ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಉತ್ತರ ಪ್ರದೇಶದ ಬುದೌನ್ನಲ್ಲಿ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಆಯೋಜನೆ


ಸ್ವಚ್ಛತಾ ಕಾರ್ಮಿಕರ  ಘನತೆ, ಸುರಕ್ಷತೆ ಮತ್ತು ಸಬಲೀಕರಣವನ್ನು ಎತ್ತಿಹಿಡಿದ ಕೇಂದ್ರ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ

ಸಫಾಯಿ ಮಿತ್ರರಿಗೆ ಪಿಪಿಇ ಕಿಟ್ ಗಳು, ಆಯುಷ್ಮಾನ್ ಕಾರ್ಡ್ ಗಳು ಮತ್ತು ಆಟೋ ರಕ್ಷಾ ಕೀಗಳ ವಿತರಣೆ

ಪ್ರಕಟಣಾ ದಿನಾಂಕ: 17 SEP 2026 9:50PM by PIB Bengaluru

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಂದು ಉತ್ತರ ಪ್ರದೇಶದ ಬುದೌನ್ ನ ಡಿಐಇಟಿ ಸಭಾಂಗಣದಲ್ಲಿ 'ಸಫಾಯಿ ಮಿತ್ರರಿಗೆ ಗೌರವ, ಸ್ವಚ್ಛ ಭಾರತಕ್ಕಾಗಿ ಸಂಕಲ್ಪ' ಎಂಬ ಸಂದೇಶವನ್ನು ಪ್ರಚಾರ ಮಾಡುವ ಉದ್ದೇಶದಿಂದ 'ಸ್ವಚ್ಛತಾ ಹೀ ಸೇವಾ' (ಸ್ವಚ್ಛತೆಯೇ ಸೇವೆ) ಅಭಿಯಾನವನ್ನು ಆಯೋಜಿಸಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ ಅವರು, ನೈರ್ಮಲ್ಯ ಕಾರ್ಮಿಕರ ಘನತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುವ ಹಾಗೂ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸುವ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ನಮಸ್ತೆ – ಎನ್ ಎ ಎಂಎ ಎಸ್ ಟಿ ಇ) ಯೋಜನೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದರು.

ಈ ಯೋಜನೆಯಡಿಯಲ್ಲಿ 90,157 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ  ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಅವರು ತಿಳಿಸಿದರು. ಇವರಲ್ಲಿ 87,078 ಜನರು ವೈಯಕ್ತಿಕ ಸುರಕ್ಷತಾ ಉಪಕರಣ (ಪಿಪಿಇ) ಕಿಟ್ ಗಳನ್ನು ಪಡೆದುಕೊಂಡಿದ್ದಾರೆ ಮತ್ತು 76,920 ಜನರಿಗೆ ಆರೋಗ್ಯ ವಿಮೆ ಒದಗಿಸಲಾಗಿದೆ.

ಮುಂದುವರಿದು ಮಾತನಾಡಿದ ಸಚಿವರು, 5,00,013 ಕಸ ಆಯುವವರ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಅವರಲ್ಲಿ 3,15,593 ಜನರನ್ನು ಪರಿಶೀಲಿಸಿ ದೃಢೀಕರಿಸಲಾಗಿದೆ. ಒಟ್ಟು 1,79,269 ಕಸ ಆಯುವವರಿಗೆ ಪಿಪಿಇ ಕಿಟ್ ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಬುದೌನ್ ನಲ್ಲಿ 146 ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು ಹಾಗೂ 339 ಕಸ ಆಯುವವರನ್ನು ಪ್ರೊಫೈಲಿಂಗ್ ಪ್ರಕ್ರಿಯೆಯ ಮೂಲಕ ದೃಢೀಕರಿಸಲಾಗಿದೆ ಎಂದು ಶ್ರೀ ವರ್ಮಾ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ವರ್ಮಾ ಅವರು 40 ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರಿಗೆ ಹಾಗೂ 30 ಕಸ ಆಯುವವರಿಗೆ ಸಾಂಕೇತಿಕವಾಗಿ ಪಿಪಿಇ ಕಿಟ್ ಗಳನ್ನು ವಿತರಿಸಿದರು. ಇದರ ಜೊತೆಗೆ 31 ಸಫಾಯಿ ಮಿತ್ರರಿಗೆ (ಸ್ವಚ್ಛತಾ ಕಾರ್ಮಿಕರಿಗೆ)  ಆಯುಷ್ಮಾನ್ ಕಾರ್ಡುಗಳನ್ನು ವಿತರಿಸಲಾಯಿತು, ಮತ್ತು ಆರು ಸಫಾಯಿ ಮಿತ್ರರಿಗೆ ಆಟೋ ರಕ್ಷಾಗಳ ಕೀಗಳನ್ನು ನೀಡಲಾಯಿತು.

ಹಿಂದಿನ ಕಾಲದಿಂದಲೂ ಸೌಲಭ್ಯಗಳಿಂದ ವಂಚಿತರಾದ ಅಥವಾ ನಿರ್ಲಕ್ಷಿಸಲ್ಪಟ್ಟ ಜನರಿಗೆ ಅವರಿಗೆ ಸಿಗಬೇಕಾದ ನೆರವು ಮತ್ತು ಬೆಂಬಲ ದೊರೆಯುವಂತೆ ಖಚಿತಪಡಿಸುವ ಮೂಲಕ, 'ವಂಚಿತರಿಗೆ ಆದ್ಯತೆ'  ('ವಂಚಿತೋನ್ ಕೋ ವರಿಯತಾ' ) ನೀಡುವ ಸರ್ಕಾರದ ಬದ್ಧತೆಯನ್ನು ಈ ಕಾರ್ಯಕ್ರಮವು ಪುನರುಚ್ಚರಿಸಿತು. ಸಮಾಜದ ಅಂಚಿನಲ್ಲಿರುವವರ ಮೇಲಿನ ಈ ಗಮನವು ಸರ್ಕಾರದ 'ವಿಕಸಿತ ಭಾರತ'ದ ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ, ಇದರಲ್ಲಿ ಪ್ರತಿಯೊಬ್ಬರೂ ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡಲು ಮತ್ತು ಅದರ ಪ್ರಯೋಜನವನ್ನು ಪಡೆಯಲು ಅವಕಾಶವನ್ನು ಹೊಂದಿರುತ್ತಾರೆ.

ಕಾರ್ಯಕ್ರಮದಲ್ಲಿ ದಾತಾಗಂಜ್ ಶಾಸಕ ಶ್ರೀ ರಾಜೀವ್ ಸಿಂಗ್, ಬಿಲ್ಸಿ ಶಾಸಕ ಶ್ರೀ ಹರೀಶ್ ಚಂದ್ರ, ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯ ಶ್ರೀ ವಾಗೀಶ್ ಪಾಠಕ್, ಬುದೌನ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವರ್ಷಾ ಯಾದವ್ ಮತ್ತು ರಾಷ್ಟ್ರೀಯ ಸಫಾಯಿ ಕರಮ್ ಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಭಾತ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2311748) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English