ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ರಾಜ್ಯ ಅನುಮೋದನೆಗಳ ನಂತರ ಬೆಂಗಳೂರು ಮೆಟ್ರೋ ಹಂತ-2 ಮತ್ತು 3 A ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರವು ಪರಿಗಣಿಸಲಿದೆ: ಶ್ರೀ ಮನೋಹರ್ ಲಾಲ್


ನಗರದ ಸುಧಾರಣೆಗಳಿಗಾಗಿ ಹಳೆಯ ತ್ಯಾಜ್ಯದ ರಾಶಿ (ಲೆಗಸಿ ವೇಸ್ಟ್) ನಿರ್ವಹಣೆಗೆ ಆದ್ಯತೆ ನೀಡಲು ಮತ್ತು ಎಸ್.ಎಸ್.ಎ.ಎಸ್.ಸಿ.ಐ 2025-26 ಅನ್ನು ಬಳಸಲು ಕೇಂದ್ರ ಸಚಿವರು ಕರ್ನಾಟಕವನ್ನು ಒತ್ತಾಯಿಸಿದರು

Posted On: 23 MAY 2025 2:56PM by PIB Bengaluru

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಇಂಧನ ಸಚಿವರಾದ  ಶ್ರೀ ಮನೋಹರ್ ಲಾಲ್ ಇಂದು ಬೆಂಗಳೂರಿನಲ್ಲಿ ವಿವಿಧ ನಗರ ಯೋಜನೆಗಳ ಕಾರ್ಯಾಚರಣೆಗಳ  ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.

ಪರಿಶೀಲನೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನಾ ಸಚಿವರಾದ ಶ್ರೀ ಬೈರತಿ ಸುರೇಶ್, ಕರ್ನಾಟಕ ಸರ್ಕಾರದ ಪುರಸಭೆ ಆಡಳಿತ ಸಚಿವರಾದ ಶ್ರೀ ರಹೀಮ್ ಖಾನ್, ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಶ್ರೀ ಬಿ ಝಡ್ ಜಮೀರ್ ಅಹ್ಮದ್ ಖಾನ್, ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಶ್ರೀ ಕೆ ಜೆ ಜಾರ್ಜ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ತುಷಾರ್ ಗಿರಿನಾಥ್  ಮತ್ತು ಹಿರಿಯ ರಾಜ್ಯ ಅಧಿಕಾರಿಗಳು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಯೋಜನೆ ಕಾರ್ಯಾಚರಣೆಗಳ ಪ್ರಗತಿಯ ಬಗ್ಗೆ ಕೇಂದ್ರ ಸಚಿವರು ತೃಪ್ತಿ ವ್ಯಕ್ತಪಡಿಸಿದರು. ರಾಜ್ಯ ಸಚಿವ ಸಂಪುಟವು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸೂಕ್ತವಾಗಿ ಅನುಮೋದಿಸಿದ ನಂತರ ಬೆಂಗಳೂರು ಮೆಟ್ರೋ ಹಂತ-2 ಯೋಜನೆಯ ಪರಿಷ್ಕೃತ ವೆಚ್ಚದ ಅಂದಾಜನ್ನು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು

ಬೆಂಗಳೂರು ಮೆಟ್ರೋ ಹಂತ-3 A ಅನುಮೋದನೆಯ ನಂತರ, ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು 75 ಕಿ.ಮೀ ಮೆಟ್ರೋ ಜಾಲವು ಕಾರ್ಯನಿರ್ವಹಿಸುತ್ತಿದೆ ಹಾಗೂ ಸುಮಾರು 145 ಕಿ.ಮೀ ಮೆಟ್ರೋ ಜಾಲವು ನಿರ್ಮಾಣ ಹಂತದಲ್ಲಿದೆ. ಇತ್ತೀಚೆಗೆ ಕೆಲವು ತಿಂಗಳ ಹಿಂದೆ, ಕೇಂದ್ರ ಸರ್ಕಾರವು 15,600 ಕೋಟಿ ರೂ. ವೆಚ್ಚದಲ್ಲಿ 45 ಕಿ.ಮೀ ಮೆಟ್ರೋ ಹಂತ-3 ಜಾಲವನ್ನು ಮಂಜೂರು ಮಾಡಿದೆ.

ಕರ್ನಾಟಕ ಸರ್ಕಾರವು ಬೆಂಗಳೂರು ಹಂತ-3 A ನ ಪ್ರಸ್ತಾವನೆಯನ್ನು ಸುಮಾರು 28,400 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 37 ಕಿ.ಮೀ.ನ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹಂತ-3 A ಜಾಲದ ವೆಚ್ಚದ ಅಂದಾಜನ್ನು ತಜ್ಞರುಳ್ಳ ಸಂಸ್ಥೆಯು ಪರಿಶೀಲಿಸಬೇಕಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಈ ನಿಟ್ಟಿನಲ್ಲಿ ನಿರ್ದೇಶನ ನೀಡಿದೆ. ಕರ್ನಾಟಕ ಸರ್ಕಾರದಿಂದ ಉತ್ತರ ಬಂದ ನಂತರ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ಅನುಮೋದನೆಗಾಗಿ ಕೈಗೆತ್ತಿಕೊಳ್ಳಲಾಗುವುದು.

ಗೌರವಾನ್ವಿತ ಕೇಂದ್ರ ಸಚಿವರು ಹಳೆಯ ತ್ಯಾಜ್ಯದ ರಾಶಿ (ಲೆಗಸಿ ವೇಸ್ಟ್)ಯ ಸಮಸ್ಯೆಗಳನ್ನು ಆದ್ಯತೆಯ ಮೇಲೆ ನಿಭಾಯಿಸಲು  ಸೂಚಿಸಿದರು. ಸಂಸ್ಕರಿಸಿದ ಬಳಸಿದ ನೀರಿನ ಮರುಬಳಕೆಗೆ ಗೌರವಾನ್ವಿತ ಕೇಂದ್ರ ಸಚಿವರು ಒತ್ತು ನೀಡಿದರು. ನಗರ ಪ್ರದೇಶಗಳಲ್ಲಿ ಸಿಹಿನೀರಿನ ಮೂಲಗಳ ಸುಸ್ಥಿರತೆಯನ್ನು ಹೆಚ್ಚಿಸಲು ನೀರಿನ ಮರುಬಳಕೆಯು ಈಗಿನ ಸಮಯದ  ಅಗತ್ಯವಾಗಿದೆ ಎಂದು ಅವರು ಹೇಳಿದರು.

ಸಾಮೂಹಿಕ ಸಾರಿಗೆ ಕ್ಷೇತ್ರಗಳಲ್ಲಿ ಹೆಚ್ಚಿನ ಎಫ್.ಎ.ಆರ್ ಅನ್ನು ಅನುಮತಿಸುವ ಬಗ್ಗೆ ಅವರು ಒತ್ತಿ ಹೇಳುತ್ತಾ, ಇದು ನಗರಗಳನ್ನು ಮರುರೂಪಿಸಲು, ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಭಾರತ ಸರ್ಕಾರದ ಅನುಮೋದಿತ ಯೋಜನೆಗಳ ಜೊತೆಗೆ, ರಾಜ್ಯದ ನಿಧಿಯ ಅವಶ್ಯಕತೆಯ ಕುರಿತು ಚರ್ಚೆಯ ಸಂದರ್ಭದಲ್ಲಿ, ಗೌರವಾನ್ವಿತ ಕೇಂದ್ರ ಸಚಿವರು 'ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ವಿಶೇಷ ಸಹಾಯ ಯೋಜನೆ (ಎಸ್.ಎಸ್.ಎ.ಎಸ್.ಸಿ.ಐ)  2025-26' ಅಡಿಯಲ್ಲಿ 50 ವರ್ಷಗಳ ಬಡ್ಡಿರಹಿತ ಸಾಲವನ್ನು ಪಡೆಯಲು, ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವನ್ನು  ಪ್ರೋತ್ಸಾಹಿಸಿದರು.

 

*****


(Release ID: 2130756)
Read this release in: English , Urdu , Hindi , Tamil