ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಸಂಕಲ್ಪ ಸಮಾರೋಹ್‌ ಸೆಪ್ಟೆಂಬರ್‌ 20ರಂದು 1000ಕ್ಕೂ ಸ್ಥಳಗಳಲ್ಲಿ ಯುವಕರನ್ನು ಒಟ್ಟುಗೂಡಿಸುತ್ತದೆ


596 ಸ್ಥಳಗಳಲ್ಲಿ497 ಮೈ ಭಾರತ್‌ ಕಚೇರಿಗಳು ಮತ್ತು ಪಾಲುದಾರ ಸಂಸ್ಥೆಗಳು ರಾಷ್ಟ್ರವ್ಯಾಪಿ ಯುವ ಸಜ್ಜುಗೊಳಿಸುವಿಕೆಯಲ್ಲಿ ಭಾಗವಹಿಸಲಿವೆ

ಪ್ರಕಟಣಾ ದಿನಾಂಕ: 19 SEP 2026 7:59PM by PIB Bengaluru

ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ - 100 ವಾರಗಳ ನಶಾ ಮುಕ್ತ ಯುವ ಅಭಿಯಾನವು 2026 ರ ಸೆಪ್ಟೆಂಬರ್‌ 20ರಂದು ರಾಷ್ಟ್ರವ್ಯಾಪಿ ಪ್ರಮುಖ ಯುವ ಸಜ್ಜುಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ. ರಾಷ್ಟ್ರೀಯ ಸಂಕಲ್ಪ ಸಮಾರೋಹ್‌ಅನ್ನು ದೇಶಾದ್ಯಂತ ಮೈ ಭಾರತ್‌ ಮತ್ತು ಅದರ ಪಾಲುದಾರ ಸಂಸ್ಥೆಗಳ ಮೂಲಕ 1,067 ಸ್ಥಳಗಳಲ್ಲಿಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು 471 ಜಿಲ್ಲಾಎಂ.ವೈ. ಭಾರತ್‌ ಕಚೇರಿಗಳಲ್ಲಿಆಯೋಜಿಸಲಾಗುವುದು. ಜತೆಗೆ ಪಾಲುದಾರ ಸಂಸ್ಥೆಗಳ 596 ಸ್ಥಳಗಳು, ಸಾಮೂಹಿಕ ನಶಾ ಮುಕ್ತ ಪ್ರತಿಜ್ಞೆ ಮತ್ತು ಸಹಿ ಅಭಿಯಾನದ ಮೂಲಕ ಯುವಕರನ್ನು ಒಟ್ಟುಗೂಡಿಸಲಾಗುವುದು. ಭಾಗವಹಿಸುವ ಸಂಸ್ಥೆಗಳ ವ್ಯಾಪಕ ಜಾಲವು ಶೈಕ್ಷಣಿಕ ಮತ್ತು ವಿಶ್ವವಿದ್ಯಾಲಯ ಸಂಸ್ಥೆಗಳು, ಉದ್ಯಮ ಸಂಘಗಳು, ಆಧ್ಯಾತ್ಮಿಕ ಸಂಸ್ಥೆಗಳು, ಎನ್‌ಜಿಒಗಳು ಮತ್ತು ಸ್ಥಳೀಯ ಪಾಲುದಾರ ಸಂಸ್ಥೆಗಳನ್ನು ಒಳಗೊಂಡಿದೆ.

ಭಾಗವಹಿಸುವ ಪಾಲುದಾರ ಸಂಸ್ಥೆಗಳಲ್ಲಿ130 ಸ್ಥಳಗಳಲ್ಲಿ ಮಾ ಅಮೃತಾನಂದಮಯಿ ಮಠ, 74 ಸ್ಥಳಗಳಲ್ಲಿ ಹಾರ್ಟ್‌ಫುಲ್ನೆಸ್‌ ಮತ್ತು 56 ಸ್ಥಳಗಳಲ್ಲಿ ಬಿಎಪಿಎಸ್‌ ಸೇರಿದಂತೆ ಆಧ್ಯಾತ್ಮಿಕ ಸಂಸ್ಥೆಗಳು ಸೇರಿವೆ. ಪಾಲುದಾರ ಜಾಲವು ಇಪಿಎಸ್‌ಐ, ಸಿಐಪಿಯು, ಎಐಯು, ಪ್ರಾಜೆಕ್ಟ್ ಪಾಯಿಂಟ್‌, ಅಸೋಚಾಮ್‌, ಸಿಐಐ, ಎಫ್‌ಐಸಿಸಿಐ , 245 ಸ್ಥಳೀಯ ಪಾಲುದಾರ ಸಂಸ್ಥೆಗಳು ಮತ್ತು ಖಾಸಗಿ / ಪ್ರಮುಖ ಸಂಸ್ಥೆಗಳಲ್ಲಿನ 18 ಮೈ ಭಾರತ್‌ ಅಧ್ಯಾಯಗಳನ್ನು ಸಹ ಒಳಗೊಂಡಿದೆ.

ರಾಷ್ಟ್ರೀಯ ಸಂಕಲ್ಪ ಸಮಾರೋಹ್‌ ನಶಾ ಮುಕ್ತ ಪ್ರತಿಜ್ಞೆ, ಸಹಿ ಅಭಿಯಾನ, ವಿಷಯಾಧಾರಿತ ಬೀದಿ ನಾಟಕಗಳು, ಘೋಷಣೆ ಬರವಣಿಗೆ ಮತ್ತು ಯುವ ನೇತೃತ್ವದ ಚರ್ಚೆಗಳ ಮೂಲಕ ಅಭಿಯಾನದ ಸಂದೇಶವನ್ನು ನೇರವಾಗಿ ಯುವಜನರಿಗೆ ತಲುಪಿಸುತ್ತದೆ. ಭಾಗವಹಿಸುವಿಕೆಯ ಸ್ವರೂಪಗಳು ಯುವಜನರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಗೆಳೆಯರು ಮತ್ತು ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಜಾಗೃತಿಯನ್ನು ಸಕಾರಾತ್ಮಕ ಕ್ರಿಯೆಯಾಗಿ ಪರಿವರ್ತಿಸಲು ಸ್ಥಳಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.

ಈ ಸಜ್ಜುಗೊಳಿಸುವಿಕೆಯು ಸೆಪ್ಟೆಂಬರ್‌ 18ರಂದು ಕೈಗೊಂಡ ರಾಷ್ಟ್ರವ್ಯಾಪಿ ಚಟುವಟಿಕೆಗಳನ್ನು ಅನುಸರಿಸುತ್ತದೆ, ಇದು ಅಭಿಯಾನದ ಪ್ರಸ್ತುತ ಹಂತದ ಪ್ರಾರಂಭವನ್ನು ಗುರುತಿಸಿತು. ಮೊದಲ ದಿನ 259 ಸಂಸ್ಥೆಗಳಲ್ಲಿಭಾಗವಹಿಸುವಿಕೆಯನ್ನು ದಾಖಲಿಸಿತು, 1,430 ಚಟುವಟಿಕೆಗಳನ್ನು ನಡೆಸಲಾಯಿತು ಮತ್ತು ಎಲ್ಲಾ28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ1,46,520 ಭಾಗವಹಿಸುವವರನ್ನು ಸಜ್ಜುಗೊಳಿಸಲಾಯಿತು. ಪ್ರತಿಜ್ಞೆ ಸ್ವೀಕಾರ ಸಮಾರಂಭಗಳು, ಸಹಿ ಅಭಿಯಾನಗಳು, ವಿಷಯಾಧಾರಿತ ಬೀದಿ ನಾಟಕಗಳು ಮತ್ತು ಯುವ ನೇತೃತ್ವದ ಚರ್ಚೆಗಳು ಚಟುವಟಿಕೆಗಳಲ್ಲಿ ಸೇರಿದ್ದವು.

100 ವಾರಗಳ ನಶಾಮುಕ್ತ ಯುವ ಅಭಿಯಾನವನ್ನು ಮಾದಕವಸ್ತು ಸೇವನೆ ತಡೆಗಟ್ಟುವಿಕೆ, ಜಾಗೃತಿ, ಆರೋಗ್ಯಕರ ಜೀವನಶೈಲಿ ಹಾಗೂ ಯುವಜನರ ಸಕಾರಾತ್ಮಕ ಪಾಲ್ಗೊಳ್ಳುವಿಕೆಗೆ ಒತ್ತು ನೀಡುವ ನಿರಂತರ ಯುವ ಚಳವಳಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಮೊದಲ ಚಟುವಟಿಕೆಗಳ ಋತುವನ್ನು ‘ನನ್ನ ಆರೋಗ್ಯ, ನನ್ನ ಹೆಮ್ಮೆ’, ‘ಸದೃಢ ಯುವಜನತೆ, ವ್ಯಸನಮುಕ್ತ ಯುವಜನತೆ’ ಮತ್ತು ‘ಜೀವನ ಕೌಶಲ್ಯಗಳ ಮಾಸ’ ಎಂಬ ಮೂರು ಪ್ರಮುಖ ವಿಷಯಗಳಡಿ ರೂಪಿಸಲಾಗಿದೆ. ಆರೋಗ್ಯ, ದೈಹಿಕ ಸದೃಢತೆ, ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಜೀವನ ಕೌಶಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಆದ್ದರಿಂದ ಸೆಪ್ಟೆಂಬರ್‌ 20ರಂದು ರಾಷ್ಟ್ರೀಯ ಸಂಕಲ್ಪ ಸಮಾರೋಹ್‌ ಯುವಕರ ಭಾಗವಹಿಸುವಿಕೆಯ ಮಹತ್ವದ ರಾಷ್ಟ್ರವ್ಯಾಪಿ ಕ್ಷ ಣವಾಗಿ ಕಾರ್ಯನಿರ್ವಹಿಸುತ್ತದೆ, ಆರೋಗ್ಯಕರ ಆಯ್ಕೆಗಳು ಮತ್ತು ನಶಾ ಮುಕ್ತ ಭವಿಷ್ಯಕ್ಕೆ ಹಂಚಿಕೆಯ ಬದ್ಧತೆಯ ಸುತ್ತ ಮೈ ಭಾರತ್‌, ಪಾಲುದಾರ ಸಂಸ್ಥೆಗಳು ಮತ್ತು ಯುವಜನರನ್ನು ಒಟ್ಟುಗೂಡಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2312590) ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी