ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ ರೈಸ್ ಕಾನ್ ಕ್ಲೇವ್ 2026 ಮುಕ್ತಾಯ: ವಿಕಸಿತ ಭಾರತ 2047 ಕ್ಕಾಗಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಚಾಲಿತ ಬೆಳವಣಿಗೆ


प्रविष्टि तिथि: 14 JUN 2026 8:09PM by PIB Bengaluru

ಬೆಂಗಳೂರಿನ ವಿ.ಎಂ. ಘಾಟಗೆ ಕನ್ವೆನ್ಷನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆದ ಸಂಶೋಧನೆ–ಉದ್ಯಮ–ಸ್ಟಾರ್ಟ್-ಅಪ್–ಉದ್ಯಮಶೀಲತೆ ರೈಸ್ ಕಾನ್ ಕ್ಲೇವ್ 2026 ಇಂದು ಮುಕ್ತಾಯಗೊಂಡಿತು. ಈ ಸಮಾವೇಶವು ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು, ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಯಡಿ ತಂದಿತು. ವಿಜ್ಞಾನ, ನಾವೀನ್ಯತೆ, ಉದ್ಯಮ, ಸ್ಟಾರ್ಟ್-ಅಪ್‌ಗಳು, ಶಿಕ್ಷಣ ಮತ್ತು ನೀತಿಗಳನ್ನು ಜೋಡಿಸುವ ಮೂಲಕ ಭಾರತದ ‘ಸಮಗ್ರ ವಿಜ್ಞಾನ ಮತ್ತು ನಾವೀನ್ಯತೆ’ಗೆ ಅನುಗುಣವಾದ ಪರಿಹಾರಗಳನ್ನು ಸಹ-ಸೃಷ್ಟಿಸಲು ಈ ಸಮಾವೇಶ ಪುನರುಚ್ಚರಿಸಿತು; ಇದು ಕಾರ್ಯತಂತ್ರದ ಪಾಲುದಾರಿಕೆಗಳು, ಹೂಡಿಕೆಯ ಮಾರ್ಗಗಳು ಮತ್ತು ಉದ್ಯೋಗ-ಸಂಬಂಧಿತ ಇನ್ಕ್ಯುಬೇಷನ್‌ಗೆ ದಾರಿ ಮಾಡಿಕೊಡಲಿದೆ.

ರೈಸ್ ಕಾನ್ ಕ್ಲೇವ್ ನ ಬೆಂಗಳೂರು ಆವೃತ್ತಿಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿತ್ತು, ಬೆಳವಣಿಗೆಗಾಗಿ ಏರೋಸ್ಪೇಸ್ ತಂತ್ರಜ್ಞಾನಗಳು, ಎಲ್ಲರಿಗೂ ಎಐ (AI) – ತಂತ್ರಜ್ಞಾನ, ಸಮಾಜ ಮತ್ತು ನೈತಿಕತೆಯ ಸಂಚರಣೆ, ಹಾಗೂ ಅಗ್ರಿ-ಫುಡ್ ನೆಕ್ಸಸ್ 2026 – ಲ್ಯಾಬ್-ಟು-ಮಾರ್ಕೆಟ್ ಪೈಪ್‌ಲೈನ್ ನಿರ್ಮಾಣ. ಏರೋಸ್ಪೇಸ್, ಡೇಟಾ ಸೈನ್ಸ್ ಮತ್ತು ಫುಡ್ ಟೆಕ್ನಾಲಜಿ ಕ್ಷೇತ್ರಗಳ ಉನ್ನತ ಕೈಗಾರಿಕೆಗಳು, ಸ್ಟಾರ್ಟ್-ಅಪ್‌ಗಳು ಮತ್ತು ಎಂಎಸ್‌ಎಂಇಗಳನ್ನೊಳಗೊಂಡ 8 ಪ್ಯಾನಲ್ ಅಧಿವೇಶನಗಳು, ಹಾಗೂ ಉದ್ಯಮ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಿಂದ 25 ಪ್ರಮುಖ ಭಾಷಣಕಾರರು ಈ ಸಮಾವೇಶದಲ್ಲಿದ್ದರು. ಬಾಷ್ (Bosch), ಟಿಎಎಸ್ಎಲ್ (TASL), ಎಲ್&ಟಿ (L&T), ಷ್ನೇಯ್ಡರ್ (Schneider), ವೆಂಚರ್ ಕ್ಯಾಪಿಟಲಿಸ್ಟ್, ಸ್ಟಾರ್ಟ್-ಅಪ್‌ಗಳು, ಐಬಿಎಮ್ (IBM), ಲೀಶಿಯಸ್ (Licious), ಇಸ್ರೋ (ISRO), ಜಿಕೆವಿಕೆ-ಯುಎಎಸ್ (GKVK-UAS), ಐಐಎಮ್-ಬೆಂಗಳೂರು, ಐಐಎಮ್-ನಾಗಪುರ, ಐಐಟಿ-ಧಾರವಾಡ ಮುಂತಾದ ಸಂಸ್ಥೆಗಳಿಂದ ಭಾಗವಹಿಸಿದವರು, ಇಂತಹ ಪಾಲುದಾರಿಕೆಗಳ ಕಾರ್ಯವಿಧಾನಗಳು, ಪ್ರಯೋಜನಗಳು ಮತ್ತು ಸವಾಲುಗಳನ್ನು ಚರ್ಚಿಸಿದರು, ವಿಶೇಷವಾಗಿ ನಾವೀನ್ಯತೆಯನ್ನು ಬೆಳೆಸುವಲ್ಲಿ ಅವುಗಳ ಪಾತ್ರದ ಮೇಲೆ ಗಮನ ಹರಿಸಿದರು.

ಈ ಸಮಾವೇಶವನ್ನು 13 ಜೂನ್ 2026 ರಂದು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಉದ್ಘಾಟಿಸಿದರು. ಅವರು ನಾವೀನ್ಯತೆಯನ್ನು ಮುನ್ನಡೆಸುವಲ್ಲಿ ಮತ್ತು ಭಾರತದ ಸಂಶೋಧನೆ–ಉದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸ್ಟಾರ್ಟ್-ಅಪ್‌ಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಮಾನ್ಯ ಸಚಿವರು ಸ್ಟಾರ್ಟ್-ಅಪ್ ಎಕ್ಸ್‌ಪೋವನ್ನು ಉದ್ಘಾಟಿಸಿ, ಭಾಗವಹಿಸಿದ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ಭಾರತದ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಈಗ ಕೇವಲ ಮುಂದಿನ ಯೂನಿಕಾರ್ನ್ ಅನ್ನು ನಿರ್ಮಿಸುವುದಷ್ಟೇ ಅಲ್ಲ. ಇದು ಈಗ ನೈಜ ಭಾರತೀಯ ಸಮಸ್ಯೆಗಳನ್ನು ಪರಿಹರಿಸುವುದು, ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನವನ್ನು ನಿರ್ಮಿಸುವುದು ಮತ್ತು ದೀರ್ಘಕಾಲೀನ ಪರಿಣಾಮ ಬೀರುವ ಸುಸ್ಥಿರ ವ್ಯವಹಾರಗಳನ್ನು ಸೃಷ್ಟಿಸುವುದಾಗಿದೆ. ಕಳೆದ ಒಂದು ದಶಕದಲ್ಲಿ, ಭಾರತವು "ಸ್ಟಾರ್ಟ್-ಅಪ್ ಆಂದೋಲನ" ದಿಂದ ಸಂಪೂರ್ಣ ನಾವೀನ್ಯತೆ ಆಧಾರಿತ ಆರ್ಥಿಕತೆಯಾಗಿ ಬದಲಾಗಿದೆ. ಇಂದು, ಸಂಸ್ಥಾಪಕರು ಕೇವಲ ಬೆಂಗಳೂರು, ಮುಂಬೈ ಮತ್ತು ದೆಹಲಿಯಿಂದಷ್ಟೇ ಅಲ್ಲದೆ, ಸೂರತ್, ಜೈಪುರ, ಇಂದೋರ್, ಕೊಚ್ಚಿ, ಲಕ್ನೋ ಮತ್ತು ನೂರಾರು ಶ್ರೇಣಿ-2 ಹಾಗೂ ಶ್ರೇಣಿ-3 ನಗರಗಳಿಂದಲೂ ಹೊರಹೊಮ್ಮುತ್ತಿದ್ದಾರೆ.

ಈ ಸಮಾವೇಶದ ಪ್ರಮುಖ ಆಕರ್ಷಣೆಯೆಂದರೆ, ಸ್ಟಾರ್ಟ್-ಅಪ್ ಎಕ್ಸ್‌ಪೋ. ಇದರಲ್ಲಿ ಸಿಎಸ್ಐಆರ್-ಎನ್ಎಎಲ್ (CSIR-NAL), ಸಿಎಸ್ಐಆರ್-ಸಿಎಫ್‌ಟಿಆರ್‌ಐ (CSIR-CFTRI) ಮತ್ತು ಸಿಎಸ್ಐಆರ್-4ಪಿಐ (CSIR-4PI) ಸೇರಿದಂತೆ ಸಿಎಸ್ಐಆರ್ ಪ್ರಯೋಗಾಲಯಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸುಮಾರು 100 ಸ್ಟಾರ್ಟ್-ಅಪ್‌ಗಳು ಭಾಗವಹಿಸಿದ್ದವು. ಎಕ್ಸ್‌ಪೋ ಏರೋಸ್ಪೇಸ್, ಡೇಟಾ ಸೈನ್ಸ್ ಮತ್ತು ಎಐ, ಹಾಗೂ ಫುಡ್ ಟೆಕ್ನಾಲಜಿಯಲ್ಲಿನ ಅತ್ಯಾಧುನಿಕ ನಾವೀನ್ಯತೆಗಳನ್ನು ಪ್ರದರ್ಶಿಸಿತು, ಇದು ಸಿಎಸ್ಐಆರ್‌ನ ತಂತ್ರಜ್ಞಾನ ವರ್ಗಾವಣೆ ಮತ್ತು ವಾಣಿಜ್ಯೀಕರಣ ಪ್ರಯತ್ನಗಳ ಬೆಳೆಯುತ್ತಿರುವ ಪ್ರಭಾವವನ್ನು ತೋರಿಸಿತು. ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು, ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸಲು ಐಐಟಿ-ಧಾರವಾಡ, ಐಐಟಿಎಂ-ಚೆನ್ನೈ, ಸತ್ಯ ಸಾಯಿ ವಿಶ್ವವಿದ್ಯಾಲಯ, ಎನ್ಐವಿಇಡಿಐ-ಐಸಿಎಆರ್ (NIVEDI-ICAR), ಬೆಂಗಳೂರು, ಐಐಎಮ್-ನಾಗಪುರಗಳೊಂದಿಗೆ ಎಂಒಯು (MoUs) ಮಾಡಿಕೊಳ್ಳುವುದು, ಸ್ಟಾರ್ಟ್-ಅಪ್ ಎಂ/ಎಸ್ ಟ್ರೈಡೆಂಟ್ ಟೆಕ್. ಇಂಜಿನಿಯರಿಂಗ್, ಚೆನ್ನೈಗೆ ವಾಕೆಲ್ ಇಂಜಿನ್ ಅನ್ನು ಹಸ್ತಾಂತರಿಸುವುದು ಮತ್ತು ತಿರುಮಲ ತಿರುಪತಿ ದೇವಸ್ಥಾನಂ (TTD) ನೀಡುವ ಆಹಾರದ ಗುಣಮಟ್ಟ ನಿಯಂತ್ರಣಕ್ಕಾಗಿ ಸಿಎಸ್ಐಆರ್-ಸಿಎಫ್‌ಟಿಆರ್‌ಐ ಮತ್ತು ಟಿಟಿಡಿ ನಡುವಿನ ಸಹಯೋಗವು ಕಾನ್ಕ್ಲೇವ್‌ನ ಮುಖ್ಯಾಂಶಗಳಾಗಿದ್ದವು.

ಸಮಾರೋಪ ಸಮಾರಂಭದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಇಸ್ರೋ (ISRO) ಅಧ್ಯಕ್ಷ ಡಾ. ವಿ. ನಾರಾಯಣನ್, ಸಿಎಸ್ಐಆರ್-ಎನ್ಎಎಲ್ ನಿರ್ದೇಶಕ ಡಾ. ಅಭಯ್ ಎ. ಪಾಶೀಲ್ಕರ್, ಸಿಎಸ್ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ಗಿರಿಧರ್ ಪರ್ವತಮ್ ಮತ್ತು ಸಿಎಸ್ಐಆರ್-4ಪಿಐ ನಿರ್ದೇಶಕ ಡಾ. ಜಿ. ಕೆ. ಪಾತ್ರ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಭಾರತವು ವೈಜ್ಞಾನಿಕ ಪ್ರಗತಿ, ತಾಂತ್ರಿಕ ನಾವೀನ್ಯತೆ ಮತ್ತು ಯುವ ಜನತೆಯ ಆಕಾಂಕ್ಷೆಗಳಿಂದ ಚಾಲಿತವಾಗಿರುವ ಪರಿವರ್ತನಾತ್ಮಕ ಹಂತಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ಆದ್ಯತೆಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಭಾರತದೊಳಗೆ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಪರಿಹಾರಗಳ ಅಗತ್ಯವಿದೆ ಎಂದು ಅವರು ಗಮನಸೆಳೆದರು. ಹಿಂದಿನ ದಶಕಗಳಲ್ಲಿನ ಆಹಾರ ಭದ್ರತೆಯ ಚಿಂತೆಗಳಿಂದ ಹಿಡಿದು ಉದಯೋನ್ಮುಖ ಉತ್ಪಾದನಾ ಮತ್ತು ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮುವವರೆಗಿನ ಭಾರತದ ಪ್ರಗತಿಯನ್ನು ಎತ್ತಿ ತೋರಿದ ಸಚಿವರು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸುವ, ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸುವ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿಹೇಳಿದರು. ಭಾರತದ ಜನಸಂಖ್ಯಾ ಲಾಭವು ಆರ್ಥಿಕ ಬೆಳವಣಿಗೆ ಮತ್ತು ತಾಂತ್ರಿಕ ನಾಯಕತ್ವವನ್ನು ವೇಗಗೊಳಿಸಲು ಒಂದು ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಹಿಂದಿನ ದಶಕಗಳಲ್ಲಿನ ಆಹಾರ ಭದ್ರತೆಯ ಚಿಂತೆಗಳಿಂದ ಹಿಡಿದು ಉದಯೋನ್ಮುಖ ಉತ್ಪಾದನಾ ಮತ್ತು ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮುವವರೆಗಿನ ಭಾರತದ ಪ್ರಗತಿಯ ಬಗ್ಗೆ ಒತ್ತಿ ಹೇಳಿದ ಸಚಿವರು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸುವ, ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸುವ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿಹೇಳಿದರು. ಭಾರತದ ಜನಸಂಖ್ಯಾ ಲಾಭವು ಆರ್ಥಿಕ ಬೆಳವಣಿಗೆ ಮತ್ತು ತಾಂತ್ರಿಕ ನಾಯಕತ್ವವನ್ನು ವೇಗಗೊಳಿಸಲು ಒಂದು ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಯುವ ನಾವೀನ್ಯಕಾರರು ಮತ್ತು ಸ್ಟಾರ್ಟ್-ಅಪ್ ಸಂಸ್ಥಾಪಕರು, ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಮತ್ತು ಸಾಮಾಜಿಕ ಹಾಗೂ ಕೈಗಾರಿಕಾ ಸವಾಲುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಶ್ರೀ ಜೋಶಿ ಒತ್ತಾಯಿಸಿದರು. ನಿರಂತರ ನೀತಿ ಬೆಂಬಲ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾವೀನ್ಯತೆ-ಕೇಂದ್ರಿತ ಉಪಕ್ರಮಗಳು ಉದ್ಯಮಶೀಲತೆ ಮತ್ತು ತಂತ್ರಜ್ಞಾನ-ಚಾಲಿತ ಉದ್ಯಮಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿವೆ ಎಂದು ಅವರು ಗಮನಿಸಿದರು. ಸಂಶೋಧಕರು, ನಾವೀನ್ಯಕಾರರು, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಸಾಮೂಹಿಕ ಪ್ರಯತ್ನಗಳ ಮೂಲಕ 'ವಿಕಸಿತ ಭಾರತ 2047' ರ ದೃಷ್ಟಿಕೋನವನ್ನು ನನಸಾಗಿಸಬಹುದು ಎಂದು ಅವರು ಒತ್ತಿಹೇಳಿದರು.

ವೈಜ್ಞಾನಿಕ ಸಂಶೋಧನೆಯನ್ನು ವಾಣಿಜ್ಯ ಅನ್ವಯಿಕೆಗಳೊಂದಿಗೆ ಜೋಡಿಸುವತ್ತ ಗಮನಹರಿಸಿದ ಬೆಂಗಳೂರಿನ ರೈಸ್ ಕಾನ್ ಕ್ಲೇವ್ 2026ರ ಯಶಸ್ವಿ ಸಮಾರೋಪವು, ವಿಕಸಿತ ಭಾರತ 2047 ಗಾಗಿ ಭಾರತದ ದೃಷ್ಟಿಕೋನವನ್ನು ಬೆಂಬಲಿಸಲು ನೀತಿ ನಿರೂಪಕರು, ಉದ್ಯಮದ ಮುಖಂಡರು, ಸ್ಟಾರ್ಟ್-ಅಪ್‌ಗಳು ಮತ್ತು ಸಂಶೋಧಕರನ್ನು ಒಂದೇ ವೇದಿಕೆಗೆ ತಂದಿತು.

 

*****


(रिलीज़ आईडी: 2272735) आगंतुक पटल : 55