ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

ಭಾರತದ ಎ.ಐ. ಇಂಪ್ಯಾಕ್ಟ್ ಶೃಂಗಸಭೆ 2026 ಎ.ಐ. ಯುಗದಲ್ಲಿ ಕೆಲಸದ ಭವಿಷ್ಯವನ್ನು ಚರ್ಚಿಸುತ್ತಿರುವುದರಿಂದ ಕಾರ್ಮಿಕ ಮಾರುಕಟ್ಟೆ ಸ್ಥಿತಿಸ್ಥಾಪಕತ್ವದ/ಪುನಶ್ಚೇತನದ  ಬಗ್ಗೆ ಗಮನ ಹರಿಸಿದೆ


ಭಾರತವು ಅತಿ ಹೆಚ್ಚು ಸಂಸ್ಥೆ ಮಟ್ಟದ ಎ.ಐ.ಅಳವಡಿಕೆಯಾಗಿರುವ ದೇಶಗಳಲ್ಲಿ ಒಂದಾಗಿದೆ: ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ಸದಸ್ಯರಾದ ಶಮಿಕಾ ರವಿ

ಎ.ಐ. ನ ದುಷ್ಪರಿಣಾಮಗಳನ್ನು ವಿಶೇಷವಾಗಿ ಉದ್ಯೋಗ ಮಾರುಕಟ್ಟೆಯ ಮೇಲೆ ಆಗಬಹುದಾದಂತಹವುಗಳನ್ನು ನಿವಾರಿಸಲು ನಮಗೆ ಅಂತರರಾಷ್ಟ್ರೀಯ ಸಮನ್ವಯದ ಅಗತ್ಯವಿದೆ: ಪ್ರಮುಖ ಜಾಗತಿಕ ಎ.ಐ. ತಜ್ಞ ಯೋಶುವಾ ಬೆಂಗಿಯೊ

ಸಂಯೋಜಿತ ಕೌಶಲ್ಯಗಳು, ಸಾಮಾಜಿಕ ರಕ್ಷಣೆ ಮತ್ತು ಆಡಳಿತ ಚೌಕಟ್ಟುಗಳು ಎ.ಐ. ಅಳವಡಿಕೆಯ ಯುಗದಲ್ಲಿ ಕಾರ್ಮಿಕ ಮಾರುಕಟ್ಟೆ ಸ್ಥಿತಿಸ್ಥಾಪಕತ್ವಕ್ಕೆ ಪ್ರಮುಖವಾಗಿವೆ

ಪ್ರಕಟಣಾ ದಿನಾಂಕ: 17 FEB 2026 7:23PM by PIB Bengaluru

ಭಾರತ ಎ.ಐ. ಇಂಪ್ಯಾಕ್ಟ್ ಶೃಂಗಸಭೆ (ಭಾರತ ಕೃತಕ ಬುದ್ಧಿಮತ್ತೆ ಪರಿಣಾಮ ಶೃಂಗಸಭೆ) 2026ರ ಎರಡನೇ ದಿನದಂದು ನಡೆದ "ಎ.ಐ. ಬಳಕೆಯ ಕುರಿತು ಜಾಗತಿಕ ಸಂವಾದ - ಕಾರ್ಮಿಕ ಮಾರುಕಟ್ಟೆ ಸ್ಥಿತಿಸ್ಥಾಪಕತ್ವಕ್ಕಾಗಿ ಡೇಟಾ" ಎಂಬ ಅಧಿವೇಶನವು ಕೃತಕ ಬುದ್ಧಿಮತ್ತೆ ಅಳವಡಿಕೆಯನ್ನು ವೇಗಗೊಳಿಸುವ ಸಂದರ್ಭದಲ್ಲಿ ಕೆಲಸ ಮತ್ತು ಉದ್ಯೋಗ ಸನ್ನಿವೇಶಗಳ ಬದಲಾಗುತ್ತಿರುವ ಸ್ವರೂಪ ಮತ್ತು ಪರಿವರ್ತನೆಯನ್ನು ನಿರ್ವಹಿಸಲು ಅಗತ್ಯವಿರುವ ನೀತಿ ಆಯ್ಕೆಗಳ ಮೇಲೆ ಗಮನ ಕೇಂದ್ರೀಕರಿಸಿತು. ಉದಯೋನ್ಮುಖ ಅಂತರರಾಷ್ಟ್ರೀಯ ಪುರಾವೆಗಳನ್ನು ಆಧರಿಸಿ, ಚರ್ಚೆಯು ವಿವಿಧ ವಯೋಮಾನದ ಗುಂಪುಗಳು, ವಲಯಗಳು ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ವಿಭಿನ್ನ ಪರಿಣಾಮಗಳನ್ನು ಅವಲೋಕಿಸಿತು, ವ್ಯಾಪಕ ಎ.ಐ. ಅಳವಡಿಕೆ ಸಾಧ್ಯತೆಯ ಹುದ್ದೆಗಳಲ್ಲಿ ಕಿರಿಯ ಕಾರ್ಮಿಕರಿಗೆ ಉದ್ಯೋಗದ ಒತ್ತಡ ತರುತ್ತವೆ ಎಂಬುದನ್ನು ಆರಂಭಿಕ ಪ್ರವೃತ್ತಿಗಳು ಸೂಚಿಸುತ್ತವೆ.

ದೇಶಗಳಲ್ಲಿ ಸಮಗ್ರ ಮತ್ತು ಹೋಲಿಸಬಹುದಾದ ದತ್ತಾಂಶದ ಕೊರತೆಯು ಸರ್ಕಾರಗಳು ಸಕಾಲಿಕ ಮತ್ತು ಉದ್ದೇಶಿತ ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸುವ ಸಾಮರ್ಥ್ಯವನ್ನು ನಿರ್ಬಂಧಿಸುತ್ತಲೇ ಇವೆ ಎಂದು ಪ್ಯಾನೆಲಿಸ್ಟ್‌ಗಳು ಒತ್ತಿ ಹೇಳಿದರು. ಪರಿಪೂರ್ಣ ಮಾಹಿತಿಯ ಅನುಪಸ್ಥಿತಿಯಲ್ಲಿಯೂ ಸಹ ಹೊಂದಾಣಿಕೆಯ ನೀತಿ ಚೌಕಟ್ಟುಗಳೊಂದಿಗೆ ಮುಂದುವರಿಯುವುದು, ಸಾಮಾಜಿಕ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ಮರು-ಕೌಶಲ್ಯ ಮಾರ್ಗಗಳನ್ನು ವಿಸ್ತರಿಸುವುದು ಮುಖ್ಯ ಎಂದು ಚರ್ಚೆಯು ಒತ್ತಿಹೇಳಿತು. ಸೇವೆಗಳು, ಕೃಷಿ ಮತ್ತು ಸಾರ್ವಜನಿಕ ವಿತರಣೆಯಂತಹ ಅಂತರರಾಷ್ಟ್ರೀಯ ಸಹಕಾರ ಮತ್ತು ಹಂಚಿಕೆಯ ಕಲಿಕೆಯಿಂದ ಬೆಂಬಲಿತವಾದ ವಲಯಗಳಿಗೆ ಸಂದರ್ಭ-ನಿರ್ದಿಷ್ಟ ತಂತ್ರಗಳ ಅಗತ್ಯವನ್ನು ಎ.ಐ. ಅಳವಡಿಕೆಯ ಸಂದರ್ಭದಲ್ಲಿ ಪರಿಗಣಿಸುವುದರಿಂದ  ಅದು ಸಮಗ್ರ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆ  ಅಧಿವೇಶನ ಚರ್ಚಿಸಿತು.

ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಶ್ರೀಮತಿ ಶಮಿಕಾ ರವಿ ಮಾತನಾಡಿ"ಭಾರತವು ದೃಢವಾದ ಎ.ಐ. ಅಳವಡಿಕೆಯನ್ನು ಅತ್ಯುನ್ನತ ಮಟ್ಟದಲ್ಲಿ ತೋರಿಸುತ್ತಿದೆ, ಇದು ಮುಕ್ತತೆ ಮತ್ತು ಆಶಾವಾದ ಎರಡರಿಂದಲೂ ಗುರುತಿಸಲ್ಪಟ್ಟಿದೆ. ಉತ್ಪಾದಕತೆಯ ಪರಿಣಾಮಗಳನ್ನು ಇನ್ನಷ್ಟೇ ಅಳೆಯಬೇಕಿದ್ದು, ಭಾರತದಲ್ಲಿ ಎ.ಐ.ಯನ್ನು  ದೀರ್ಘಕಾಲದ ಸವಾಲುಗಳಿಗೆ - ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತು ಸೇವೆಗಳ ಕ್ಷೇತ್ರಗಳಲ್ಲಿ - ಅನ್ವಯಿಸುವ ಸಾಧ್ಯತೆಯಿದೆ, ಅಲ್ಲಿ ಕೊನೆಯ ಮೈಲಿವರೆಗಿನ ಸಂಪರ್ಕ ನಿರ್ಬಂಧಗಳು ಸಾಂಪ್ರದಾಯಿಕವಾಗಿ ಸೀಮಿತ ಫಲಿತಾಂಶಗಳನ್ನು ತೋರಿಸುತ್ತವೆ." ಎಂದರು.

ಕೀನ್ಯಾ ಗಣರಾಜ್ಯದ ತಂತ್ರಜ್ಞಾನ ಕ್ಷೇತ್ರದ ವಿಶೇಷ ರಾಯಭಾರಿ ಫಿಲಿಪ್ ಥಿಗೊ, "ಎ.ಐ.-ಚಾಲಿತ ಪರಿವರ್ತನೆಗಳಿಗೆ ತಯಾರಿ ನಡೆಸಲು ಮರುಕೌಶಲ್ಯ ಮತ್ತು ಉನ್ನತೀಕರಣಕ್ಕಿಂತ ಹೆಚ್ಚಿನದು ಅಗತ್ಯವಿದೆ; ಇದು ಬಲವಾದ ಸಾಮಾಜಿಕ ರಕ್ಷಣಾ ವ್ಯವಸ್ಥೆಗಳನ್ನು ಸಹ ಬಯಸುತ್ತದೆ. ಕೀನ್ಯಾದಂತಹ ದೇಶಗಳಲ್ಲಿ, ಕೃಷಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ವಯಸ್ಸಾದ ಕಾರ್ಮಿಕರ ಜೊತೆಗೆ ಅತ್ಯಂತ ಯುವ ಜನಸಂಖ್ಯೆಯೂ ಇರುವುದರಿಂದ ನೀತಿಯು ನಾವೀನ್ಯತೆಯನ್ನು ಬೆಂಬಲಿಸಬೇಕು ಮತ್ತು ಪರಿವರ್ತನೆಯ ಉದ್ದಕ್ಕೂ ತಲೆಮಾರುಗಳಾದ್ಯಂತ ಜನರನ್ನು ರಕ್ಷಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು." ಎಂದು ಹೇಳಿದರು.

"ಉದ್ಯೋಗದ ಮೇಲೆ ಎ.ಐ. ಪ್ರಭಾವದ ಕುರಿತು ನಾವು ಪ್ರಸ್ತುತ ಹೊಂದಿರುವ ಹೆಚ್ಚಿನ ಪುರಾವೆಗಳು ಕೆಲವು ದೇಶಗಳಿಂದ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನಿಂದ ಬಂದಿವೆ" ಎಂದು ಮೈಕ್ರೋಸಾಫ್ಟ್‌ನ ಜವಾಬ್ದಾರಿಯುತ ಎ.ಐ. ಸಾರ್ವಜನಿಕ ನೀತಿಯ ನಿರ್ದೇಶಕರಾದ ಶ್ರೀ ಹೆಕ್ಟರ್ ಡಿ ರೆವೊಯಿರ್ ಹೇಳಿದರು. " ಉದ್ಯೋಗದ ಮೇಲೆ ಎ.ಐ.  ಪ್ರಭಾವದ ಕುರಿತು ನಾವು ಪ್ರಸ್ತುತ ಹೊಂದಿರುವ ಹೆಚ್ಚಿನ ಪುರಾವೆಗಳು ಕೆಲವು ದೇಶಗಳಿಂದ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನಿಂದ ಬಂದಿವೆ. ಉದಯೋನ್ಮುಖ ಆರ್ಥಿಕತೆಗಳು ಸೇರಿದಂತೆ ಇತರ ಹಲವು ಪ್ರದೇಶಗಳಲ್ಲಿ, ದತ್ತಾಂಶವು ಇನ್ನೂ ಅಸ್ತಿತ್ವದಲ್ಲಿಲ್ಲ, ಇದು ದೃಢವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ ಮತ್ತು ಜಾಗತಿಕವಾಗಿ ಅಳವಡಿಕೆ  ಹಾಗು ಉದ್ಯೋಗ ದತ್ತಾಂಶದ ವ್ಯವಸ್ಥಿತ ಸಂಗ್ರಹದ ಅಗತ್ಯವನ್ನು ಒತ್ತಿಹೇಳುತ್ತದೆ." ಎಂದೂ ಅವರು ನುಡಿದರು.

ಮಾಂಟ್ರಿಯಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಪ್ರಮುಖ ಜಾಗತಿಕ ಎ.ಐ. ತಜ್ಞ ಯೋಶುವಾ ಬೆಂಗಿಯೊ ಅವರು ಅಧಿವೇಶನವನ್ನು ಪ್ರಾರಂಭಿಸಿದರು ಮತ್ತು ಕಳೆದ ಐದು ವರ್ಷಗಳಲ್ಲಿ ಉದ್ಯೋಗಗಳ ಮೇಲೆ ಎ.ಐ. ಉಂಟು ಮಾಡಿರುವ ಪ್ರಭಾವದಲ್ಲಿ ನಾವು ನೋಡುತ್ತಿರುವ ಪ್ರವೃತ್ತಿಗಳು ಉದ್ಯೋಗ ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಲೇ ಇರುತ್ತವೆ ಎಂದು ಹೇಳಿದರು. ಎ.ಐ. ಗೆ ಪ್ರವೇಶವು ಒಂದು ಪ್ರಯೋಜನವಾಗಿ ಪರಿಣಮಿಸುತ್ತದೆ, ಆದರೆ ಎ.ಐ. ಗೆ ಪ್ರವೇಶವಿಲ್ಲದ ದೇಶಗಳು ಸ್ಪರ್ಧಾತ್ಮಕ ಅನನುಕೂಲತೆಯನ್ನು ಹೊಂದಿರುತ್ತವೆ. ಆದ್ದರಿಂದ, ಅದರ ದುಷ್ಪರಿಣಾಮಗಳನ್ನು ನಿವಾರಿಸಲು ನಮಗೆ ಅಂತರರಾಷ್ಟ್ರೀಯ ಸಮನ್ವಯದ ಅಗತ್ಯವಿದೆ ಮತ್ತು ಎ.ಐ. ಎಲ್ಲರಿಗೂ ಒಳಿತು ಮಾಡಬಹುದಾದ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡುತ್ತದೆ. ಇದಕ್ಕಾಗಿ ಮೈತ್ರಿಗಳನ್ನು ರೂಪಿಸಬೇಕಾಗಿದೆ ಮತ್ತು ಸಂವಾದಗಳು ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಓಪನ್‌ಎಐನ ಸಂಶೋಧನಾ ವಿಭಾಗದ ಶ್ರೀಮತಿ ಪಮೇಲಾ ಮಿಶ್ಕಿನ್ ಮಾತನಾಡಿ, “ಸ್ಥಿತಿಸ್ಥಾಪಕತ್ವ ಎಂದರೆ ಒಂದೇ ಭವಿಷ್ಯವನ್ನು ಊಹಿಸುವುದಲ್ಲ, ಬದಲಾಗಿ ಬಹು ಸಂಭವನೀಯ ಸನ್ನಿವೇಶಗಳ ಬಗ್ಗೆ ಯೋಜಿಸುವುದರಲ್ಲಿದೆ. ಕಾರ್ಯನಿರ್ವಹಿಸುವ ಮೊದಲು ಪರಿಪೂರ್ಣ ಡೇಟಾ ಬಳಕೆಗಾಗಿ ಕಾಯುವುದು ಎಂದರೆ ವಿಶೇಷವಾಗಿ ಕಷ್ಟಕರವಾದ ಪರಿವರ್ತನೆಗಳ ಮೂಲಕ ಕಾರ್ಮಿಕರನ್ನು ಬೆಂಬಲಿಸುವ ವಿಷಯಕ್ಕೆ ಬಂದಾಗ ಅದು ಅಪಾಯವನ್ನು ತಡವಾಗಿ ಎದುರಿಸುವ ರೀತಿಯಾಗುತ್ತದೆ. ಇಲ್ಲಿ ನೀತಿಯು ದೀರ್ಘಾವಧಿಯ ಫಲಿತಾಂಶಕ್ಕಿಂತ ಹೆಚ್ಚಾಗಿ ಪರಿವರ್ತನೆ ಹೇಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸಬೇಕು. ”ಎಂದರು.

ಸ್ಟ್ಯಾನ್‌ಫೋರ್ಡ್ ಡಿಜಿಟಲ್ ಎಕಾನಮಿ ಲ್ಯಾಬ್‌ನ ಶ್ರೀ ಭರತ್ ಚಂದರ್, “ಸಂಶೋಧನೆಯು ಎ.ಐ. ಸಂಭವನೀಯತೆ ಅಥವಾ ಅದಕ್ಕೆ ತೆರೆದುಕೊಳ್ಳುವಿಕೆ ಮತ್ತು ಎ.ಐ. ಅಳವಡಿಕೆಯ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ತೋರಿಸುತ್ತದೆ. ಎ.ಐ. ಗೆ ಹೆಚ್ಚು ಒಡ್ಡಿಕೊಂಡ ಉದ್ಯೋಗಗಳು ಯುವ ಕಾರ್ಮಿಕರಿಗೆ ಲಭಿಸುವ ಉದ್ಯೋಗದಲ್ಲಿ ಗಮನಾರ್ಹ ಕುಸಿತವನ್ನು ಕಂಡಿವೆ, ಆದರೆ ಸಂಸ್ಥೆಯ ಮಟ್ಟದ ಅಳವಡಿಕೆ ಮಿಶ್ರ ಪರಿಣಾಮಗಳನ್ನು ತೋರಿಸುತ್ತದೆ. ಈ ಅಂತರವು ಕಾರ್ಯನಿರ್ವಾಹಕರ ನಿರೀಕ್ಷೆಗಳು, ಸಂಸ್ಥೆಯ ಮಟ್ಟದ ಎ.ಐ. ಬಳಕೆ ಮತ್ತು ಉತ್ಪಾದಕತೆಯ ಕುರಿತು ಉತ್ತಮ ಡೇಟಾದ ಅಗತ್ಯವನ್ನು ಉಲ್ಲೇಖಿಸುತ್ತದೆ, ಮತ್ತು ಇದು ಎ.ಐ. ನೇಮಕಾತಿ ನಿರ್ಧಾರಗಳನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.” ಎಂದರು.

ಎ.ಐ. ಯುಗದಲ್ಲಿ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ತಂತ್ರಜ್ಞಾನ ಅಳವಡಿಕೆ, ಪೂರ್ವಭಾವಿ ಆಡಳಿತ ಮತ್ತು ಕೌಶಲ್ಯ, ಸಾಮಾಜಿಕ ರಕ್ಷಣೆ ಮತ್ತು ಸಾಂಸ್ಥಿಕ ಸಾಮರ್ಥ್ಯದಲ್ಲಿ ಸಂಘಟಿತ ಹೂಡಿಕೆಗಳ ಅಗತ್ಯವಿರುತ್ತದೆ, ಇದರಿಂದಾಗಿ ಉತ್ಪಾದಕತೆಯ ಲಾಭಗಳು ವಿಶಾಲ ವ್ಯಾಪ್ತಿಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂಬುದನ್ನು ಅಧಿವೇಶನವು ಉಲ್ಲೇಖಿಸಿದೆ.

 

*****


(ಪ್ರಕಟಣೆ ಐ.ಡಿ.: 2229849) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu