ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವಿನ ಮೂಲಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅನುಷ್ಠಾನವನ್ನು ಸರ್ಕಾರ ಬಲಪಡಿಸಿದೆ
ಕೇಂದ್ರ ಪುರಸ್ಕೃತ ಯೋಜನೆಯಡಿ 2022-23 ರಿಂದ 2024-25ರ ಅವಧಿಯಲ್ಲಿ 1.18 ಲಕ್ಷಕ್ಕೂ ಹೆಚ್ಚು ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆ
प्रविष्टि तिथि:
27 JUL 2026 6:22PM by PIB Bengaluru
ಪರಿಶಿಷ್ಟ ಜಾತಿಗ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳು ಹಾಗೂ ಘನತೆಯ ರಕ್ಷಣೆ, ಕಾನೂನಿನ ಪರಿಣಾಮಕಾರಿ ಜಾರಿ ಮತ್ತು ಸಂತ್ರಸ್ತರಿಗೆ ಸಮಯೋಚಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರಂತರ ಆರ್ಥಿಕ ಹಾಗೂ ಸಾಂಸ್ಥಿಕ ಬೆಂಬಲವನ್ನು ನೀಡುವ ಮೂಲಕ, ಸರ್ಕಾರವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಅನುಷ್ಠಾನವನ್ನು ಬಲಪಡಿಸಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ರಾಜ್ಯಸಭೆಯಲ್ಲಿ ಶ್ರೀ ಚಂದ್ರಕಾಂತ್ ದಾಮೋದರ್ ಹಂಡೋರೆ ಅವರ ಲಿಖಿತ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿಯನ್ನು ನೀಡಿದ್ದಾರೆ.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ದಾಖಲಾದ ಅಪರಾಧಗಳ ಅಂಕಿಅಂಶಗಳನ್ನು ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ಕ್ರೋಢೀಕರಿಸುತ್ತದೆ ಮತ್ತು ತನ್ನ 'ಕ್ರೈಮ್ ಇನ್ ಇಂಡಿಯಾ' (ಭಾರತದಲ್ಲಿ ಅಪರಾಧ) ವಾರ್ಷಿಕ ವರದಿಯಲ್ಲಿ ಪ್ರಕಟಿಸುತ್ತದೆ ಎಂದು ಸಚಿವರು ತಿಳಿಸಿದರು. ಇತ್ತೀಚೆಗೆ ಪ್ರಕಟವಾದ ದತ್ತಾಂಶವು 2024 ರ ವರ್ಷದವರೆಗೆ ಲಭ್ಯವಿದೆ.
ಎನ್ ಸಿ ಆರ್ ಬಿ ದತ್ತಾಂಶದ ಪ್ರಕಾರ, 2022 ರ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ಅಪರಾಧದಡಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ 57,569 ಪ್ರಕರಣಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ಅಪರಾಧದಡಿ ಅದೇ ಕಾಯ್ದೆಯಡಿ 10,064 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ, 2023 ರ ಅವಧಿಯಲ್ಲಿ 57,766 ಪರಿಶಿಷ್ಟ ಜಾತಿಗಳ ಪ್ರಕರಣಗಳು ಮತ್ತು 12,959 ಪರಿಶಿಷ್ಟ ಪಂಗಡಗಳ ಪ್ರಕರಣಗಳು ದಾಖಲಾಗಿದ್ದರೆ, 2024 ರ ಅವಧಿಯಲ್ಲಿ 55,685 ಪರಿಶಿಷ್ಟ ಜಾತಿಗಳ ಪ್ರಕರಣಗಳು ಮತ್ತು 9,961 ಪರಿಶಿಷ್ಟ ಪಂಗಡಗಳ ಪ್ರಕರಣಗಳು ವರದಿಯಾಗಿವೆ.

ಎನ್ ಸಿ ಆರ್ ಬಿ ದತ್ತಾಂಶದ ಪ್ರಕಾರ, 2024 ರ ಅವಧಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ 17,123 ಪ್ರಕರಣಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ 7,219 ಪ್ರಕರಣಗಳು ತನಿಖೆಯ ಹಂತದಲ್ಲಿ ಬಾಕಿ ಉಳಿದಿವೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಎನ್ ಸಿ ಆರ್ ಬಿ ದತ್ತಾಂಶದ ಪ್ರಕಾರ, ಪರಿಶಿಷ್ಟ ಜಾತಿಗಳ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯ ಅಖಿಲ ಭಾರತ ಶಿಕ್ಷೆಯ ಪ್ರಮಾಣವು 2022 ರಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇಕಡಾ 34.1 ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇಕಡಾ 28.1 ರಷ್ಟಿತ್ತು, 2023 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಶೇಕಡಾ 32.4 ಮತ್ತು ಶೇಕಡಾ 24.6 ರಷ್ಟಿತ್ತು, ಹಾಗೂ 2024 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಶೇಕಡಾ 33.9 ಮತ್ತು ಶೇಕಡಾ 33.2 ರಷ್ಟಿತ್ತು.
ಸಂವಿಧಾನದ ಏಳನೇ ಷೆಡ್ಯೂಲ್ ನಲ್ಲಿ 'ಪೋಲಿಸ್' ಮತ್ತು 'ಸಾರ್ವಜನಿಕ ಸುವ್ಯವಸ್ಥೆ' ರಾಜ್ಯದ ವಿಷಯಗಳಾಗಿವೆ ಎಂದು ಸಚಿವರು ತಿಳಿಸಿದ್ದಾರೆ. ಅದರಂತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳ ತನಿಖೆ ನಡೆಸುವುದು, ಅಪರಾಧಗಳನ್ನು ತಡೆಯುವುದು ಮತ್ತು ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ ಸದಸ್ಯರು ಸೇರಿದಂತೆ ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಜವಾಬ್ದಾರಿಯು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಸೇರಿದ್ದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಗಳ ಮೇಲಿನ ಅಪರಾಧಗಳನ್ನು ತಡೆಯುವುದಕ್ಕೆ ವಿಶೇಷ ಒತ್ತು ನೀಡಿ, ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತದೆ.
ಕಾಯ್ದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲ ನೀಡಲು, ಕೇಂದ್ರ ಸರ್ಕಾರವು ನಾಗರಿಕ ಹಕ್ಕುಗಳ ರಕ್ಷಣೆ (ಪಿಸಿಆರ್) ಕಾಯ್ದೆ, 1955 ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಜಾರಿ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಪುರಸ್ಕೃತ ಯೋಜನೆಯನ್ನು (ಸಿ ಎಸ್ ಎಸ್) ಜಾರಿಗೆ ತರುತ್ತಿದೆ. ಈ ಯೋಜನೆಯಡಿ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಸೇರಿದಂತೆ ಈ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರದ ನೆರವು ನೀಡಲಾಗುತ್ತದೆ.
2022-23 ರ ಅವಧಿಯಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹392.71 ಕೋಟಿ ಕೇಂದ್ರ ನೆರವು ಬಿಡುಗಡೆ ಮಾಡಲಾಗಿದ್ದು, 88,172 ಸಂತ್ರಸ್ತರು ಇದರ ಪ್ರಯೋಜನ ಪಡೆದಿದ್ದಾರೆ. 2023-24 ರ ಅವಧಿಯಲ್ಲಿ, ಕೇಂದ್ರದ ನೆರವು ₹535.30 ಕೋಟಿಗೆ ಏರಿಕೆಯಾಗಿದ್ದು, ಇದರ ಅಡಿಯಲ್ಲಿ 79,667 ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. 2024-25 ರ ಅವಧಿಯಲ್ಲಿ, ₹495.29 ಕೋಟಿ ನೆರವು ಬಿಡುಗಡೆ ಮಾಡಲಾಗಿದ್ದು, ದೇಶಾದ್ಯಂತ 99,965 ಸಂತ್ರಸ್ತರು ಪ್ರಯೋಜನ ಪಡೆದಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿದೆ, ಆ ಮೂಲಕ ನ್ಯಾಯದ ಪ್ರವೇಶವನ್ನು ಬಲಪಡಿಸುವುದು, ಸಂತ್ರಸ್ತರಿಗೆ ಸಕಾಲಿಕ ಪರಿಹಾರವನ್ನು ಒದಗಿಸುವುದು ಮತ್ತು ದೇಶಾದ್ಯಂತ ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುತ್ತಿದೆ.
*****
(रिलीज़ आईडी: 2290306)
आगंतुक पटल : 3