ಪ್ರವಾಸೋದ್ಯಮ ಸಚಿವಾಲಯ
ಪ್ರಶಾದ್ ಯೋಜನೆಯಡಿ ಕರ್ನಾಟಕಕ್ಕೆ ಮೂರು ಯೋಜನೆಗಳು ಮಂಜೂರು: ಕೇಂದ್ರ ಪ್ರವಾಸೋದ್ಯಮ ಸಚಿವರು
ಪ್ರಕಟಣಾ ದಿನಾಂಕ:
04 AUG 2025 4:01PM by PIB Bengaluru
ಪ್ರವಾಸೋದ್ಯಮ ಸಚಿವಾಲಯದ ತೀರ್ಥಕ್ಷೇತ್ರ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಪರಂಪರೆ ವೃದ್ಧಿ ಅಭಿಯಾನ (ಪ್ರಶಾದ್) ಯೋಜನೆಯಡಿ ಕರ್ನಾಟಕದಲ್ಲಿ ಮೂರು ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯವು ತನ್ನ ತೀರ್ಥಕ್ಷೇತ್ರ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಪರಂಪರೆ ವೃದ್ಧಿ ಅಭಿಯಾನ (ಪ್ರಶಾದ್) ಯೋಜನೆಯಡಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಗುರುತಿಸಲಾದ ಧಾರ್ಮಿಕ ಮತ್ತು ಪರಂಪರೆಯ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕಕ್ಕೆ ಪ್ರಸಾದ್ ಯೋಜನೆಯಡಿಯಲ್ಲಿ ಮಂಜೂರಾದ ಯೋಜನೆಗಳು:
|
ಕ್ರ.ಸಂ
|
ಯೋಜನೆಯ ಹೆಸರು
|
ಮಂಜೂರಾದ ವರ್ಷ
|
ಮಂಜೂರಾದ ಮೊತ್ತ (ಕೋಟಿ.ರೂ.ಗಳಲ್ಲಿ)
|
|
1
|
ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿ
|
2023-24
|
45.38
|
|
2
|
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ
|
2024-25
|
18.37
|
|
3
|
ಬೀದರ್ ಜಿಲ್ಲೆಯ ಪಾಪನಾಶ ದೇವಾಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ.
|
2024-25
|
22.25
|
ಕರ್ನಾಟಕದ ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಯ ಕುರಿತು ಅಕ್ಟೋಬರ್ 2024ರಲ್ಲಿ ಪ್ರಶಾದ್ ಯೋಜನೆಯಡಿಯಲ್ಲಿ ಅಂದಾಜು ರೂ.83.52 ಕೋಟಿ ವೆಚ್ಚದ ಪರಿಕಲ್ಪನೆಯ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಸಚಿವಾಲಯವು ಕರ್ನಾಟಕ ರಾಜ್ಯ ಸರ್ಕಾರದಿಂದ ಸ್ವೀಕರಿಸಿದೆ. ಬಜೆಟ್ ನಿರ್ಬಂಧಗಳಿಂದಾಗಿ ಈ ಪ್ರಸ್ತಾವನೆಯನ್ನು ಪರಿಗಣಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯದ ವಿವಿಧ ಯೋಜನೆಗಳ ಅಡಿಯಲ್ಲಿ ಆರ್ಥಿಕ ನೆರವು ಪಡೆಯಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಕಾಲಕಾಲಕ್ಕೆ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುತ್ತದೆ. ಈ ಪ್ರಸ್ತಾವನೆಗಳನ್ನು ಯೋಜನೆಯ ಮಾರ್ಗಸೂಚಿಗಳ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ನಿಗದಿತ ನಿಬಂಧನೆಗಳ ನೆರವೇರಿಕೆ ಮತ್ತು ನಿಧಿಯ ಲಭ್ಯತೆಗೆ ಒಳಪಟ್ಟು ಯೋಜನೆಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
ಲೋಕಸಭೆಯಲ್ಲಿ ಶ್ರೀ ರಾಧಾಕೃಷ್ಣ ಅವರ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2152116)
ವಿಸಿಟರ್ ಕೌಂಟರ್ : 19