ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
azadi ka amrit mahotsav

ಮಹಿಳಾ ಕೇಂದ್ರಿತ ಕೌಶಲ್ಯ ಪರಿಸರ ವ್ಯವಸ್ಥೆ ಬಲಪಡಿಸಲು ಎಂಎಸ್‌ಡಿಇ ಮತ್ತು ಐಪಿಇ ಗ್ಲೋಬಲ್ ಲಿಮಿಟೆಡ್ ಸಹಯೋಗ

ಪ್ರಕಟಣಾ ದಿನಾಂಕ: 04 FEB 2026 7:52PM by PIB Bengaluru

ಕೌಶಲ್ಯ ಸಬಲೀಕರಣದ ಮೂಲಕ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ, ಭಾರತದಾದ್ಯಂತ ಯುವತಿಯರಿಗೆ ಲಿಂಗ- ಸಂವೇದನಾಶೀಲ ಮತ್ತು ಭವಿಷ್ಯ ಸಿದ್ಧ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಇಂದು ಐಪಿಇ ಗ್ಲೋಬಲ್ ಲಿಮಿಟೆಡ್ ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ಕಾರ್ಯಕ್ರಮ ವಿನ್ಯಾಸವನ್ನು ವರ್ಧಿಸುವ, ಮಹತ್ವಾಕಾಂಕ್ಷೆಯ ಉದ್ಯೋಗ ಪಾತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಹಾಗೂ ಕೌಶಲ್ಯ, ಉದ್ಯೋಗಾವಕಾಶ ಮತ್ತು ಒಳಗೊಂಡ ಆರ್ಥಿಕ ಬೆಳವಣಿಗೆಯ ನಡುವೆ ಸದೃಢ ಸಂಪರ್ಕವನ್ನು ಸಾಧ್ಯವಾಗಿಸುವ ಗುರಿಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ದೇಬಶ್ರೀ ಮುಖರ್ಜಿ ಅವರು, "ಭಾರತದ ಎಲ್ಲವನ್ನೊಳಗೊಂಡ ಬೆಳವಣಿಗೆ ಮತ್ತು ಕಾರ್ಯಪಡೆಯ ಪರಿವರ್ತನೆಗೆ ಮಹಿಳಾ ಕೌಶಲ್ಯ ಪ್ರಧಾನವಾಗಿದೆ. ಐಪಿಇ ಗ್ಲೋಬಲ್ ನೊಂದಿಗಿನ ಈ ಪಾಲುದಾರಿಕೆಯು, ವಿಶೇಷವಾಗಿ ಸೌಲಭ್ಯ ವಂಚಿತ ಪ್ರದೇಶಗಳ ಯುವತಿಯರು ಮಹತ್ವಾಕಾಂಕ್ಷೆಯ ಅವಕಾಶಗಳು, ಘನತೆಯುತ ಉದ್ಯೋಗ ಮಾರ್ಗಗಳು ಮತ್ತು ಬದಲಾಗುತ್ತಿರುವ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಬೆಂಬಲ ವ್ಯವಸ್ಥೆಗಾಗಿ ಅಗತ್ಯ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ.

A group of people standing in front of a tableAI-generated content may be incorrect.

ಈ ಪಾಲುದಾರಿಕೆಯು ಕೌಶಲ್ಯ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಪುರಾವೆ ಆಧಾರಿತ, ಲಿಂಗ-ಪ್ರತಿಕ್ರಿಯಾತ್ಮಕ ಮಧ್ಯಸ್ಥಿಕೆಗಳ ಮೂಲಕ ಭಾರತದ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಿದೆ. ಈ ಸಹಯೋಗವು ರಚನಾತ್ಮಕ ಅಡೆತಡೆಗಳನ್ನು ಪರಿಹರಿಸಲು, ಉದ್ಯಮದ ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡಲು ಮತ್ತು ಖಾಸಗಿ ವಲಯದ ತೊಡಗಿಸಿಕೊಳ್ಳುವಿಕೆಯ ಮೂಲಕ ಉದ್ಯೋಗ ಮಾರ್ಗಗಳನ್ನು ಬಲಪಡಿಸಲು ಗಮನ ಹರಿಸಲಿದೆ.

ಈ ಪಾಲುದಾರಿಕೆಯು ಕೌಶಲ್ಯ ಮತ್ತು ಔಪಚಾರಿಕ ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಉತ್ತೇಜಿಸಲು ಬಹುಭಾಷಾ ರಾಷ್ಟ್ರೀಯ ಜಾಗೃತಿ ಅಭಿಯಾನ, ಲಿಂಗ ಭೇದವಿಲ್ಲದ ನೇಮಕಾತಿ ಬದ್ಧತೆಗಳ ಮೂಲಕ ಉದ್ಯೋಗದಾತರ ತೊಡಗಿಸಿಕೊಳ್ಳುವಿಕೆಯ ವರ್ಧನೆ ಮತ್ತು ದತ್ತಾಂಶ-ಚಾಲಿತ ಆಡಳಿತವನ್ನು ಬೆಂಬಲಿಸಲು ಮೇಲ್ವಿಚಾರಣಾ ವ್ಯವಸ್ಥೆಯ ಬಲವರ್ಧನೆಯನ್ನು ಒಳಗೊಂಡಿದೆ. ಈ ಉಪಕ್ರಮವು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ MSDE ಯ ವಿಶೇಷ ಕೌಶಲ್ಯ ಪ್ರಯತ್ನಗಳನ್ನು ಬಲಪಡಿಸುತ್ತಾ, ಹೆಚ್ಚು ಒಳಗೊಂಡ, ಫಲಿತಾಂಶ-ಆಧಾರಿತ ಮತ್ತು ಭವಿಷ್ಯ-ಸಿದ್ಧ ಕೌಶಲ್ಯ ಮಾದರಿಗಳಿಗೆ ಕೊಡುಗೆ ನೀಡಲಿದೆ.

 

******


(ಪ್ರಕಟಣೆ ಐ.ಡಿ.: 2223519) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी