ಐ ಎಫ್ ಎಫ್ ಐ 2025: ಚಿತ್ರಗಳಲ್ಲಿ - 56ನೇ ಐ ಎಫ್ ಎಫ್ ಐ ಸಮಾರೋಪ ಸಮಾರಂಭ 2025 ರಲ್ಲಿ ಕೆಂಪು ಹಾಸಿನ ಸ್ವಾಗತ
56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) 2025ರ ಸಮಾರೋಪ ಸಮಾರಂಭದಲ್ಲಿ ಹಲವು ಗಣ್ಯರು, ಸಿನಿ ದಂತಕಥೆಗಳು ಮತ್ತು ಜನಪ್ರಿಯ ಚಲನಚಿತ್ರ ವ್ಯಕ್ತಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಯಿತು.
ಗೋವಾ ಮುಖ್ಯಮಂತ್ರಿ ಶ್ರೀ. ಪ್ರಮೋದ್ ಸಾವಂತ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು (ಅವರ ಪತ್ನಿಯೊಂದಿಗೆ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೆಸರಾಂತ ಹಿರಿಯ ನಟ ಶ್ರೀ ರಜನಿಕಾಂತ್, ರಣವೀರ್ ಸಿಂಗ್, ರಿಷಬ್ ಶೆಟ್ಟಿ, ನವಾಜುದ್ದೀನ್ ಸಿದ್ದಿಕಿ, ಟೋವಿನೋ ಥಾಮಸ್ (ಪತ್ನಿ ಲಿಡಿಯಾ ಅವರೊಂದಿಗೆ), ವಿನೀತ್ ಸಿಂಗ್ ಮತ್ತು ಅಂತಾರಾಷ್ಟ್ರೀಯ ತಾರೆ ಕ್ಯಾಥರೀನಾ ಷಟ್ಲರ್, ರಾಕೇಶ್ ಓಂಪ್ರಕಾಶ್ ಮೆಹ್ರಾ ಸೇರಿದಂತೆ ಸಿನಿಮೀಯ ರಾಜಮನೆತನದಿಂದ ಕೆಂಪು ಹಾಸು ಕೂಡ ಬೆಳಗಿತು.
ಒಂಬತ್ತು ದಿನಗಳ ಅದ್ಭುತ ಸಿನಿಮೋತ್ಸವಕ್ಕೆ ತೆರೆ ಎಳೆದ ಎಲ್ಲಾ ಫ್ಯಾಷನ್, ನಗು ಮತ್ತು ಸೊಬಗಿನ ಅಂತಿಮ ಕ್ಷಣಗಳನ್ನು ನೋಡಿ.

ಗೋವಾದ ಮುಖ್ಯಮಂತ್ರಿ ಶ್ರೀ. ಪ್ರಮೋದ್ ಸಾವಂತ್ ಅವರು ಐ ಎಫ್ ಎಫ್ ಐ 2025ರ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡರು.

ಐಎಫ್‌ಎಫ್‌ಐ 2025ರ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್‌ನಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್

ಐ ಎಫ್ ಎಫ್ ಐ 2025ರ ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ತಮ್ಮ ಪತ್ನಿಯೊಂದಿಗೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ಕೆಂಪು ಹಾಸಿನ ಮೇಲೆ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿರುವ ಖ್ಯಾತ ನಟ ಶ್ರೀ ರಜನಿಕಾಂತ್.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ಕೆಂಪು ಹಾಸಿನ ಮೇಲೆ ನಟ ರಿಷಬ್ ಶೆಟ್ಟಿ

ಐಎಫ್ ಎಫ್ ಐ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಅಂತಾರಾಷ್ಟ್ರೀಯ ಸ್ಪರ್ಧೆಯ ನಿರ್ದೇಶಕರು ಮತ್ತು ತೀರ್ಪುಗಾರರ ಅಧ್ಯಕ್ಷರು ಆದ ಶ್ರೀ ರಾಕೇಶ್ ಓಂಪ್ರಕಾಶ್ ಮೆಹ್ರಾ.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ಕೆಂಪು ಹಾಸಿನ ಮೇಲೆ ನಟ ನವಾಜುದ್ದೀನ್ ಸಿದ್ದಿಕಿ

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ನಟ ರಣವೀರ್ ಸಿಂಗ್

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ಕೆಂಪು ಹಾಸಿನ ಮೇಲೆ ಕಾಣಿಸಿಕೊಂಡ ಸಿಮಿನಾದ ದಂತಕಥೆ ,ನಿರ್ದೇಶಕ ವಿ.ಶಾಂತಾರಾಮ್ ಪುತ್ರ ಡಾ. ಕಿರಣ್ ಶಾಂತಾರಾಮ್

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್‌ನಲ್ಲಿ ಜರ್ಮನ್ ನಟಿ ಕ್ಯಾಥರೀನಾ ಷುಟ್ಲರ್

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ಕೆಂಪು ಹಾಸಿನ ಮೇಲೆ ಭಾರತೀಯ ನಟಿ ಅಮಿ ಬರುವಾ ಮಾಧ್ಯಮಗಳಿಗೆ ಶುಭಾಶಯ ಕೋರಿದ್ದಾರೆ

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಎನ್ಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಕ್ದಮ್

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಗೊಂಧಾಲ್ ಚಿತ್ರದ ನಟ ಕಿಶೋರ್ ಕದಮ್

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ಕೆಂಪು ಹಾಸಿನ ಮೇಲೆ ನಟ ಟೋವಿನೋ ಥಾಮಸ್ ಪತ್ನಿ ಲಿಡಿಯಾ ಟೋವಿನೋ ಜೊತೆ.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ನಟ ವಿನೀತ್ ಸಿಂಗ್

ಐಎಫ್‌ಎಫ್‌ಐ ಸಮಾರೋಪ ಸಮಾರಂಭದ ಕೆಂಪು ಹಾಸಿನ ಮೇಲೆ ನಟಿ ರಾಜೇಶ್ವರಿ ಸಚ್ದೇವ್

ಐಎಫ್ ಎಫ್ ಐ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ "ಸ್ಕಿನ್ ಆಫ್ ಯೂತ್" ಚಿತ್ರದ ನಟಿ ಟ್ರಾನ್ ಕ್ವಾನ್ ಮತ್ತು ನಿರ್ದೇಶಕ ಆಶ್ ಮೇಫೇರ್
*****
रिलीज़ आईडी:
2196905
| Visitor Counter:
2