ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ (ಪಿ ಎಲ್‌ ಎಫ್‌ ಎಸ್‌) ಮಾಸಿಕ ಬುಲೆಟಿನ್


ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್‌ ಎಫ್‌ ಪಿ ಆರ್) ಮತ್ತು ಕಾರ್ಮಿಕ ಜನಸಂಖ್ಯೆ ಅನುಪಾತ (ಡಬ್ಲ್ಯುಪಿಆರ್) ಬಹುತೇಕ ಬದಲಾಗದೆ ಉಳಿದಿವೆ

ನಗರ ಪ್ರದೇಶದ ನಿರುದ್ಯೋಗ ದರ (ಯುಆರ್) ಮತ್ತು ಒಟ್ಟಾರೆ ಮಹಿಳಾ ನಿರುದ್ಯೋಗ ದರ ಸುಧಾರಿಸಿದೆ

ಪ್ರಕಟಣಾ ದಿನಾಂಕ: 16 MAR 2026 4:00PM by PIB Bengaluru

ಮುಖ್ಯಾಂಶಗಳು:

  • 15 ವರ್ಷ ಮೇಲ್ಪಟ್ಟ ವ್ಯಕ್ತಿಗಳ ಒಟ್ಟಾರೆ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್‌ ಎಫ್‌ ಪಿ ಆರ್ ) ಫೆಬ್ರವರಿ 2026 ರಲ್ಲಿ ಶೇ. 55.9 ರಷ್ಟಿದ್ದು, ಜನವರಿಗಿಂತ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದೆ.
  • ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್‌ ಎಫ್‌ ಪಿ ಆರ್ ) ಫೆಬ್ರವರಿ 2026 ರಲ್ಲಿ ಶೇ. 35.3 ಕ್ಕೆ ಏರಿಕೆಯಾಗಿದೆ (ಜನವರಿಯಲ್ಲಿ ಶೇ. 35.1 ಇತ್ತು).
  • ಒಟ್ಟಾರೆ ಕಾರ್ಮಿಕ ಜನಸಂಖ್ಯೆ ಅನುಪಾತ (ಡಬ್ಲ್ಯುಪಿಆರ್) ಫೆಬ್ರವರಿ 2026 ರಲ್ಲಿ ಶೇ. 53.2 ರಷ್ಟಿದ್ದು, ವ್ಯಾಪಕ ಸ್ಥಿರತೆಯನ್ನು ಪ್ರದರ್ಶಿಸಿದೆ.
  • ಮಹಿಳಾ ಕಾರ್ಮಿಕ ಜನಸಂಖ್ಯೆ ಅನುಪಾತ (ಡಬ್ಲ್ಯುಪಿಆರ್) ಫೆಬ್ರವರಿ 2026 ರಲ್ಲಿ ಶೇ. 33.4 ಕ್ಕೆ ಏರಿದೆ (ಜನವರಿಯಲ್ಲಿ ಶೇ. 33.1 ಇತ್ತು).
  • ನಗರ ಪ್ರದೇಶದ ನಿರುದ್ಯೋಗ ದರ (ಯುಆರ್) ಫೆಬ್ರವರಿ 2026 ರಲ್ಲಿ ಶೇ. 6.6 ಕ್ಕೆ ಸುಧಾರಿಸಿದೆ (ಅಂದರೆ ಇಳಿಕೆಯಾಗಿದೆ), ಜನವರಿಯಲ್ಲಿ ಇದು ಶೇ. 7.0 ಇತ್ತು. ಗ್ರಾಮೀಣ ನಿರುದ್ಯೋಗ ದರ ಶೇ. 4.2 ರಷ್ಟಿದ್ದು ಯಾವುದೇ ಬದಲಾವಣೆ ಕಂಡಿಲ್ಲ.
  • ಮಹಿಳಾ ನಿರುದ್ಯೋಗ ದರ (ಯುಆರ್) ಎರಡೂ ವಲಯಗಳಲ್ಲಿ ಕುಸಿದಿದ್ದು, ಜನವರಿಯಲ್ಲಿದ್ದ ಶೇ. 5.6 ರಿಂದ ಫೆಬ್ರವರಿ 2026 ರಲ್ಲಿ ಶೇ. 5.1 ಕ್ಕೆ ಇಳಿಕೆಯಾಗಿದೆ.
  • ಫೆಬ್ರವರಿ 2026 ರಲ್ಲಿ ಹೆಚ್ಚಿನ ಮಹಿಳೆಯರು ಕೆಲಸಕ್ಕೆ ಸೇರ್ಪಡೆಗೊಂಡಿರುವುದು ಮತ್ತು ಗ್ರಾಮೀಣ ಹಾಗೂ ನಗರ ಎರಡೂ ವಲಯಗಳಲ್ಲಿ ನಿರುದ್ಯೋಗ ದರವು ತೀವ್ರವಾಗಿ ಕುಸಿದಿರುವುದು ನಗರ ಉದ್ಯೋಗ ಮಾರುಕಟ್ಟೆಯ ಪ್ರಬಲ ಚೇತರಿಕೆಯನ್ನು ಸೂಚಿಸುತ್ತದೆ.

 

. ಪೀಠಿಕೆ

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ ಎಸ್‌ ಒ) ನಡೆಸುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯು (ಪಿ ಎಲ್‌ ಎಫ್‌ ಎಸ್), ಜನಸಂಖ್ಯೆಯ ಚಟುವಟಿಕೆಯ ಭಾಗವಹಿಸುವಿಕೆ ಹಾಗೂ ಉದ್ಯೋಗ ಮತ್ತು ನಿರುದ್ಯೋಗ ಪರಿಸ್ಥಿತಿಗಳ ದತ್ತಾಂಶದ ಪ್ರಾಥಮಿಕ ಮೂಲವಾಗಿದೆ. ದೇಶದ ಕಾರ್ಮಿಕ ಮಾರುಕಟ್ಟೆಯ ಸೂಚಕಗಳ ಮಾಸಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸಲು ಜನವರಿ 2025 ರಿಂದ ಪಿ ಎಲ್‌ ಎಫ್‌ ಎಸ್ ಸಮೀಕ್ಷಾ ವಿಧಾನವನ್ನು ಮಾರ್ಪಡಿಸಲಾಗಿದೆ.

ಪಿ ಎಲ್‌ ಎಫ್‌ ಎಸ್ ನ ಮಾಸಿಕ ಫಲಿತಾಂಶಗಳನ್ನು 'ಮಾಸಿಕ ಬುಲೆಟಿನ್'ಗಳ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ಪ್ರಸ್ತುತ ಸಾಪ್ತಾಹಿಕ ಸ್ಥಿತಿ (ಸಿಡಬ್ಲ್ಯುಎಸ್) ವಿಧಾನವನ್ನು ಅನುಸರಿಸಿ ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್‌ ಎಫ್‌ ಪಿ ಆರ್), ಕಾರ್ಮಿಕ ಜನಸಂಖ್ಯೆ ಅನುಪಾತ (ಡಬ್ಲ್ಯುಪಿಆರ್) ಮತ್ತು ನಿರುದ್ಯೋಗ ದರ (ಯುಆರ್) ಗಳಂತಹ ಪ್ರಮುಖ ಸೂಚಕಗಳ ಅಂದಾಜುಗಳನ್ನು ಪ್ರಸ್ತುತಪಡಿಸುತ್ತದೆ.

ಏಪ್ರಿಲ್ 2025 ರಿಂದ ಜನವರಿ 2026 ರವರೆಗಿನ ಮಾಸಿಕ ಬುಲೆಟಿನ್‌ ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಫೆಬ್ರವರಿ 2026 ರ ಮಾಸಿಕ ಬುಲೆಟಿನ್ ಈ ಸರಣಿಯ ಹನ್ನೊಂದನೆಯದಾಗಿದೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಕುರಿತ ಪ್ರಮುಖ ಫಲಿತಾಂಶಗಳು (ಪ್ರಸ್ತುತ ಸಾಪ್ತಾಹಿಕ ಸ್ಥಿತಿಯ ಅನುಸಾರ):

  • ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್ಎಫ್ಪಿ ಆರ್ ) ಬದಲಾಗದೆ ಉಳಿದಿದೆ:

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಒಟ್ಟಾರೆ ಎಲ್‌ ಎಫ್‌ ಪಿ ಆರ್  ಫೆಬ್ರವರಿ 2026 ರಲ್ಲಿ ಶೇ. 55.9 ಎಂದು ಅಂದಾಜಿಸಲಾಗಿದೆ, ಇದು ಜನವರಿ 2026 ರಲ್ಲಿ ದಾಖಲಾದಷ್ಟೇ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ ಎಫ್‌ ಪಿ ಆರ್  ಫೆಬ್ರವರಿ 2026 ರಲ್ಲಿ ಶೇ. 58.7 ರಷ್ಟಿತ್ತು. ನಗರ ಪ್ರದೇಶದ ಎಲ್‌ ಎಫ್‌ ಪಿ ಆರ್  ಫೆಬ್ರವರಿ 2026 ರಲ್ಲಿ ಶೇ. 50.4 ಎಂದು ಅಂದಾಜಿಸಲಾಗಿದ್ದು, ಜನವರಿ 2026 ರಲ್ಲಿದ್ದ ಶೇ. 50.3 ಕ್ಕಿಂತ ಸ್ವಲ್ಪ ಹೆಚ್ಚಳವನ್ನು ತೋರಿಸಿದೆ.

ಒಟ್ಟಾರೆ ಕಾರ್ಮಿಕ ಬಲದ ಭಾಗವಹಿಸುವಿಕೆ ದರವು ಫೆಬ್ರವರಿ 2026 ರಲ್ಲಿ ಶೇ. 55.9 ರಷ್ಟು ಬದಲಾಗದೆ ಉಳಿದಿದೆ.

  • ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯಲ್ಲಿ ಅಲ್ಪ ಸುಧಾರಣೆ:

ಒಟ್ಟಾರೆ ಮಹಿಳಾ ಎಲ್‌ ಎಫ್‌ ಪಿ ಆರ್  ಜನವರಿ 2026 ರಲ್ಲಿದ್ದ ಶೇ. 35.1 ರಿಂದ ಫೆಬ್ರವರಿ 2026 ರಲ್ಲಿ ಶೇ. 35.3 ಕ್ಕೆ ಸ್ವಲ್ಪ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಎಲ್‌ ಎಫ್‌ ಪಿ ಆರ್  ಜನವರಿಯ ಶೇ. 39.7 ರಿಂದ ಫೆಬ್ರವರಿಯಲ್ಲಿ ಶೇ. 40.0 ಕ್ಕೆ ಏರಿದೆ, ಇದು ಗ್ರಾಮೀಣ ಮಹಿಳಾ ಭಾಗವಹಿಸುವಿಕೆಯಲ್ಲಿ ಸುಧಾರಣೆಯನ್ನು ಸೂಚಿಸುತ್ತದೆ. ನಗರ ಮಹಿಳಾ ಎಲ್‌ ಎಫ್‌ ಪಿ ಆರ್  ಇದೇ ಅವಧಿಯಲ್ಲಿ ಶೇ. 25.5 ರಷ್ಟು ಬದಲಾಗದೆ ಉಳಿದಿದೆ.

ಫೆಬ್ರವರಿ, 2026 ರಲ್ಲಿ ಗ್ರಾಮೀಣ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ಸಾಧಾರಣ ಏರಿಕೆ ಕಂಡಿತು.

  • ಕಾರ್ಮಿಕ ಜನಸಂಖ್ಯೆ ಅನುಪಾತ (ಡಬ್ಲ್ಯುಪಿಆರ್) ಮಟ್ಟಗಳು ಸ್ಥಿರವಾಗಿವೆ:

ಒಟ್ಟಾರೆ ಡಬ್ಲ್ಯುಪಿಆರ್ ಜನವರಿ 2026 ರ ಶೇ. 53.1 ಕ್ಕೆ ಹೋಲಿಸಿದರೆ ಫೆಬ್ರವರಿ 2026 ರಲ್ಲಿ ಶೇ. 53.2 ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಡಬ್ಲ್ಯುಪಿಆರ್ ಶೇ. 56.3 ರಷ್ಟಿದ್ದರೆ, ನಗರ ಪ್ರದೇಶದ ಡಬ್ಲ್ಯುಪಿಆರ್ ಜನವರಿಯ ಶೇ. 46.8 ಕ್ಕೆ ಹೋಲಿಸಿದರೆ ಫೆಬ್ರವರಿಯಲ್ಲಿ ಶೇ. 47.0 ರಷ್ಟು ದಾಖಲಾಗಿದೆ.

  • ಮಹಿಳಾ ಡಬ್ಲ್ಯುಪಿಆರ್ ನಲ್ಲಿ ಸುಧಾರಣೆ: ಮಹಿಳಾ ಕಾರ್ಮಿಕ ಜನಸಂಖ್ಯೆ ಅನುಪಾತವು ಜನವರಿ 2026 ರಲ್ಲಿದ್ದ ಶೇ. 33.1 ರಿಂದ ಫೆಬ್ರವರಿ 2026 ರಲ್ಲಿ ಶೇ. 33.4 ಕ್ಕೆ ಸುಧಾರಿಸಿದೆ. ಇದು ಗ್ರಾಮೀಣ ಮಹಿಳೆಯರ (38.0% ರಿಂದ 38.4%) ಮತ್ತು ನಗರ ಮಹಿಳೆಯರ (23.0% ರಿಂದ 23.3%) ಸುಧಾರಣೆಯಿಂದಾಗಿ ಸಂಭವಿಸಿದೆ.

ಫೆಬ್ರವರಿ 2026 ರಲ್ಲಿ ಒಟ್ಟಾರೆ ಮಹಿಳಾ ಕಾರ್ಮಿಕ ಬಲವು ಸಾಧಾರಣ ಏರಿಕೆಯನ್ನು ದಾಖಲಿಸಿದ್ದು, ಶೇ. 33.4 ರಷ್ಟಿತ್ತು.

  • ನಗರ ನಿರುದ್ಯೋಗ ದರ (ಯುಆರ್) ಕುಸಿತ:

ನಗರ ನಿರುದ್ಯೋಗ ದರವು ಫೆಬ್ರವರಿ 2026 ರಲ್ಲಿ ಶೇ. 6.6 ಕ್ಕೆ ಇಳಿದಿದೆ (ಜನವರಿಯಲ್ಲಿ ಇದು ಶೇ. 7.0 ರಷ್ಟಿತ್ತು), ಇದು ಡಿಸೆಂಬರ್ 2025 ರ ಮಟ್ಟಕ್ಕಿಂತಲೂ (6.7%) ಕೆಳಗಿದೆ. ಆದರೆ, ಗ್ರಾಮೀಣ ನಿರುದ್ಯೋಗ ದರವು ಜನವರಿಯಲ್ಲಿ ಇದ್ದಂತೆಯೇ ಶೇ. 4.2 ರಷ್ಟು ಬದಲಾಗದೆ ಉಳಿದಿದೆ. ಫೆಬ್ರವರಿ 2026 ರಲ್ಲಿ ಒಟ್ಟಾರೆ ನಿರುದ್ಯೋಗ ದರವನ್ನುಇ ಶೇ. 4.9 ಎಂದು ಅಂದಾಜಿಸಲಾಗಿದೆ, ಇದು ಜನವರಿ 2026 ರಲ್ಲಿ ದಾಖಲಾದ ಶೇ. 5.0 ಗಿಂತ ಸ್ವಲ್ಪ ಕಡಿಮೆಯಾಗಿದೆ.

ನಗರ ನಿರುದ್ಯೋಗ ದರ ಫೆಬ್ರವರಿ 2026 ರಲ್ಲಿ ಶೇ. 6.6 ಕ್ಕೆ ಇಳಿದಿದೆ.

  • ಮಹಿಳಾ ನಿರುದ್ಯೋಗ ದರ ಸುಧಾರಣೆ:

ಫೆಬ್ರವರಿ 2026 ರಲ್ಲಿ ಮಹಿಳೆಯರ ಒಟ್ಟಾರೆ ನಿರುದ್ಯೋಗ ದರವು ಜನವರಿ 2026 ರಲ್ಲಿದ್ದ ಶೇ. 5.6 ಕ್ಕೆ ಹೋಲಿಸಿದರೆ ಶೇ. 5.1 ಕ್ಕೆ ಇಳಿದಿದೆ. ನಗರ ಮಹಿಳಾ ನಿರುದ್ಯೋಗ ದರವು ಶೇ. 9.8 ರಿಂದ ಶೇ. 8.7 ಕ್ಕೆ ಇಳಿದಿದೆ ಮತ್ತು ಗ್ರಾಮೀಣ ಮಹಿಳಾ ನಿರುದ್ಯೋಗ ದರವು ಶೇ. 4.3 ರಿಂದ ಶೇ. 4.0 ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಪುರುಷರ ನಿರುದ್ಯೋಗ ದರವು ಶೇ. 4.8 ರಷ್ಟು ಸ್ಥಿರವಾಗಿದೆ.

ಫೆಬ್ರವರಿ 2026 ರಲ್ಲಿ ಒಟ್ಟಾರೆ ಮಹಿಳಾ ನಿರುದ್ಯೋಗ ದರ ಶೇ. 5.1 ಕ್ಕೆ ಇಳಿದಿದೆ.

ಸಮೀಕ್ಷೆಯ ವ್ಯಾಪ್ತಿ:

ಅಖಿಲ ಭಾರತ ಮಟ್ಟದಲ್ಲಿ, ಈ ಮಾಸಿಕ ಅಂದಾಜುಗಳನ್ನು ಒಟ್ಟು 3,74,879 ವ್ಯಕ್ತಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

ವಿವರ

ವ್ಯಕ್ತಿಗಳ ಸಂಖ್ಯೆ

ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಗೊಳಗಾದ ವ್ಯಕ್ತಿಗಳು

2,13,679

ನಗರ ಪ್ರದೇಶದಲ್ಲಿ ಸಮೀಕ್ಷೆಗೊಳಗಾದ ವ್ಯಕ್ತಿಗಳು

1,61,200

 

ಫೆಬ್ರವರಿ 2026 ರ ಮಾಸಿಕ ಬುಲೆಟಿನ್ ಸಚಿವಾಲಯದ ವೆಬ್‌ಸೈಟ್‌ ನಲ್ಲಿ (https://www.mospi.gov.in) ಲಭ್ಯವಿದೆ.

ಸಚಿವಾಲಯದ ಪ್ರಕಟಣೆಗಳು/ವರದಿಗಳನ್ನು ಪಡೆಯಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.

 

 

 


(ಪ್ರಕಟಣೆ ಐ.ಡಿ.: 2240884) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी