ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತ ಸರ್ಕಾರವು ಭಾರತದಲ್ಲಿ ಚಿಪ್ ವಿನ್ಯಾಸವನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ: ಭಾರತದ ಸೆಮಿಕಂಡಕ್ಟರ್ ಕ್ಷಣ ಬಂದಿದೆ


ವಿಜೇತರ ಘೋಷಣೆ: ‘ಅನಲಾಗ್ ಮತ್ತು ಡಿಜಿಟಲ್ ಡಿಸೈನ್ ಹ್ಯಾಕಥಾನ್ಸ್’ (2,210 ತಂಡಗಳು, 10,040 ವಿದ್ಯಾರ್ಥಿಗಳು ಭಾಗವಹಿಸಿದರು)

ಸ್ವದೇಶೀಕರಣವನ್ನು ಉತ್ತೇಜಿಸುವುದು: ವರ್ವೆಸೆಮಿ ಮೈಕ್ರೋಎಲೆಕ್ಟ್ರಾನಿಕ್ಸ್ ಪ್ರೈ. ಲಿಮಿಟೆಡ್  ಬಿ ಎಲ್‌ ಡಿ ಸಿ ಮೋಟಾರ್ ಕಂಟ್ರೋಲರ್ ಚಿಪ್ ಅನ್ನು ಶೇ.90 ರಷ್ಟು 'ಮೇಡ್ ಇನ್ ಇಂಡಿಯಾ' ಬಿಒಎಂ ನೊಂದಿಗೆ ವಿನ್ಯಾಸಗೊಳಿಸಸುತ್ತದೆ

ಮುಂದಿನ ದೊಡ್ಡ ಜಿಗಿತ: ‘ಡಿಜಿಟಲ್ ಇಂಡಿಯಾ ಆರ್‌ ಐ ಎಸ್ ಸಿ-ವಿ (ಡಿಐರ್-ವಿ) ಗ್ರ್ಯಾಂಡ್ ಚಾಲೆಂಜ್’ ಪ್ರಾರಂಭ

Posted On: 20 MAR 2025 8:05PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಚಿಪ್ ವಿನ್ಯಾಸವನ್ನು ಕಾರ್ಯತಂತ್ರದ ಅಗತ್ಯವಾಗಿ ಅರ್ಥಮಾಡಿಕೊಂಡು, ಅದರ ಶ್ರೇಣೀಕೃತ ಮತ್ತು ಸಕ್ರಿಯ ಹಂತಗಳ ಸರಣಿಯೊಂದಿಗೆ, ದೇಶಾದ್ಯಂತ 300+ ಸಂಸ್ಥೆಗಳಲ್ಲಿ (250 ಶೈಕ್ಷಣಿಕ ಸಂಸ್ಥೆಗಳು ಮತ್ತು 65 ಸ್ಟಾರ್ಟ್-ಅಪ್ ಕಂಪನಿಗಳು ಸೇರಿದಂತೆ) ಸೆಮಿಕಂಡಕ್ಟರ್ ವಿನ್ಯಾಸ ವಿಧಾನವನ್ನು ವ್ಯವಸ್ಥಿತವಾಗಿ ಕೂಲಂಕಷವಾಗಿ ಪರಿಶೀಲಿಸುವ ಪ್ರಕ್ರಿಯೆಯಲ್ಲಿದೆ. ಈ ಹಂತಗಳು ಸೃಜನಾತ್ಮಕ ಸಕ್ರಿಯಗೊಳಿಸುವಿಕೆಯ ಯುಗವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿವೆ, ಅಲ್ಲಿ ಸಹಜ ಕೌಶಲ್ಯ ಹೊಂದಿರುವ ಯಾರಾದರೂ ದೇಶದಲ್ಲಿ ಎಲ್ಲಿ ಬೇಕಾದರೂ ಸೆಮಿಕಂಡಕ್ಟರ್ ಚಿಪ್‌ ಗಳನ್ನು ವಿನ್ಯಾಸಗೊಳಿಸಬಹುದು. ಈ ಪ್ರಕ್ರಿಯೆಯಲ್ಲಿ, 'ಮೇಕ್ ಇನ್ ಇಂಡಿಯಾದಷ್ಟೇ ಭಾರತದಲ್ಲಿ ವಿನ್ಯಾಸವೂ ಮುಖ್ಯವಾಗಿದೆ' ಎಂಬ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಚಿಪ್ ವಿನ್ಯಾಸವನ್ನು ಪ್ರಜಾಪ್ರಭುತ್ವಗೊಳಿಸಲಾಗುವುದು.

ಸಿ2ಎಸ್ ಕಾರ್ಯಕ್ರಮದ ಬಗ್ಗೆ

ಚಿಪ್ಸ್ ಟು ಸ್ಟಾರ್ಟ್-ಅಪ್ (ಸಿ2ಎಸ್) ಕಾರ್ಯಕ್ರಮವು ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಒಂದು ಪ್ರಮುಖ ಉಪಕ್ರಮವಾಗಿದೆ. ಬಿಟೆಕ್, ಎಂಟೆಕ್ ಮತ್ತು ಪಿ ಎಚ್‌ ಡಿ ಹಂತಗಳಲ್ಲಿ ಸೆಮಿಕಂಡಕ್ಟರ್ ಚಿಪ್ ವಿನ್ಯಾಸದಲ್ಲಿ ಪರಿಣತಿ ಹೊಂದಿರುವ 85,000 ಉದ್ಯಮಕ್ಕೆ-ಸಿದ್ಧವಾದ ಮಾನವಶಕ್ತಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಚಿಪ್ ವಿನ್ಯಾಸ, ಫ್ಯಾಬ್ರಿಕೇಶನ್ ಮತ್ತು ಪರೀಕ್ಷೆಯಲ್ಲಿ ಸಂಪೂರ್ಣ ಪ್ರಾಯೋಗಿಕ ಅನುಭವವನ್ನು ಒದಗಿಸುವ ಮೂಲಕ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ. ಉದ್ಯಮ ಪಾಲುದಾರರ ಸಹಯೋಗದೊಂದಿಗೆ ನಡೆಸುವ ನಿಯಮಿತ ತರಬೇತಿ ಅವಧಿಗಳ ಮೂಲಕ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಚಿಪ್ ವಿನ್ಯಾಸ, ಫ್ಯಾಬ್ರಿಕೇಶನ್ ಮತ್ತು ಪರೀಕ್ಷಾ ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ, ಇದರಲ್ಲಿ ಇಡಿಎ ಪರಿಕರಗಳು, ಚಿಪ್‌ ಗಳನ್ನು ತಯಾರಿಸಲು ಸೆಮಿಕಂಡಕ್ಟರ್ ಫೌಂಡರಿಗಳಿಗೆ ಪ್ರವೇಶ ಇತ್ಯಾದಿ ಸೇರಿವೆ. ಈ ಅವಕಾಶಗಳಲ್ಲಿ ಎ ಎಸ್‌ ಐ ಸಿ ಗಳು, ಎಸ್‌ ಒ ಸಿ ಗಳು ಮತ್ತು ಐಪಿ ಕೋರ್ ವಿನ್ಯಾಸಗಳ ಮೂಲಮಾದರಿಗಳ ಅಭಿವೃದ್ಧಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸೇರಿವೆ.

ಚಿಪ್ಇನ್ ಕೇಂದ್ರ

ಸಿ-ಡಿಎಸಿಯಲ್ಲಿ ಸ್ಥಾಪಿಸಲಾದ ಅತಿದೊಡ್ಡ ಸೌಲಭ್ಯಗಳಲ್ಲಿ ಒಂದಾದ ಸಿ2ಎಸ್ ಕಾರ್ಯಕ್ರಮದ ಅಡಿಯಲ್ಲಿ ಚಿಪ್‌ ಇನ್ ಕೇಂದ್ರವನ್ನು ಸ್ಥಾಪಿಸಲಾಗಿದೆ, ಇದು ದೇಶದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಸಮುದಾಯದ ಮನೆ ಬಾಗಿಲಿಗೆ ಚಿಪ್ ವಿನ್ಯಾಸ ಮೂಲಸೌಕರ್ಯವನ್ನು ತರುವ ಗುರಿಯನ್ನು ಹೊಂದಿದೆ. ಇದು ಕೇಂದ್ರೀಕೃತ ವಿನ್ಯಾಸ ಸೌಲಭ್ಯವಾಗಿದ್ದು, 5nm ಅಥವಾ ಮುಂದುವರಿದ ನೋಡ್‌ವರೆಗಿನ ಸಂಪೂರ್ಣ ಚಿಪ್ ವಿನ್ಯಾಸಕ್ಕೆ ಅತ್ಯಾಧುನಿಕ ಪರಿಕರಗಳನ್ನು ಒದಗಿಸುವುದಲ್ಲದೆ, ಫೌಂಡರಿಗಳು ಮತ್ತು ಪ್ಯಾಕೇಜಿಂಗ್‌ ನಲ್ಲಿ ವಿನ್ಯಾಸದ ತಯಾರಿಕೆಗೆ ಸಮಗ್ರ ಸೇವೆಗಳನ್ನು ಒದಗಿಸುತ್ತದೆ.

ಸಿ2ಎಸ್ ಕಾರ್ಯಕ್ರಮದಡಿಯಲ್ಲಿ, ಮಾನ್ಯ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಮಾರ್ಚ್ 20, 2025 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಕೃಷ್ಣನ್, ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಿಷೇಕ್ ಸಿಂಗ್ ಮತ್ತು ತಂಡ ಸಂಯೋಜಕಿ ಶ್ರೀಮತಿ ಸುನೀತಾ ವರ್ಮಾ ಅವರ ಸಮ್ಮುಖದಲ್ಲಿ ಈ ಕೆಳಗಿನ ಘೋಷಣೆಗಳನ್ನು ಮಾಡಿದರು.

  1. ಕೋಡಿಂಗ್, ವಿನ್ಯಾಸ ಸವಾಲುಗಳು ಮತ್ತು ತಜ್ಞರ ನೇತೃತ್ವದ ತರಬೇತಿಯ ತೀವ್ರ ಸುತ್ತುಗಳ ನಂತರ, 40 ಗಣ್ಯ ತಂಡಗಳು, 200 ನಾವೀನ್ಯಕಾರರು ಎಎಂಡಿ, ಸಿನೋಪ್ಸಿಸ್ ಮತ್ತು CoreEL ಟೆಕ್ನಾಲಜೀಸ್‌ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾದ 100 ಗಂಟೆಗಳ ಡೀಪ್-ಟೆಕ್ "ಅನಲಾಗ್ ಮತ್ತು ಡಿಜಿಟಲ್ ಹ್ಯಾಕಥಾನ್‌" ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಿದರು. ಇಡಿಎ ಮತ್ತು ಕ್ಲೌಡ್ ಸಂಪನ್ಮೂಲಗಳೊಂದಿಗೆ ಸಜ್ಜಿತರಾದ ಅವರು - ಡಿಜಿಟಲ್ ವಿನ್ಯಾಸದಲ್ಲಿ ಎಫ್‌ ಪಿ ಜಿ ಎ ಹಾರ್ಡ್‌ವೇರ್‌ ನಲ್ಲಿ ಲೈವ್ ಇಮೇಜ್ ಪ್ರೊಸೆಸಿಂಗ್ ಅನ್ನು ವರ್ಧಿಸುವುದು ಮತ್ತು ಅನಲಾಗ್ ವಿನ್ಯಾಸದಲ್ಲಿ ಸಂಕೀರ್ಣ ವೋಲ್ಟೇಜ್ ನಿಯಂತ್ರಕ ಸರ್ಕ್ಯೂಟ್‌ಗಳನ್ನು ಅತ್ಯುತ್ತಮವಾಗಿಸುವ ನೈಜ-ಪ್ರಪಂಚದ ಸಮಸ್ಯೆಗಳನ್ನು ನಿಭಾಯಿಸಿದರು. ಆರು ವಿಜೇತ ತಂಡಗಳನ್ನು ಗೌರವಾನ್ವಿತ ಸಚಿವರು ಘೋಷಿಸಿದರು:

ಅನಲಾಗ್ ಡಿಸೈನ್ ಹ್ಯಾಕಥಾನ್ ವಿಜೇತರು:

  1. ಪ್ರಥಮ ಬಹುಮಾನ- ಐಐಟಿ ದೆಹಲಿಯ ಇಂಟ್ಯೂಷನ್ ತಂಡ
  2. ದ್ವಿತೀಯ ಬಹುಮಾನ- ಎನ್‌ ಐ ಟಿ ರೂರ್ಕೆಲಾದ ಅನಲಾಗ್ ಎಡ್ಜ್ ತಂಡ
  3. ತೃತೀಯ ಬಹುಮಾನ- ಐಐಟಿ ಗುವಾಹಟಿಯ ಎಫ್‌ಇಟಿಮೇನಿಯಾಕ್ಸ್ ತಂಡ

ಡಿಜಿಟಲ್ ಡಿಸೈನ್ ಹ್ಯಾಕಥಾನ್ ವಿಜೇತರು:

  1. ಪ್ರಥಮ ಬಹುಮಾನ- ಐಐಟಿ ಬಾಂಬೆಯ ಆರ್‌ ಐ ಎಸ್‌ ಸಿ ಬಿ ತಂಡ
  2. ದ್ವಿತೀಯ ಬಹುಮಾನ- ಸವೀತಾ ಎಂಜಿನಿಯರಿಂಗ್ ಕಾಲೇಜಿನ ಸಿಲಿಕಾನ್ ಸ್ಕ್ರಿಪ್ಟರ್‌ ಗಳ ತಂಡ
  3. ತೃತೀಯ ಬಹುಮಾನ- ಐಐಟಿ (ಬಿ ಎಚ್‌ ಯು ವಾರಾಣಸಿ)ಯ ಡೇಡಾಲಸ್ ತಂಡ

ii. ‘ಬಿ ಎಲ್‌ ಡಿ ಸಿ ಕಂಟ್ರೋಲರ್ ಚಿಪ್’ನ ದೇಶೀಯ ಅಭಿವೃದ್ಧಿಯನ್ನು ವರ್ವೆಮಿ ಮೈಕ್ರೋಎಲೆಕ್ಟ್ರೊನಿಕ್ಸ್ ಪ್ರೈ. ಲಿಮಿಟೆಡ್ ಗೆ ನೀಡಲಾಗಿದೆ.

ಈ ‘ಬಿಎಲ್‌ಡಿಸಿ ಕಂಟ್ರೋಲರ್ ಚಿಪ್’ಈ ಕೆಳಗಿನ ವೈಶಿಷ್ಟ್ಯ ಹೊಂದಿದೆ: ಸ್ವಾವಲಂಬಿ ಸೆಮಿಕಂಡಕ್ಟರ್ ಪರಿಹಾರಕ್ಕಾಗಿ ಭಾರತದಲ್ಲಿ ತಯಾರಿಸಿದ ಶೇ.90 BOM, 1.50 ಡಾಲರ್‌ ಗಿಂತ ಕಡಿಮೆ ವೆಚ್ಚದಲ್ಲಿ ಸಂಪೂರ್ಣ ವಿದ್ಯುತ್ ಮತ್ತು ನಿಯಂತ್ರಣ ಪರಿಹಾರ ಮತ್ತು 10 ಮಿಲಿಯನ್ ಯೂನಿಟ್‌ ಗಳು/ವರ್ಷಕ್ಕೆ ಸ್ಕೇಲೆಬಿಲಿಟಿ.

ವರ್ವೆಸೆಮಿ 2017 ರಲ್ಲಿ ಆರಂಭವಾಗಿದೆ ಮತ್ತು ಸಂವೇದಕಗಳು ಮತ್ತು ವೈರ್‌ಲೆಸ್‌ ಗಾಗಿ ಹೆಚ್ಚಿನ ಕಾರ್ಯಕ್ಷಮತೆಯ ಎ ಎಸ್‌ ಐ ಸಿ ಗಳನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಅತ್ಯಾಧುನಿಕ ದತ್ತಾಂಶ ಪರಿವರ್ತಕಗಳು ಮತ್ತು ವಿಭಿನ್ನ ಅನಲಾಗ್ ಐಪಿಗಳ ಪರಿಣತಿಯನ್ನು ಬಳಸಿಕೊಳ್ಳುತ್ತದೆ. ವರ್ವೆಸೆಮಿಯ ಐಸಿಗಳನ್ನು 8nm, 22nm, 28nm, 40nm, 55nm, 90nm, 180nm, 110nm ನೋಡ್ ಆಫ್ ಸ್ಯಾಮ್‌ಸಂಗ್, ಯುಎಂಸಿ, ಟಿ ಎಸ್‌ ಎಂ ಸಿ, ಎಸ್‌ ಎಂ ಐ ಸಿ ಪಿ ಎಸ್‌ ಎಂ ಸಿ ಯಲ್ಲಿ ಟೇಪ್ ಮಾಡಲಾಗಿದೆ.

<200W ಬಿ ಎಲ್‌ ಡಿ ಸಿ ಮತ್ತು ಎಸ್‌ ಆರ್ ಮೋಟಾರ್‌ ಗಳನ್ನು ಬೆಂಬಲಿಸುವುದು

 

iii. ಏಪ್ರಿಲ್ 10 ರಿಂದ ಅರ್ಜಿಗಳನ್ನು ಆಹ್ವಾನಿಸಲು ‘ಡಿಜಿಟಲ್ ಇಂಡಿಯಾ ಆರ್‌ ಐ ಎಸ್ ಸಿ-ವಿ (ಡಿಐರ್-ವಿ) ಗ್ರ್ಯಾಂಡ್ ಚಾಲೆಂಜ್’ಪ್ರಾರಂಭವನ್ನು ಘೋಷಿಸಲಾಯಿತು. ವೇಗಾ ಪ್ರೊಸೆಸರ್‌ ಗಳು ಮತ್ತು ಶಕ್ತಿ ಮೈಕ್ರೊಪ್ರೊಸೆಸರ್‌ ಗಳ ಜೊತೆಗೆ, ಚಾಲೆಂಜ್‌ ನಲ್ಲಿ ಭಾಗವಹಿಸುವವರು ನವೀನ ಅಪ್ಲಿಕೇಶನ್‌ ಗಳಲ್ಲಿ ಕೆಲಸ ಮಾಡುತ್ತಾರೆ. ಡಿಐಆರ್-ವಿ ಗ್ರ್ಯಾಂಡ್ ಚಾಲೆಂಜ್ ತಾಂತ್ರಿಕವಾಗಿ ಸಿ-ಡಾಕ್‌ ನ ವೇಗಾ ಪ್ರೊಸೆಸರ್ ಮತ್ತು ಐಐಟಿ ಮದ್ರಾಸ್‌ ನ ಶಕ್ತಿ ಪ್ರೊಸೆಸರ್, ರೆನೆಸಾಸ್, ಎಲ್‌ ಟಿ ಎಸ್‌ ಸಿ, CoreEL ಟೆಕ್ನಾಲಜೀಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್‌ನ ಬೆಂಬಲದೊಂದಿಗೆ ಚಾಲಿತವಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾನ್ಯ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಭಾರತವು ಉತ್ಪನ್ನ ರಾಷ್ಟ್ರವಾಗಲು ನಾವು ಎಲ್ಲರೂ ಒಟ್ಟಾಗಿ ಮೂರು ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

  1. "ದೇಶವು ಸೇವಾ ಉದ್ಯಮದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿರುವಾಗ ಮತ್ತು ಮುಂದುವರೆಸುತ್ತಿರುವಾಗ, ಅದು ಈಗ ಉತ್ಪನ್ನ ರಾಷ್ಟ್ರವಾಗಬೇಕು. ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಕುರಿತು ಇಂದಿನ ಘೋಷಣೆಗಳು ಆ ಗುರಿಯತ್ತ ಕೆಲವು ಯಶಸ್ವಿ ಹೆಜ್ಜೆಗಳಾಗಿವೆ."
  2. ಈ ಪರಿಹಾರಗಳು ಕೇವಲ ಆಯ್ದ ಕೆಲವರಿಗಿಂತ ಹೆಚ್ಚಾಗಿ ಎಲ್ಲಾ ಹಂತದ ಶಿಕ್ಷಣ ತಜ್ಞರು, ಸ್ಟಾರ್ಟ್-ಅಪ್‌ ಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಪಾಲುದಾರಿಕೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಭಾಗೀದಾರರಿಂದ ಬರಬೇಕು.
  • III. ಈ ಪರಿಹಾರಗಳನ್ನು ಸಾಧಿಸಲು ಹೆಚ್ಚುತ್ತಿರುವ ಆದರೆ ಪ್ರಗತಿಶೀಲವಾದ ವಿಧಾನವನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ. ಕೆಲವು ಚಿಪ್‌ ಗಳು ಕಡಿಮೆ ಬೆಲೆಯನ್ನು ಹೊಂದಿರಬಹುದು ಆದರೆ ಹೆಚ್ಚಿನ ನಿಯೋಜನೆ ಸಾಮರ್ಥ್ಯವನ್ನು ಹೊಂದಿರಬಹುದು, ಆದರೆ ಕೆಲವು ಹೆಚ್ಚಿನ ಬೆಲೆಯನ್ನು ಹೊಂದಿರಬಹುದು ಆದರೆ ಸೀಮಿತ ನಿಯೋಜನೆ ಸಾಮರ್ಥ್ಯವನ್ನು ಹೊಂದಿರಬಹುದು. ಇಡೀ ಸ್ಪೆಕ್ಟ್ರಮ್ ಅನ್ನು ಗುರಿಯಾಗಿಸಬೇಕು. ಇಂದು ಘೋಷಿಸಲಾದ ಬಿ ಎಲ್‌ ಡಿ ಸಿ ನಿಯಂತ್ರಕ ಚಿಪ್ ಅಭಿವೃದ್ಧಿಯು ಗಮನಾರ್ಹ ಪರಿಮಾಣದ ನಿಯೋಜನೆ ಸಾಮರ್ಥ್ಯವನ್ನು ಹೊಂದಿದೆ, ಆರ್‌ ಐ ಎಸ್‌ ಸಿ-ವಿ, ಓಪನ್‌ ಸೋರ್ಸ್‌ ಆಗಿರುವುದರಿಂದ, ಸಿಪಿಯುಗಳು, ಜಿಪಿಯುಗಳು ಮತ್ತು ಸುಸ್ಥಿರ ಉತ್ಪನ್ನಗಳನ್ನು ವಿನ್ಯಾಸಗೊಳಿಸುವಲ್ಲಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ.
  1. ಭವಿಷ್ಯದ ಸೆಮಿಕಂಡಕ್ಟರ್ ವ್ಯವಸ್ಥೆಗಳು, ಸಾಧನಗಳು ಮತ್ತು ಉತ್ಪನ್ನಗಳ‌ ವಿನ್ಯಾಸ ಮತ್ತು ಮರು ವ್ಯಾಖ್ಯಾನದಲ್ಲಿ ಮುಂಚೂಣಿಯಲ್ಲಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು ಮತ್ತು ಸಂಶೋಧಕರಿಗೆ ಭಾರತ ಇಂದು ಮಹತ್ವದ ಅವಕಾಶವನ್ನು ಒದಗಿಸುತ್ತದೆ. ಭಾರತ ಸರ್ಕಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ "ಚಿಪ್ಸ್ ಟು ಸ್ಟಾರ್ಟ್-ಅಪ್ (ಸಿ2ಎಸ್) ಕಾರ್ಯಕ್ರಮ"ವು ದೃಢವಾದ ಮತ್ತು ಸ್ವಾವಲಂಬಿ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ರಾಷ್ಟ್ರದ ಅಚಲ ಬದ್ಧತೆಗೆ ಅನುಗುಣವಾಗಿ, ಮುಂದಿನ ಪೀಳಿಗೆಯ ಎಂಜಿನಿಯರ್‌ ಗಳು, ಸಂಶೋಧಕರು ಮತ್ತು ಉದ್ಯಮಿಗಳನ್ನು ಭಾರತದ ತಾಂತ್ರಿಕ ಪ್ರಗತಿಯನ್ನು ಮುನ್ನಡೆಸಲು ಮತ್ತು ಜಾಗತಿಕ ಶಕ್ತಿಕೇಂದ್ರವಾಗುವತ್ತ ಮುನ್ನಡೆಸಲು ಸಬಲೀಕರಣಗೊಳಿಸುತ್ತಿದೆ.

 

*****


(Release ID: 2113668) Visitor Counter : 25


Read this release in: English , Urdu , Hindi