ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ತಮಿಳುನಾಡಿನಿಂದ ಕಾಶಿ ವರೆಗೆ, ಯುವಕರು ಪ್ರಯಾಣವನ್ನು 'ಸಾಂಸ್ಕೃತಿಕ ಸಂತಸದ ಪ್ರವಾಸ'ವನ್ನಾಗಿ ಪರಿವರ್ತಿಸಿದರು : “ಕೆಟಿಎಸ್ 4.0 ರ ಸಾಂಸ್ಕೃತಿಕ ರಥವನ್ನು ಕೊಂಡೊಯ್ದಿ ಯುವ ಜನಾಂಗ(ಜೆನ್.ಝೀ) ” 


ಬೀದಿ ನಾಟಕಗಳಿಂದ ರೀಲ್ ತಯಾರಿಕೆಯವರೆಗೆ — ಕಾಶಿ ತಮಿಳು ಸಂಗಮದ ಹೊಸ ಮುಖವಾಗಿ “ಜೆನ್.ಝೀ” ಹೊರಹೊಮ್ಮುತ್ತದೆ

प्रविष्टि तिथि: 30 NOV 2025 6:06PM by PIB Bengaluru

ಡಿಸೆಂಬರ್ 2 ರಿಂದ ಪ್ರಾರಂಭವಾಗುವ ಕಾಶಿ ತಮಿಳು ಸಂಗಮ 4.0 ಗಾಗಿ ಜೆನ್.ಝೀ  ಸಜ್ಜಾಗುತ್ತಿರುವಾಗ ಉತ್ಸಾಹದ ಬಲವಾದ ಅಲೆಯು ವ್ಯಾಪಿಸುತ್ತಿದೆ. ಕಾಶಿ ಮತ್ತು ತಮಿಳುನಾಡು ನಡುವಿನ ಪ್ರಾಚೀನ ಸಾಂಸ್ಕೃತಿಕ ಮತ್ತು ಭಾಷಾ ಸಂಬಂಧಗಳನ್ನು ಯುವ ಪೀಳಿಗೆಯ ವೈವಿದ್ಯಮಯ ಶಕ್ತಿಯೊಂದಿಗೆ ಸಂಪರ್ಕಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ನವೆಂಬರ್ 29 ರಂದು ಕನ್ಯಾಕುಮಾರಿಯಿಂದ ವಿಶೇಷ ರೈಲಿನ ಮೂಲಕ ಪ್ರಯಾಣವನ್ನು ಪ್ರಾರಂಭಿಸಿದ ಯುವ ಜನತೆಯ ಮೊದಲ ನಿಯೋಗದಲ್ಲಿ ಹೆಚ್ಚಿನ ಸಂಖ್ಯೆಯ “ಜೆನ್.ಝೀ ವಿದ್ಯಾರ್ಥಿ”ಗಳು ಸೇರಿದ್ದಾರೆ. ದೀರ್ಘ ರೈಲು ಪ್ರಯಾಣವು ಆಟಗಳು, ಗುಂಪು ಚಟುವಟಿಕೆಗಳು, ಉತ್ಸಾಹಭರಿತ ಸಂಭಾಷಣೆಗಳು ಮತ್ತು ಸೃಜನಶೀಲ ಸಹಯೋಗಗಳಿಂದ ತುಂಬಿದ ಸಾಂಸ್ಕೃತಿಕ ಸಂತೋಷದ ಸವಾರಿಯಾಗಿ ಮಾರ್ಪಟ್ಟಿದೆ - ಇದು ಅನುಭವವನ್ನು ಯುವ ಜನತೆಗೆ ಸ್ಮರಣೀಯ ಮತ್ತು ಅರ್ಥಪೂರ್ಣವಾಗಿಸುತ್ತದೆ.

ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿರುವ ತಮಿಳುನಾಡಿನ ಕು.ಅರ್ಚನಾ ಅವರು, ಕಾಶಿ ತಮಿಳು ಸಂಗಮಮ್ 4.0 ಗೆ ಹಾಜರಾಗುವ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡರು. “ಮನೆಗೆ ಹಿಂದಿರುಗುವಾಗ ದೇವಾಲಯಗಳಿಗೆ ಭೇಟಿ ನೀಡುವ ಅವಕಾಶ ಅಪರೂಪವಾಗಿ ಸಿಗುತ್ತದೆ ಮತ್ತು ಆದ್ದರಿಂದ ಈ ಅವಕಾಶವನ್ನು ದೈವಿಕ ಆಶೀರ್ವಾದವೆಂದು ನೋಡುತ್ತೇನೆ” ಎಂದು ಅವರು ಹೇಳಿದರು. ಕಾಶಿಯ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮೊದಲ ಬಾರಿಗೆ ಅನುಭವಿಸಲು ಅವರು ಕಾಶಿಯ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸಲು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಯು.ಪಿ.ಎಸ್.ಸಿ.ಗೆ ತಯಾರಿ ನಡೆಸುತ್ತಿರುವ ತಿರುಪ್ಪೂರಿನ ಕು.ಮಾಲತಿ ಎಂಬ ಮತ್ತೊಬ್ಬ ವಿದ್ಯಾರ್ಥಿನಿ, ತಮಿಳುನಾಡು ಮತ್ತು ಕಾಶಿ ನಡುವೆ ಇರುವ ಆಳವಾದ ಆಧ್ಯಾತ್ಮಿಕ ಬಾಂಧವ್ಯವನ್ನು ಸಂತೋಷದಿಂದ ಹಂಚಿಕೊಳ್ಳುತ್ತಾರೆ. “ಇದನ್ನು ಮಾಣಿಕ್ಯವಾಸಗರ್ ನಂತಹ ಸಂತರು ಶತಮಾನಗಳ ಹಿಂದೆ ಹಾಗೂ ಆನಂತರ ಹಲವು ಶತಮಾನಗಳಿಂದಲೂ ಸಾಂಪ್ರದಾಯಿಕವಾಗಿ ಹಿರಿಯರು ಆಚರಿಸುತ್ತಾ ಬಂದಿದ್ದಾರೆ” ಎಂದು  ಅವರು ಹೇಳಿದರು. “ಕಾಶಿ ತಮಿಳು ಸಂಗಮವು ಆ ಬಂಧವನ್ನು ಆಧುನಿಕ, ಕ್ರಿಯಾತ್ಮಕ ಸ್ವರೂಪದಲ್ಲಿ ಬಲಪಡಿಸುತ್ತಿದೆ ಮತ್ತು ಕಾಶಿಗೆ ಭೇಟಿ ನೀಡುವುದು ಅವರಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಅವರು ವಿವರಿಸಿದರು.

ಏತನ್ಮಧ್ಯೆ, ಕಾಶಿಯಲ್ಲಿ, ಘಾಟ್ ಗಳು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್ ಗಳಲ್ಲಿ ನಡೆಯುತ್ತಿರುವ ಪೂರ್ವ-ಈವೆಂಟ್ ಚಟುವಟಿಕೆಗಳು ಜೆನ್.ಝೀ ನ ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ ಜೀವಂತವಾಗಿವೆ. ರನ್ ಫಾರ್ ಕೆಟಿಎಸ್ 4.0 ನಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯ ಯುವಕರನ್ನು ಆಕರ್ಷಿಸಿದವು, ಅವರು ಫಿಟ್ನೆಸ್ ಅನ್ನು ಉತ್ತೇಜಿಸುವುದಲ್ಲದೆ, ಮುಂಬರುವ ಸಾಂಸ್ಕೃತಿಕ ಉತ್ಸವದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಿದರು.

ವಿಶ್ವನಾಥ ದೇವಾಲಯ ಪ್ರದೇಶ ಮತ್ತು ವಿವಿಧ ಘಾಟ್ ಗಳ ಸುತ್ತಲೂ ಪ್ರದರ್ಶಿಸಲಾದ ಬೀದಿ ನಾಟಕಗಳು ಜೆನ್.ಝೀ ನ ಸೃಜನಶೀಲ ಅಭಿವ್ಯಕ್ತಿಯನ್ನು ಪ್ರದರ್ಶಿಸಿದವು. ಕಾಶಿ ಮತ್ತು ತಮಿಳುನಾಡಿನ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕವನ್ನು ಹೊಸ, ಕಲಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸಿದವು. ಯುವ ಸೃಷ್ಟಿಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯಕ್ರಮದ ನೋಟವನ್ನು ಹಂಚಿಕೊಂಡಿದ್ದರಿಂದ ರೀಲ್ ತಯಾರಿಕೆ ಸ್ಪರ್ಧೆಗಳು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿವೆ - ಇದು ದೇಶಾದ್ಯಂತ ಯುವಕರಲ್ಲಿ ಕುತೂಹಲ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹುಟ್ಟುಹಾಕಿದೆ.

ಈ ವರ್ಷದ ಕಾಶಿ ತಮಿಳು ಸಂಗಮಮ್ 4.0 ಇದರ ಪರಿಕಲ್ಪನೆ - "ತಮಿಳು ಕಲಿಯಿರಿ - ತಮಿಳು ಕರ್ಕಳಂ", ಇದು ಭಾಷೆ ಮತ್ತು ಸಂಸ್ಕೃತಿಯನ್ನು ಜನರಿಗೆ ಹತ್ತಿರ ತರುವ ಗುರಿಯನ್ನು ಹೊಂದಿದೆ. ಜೆನ್.ಝೀ ನ ಸಕ್ರಿಯ ಭಾಗವಹಿಸುವಿಕೆ ಈ ಪರಿಕಲ್ಪನೆಯನ್ನು ಇನ್ನಷ್ಟು ಪ್ರಸ್ತುತ ಮತ್ತು ಪ್ರಭಾವಶಾಲಿಯಾಗಿ ಮಾಡುತ್ತಿದೆ.

 

*****


(रिलीज़ आईडी: 2198082) आगंतुक पटल : 26
इस विज्ञप्ति को इन भाषाओं में पढ़ें: Hindi_UP , English , Tamil