ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ದೇಶದಾದ್ಯಂತ ಇ-ಸೇವೆಗಳ ವಿತರಣೆಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ : ರಾಷ್ಟ್ರೀಯ ಇ-ಆಡಳಿತ ಸೇವಾ ವಿತರಣಾ ಮೌಲ್ಯಮಾಪನ (NeSDA) ವರದಿ

Posted On: 22 JAN 2025 9:11PM by PIB Bengaluru

ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು (DARPG) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ನಡೆ ರಾಷ್ಟ್ರೀಯ ಇ-ಆಡಳಿತ ಸೇವಾ ವಿತರಣಾ ಮೌಲ್ಯಮಾಪನದ (NeSDA) ಮಾಸಿಕ ವರದಿ ನವೆಂಬರ್ 2024 ಅನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇ-ಸೇವಾ ವಿತರಣೆಯ ಸ್ಥಿತಿಗತಿಯ ವಿವರವಾದ ಅವಲೋಕನವನ್ನು ಒದಗಿಸುತ್ತದೆ. 

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತದ ಇಲಾಖೆಗಳು 18,335 ಇ-ಸೇವೆಗಳನ್ನು ಒದಗಿಸುತ್ತವೆ. ಕರ್ನಾಟಕವು ಗರಿಷ್ಠ (1414) ಇ-ಸೇವೆಗಳನ್ನು ಒದಗಿಸುತ್ತಿದೆ.

ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ, ಕೇರಳ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳು 56 ಕಡ್ಡಾಯ ಇ-ಸೇವೆಗಳ ಒದಗಿಸುವಿಕೆಯನ್ನು ಖಾತರಿಪಡಿಸಿ ಗುರಿ ಸಾಧಿಸಿವೆ.

ನವೆಂಬರ್ 2024ರ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು DARPG ಜಾಲತಾಣದಲ್ಲಿ ಲಭ್ಯವಿದೆ.

ವರದಿಯು ಒಳಗೊಂಡಿರುವ ಪ್ರಧಾನ ಅಂಶಗಳು ಈ ಕೆಳಗಿನಂತಿವೆ:

  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 18,335 ಇ-ಸೇವೆಗಳನ್ನು ಒದಗಿಸಲಾಗಿದೆ.
  • ಕರ್ನಾಟಕ ತನ್ನ ಸೇವಾಸಿಂಧು ನಾಗರಿಕ ಸೇವೆಗಳ ಪೋರ್ಟಲ್ ಮೂಲಕ ಗರಿಷ್ಠ ಸಂಖ್ಯೆಯ ಇ-ಸೇವೆಗಳನ್ನು (1,414) ಒದಗಿಸುತ್ತಿದೆ.
  • ಗರಿಷ್ಠ ಇ-ಸೇವೆಗಳು (5,844) - ಸ್ಥಳೀಯ ಆಡಳಿತ ಮತ್ತು ಉಪಯುಕ್ತ ಸೇವಾ ವಲಯಗಳಲ್ಲಿವೆ.
  • 2,016 ಕಡ್ಡಾಯ ಇ-ಸೇವೆಗಳ‌ ಪೈಕಿ 1,579 (56 x 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು) ಇ-ಸೇವೆಗಳು ಲಭ್ಯವಿದ್ದು, ಶೇಕಡ 78% ರಷ್ಟು ಗರಿಷ್ಠ ಮಟ್ಟ ತಲುಪಿವೆ.
  • ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ, ಕೇರಳ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳು 56 ಕಡ್ಡಾಯ ಇ-ಸೇವೆಗಳಲ್ಲಿ ಶೇಕಡ 100ರಷ್ಟು ಪ್ರಮಾಣ ಸಾಧಿಸಿವೆ.

ಏಕೀಕೃತ ಸೇವಾ ವಿತರಣಾ ಪೋರ್ಟಲ್‌ಗಳ ಉತ್ತಮ ಅಭ್ಯಾಸಗಳ ಒಟ್ಟಾರೆ‌ ನೋಟವನ್ನು ಗೋವಾ (ಗೋವಾ ಆನ್‌ಲೈನ್), ಮಹಾರಾಷ್ಟ್ರ (ಆಪ್ಲೆ ಸರ್ಕಾರ್), ಛತ್ತೀಸ್‌ ಗಢ (ಇ-ಡಿಸ್ಟ್ರಿಕ್ಟ್), ತೆಲಂಗಾಣ (ಮೀ ಸೇವಾ), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಇ- ಡಿಸ್ಟ್ರಿಕ್ಟ್) ಮತ್ತು ಬಿಹಾರ (ಇ- ಡಿಸ್ಟ್ರಿಕ್ಟ್) ಗಳ ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಪ್ರಪಂಚದಾದ್ಯಂತದ ಸಮಕಾಲೀನ ಡಿಜಿಟಲ್ ಸರ್ಕಾರಿ ಪ್ರವೃತ್ತಿಗಳು ಮತ್ತು ನಾಗರಿಕರ ಅಗತ್ಯತೆಗಳಿಗೆ ಅನುಗುಣವಾಗಿ, ಪ್ರಮುಖ ನಾಲ್ಕು ಕ್ಷೇತ್ರಗಳಾದ 'ಹಣಕಾಸು,' 'ಪರಿಸರ,' 'ಶಿಕ್ಷಣ,' ಮತ್ತು 'ಪ್ರವಾಸೋದ್ಯಮ’ ಗಳಿಗೆ ಸಂಬಂಧಿಸಿದ ಕಡ್ಡಾಯ ಇ-ಸೇವೆಗಳ ಮೇಲೆ ವರದಿಯು ಕೇಂದ್ರೀಕರಿಸಿದೆ.

 

*****


(Release ID: 2095283) Visitor Counter : 44