ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಆರ್ಥಿಕ ಮುಗ್ಗಟ್ಟುಗಳಿಂದ ಇಂಜಿನಿಯರಿಂಗ್ ಆಕಾಂಕ್ಷೆಗಳವರೆಗೆ: ವಿದ್ಯಾರ್ಥಿವೇತನದ ಬೆಂಬಲವು ಮೋಹಿತ್ ಯಾದವ್ ಅವರಿಗೆ ತಮ್ಮ ಬಿ.ಟೆಕ್ ಶಿಕ್ಷಣವನ್ನು ಮುಂದುವರಿಸಲು ಹೇಗೆ ಸಹಾಯ ಮಾಡಿತು

प्रविष्टि तिथि: 11 AUG 2026 6:52PM by PIB Bengaluru

ಆರ್ಥಿಕ ಅಡಚಣೆಗಳಿಂದ ಹತ್ತು ಹಲವು ನಿರ್ಬಂಧಗಳನ್ನು ಎದುರಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವೆಚ್ಚಗಳು ಗಮನಾರ್ಹ ಸವಾಲಾಗಿ ಪರಿಣಮಿಸಬಹುದು, ಇಂತಹ ವಿದ್ಯಾರ್ಥಿಗಳು ತಮ್ಮ ಆಕಾಂಕ್ಷೆಗಳನ್ನು ಮುಂದುವರಿಸಲು ಮತ್ತು ಭವಿಷ್ಯಕ್ಕಾಗಿ ಉತ್ತಮ ಅವಕಾಶಗಳನ್ನು ನಿರ್ಮಿಸಲು ಸಹಾಯ ಮಾಡುವಲ್ಲಿ ಗುಣಮಟ್ಟದ ಶಿಕ್ಷಣದ ಪ್ರವೇಶವು ಪ್ರಮುಖ ಪಾತ್ರ ವಹಿಸುತ್ತದೆ.

ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೆರವು ಹೇಗೆ ಪರಿಹಾರವನ್ನು ನೀಡುತ್ತದೆ ಎಂಬುದನ್ನು ಪ್ರದರ್ಶಿಸುತ್ತಾ, ಇತರ ಹಿಂದುಳಿದ ವರ್ಗ (ಒಬಿಸಿ) ವರ್ಗಕ್ಕೆ ಸೇರಿದ 19 ವರ್ಷದ ವಿದ್ಯಾರ್ಥಿ ಶ್ರೀ ಮೋಹಿತ್ ಯಾದವ್ ಅವರು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು ಮತ್ತು ಸಿವಿಲ್ ಎಂಜಿನಿಯರಿಂಗ್‌ ನಲ್ಲಿ ಬಿ.ಟೆಕ್. ಪದವಿಯನ್ನು ಮುಂದುವರಿಸುತ್ತಿದ್ದಾರೆ. ಶಿಕ್ಷಣ, ಪುಸ್ತಕಗಳು, ಹಾಸ್ಟೆಲ್ ಮತ್ತು ಇತರ ಶೈಕ್ಷಣಿಕ ಅವಶ್ಯಕತೆಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಅವರ ಕುಟುಂಬವು ನಿರ್ವಹಿಸುವುದು ಕಷ್ಟಕರವಾಗಿತ್ತು. ಈ ಸವಾಲುಗಳ ಹೊರತಾಗಿಯೂ, ಶ್ರೀ ಮೋಹಿತ್ ಅವರು ತನ್ನ ಅಧ್ಯಯನದ ಮೇಲೆ ಗಮನಹರಿಸಿದರು ಮತ್ತು ಉತ್ತಮ ಉದ್ಯೋಗವನ್ನು ಪಡೆಯಲು ಮತ್ತು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಜ್ಞಾನದ ಮೂಲಕ ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಆಶಿಸಿದರು.

2025–26 ಶೈಕ್ಷಣಿಕ ವರ್ಷದಲ್ಲಿ, ಶ್ರೀ ಮೋಹಿತ್‌ ಅವರಿಗೆ ₹1,59,400 ಶೈಕ್ಷಣಿಕ ಆರ್ಥಿಕ ಸಹಾಯವನ್ನು ನೀಡಲಾಯಿತು. ಈ ಬೆಂಬಲವು ಅವರ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡಿತು ಮತ್ತು ಅವರು ತಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಅನುವು ಮಾಡಿಕೊಟ್ಟಿತು.

ಅವರ ಶೈಕ್ಷಣಿಕ ವೆಚ್ಚಗಳಿಗೆ ಸಂಬಂಧಿಸಿದ ಆರ್ಥಿಕ ಹೊರೆ ಕಡಿಮೆಯಾಗುವುದರೊಂದಿಗೆ, ಶ್ರೀ ಮೋಹಿತ್ ಅವರು ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಸಿದ್ಧತೆಯ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗಿದೆ. ಅವರು ಪ್ರಸ್ತುತ ಸಿವಿಲ್ ಎಂಜಿನಿಯರಿಂಗ್‌ ನಲ್ಲಿ ಬಿ.ಟೆಕ್. ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ ಮತ್ತು ಭವಿಷ್ಯದ ಉದ್ಯೋಗಾವಕಾಶಗಳಿಗಾಗಿ ಅವರ ತಾಂತ್ರಿಕ ಕೌಶಲ್ಯಗಳನ್ನು ಬಲಪಡಿಸುವತ್ತ ಕೆಲಸ ಮಾಡುತ್ತಿದ್ದಾರೆ.

ಸಚಿವಾಲಯದ ಹಣಕಾಸು ಬೆಂಬಲದ ಬಗ್ಗೆ ತಮ್ಮ ಸಕಾರಾತ್ಮಕ ಭಾವನೆಗಳನ್ನು ಶ್ರೀ ಮೋಹಿತ್ ಯಾದವ್ ಅವರು ಸಹರ್ಷ ಪೂರ್ವಕ ವ್ಯಕ್ತಪಡಿಸಿದ್ದಾರೆ

ಆರ್ಥಿಕ ಅಡಚಣೆಗಳಿಂದ ಹತ್ತು ಹಲವು ನಿರ್ಬಂಧಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸಕಾಲಿಕ ವಿದ್ಯಾರ್ಥಿವೇತನ ನೆರವು ಹೇಗೆ ಅರ್ಥಪೂರ್ಣ ಬೆಂಬಲವನ್ನು ನೀಡುತ್ತದೆ ಎಂಬುದನ್ನು ಶ್ರೀ ಮೋಹಿತ್ ಯಾದವ್ ಅವರ ಕಥೆಯು ಉಲ್ಲೇಖಿಸುತ್ತದೆ. ಶಿಕ್ಷಣದ ವೆಚ್ಚದ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ, ಈ ಬೆಂಬಲವು ಅವರ ಎಂಜಿನಿಯರಿಂಗ್ ಅಧ್ಯಯನವನ್ನು ಮುಂದುವರಿಸಲು ಮತ್ತು ಉತ್ತಮ ಉದ್ಯೋಗವನ್ನು ಪಡೆಯುವ ಮತ್ತು ಅವರ ಕುಟುಂಬದ ಆರ್ಥಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಗುರಿಯತ್ತ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ.

 

*****


(रिलीज़ आईडी: 2298011) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी