಶೀಲನೆಯ ಸಮಯದಲ್ಲಿ, ನೋಂದಣಿ ರದ್ದಾದ ಕಾರ್ಖಾನೆಗಳ ಹೆಸರುಗಳನ್ನು ಎಎಸ್‌ಐ ಚೌಕಟ್ಟಿನಿಂದ ತೆಗೆದುಹಾಕಲಾಗುತ್ತದೆ ಮತ್ತು ಹೊಸದಾಗಿ ನೋಂದಾಯಿಸಲಾದ ಕಾರ್ಖಾನೆಗಳ ಹೆಸರುಗಳನ್ನು ಸೇರಿಸಲಾಗುತ್ತದೆ. ಕೊನೆಯ ಸಮೀಕ್ಷೆಯ ವರ್ಷದಲ್ಲಿ (ಈ ಸಂದರ್ಭದಲ್ಲಿ 2023-24) ಆಯ್ಕೆಯಾದ ಘಟಕಗಳಿಗೆ, ಕೊನೆಯ ಸಮೀಕ್ಷೆಯ ವರ್ಷದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ನೀಡಿರುವ ವರ್ಷದ (ಉದಾಹರಣೆಗೆ ಎಎಸ್‌ಐ 2024-25) ಚೌಕಟ್ಟಿನ ಸ್ಥಿತಿ ಕೋಡ್, ಚೌಕಟ್ಟಿನ ಉದ್ಯಮ (NIC 4 ಡಿಜಿಟ್), ಉದ್ಯೋಗಿ (ತೊಡಗಿಸಿಕೊಂಡಿರುವ ಒಟ್ಟು ವ್ಯಕ್ತಿಗಳು), ವಿಳಾಸ ಇತ್ಯಾದಿ ಸಂಬಂಧಿತ ಕ್ಷೇತ್ರಗಳು ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತವೆ.

C. ಗಣತಿಯ ಘಟಕ

ಸಮೀಕ್ಷೆಯಲ್ಲಿ ಗಣತಿಯ ಪ್ರಾಥಮಿಕ ಘಟಕವೆಂದರೆ ಉತ್ಪಾದನಾ ಕೈಗಾರಿಕೆಗಳ ವಿಷಯದಲ್ಲಿ ಕಾರ್ಖಾನೆ, ದುರಸ್ತಿ ಸೇವೆಗಳ ವಿಷಯದಲ್ಲಿ ಕಾರ್ಯಾಗಾರ, ವಿದ್ಯುತ್, ಗ್ಯಾಸ್ ಮತ್ತು ನೀರು ಸರಬರಾಜು ಸಂಸ್ಥೆಗಳ ವಿಷಯದಲ್ಲಿ ಸಂಸ್ಥೆ ಅಥವಾ ಪರವಾನಗಿದಾರ ಮತ್ತು ಬೀಡಿ ಮತ್ತು ಸಿಗಾರ್ ಕೈಗಾರಿಕೆಗಳ ವಿಷಯದಲ್ಲಿ ಸಂಸ್ಥೆಯಾಗಿದೆ. ಒಂದೇ ರಾಜ್ಯದಲ್ಲಿ ಇರುವ ಮತ್ತು ಒಂದೇ ಉದ್ಯಮ ಸಮೂಹಕ್ಕೆ ಸೇರಿದ ಹಾಗೂ ಜನಗಣತಿ ಯೋಜನೆಯಡಿಯಲ್ಲಿ ಬರುವ ಎರಡು ಅಥವಾ ಹೆಚ್ಚಿನ ಸಂಸ್ಥೆಗಳ ಮಾಲೀಕರಿಗೆ ಒಂದೇ ಸಂಯೋಜಿತ ವರದಿಯನ್ನು ಸಲ್ಲಿಸಲು ಅನುಮತಿಸಲಾಗಿದೆ. ಇಂತಹ ಸಂಯೋಜಿತ ವರದಿಗಳು ಬೀಡಿ ಮತ್ತು ಸಿಗಾರ್ ಸಂಸ್ಥೆಗಳು, ವಿದ್ಯುತ್ ಮತ್ತು ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಸಾಮಾನ್ಯ ಲಕ್ಷಣಗಳಾಗಿವೆ.

D. ದತ್ತಾಂಶ ಸಂಗ್ರಹಣೆ ವ್ಯವಸ್ಥೆ

ಎಎಸ್‌ಐ ಗಾಗಿ ದತ್ತಾಂಶವನ್ನು ಸಾಂಖ್ಯಿಕ ಸಂಗ್ರಹಣೆ ಕಾಯ್ದೆ 2008 (2017 ರಲ್ಲಿ ತಿದ್ದುಪಡಿ ಮಾಡಿದಂತೆ) ಮತ್ತು ಅದರ ಅಡಿಯಲ್ಲಿ 2011 ರಲ್ಲಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ಆಯ್ಕೆಮಾಡಿದ ಕಾರ್ಖಾನೆಗಳಿಂದ ಸಂಗ್ರಹಿಸಲಾಗುತ್ತದೆ. ಸಂಪೂರ್ಣ ಸಮೀಕ್ಷೆಯನ್ನು ಯಾವುದೇ ಕಾಗದದ ವೇಳಾಪಟ್ಟಿಯಲ್ಲದೆ ಪ್ರತ್ಯೇಕ ವೆಬ್-ಪೋರ್ಟಲ್ ಮೂಲಕ ನಡೆಸಲಾಗುತ್ತದೆ. ಎಎಸ್‌ಐ ನಲ್ಲಿ ದತ್ತಾಂಶ ಸಂಗ್ರಹಣೆಗಾಗಿ, ಸಂಸ್ಥೆಯ (ಉದ್ಯಮವಲ್ಲ) ವಿಧಾನವನ್ನು ಅನುಸರಿಸಲಾಗುತ್ತದೆ, ಅಲ್ಲಿ ಆಯ್ಕೆಮಾಡಿದ ಸಂಸ್ಥೆಗಳಿಂದ ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ.

E. ಸಮೀಕ್ಷೆಯ ಹಕ್ಕುತ್ಯಾಗ

ಪ್ರಾಥಮಿಕವಾಗಿ ದಾಖಲೆ ಆಧಾರಿತವಾಗಿರುವ ಈ ಸಮೀಕ್ಷೆಯ ಮೂಲಕ ಸಂಗ್ರಹಿಸಿದ ದತ್ತಾಂಶದ ಮೇಲೆ ವಿವಿಧ ಗುಣಮಟ್ಟದ ಪರಿಶೀಲನೆಗಳನ್ನು ನಡೆಸಲಾಗುತ್ತದೆ. ಒಟ್ಟಾರೆ ಮಟ್ಟದಲ್ಲಿ ಸಮೀಕ್ಷೆಯಿಂದ ಅಂದಾಜಿಸಲಾದ ಪ್ರಮುಖ ನಿಯತಾಂಕಗಳ ಸಾಪೇಕ್ಷ ಪ್ರಮಾಣಿತ ದೋಷಗಳು (RSE) (ಇದು ಅಂದಾಜಿನ ವಿಶ್ವಾಸಾರ್ಹತೆಯ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಸಾಂಖ್ಯಿಕ ಮಾಪನವಾಗಿದೆ) ಸಣ್ಣದಾಗಿದ್ದು, ಸ್ವೀಕಾರಾರ್ಹ ವ್ಯಾಪ್ತಿಯಲ್ಲಿವೆ. ಆದಾಗ್ಯೂ, ಈ ಫಲಿತಾಂಶದಲ್ಲಿ ಉಪಸ್ಥಿತರಿರುವ ದತ್ತಾಂಶವನ್ನು ಮಾದರಿ ಸಮೀಕ್ಷೆಯಿಂದ ಅಂದಾಜಿಸಿರುವುದರಿಂದ, ಈ ದತ್ತಾಂಶವನ್ನು ಬಳಸುವಾಗ ಅಗತ್ಯ ಎಚ್ಚರಿಕೆಯನ್ನು ವಹಿಸಬಹುದು.

ಎಎಸ್‌ಐ 2024-25ರ ಫ್ಯಾಕ್ಟ್‌ಶೀಟ್ ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://www.mospi.gov.in) ಲಭ್ಯವಿದೆ. ಪ್ರಕಟಣೆಗಳು/ವರದಿಗಳನ್ನು ವೀಕ್ಷಿಸಲು ಕೆಳಗಿನ QR ಕೋಡ್ ಸ್ಕ್ಯಾನ್ ಮಾಡಿ.

ದಯವಿಟ್ಟು PDF ನೋಡಿ

 

*****


(ಪ್ರಕಟಣೆ ಐ.ಡಿ.: 2317173) ವಿಸಿಟರ್ ಕೌಂಟರ್ : 25
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी