ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತೀಯ ಅಂಚೆ ಇಲಾಖೆಯ ಬೆಳವಣಿಗೆ ಮತ್ತು ಪರಿವರ್ತನೆಯನ್ನು ತ್ವರಿತಗೊಳಿಸಲು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಶ್ರೀ. ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ Q3 ವ್ಯವಹಾರ ಪರಾಮರ್ಶಾ ಸಭೆ

प्रविष्टि तिथि: 22 JAN 2026 5:00PM by PIB Bengaluru

ಅಂಚೆ ಇಲಾಖೆಯು 2025–26ನೇ ಹಣಕಾಸು ವರ್ಷದ ತ್ರೈಮಾಸಿಕ 3 (Q3)ರ ತನ್ನ ತ್ರೈಮಾಸಿಕ ವ್ಯವಹಾರ ಪರಿಶೀಲನಾ ಸಭೆಯನ್ನು ಇಂದು ಹೊಸದಿಲ್ಲಿಯಲ್ಲಿ ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದರ ಅಧ್ಯಕ್ಷತೆಯಲ್ಲಿ ಆಯೋಜಿಸಿತ್ತು. ಪ್ರಮುಖ ವ್ಯವಹಾರ ಕ್ಷೇತ್ರಗಳಾದ್ಯಂತ ಕಾರ್ಯಕ್ಷಮತೆಯನ್ನು ಪರಾಮರ್ಶೆ ಮಾಡಲು ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ಅಗತ್ಯವಾದ ಸರಿಪಡಿಸುವ ಕ್ರಮಗಳನ್ನು ಗುರುತಿಸಲು ದೇಶಾದ್ಯಂತದ ಹಿರಿಯ ಅಧಿಕಾರಿಗಳು ಮತ್ತು ವಲಯಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಮೊದಲಿಗೆ, ಕೇಂದ್ರ ಸಚಿವರಾದರು, 2025–26ನೇ ಹಣಕಾಸು ವರ್ಷಕ್ಕೆ ಭಾರತ ಅಂಚೆ ₹17,546 ಕೋಟಿಗಳ ಮಹತ್ವಾಕಾಂಕ್ಷೆಯ ಆದಾಯದ ಗುರಿಯನ್ನು ನಿಗದಿಪಡಿಸಿದೆ ಎಂದು ಹೇಳಿದರು, ಇದು ಹಿಂದಿನ ವರ್ಷಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಈಗಾಗಲೇ ₹10,155 ಕೋಟಿಗಳನ್ನು ಸಾಧಿಸಿರುವ ಭಾರತೀಯ ಅಂಚೆ ಗುರಿಯನ್ನು ಸಾಧಿಸುವತ್ತ ಬಲವಾದ ಹಾದಿಯಲ್ಲಿದೆ ಎಂಬುದನ್ನು ಅವರು ಗಮನಿಸಿದರು. ಈ ಪ್ರಗತಿಯು ಇ-ಕಾಮರ್ಸ್, ಸಂಯೋಜಿತ ಪೂರೈಕೆ ಸರಪಳಿಗಳು ಮತ್ತು ನಾಗರಿಕ-ಕೇಂದ್ರಿತ ಸೇವಾ ವಿತರಣೆಯ ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಪಾರ್ಸೆಲ್ ಮತ್ತು ಲಾಜಿಸ್ಟಿಕ್ಸ್-ಚಾಲಿತ ಸಂಸ್ಥೆಯಾಗುವತ್ತ ಭಾರತೀಯ ಅಂಚೆಯ ವ್ಯೂಹಾತ್ಮಕ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

2025-26 ರ ತ್ರೈಮಾಸಿಕ-3 ವಿಮರ್ಶೆಯ ವ್ಯಾಪಾರ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಮತ್ತು ಕಾರ್ಯದರ್ಶಿ ಶ್ರೀಮತಿ ವಂದಿತಾ ಕೌಲ್ ಅವರನ್ನು ನೇಮಿಸಲಾಗಿದೆ.

ಮೂರನೇ ತ್ರೈಮಾಸಿಕದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ಕೇಂದ್ರ ಸಚಿವರಾದರು, ಒಟ್ಟಾರೆ ಬೆಳವಣಿಗೆಯ ಪ್ರವೃತ್ತಿಗಳು ಸಕಾರಾತ್ಮಕವಾಗಿದ್ದರೂ, ಪ್ರಮುಖ ವರ್ಟಿಕಲ್‌ಗಳು - ವಿಶೇಷವಾಗಿ ಪಾರ್ಸೆಲ್‌ಗಳು, ಅಂಚೆ ಮತ್ತು ಅಂತರರಾಷ್ಟ್ರೀಯ ಅಂಚೆ – ವಿಭಾಗಗಳಲ್ಲಿ ಸಾಧನೆ ತೃಪ್ತಿಕರವಾಗಿಲ್ಲ ಎಂದು ಗಮನಿಸಿದರು. ಇಂಡಿಯಾ ಪೋಸ್ಟ್‌ನ ಭವಿಷ್ಯದ ಬೆಳವಣಿಗೆಯು ಅದರ ಪ್ರಮುಖ ಲಾಜಿಸ್ಟಿಕ್ಸ್ ಎಂಜಿನ್‌ನ ಬಲವನ್ನು ನಿರ್ಣಾಯಕವಾಗಿ ಅವಲಂಬಿಸಿದೆ ಎಂದು ಒತ್ತಿ ಹೇಳಿದ ಕೇಂದ್ರ ಸಚಿವರಾದರು, ಪಾರ್ಸೆಲ್‌ಗಳು ಮತ್ತು ಅಂಚೆಗಳ ಕ್ಷೇತ್ರಗಳಲ್ಲಿ "ಸಾಧ್ಯವಿರುವ ಎಲ್ಲಾ ಶಕ್ತಿ ಸಾಮರ್ಥ್ಯಗಳೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುವಂತಾಗಬೇಕು" ಎಂದು ಒತ್ತಿ ಹೇಳಿದರು. ಇಂಡಿಯಾ ಪೋಸ್ಟ್‌ನ ಸಂಭಾವ್ಯ ವ್ಯವಹಾರ ಸಾಮರ್ಥ್ಯದ ಸುಮಾರು 60 ಪ್ರತಿಶತವನ್ನು ಹೊಂದಿರುವ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ದಿಲ್ಲಿಯಂತಹ ಪ್ರಮುಖ ವಲಯಗಳಲ್ಲಿ ತುರ್ತಾಗಿ ಉತ್ತಮ ಅಭ್ಯಾಸಗಳನ್ನು ಪುನರಾವರ್ತಿಸುವಂತೆ ಅವರು ನಿರ್ದೇಶಿಸಿದರು.

ವೃತ್ತವಾರು ಕಾರ್ಯಕ್ಷಮತೆಯನ್ನು ವಿವರವಾಗಿ ಪರಿಶೀಲಿಸಲಾಯಿತು. ರಾಜಸ್ಥಾನವು ಒಟ್ಟಾರೆಯಾಗಿ ಅತ್ಯುತ್ತಮ ಸಾಧನೆ ತೋರಿದ ವಲಯವಾಗಿ ಹೊರಹೊಮ್ಮಿತು, ಅದು ಮೂರನೇ ತ್ರೈಮಾಸಿಕಕ್ಕೆ ನಿಗದಿ ಮಾಡಿದ (Q3) ಗುರಿಗಳಲ್ಲಿ 82 ಪ್ರತಿಶತವನ್ನು ಸಾಧಿಸಿದೆ. ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ವಿಭಾಗದಲ್ಲಿ, ಕರ್ನಾಟಕವು ತ್ರೈಮಾಸಿಕಕ್ಕೆ ನಿಗದಿ ಮಾಡಿದ (Q3) ಗುರಿಗಳಲ್ಲಿ. 112 ಪ್ರತಿಶತವನ್ನು ಸಾಧಿಸಿದೆ. ನಾಗರಿಕ ಕೇಂದ್ರಿತ ಸೇವೆಗಳಲ್ಲಿ (ಸಿ.ಸಿ.ಎಸ್.) ದಿಲ್ಲಿ (240 ಪ್ರತಿಶತ), ನಂತರ ಮಹಾರಾಷ್ಟ್ರ (166 ಪ್ರತಿಶತ) ಮತ್ತು ರಾಜಸ್ಥಾನ (165 ಪ್ರತಿಶತ) ಅಸಾಧಾರಣ ಕಾರ್ಯಕ್ಷಮತೆಯನ್ನು ದಾಖಲಿಸಿವೆ. ಅಂಚೆ ಜೀವ ವಿಮೆಯಲ್ಲಿ, ಉತ್ತರ ಪ್ರದೇಶವು 129 ಪ್ರತಿಶತ ಸಾಧನೆಯೊಂದಿಗೆ ಅಗ್ರ ಸಾಧನೆಯ ರಾಜ್ಯವಾಗಿ ಹೊರಹೊಮ್ಮಿದೆ. ಅಂಚೆ ಕಾರ್ಯಾಚರಣೆಗಳಲ್ಲಿ, ರಾಜಸ್ಥಾನವು ಶೇಕಡಾ 153 ರಷ್ಟು ಸಾಧನೆ ದಾಖಲಿಸಿದೆ.

ಆರು ವಲಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದ ಕೇಂದ್ರ ಸಂವಹನ ಸಚಿವರಾದರು, 2024-25ರ ಮೂರನೇ ತ್ರೈಮಾಸಿಕದಲ್ಲಿ 95% ರಷ್ಟು ಅಸಾಧಾರಣ ಬೆಳವಣಿಗೆಯನ್ನು ತೋರಿಸಿರುವ ನಾಗರಿಕ ಕೇಂದ್ರಿತ ಸೇವೆಗಳ ವಿಭಾಗದ ಅಸಾಧಾರಣ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. 12% ಬೆಳವಣಿಗೆಯೊಂದಿಗೆ ಪಾರ್ಸೆಲ್, 11% ಬೆಳವಣಿಗೆಯೊಂದಿಗೆ ಅಂಚೆ ಜೀವ ವಿಮಾ ವಲಯ ಮತ್ತು 07% ಬೆಳವಣಿಗೆಯೊಂದಿಗೆ ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಇತರ ವಿಭಾಗಗಳಾಗಿವೆ. ಎಲ್ಲಾ ವಲಯಗಳ ಮುಖ್ಯಸ್ಥರು ವಿವಿಧ ವಲಯಗಳಿಗೆ ಭೇಟಿ ನೀಡಿ ತಮ್ಮ ವಲಯದ ಕಾರ್ಯಕ್ಷಮತೆಯನ್ನು ತಳಮಟ್ಟದಲ್ಲಿ ವಿಶ್ಲೇಷಿಸುವಂತೆ ಸಚಿವರಾದರು ಸೂಚಿಸಿದರು.

ಅಂಚೆ ಸೇವೆಗಳ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ವೃತ್ತಗಳ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್‌ಗಳು

ವ್ಯೂಹಾತ್ಮಕ  ಉಪಕ್ರಮಗಳನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವರಾದರು, ಅಮೆಜಾನ್ ಮತ್ತು ಶಿಪ್‌ರಾಕೆಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಒಪ್ಪಂದಗಳ ಮೂಲಕ ಇಂಡಿಯಾ ಪೋಸ್ಟ್ ತನ್ನ ಪಾರ್ಸೆಲ್ ವ್ಯವಹಾರವನ್ನು ಬಲಪಡಿಸುತ್ತಿರುವುದನ್ನು ಗಮನಿಸಿದರು. ಕೀಟನಾಶಕ ಪರಿಶೀಲನೆಗಾಗಿ ಕೃಷಿ ಸಚಿವಾಲಯದೊಂದಿಗೆ ತಿಳುವಳಿಕಾ ಒಡಂಬಡಿಕೆ ಮತ್ತು ಸ್ವಸಹಾಯ ಗುಂಪುಗಳನ್ನು ಒಳಗೊಳಿಸಿಕೊಳ್ಳುವ ಬಗ್ಗೆ  ಗ್ರಾಮೀಣಾಭಿವೃದ್ಧಿ ಸಚಿವಾಲಯ ಸೇರಿದಂತೆ ಸರ್ಕಾರದಿಂದ ಸರ್ಕಾರಕ್ಕೆ ಸೇವೆಗಳ ವಿಸ್ತರಣೆಯ ಬಗ್ಗೆಯೂ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಹಣಕಾಸಿನ ಸೇರ್ಪಡೆಯ ಕುರಿತು, ಎ.ಎಂ.ಎಫ್.ಐ, ಬಿ.ಎಸ್.ಇ., ಮತ್ತು ಎಸ್.ಎಸ್.ಇ. (AMFI, BSE , NSE) ಜೊತೆಗಿನ ಪಾಲುದಾರಿಕೆಗಳನ್ನು ಬಲಪಡಿಸಲಾಗಿದ್ದು, ಇದು ಕೊನೆಯ ಹಂತದವರೆಗಿನ ವಿಶೇಷವಾಗಿ ಗ್ರಾಮೀಣ ಮತ್ತು ಸೇವಾ ಸೌಲಭ್ಯ ಕಡಿಮೆ ಇರುವ  ಪ್ರದೇಶಗಳಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಇಂಡಿಯಾ ಪೋಸ್ಟ್‌ನ ಪಾತ್ರವನ್ನು ಬಲಪಡಿಸಿದೆ,

ಮುಂದಿನ ದಾರಿಯ ಬಗ್ಗೆ ಒತ್ತಿ ಹೇಳುತ್ತಾ, ಕೇಂದ್ರ ಸಚಿವರಾದರು ಪಂಜಾಬ್, ದಿಲ್ಲಿ, ರಾಜಸ್ಥಾನ ಮತ್ತು ತೆಲಂಗಾಣದಂತಹ ಪ್ರಮುಖ ಸಾಧಕ ಪ್ರದೇಶಗಳಿಂದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ತಕ್ಷಣದ ಕಲಿಕೆ ಮತ್ತು ಮಾನದಂಡಗಳನ್ನು ಅನುಸರಿಸುವಂತೆ ನಿರ್ದೇಶಿಸಿದರು. ಪಾರ್ಸೆಲ್‌ಗಳು, ಅಂಚೆ, ಸಿಸಿಎಸ್ ಮತ್ತು ಪಿಎಲ್‌ಐ/ಆರ್‌ಪಿಎಲ್‌ಐ ಕುರಿತು ಆಯ್ದ ವಲಯಗಳಿಂದ ಕೇಂದ್ರೀಕೃತ ಪ್ರಸ್ತುತಿಗಳಿಗೆ ಅವರು ಕರೆ ನೀಡಿದರು, ಅಳೆಯಬಹುದಾದ ಫಲಿತಾಂಶಗಳೊಂದಿಗೆ ಸ್ಪಷ್ಟ ಹೊಣೆಗಾರಿಕೆ/ಉತ್ತರದಾಯಿತ್ವ, ಕಾರ್ಯಕ್ಷಮತೆ ತೋರದಿದ್ದರೆ ಅದರ ಬಗ್ಗೆ  ಶೂನ್ಯ ಸಹಿಷ್ಣುತೆ ಮತ್ತು ಎಲ್ಲಾ ವಲಯಗಳಿಂದ ಸಮತೋಲಿತ ಕೊಡುಗೆಯ ಅಗತ್ಯವನ್ನು ಒತ್ತಿ ಹೇಳಿದರು.

ಭಾರತೀಯ ಅಂಚೆ 2025–26ರ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ₹10,155 ಕೋಟಿ ಗುರಿ ಸಾಧಿಸಿದೆ ಎಂದು ಕೇಂದ್ರ ಸಚಿವರಾದರು ಗಮನಿಸಿದರು, ಕಳೆದ ವರ್ಷ ಇದೇ ಅವಧಿಯ ₹9,385 ಕೋಟಿಗೆ ಹೋಲಿಸಿದರೆ, ಇದು ಮೂರನೇ ತ್ರೈಮಾಸಿಕದವರೆಗೆ ವರ್ಷದಿಂದ ವರ್ಷಕ್ಕೆ ಶೇ 8.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ವೇಗವರ್ಧಿತ ಆದಾಯ ಬೆಳವಣಿಗೆ ಮತ್ತು ದಕ್ಷತೆಯ ಸುಧಾರಣೆಗಳ ಮೂಲಕ ಮುಂದಿನ 4–5 ವರ್ಷಗಳಲ್ಲಿ ಲಾಭ ಗಳಿಕೆಯ ಸಂಸ್ಥೆಯಾಗುವ ಉದ್ದೇಶವನ್ನು ಅವರು ಪುನರುಚ್ಚರಿಸಿದರು.

ನಾಲ್ಕನೇ ತ್ರೈಮಾಸಿಕದ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುತ್ತಾ, ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸುಮಾರು ₹4,500 ಕೋಟಿ ಕೊಡುಗೆ ನೀಡಲಾಗಿದೆ ಎಂದು ಕೇಂದ್ರ ಸಚಿವರಾದರು ಹೇಳಿದರು ಮತ್ತು ಇದೇ ರೀತಿಯ ಏರಿಕೆಯು 2025–26ರ ಹಣಕಾಸು ವರ್ಷದಲ್ಲಿ ಭಾರತ ಅಂಚೆ ತನ್ನ ಮಹತ್ವಾಕಾಂಕ್ಷೆಯ ₹17,546 ಕೋಟಿ ಆದಾಯದ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಾರ್ಸೆಲ್‌ಗಳು ಮತ್ತು ಅಂಚೆ ಬಲವಾದ ಬೆಳವಣಿಗೆಯ ಎಂಜಿನ್‌ಗಳಾಗಿ ಹೊರಹೊಮ್ಮಿದರೆ ಎಲ್ಲಾ ವಲಯಗಳು ಸಮತೋಲಿತ ಕಾರ್ಯಕ್ಷಮತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ಪ್ರಗತಿ ಪರಿಶೀಲನೆಯನ್ನು ಮುಕ್ತಾಯಗೊಳಿಸುತ್ತಾ, ದೇಶಾದ್ಯಂತ ಭಾರತೀಯ ಅಂಚೆ ನೌಕರರ ಸಮರ್ಪಿತ ಪ್ರಯತ್ನಗಳನ್ನು ಕೇಂದ್ರ ಸಚಿವರಾದರು ಶ್ಲಾಘಿಸಿದರು ಮತ್ತು "ಡಾಕ್ ಸೇವಾ, ಜನ ಸೇವಾ" ನೀತಿಯಿಂದ ಮಾರ್ಗದರ್ಶಿಸಲ್ಪಟ್ಟ ನಾಗರಿಕ-ಕೇಂದ್ರಿತ ಸೇವಾ ವಿತರಣೆಗೆ ಸಂಸ್ಥೆಯ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು. ವಿಕ್ಷಿತ್ ಭಾರತದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಆಧುನಿಕ, ಸ್ಪರ್ಧಾತ್ಮಕ ಮತ್ತು ಗ್ರಾಹಕ-ಕೇಂದ್ರಿತ ಲಾಜಿಸ್ಟಿಕ್ಸ್ ಮತ್ತು ಸೇವಾ ಸಂಸ್ಥೆಯಾಗಿ ಇಂಡಿಯಾ ಪೋಸ್ಟ್ ರೂಪಾಂತರಗೊಳ್ಳುವುದನ್ನು ತ್ವರಿತಗೊಳಿಸಲು ಶಿಸ್ತುಬದ್ಧ ಅನುಷ್ಠಾನ, ಕಲಿಕೆ ಮತ್ತು ಪರಿಣಾಮಕಾರಿ ನಾಯಕತ್ವದ ಅಗತ್ಯವನ್ನು ಅವರು ಒತ್ತಿ ಹೇಳಿದರು. 2025–26ರ ಹಣಕಾಸು ವರ್ಷದ ಅಂತ್ಯವನ್ನು ಗುರುತಿಸುವ ನಾಲ್ಕನೇ ತ್ರೈಮಾಸಿಕ ಪರಿಶೀಲನೆಯನ್ನು ಏಪ್ರಿಲ್‌ನಲ್ಲಿ ನಿಗದಿಪಡಿಸಲಾಗಿದೆ.

 

*****


(रिलीज़ आईडी: 2217500) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी