ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮುಂಬೈನ ICAR-CIRCOT ನ ಶತಮಾನೋತ್ಸವ ಸಂಸ್ಥಾಪನಾ ದಿನದಂದು ಉಪರಾಷ್ಟ್ರಪತಿಯವರ ಭಾಷಣ

Posted On: 03 DEC 2024 7:47PM by PIB Bengaluru

ಇಂದು ನಾವು ಆಳವಾಗಿ ಯೋಚಿಸಬೇಕಾದ, ಚಿಂತನೆ ಮಾಡಬೇಕಾದ, ಮಂಥನ ಮಾಡಬೇಕಾದ ದಿನ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್, ಅದರ ಒಂದು ಸಂಸ್ಥೆಯು 100 ವರ್ಷ ಪೂರೈಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಡೀ ದೇಶದಾದ್ಯಂತ ಹರಡಿದೆ. 180 ಕ್ಕೂ ಹೆಚ್ಚು ಸಂಸ್ಥೆಗಳಿವೆ, ಕೃಷಿಯ ಪ್ರತಿಯೊಂದು ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತಿದೆ. ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದೆ, ಕೃಷಿಯೊಂದಿಗೆ ಸಂಬಂಧ ಹೊಂದಿದೆ, ರೈತರೊಂದಿಗೆ ಸಂಬಂಧ ಹೊಂದಿದೆ, ಕೃಷಿ ಆರ್ಥಿಕತೆಯೊಂದಿಗೆ ಸಂಬಂಧ ಹೊಂದಿದೆ, ಯಾವುದೇ ಅಂಶವನ್ನು ಮುಟ್ಟದೆ ಬಿಟ್ಟಿಲ್ಲ.

ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡುವುದು ತುಂಬಾ ಸುಲಭ. ಪ್ರಶಂಸೆಗಳನ್ನು ಸ್ವೀಕರಿಸುವುದು ತುಂಬಾ ಅನುಕೂಲಕರ. ಆದರೆ ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ.

ಇದು ಲೆಕ್ಕಪರಿಶೋಧನೆ ಮಾಡುವ ಸಮಯ, ಸ್ವಯಂ ಅರಿವು ಮೂಡಿಸಿಕೊಳ್ಳುವ ಸಮಯ,  ಮುಂದಿನ ನಡೆಗಳನ್ನು ರೂಪಿಸಿಕೊಳ್ಳುವ ಸಮಯ. ನೀವು ಎಷ್ಟೇ ಮಾತನಾಡಿದರೂ ಇಂದಿನ ಗ್ರಾಮೀಣ ವ್ಯವಸ್ಥೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ, ಸಂಕಷ್ಟದಲ್ಲಿದ್ದಾರೆ, ತಳಮಳಗೊಂಡಿದ್ದಾರೆ.

ಸಂಸ್ಥೆಗಳು ನಿಜವಾಗಿಯೂ ಜೀವಂತವಾಗಿದ್ದರೆ,  ಪ್ರಾಮಾಣಿಕವಾಗಿ ಕೊಡುಗೆ ನೀಡುತ್ತಿದ್ದರೆ ಈ ಪರಿಸ್ಥಿತಿ ಎಂದಿಗೂ ಬರುತ್ತಿರಲಿಲ್ಲ. ಇದು ನಿಮ್ಮ ಮತ್ತು ನಮ್ಮ ಮುಂದಿರುವ ಪ್ರಶ್ನೆ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ, ದೇಶದ ಮೂಲೆ ಮೂಲೆಯಲ್ಲೂ ಇಂತಹ ಸಂಸ್ಥೆಗಳ ಜಾಲವಿದೆ, ಕೃಷಿ ವಿಜ್ಞಾನದ ಪ್ರತಿಯೊಂದು ಚಟುವಟಿಕೆಯನ್ನೂ ಒಳಗೊಂಡಿದೆ. ಆದರೂ ಏನಾಗುತ್ತಿದೆ? ರೈತರ ಪರಿಸ್ಥಿತಿ ಬದಲಾಗಿದೆಯೇ? ನಿಮ್ಮ ಮಾತುಗಳು ರೈತರನ್ನು ತಲುಪುತ್ತಿವೆಯೇ?  ರೈತರು ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಅಂತರ ಇನ್ನೂ ಹೆಚ್ಚಿರಲು ಸಾಧ್ಯವಿಲ್ಲ.

ನನಗೆ ಆಶಾಕಿರಣವೊಂದು ಗೋಚರಿಸುತ್ತಿದೆ. ಒಬ್ಬ ಅನುಭವಿ ವ್ಯಕ್ತಿ ಇಂದು ಭಾರತದ ಕೃಷಿ ಮಂತ್ರಿಯಾಗಿದ್ದಾರೆ. ಶಿವರಾಜ್ ಜೀ, ನಿಮ್ಮ ಮುಂದೆ ರೈತರ ಕಲ್ಯಾಣದ, ಗ್ರಾಮೀಣ ಅಭಿವೃದ್ಧಿಯ ಸವಾಲು ಇದೆ.

ನಾವು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುವಾಗ, ಅಭಿವೃದ್ಧಿ ಹೊಂದಿದ ಭಾರತದ ಹಾದಿಯು ರೈತರ ಹೃದಯದಿಂದ ಹಾದುಹೋಗುತ್ತದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು.

ರೈತರು ಇಂದು ಆಂದೋಲನ ನಡೆಸುತ್ತಿದ್ದರೆ,, ಆ ಆಂದೋಲನವನ್ನು ಸೀಮಿತ ರೀತಿಯಲ್ಲಿ ಮೌಲ್ಯಮಾಪನ ಮಾಡುವುದು  ದೊಡ್ಡ ತಪ್ಪು ಕಲ್ಪನೆ ಮತ್ತು ಭ್ರಮೆ. ರಸ್ತೆಗಿಳಿಯದ ರೈತರೂ ಸಹ ಇಂದು ಚಿಂತೆಗೀಡಾಗಿದ್ದಾರೆ, ಕಳವಳಗೊಂಡಿದ್ದಾರೆ. ಭಾರತೀಯ ಆರ್ಥಿಕತೆ  ಇಂದು ಉತ್ತುಂಗದಲ್ಲಿದೆ, ನಾವು ವಿಶ್ವದ ಐದನೇ ಮಹಾಶಕ್ತಿಯಾಗಿದ್ದೇವೆ, ಶೀಘ್ರದಲ್ಲೇ ಮೂರನೆಯವರಾಗಲಿದ್ದೇವೆ. ಆದರೆ ಒಂದು ವಿಷಯ ನೆನಪಿಡಿ, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯ ಆದಾಯವನ್ನು ಎಂಟು ಪಟ್ಟು ಹೆಚ್ಚಿಸಬೇಕು. ಈ ಎಂಟು ಪಟ್ಟು ಹೆಚ್ಚಳದಲ್ಲಿ ಅತಿ ದೊಡ್ಡ ಕೊಡುಗೆ ಗ್ರಾಮೀಣ ಆರ್ಥಿಕ ವಸ್ಥೆಯದ್ದಾಗಿರುತ್ತದೆ, ರೈತರ ಕಲ್ಯಾಣದ್ದಾಗಿರುತ್ತದೆ.

ರೈತರಿಗಾಗಿ ಎಷ್ಟು ಮಾಡಿದರೂ ಸಾಲದು. ರೈತರಿಗಾಗಿ ನಾವು ಏನು ಮಾಡುತ್ತೇವೆಯೋ ಅದು ದೇಶದ ಮೇಲೆ ಪರಿಣಾಮ ಬೀರುತ್ತದೆ, ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಾನು ಸಂಸ್ಥೆಗಳನ್ನು ನೋಡಿದಾಗ, ಅವುಗಳ ಪ್ರಭಾವ ಎಲ್ಲಿದೆ ಎಂದು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ.

ನಾವು ಸ್ವಯಂ ಅಡಿಟ್‌ ಮಾಡಿಕೊಳ್ಳದಿದ್ದರೆ, ಯಾರು ಮಾಡುತ್ತಾರೆ? ನಾವು ನಮ್ಮ ಕಾರ್ಯಗಳನ್ನು ಕೇವಲ ಔಪಚಾರಿಕತೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ನಾವು ಒಳಗೆ ಇಣುಕಿ ನೋಡಬೇಕಾಗಿದೆ, ಈವರೆಗೆ ನಾವು ಏಕೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದು. ಜಗತ್ತಿನಲ್ಲಿ ಕೃಷಿ ಅಭಿವೃದ್ಧಿ ಆಗುತ್ತಿಲ್ಲವೇ? ತಂತ್ರಜ್ಞಾನಗಳು ಬರುತ್ತಿಲ್ಲವೇ? ಇದು ಯೋಚಿಸಬೇಕಾದ ವಿಷಯ.

ರೈತರು ಧರಣಿ ನಡೆಸುತ್ತಿದ್ದಾರೆ ಎಂದು 2 ದಿನಗಳ ಹಿಂದೆಯೇ ಆತಂಕ ವ್ಯಕ್ತಪಡಿಸಿದ್ದೆ. ನಾವು ಇತ್ಯರ್ಥಕ್ಕೆ ಮುಂದಾಗಬೇಕು ಎಂದು ರೈತ ಬಂಧುಗಳಿಗೆ ಕರೆ ನೀಡಿದ್ದೆ.

ಸಮಸ್ಯೆ ಎಷ್ಟೇ ದೊಡ್ಡದಾಗಿದ್ದರೂ, ವಿವಾದ ಎಷ್ಟೇ ಗಂಭೀರವಾಗಿದ್ದರೂ, ಅದಕ್ಕೆ ವಿಶ್ವ ಮಟ್ಟದಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು ಎಂಬ ಸಂದೇಶವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿಗೆ ನೀಡಿದ್ದಾರೆ. ನಾವು ನಮ್ಮ ಸ್ವಂತ ಜನರೊಂದಿಗೆ ಹೋರಾಡಲು ಸಾಧ್ಯವಿಲ್ಲ, ನಮ್ಮ ಸ್ವಂತ ಜನರನ್ನು ಅವರು ಎಷ್ಟು ಕಾಲ ಹೋರಾಡುತ್ತಾರೆ ಎಂಬ ಪರಿಸ್ಥಿತಿಯಲ್ಲಿ ನಾವು ಇರಿಸಲು ಸಾಧ್ಯವಿಲ್ಲ. ಅವರ ವಾಸ್ತವ್ಯವು ಸೀಮಿತವಾಗಿರುತ್ತದೆ, ಅವರು ತಾವಾಗಿಯೇ ದಣಿದು ಹೋಗುತ್ತಾರೆ ಎಂಬ ಸಿದ್ಧಾಂತವನ್ನು ನಾವು ಹೊಂದಲು ಸಾಧ್ಯವಿಲ್ಲ. ಹೇ, ಭಾರತದ ಆತ್ಮವನ್ನು ಕದಡಬೇಡಿ, ಅದರ ಹೃದಯವನ್ನು ನೋಯಿಸಬೇಡಿ.

ನಾನು ಮಹಾ ನಿರ್ದೇಶಕರನ್ನು ಕರೆದು, ಗೌರವಾನ್ವಿತ ಸಚಿವರಿಗೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಅದರ ಎಲ್ಲಾ ಅಂಗಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ರೈತರಿಗೆ ಆರ್ಥಿಕ ಸಮೃದ್ಧಿಯನ್ನು ತರುವ ಪರಿಸ್ಥಿತಿಗಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತೇನೆ.

ನಾನು ಕರೆ ಕೊಟ್ಟಾಗ ಪ್ರತಿಕ್ರಿಯೆ ಬಂದದ್ದು ಸಂತೋಷ ತಂದಿದೆ. ಮಾನ್ಯ ಜಗಜೀತ್ ಸಿಂಗ್ ಡಲ್ಲೇವಾಲ್ ಅವರಿಂದಲೇ ಆ ಪ್ರತಿಕ್ರಿಯೆ ಬಂದಿದೆ. ಅವರ ಭಾಷೆ ಸಂಯಮದಿಂದ ಕೂಡಿದೆ, ಸಂಜೀವ್ ಜೀ ಅವರ ಭಾಷೆಯಂತೆಯೇ ಇದೆ. ನಾನು ಹೇಳಿದ್ದಕ್ಕೆ ಅವರು ಗಮನ ಕೊಟ್ಟಿದ್ದಾರೆ. ಅವರು ಸಂಬಂಧ ಹೊಂದಿರುವ SKM ಮತ್ತು KMM ಸಂಘಟನೆಗಳು ಆಂದೋಲನದ ಮನಸ್ಥಿತಿಯಲ್ಲಿವೆ. ಅವರು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಮಾನ್ಯ ಕೃಷಿ ಸಚಿವರು ಏನು ಹೇಳುತ್ತಿದ್ದಾರೆ? ಅವರ ಸಂದೇಶ ನನಗೆ ಏನು? ರೈತರಿಗೆ ಕೊಟ್ಟ ಭರವಸೆ ಏಕೆ ಈಡೇರಿಲ್ಲ ಎಂಬುದೇ ಅವರ ಸಂದೇಶ.

ಯಾವುದೇ ಸರ್ಕಾರವು ಭರವಸೆ ನೀಡಿದಾಗ ಮತ್ತು ಆ ಭರವಸೆ ರೈತನಿಗೆ ಸಂಬಂಧಿಸಿದ್ದಾಗ, ನಾವು ಯಾವುದೇ ಅವಕಾಶವನ್ನು ಬಿಡಬಾರದು ಎಂಬುದು ನಿಮ್ಮ ಮುಂದಿರುವ ಸವಾಲಾಗಿದೆ.ರೈತ ನಮಗೆ ಗೌರವಾನ್ವಿತ, ಪ್ರಾತಃ ಸ್ಮರಣೀಯ, ಯಾವಾಗಲೂ ವಂದನೀಯ. ನಾನೇ ರೈತನ ಮಗ, ರೈತ ಏನೆಲ್ಲಾ ಸಹಿಸಿಕೊಳ್ಳುತ್ತಾನೆ ಎಂದು ನನಗೆ ತಿಳಿದಿದೆ, ಮತ್ತು ನಮ್ಮ ಅನ್ನದಾತ.

ಈ ದೇಶದಲ್ಲಿ, 75 ವರ್ಷಗಳ ನಂತರ ನಾವು ಇಷ್ಟೊಂದು ದೊಡ್ಡ ದೊಡ್ಡ ಸಂಸ್ಥೆಗಳನ್ನು ಸೃಷ್ಟಿಸಿದ್ದೇವೆಯೇ ಮತ್ತು ರೈತ ಇಂದಿಗೂ ತನ್ನ ಉತ್ಪನ್ನದ ಬೆಲೆಗಾಗಿ ಪರದಾಡುತ್ತಿದ್ದಾನೆಯೇ? ಕೃಷಿ ಉತ್ಪನ್ನ ಎಷ್ಟು ದೊಡ್ಡ ವ್ಯಾಪಾರ. ರೈತರನ್ನು ಕೃಷಿಯ ಮುಖ್ಯಧಾರೆಗೆ ಸೇರಿಸಿ, ಅವರ ಮಾರುಕಟ್ಟೆ ಸಾಮರ್ಥ್ಯವನ್ನು ವಿಸ್ತರಿಸಿ, ಒಂದು ಮೌಲಿಕ ಬದಲಾವಣೆ ತರಬಹುದಿತ್ತು - ಆದರೆ ಏಕೆ ಹೀಗಾಗಲಿಲ್ಲ? ಯೋಚಿಸುವ ಪ್ರಶ್ನೆಯಾಗಿದೆ, ನೂರು ವರ್ಷಗಳಾದವು, ಖಂಡಿತವಾಗಿಯೂ ಯೋಚಿಸಬೇಕಾಗಿದೆ. ನಾನು ಹಲವಾರು ಬಾರಿ ಒತ್ತಿ ಹೇಳಿರುವ ಒಂದು ವಿಷಯ - ನಮ್ಮ ರೈತರು ತಮ್ಮ ಉತ್ಪನ್ನಗಳಿಗೆ ಏಕೆ ಹೆಚ್ಚಿನ ಮೌಲ್ಯ ಸೇರಿಸಬಾರದು? ಕೃಷಿ ಸಚಿವರೇ, ನೀವೂ ಮತ್ತು ನಿಮ್ಮ ಸಚಿವಾಲಯವೂ ಒಂದೇ ಗುರಿಯ ಮೇಲೆ ಕೇಂದ್ರೀಕೃತವಾಗಬೇಕು। ರೈತರಿಗೆ ತಮ್ಮ ಕೃಷಿ ಭೂಮಿಯಲ್ಲಿ ಸಣ್ಣ ಮತ್ತು ಮಧ್ಯಮ ಸಾಂಪ್ರದಾಯಿಕ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಬೇಕು, ಇದರಿಂದ ಅವರ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ಸೇರಿಸಬಹುದು.

ಇಂದಿನ ಕಾಲದಲ್ಲಿ ರೈತನ ಕೆಲಸವನ್ನು ಒಂದೇ ಚೌಕಟ್ಟಿನೊಳಗೆ ಸೀಮಿತಗೊಳಿಸಲಾಗಿದೆ, ಅವನು ಹೊಲದಲ್ಲಿ ಧಾನ್ಯ ಬೆಳೆಯಬೇಕು ಮತ್ತು ನಂತರ ಅದನ್ನು ಸರಿಯಾದ ಬೆಲೆಗೆ ಮಾರುವ ಬಗ್ಗೆ ಚಿಂತಿಸಬೇಕು.

ನಮ್ಮ ರೈತರಿಗೆ ಪ್ರತಿಫಲ ನೀಡುವ ಸೂತ್ರವನ್ನು ನಾವು ಅರ್ಥಶಾಸ್ತ್ರಜ್ಞರು ಮತ್ತು ಚಿಂತಕರೊಂದಿಗೆ ಸಮಾಲೋಚಿಸಿ ಏಕೆ ರೂಪಿಸಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ.
ಅರೆ, ನಾವು ಪ್ರತಿಫಲ ನೀಡುವ ಬದಲು, ಅವರಿಗೆ ಬರಬೇಕಾದ್ದನ್ನು ನೀಡುತ್ತಿಲ್ಲ. ನಾವು ಅವರಿಗೆ ಭರವಸೆ ನೀಡಿದ್ದನ್ನು ನೀಡುವಲ್ಲಿಯೂ ಕೂಡ ಜಿಪುಣತನ ತೋರುತ್ತಿದ್ದೇವೆ, ಮತ್ತು ರೈತರೊಂದಿಗೆ ಮಾತುಕತೆ ಏಕೆ ನಡೆಯುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ.

ಪ್ರಧಾನಮಂತ್ರಿಯವರ ಸಂದೇಶವೆಂದರೆ, ಸಂಕೀರ್ಣ ಸಮಸ್ಯೆಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು. ರೈತರೊಂದಿಗೆ ಮಾತುಕತೆ ತಕ್ಷಣವೇ ನಡೆಯಬೇಕು ಮತ್ತು ರೈತರಿಗೆ ಏನಾದರೂ ಭರವಸೆ ನೀಡಲಾಗಿದೆಯೇ ಎಂದು ನಮಗೆಲ್ಲರಿಗೂ ತಿಳಿದಿರಬೇಕು. ಮಾನ್ಯ ಕೃಷಿ ಸಚಿವರೇ, ನಿಮ್ಮ ಹಿಂದಿನ ಕೃಷಿ ಸಚಿವರು ಲಿಖಿತ ಭರವಸೆ ನೀಡಿದ್ದರೇ? ಹಾಗಿದ್ದಲ್ಲಿ, ಅದರ ಗತಿ ಏನು?

ನಾನು ಅನೇಕ ಅರ್ಥಶಾಸ್ತ್ರಜ್ಞರೊಂದಿಗೆ ಮಾತನಾಡಿದ್ದೇನೆ, ಚಿಂತನೆ ನಡೆಸಿದ್ದೇನೆ. ನಮ್ಮ ಮನಸ್ಸು ಸಕಾರಾತ್ಮಕವಾಗಿರಬೇಕು, ರೈತರಿಗೆ ಈ ಬೆಲೆ ನೀಡಿದರೆ ಅದರ ದುಷ್ಪರಿಣಾಮಗಳಾಗುತ್ತವೆ ಎಂದು ಅಡ್ಡಿಪಡಿಸುವಂತಿರಬಾರದು. ರೈತರಿಗೆ ನಾವು ಯಾವುದೇ ಬೆಲೆ ನೀಡಿದರೂ, ಅದರ ಐದು ಪಟ್ಟು ದೇಶಕ್ಕೆ ಸಿಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ನಾವು ನಮ್ಮ ಆದ್ಯತೆಗಳನ್ನು ನಿರ್ಧರಿಸಬೇಕು, ನಾವು ಗಮನ ಹರಿಸಬೇಕು, ನನಗೆ ತುಂಬಾ ವಿಷಾದವಿದೆ. ಆದರೆ ನನ್ನ ಕಣ್ಣ ಮುಂದೆ ಕಾಣುತ್ತಿರುವುದು ದಿಕ್ಕು ತಪ್ಪಿದ ಮಾರ್ಗ.

ನಾವು ರೈತ ಮತ್ತು ಸರ್ಕಾರದ ನಡುವೆ ಒಂದು ಗಡಿ ರೇಖೆಯನ್ನು ಸೃಷ್ಟಿಸಬಹುದೇ?

ನಾವು ಯಾರನ್ನು ತಬ್ಬಿಕೊಳ್ಳಬೇಕೋ ಅವರನ್ನು ತಿರಸ್ಕರಿಸಲು ಸಾಧ್ಯವಿಲ್ಲ. ನನ್ನ ಮಾತುಗಳು ಕಠಿಣವಾಗಿವೆ, ಆದರೆ ಕೆಲವೊಮ್ಮೆ ಕಾಯಿಲೆಗೆ ಚಿಕಿತ್ಸೆ ನೀಡಲು ಕಹಿ ಔಷಧಿಯನ್ನು ಕುಡಿಯಬೇಕಾಗುತ್ತದೆ.

ನಾನು ದೇಶದ ಪ್ರತಿಯೊಬ್ಬರಿಗೂ ಮನವಿ ಮಾಡುತ್ತೇನೆ, ನಾನು ರೈತ ಬಂಧುಗಳಿಗೆ ಮನವಿ ಮಾಡುತ್ತೇನೆ, ನನ್ನ ಮಾತನ್ನು ಕೇಳಿ, ನನ್ನ ಮಾತನ್ನು ಅರ್ಥಮಾಡಿಕೊಳ್ಳಿ, ನೀವು ಆರ್ಥಿಕತೆಯ ಆಧಾರಸ್ತಂಭ, ನೀವು ರಾಜಕೀಯದ ಮೇಲೆ ಪ್ರಭಾವ ಬೀರುತ್ತೀರಿ, ಭಾರತದ ಅಭಿವೃದ್ಧಿ ಪ್ರಯಾನದಲ್ಲಿ ನೀವು ಪ್ರಮುಖ ಭಾಗ, ನೀವು ಸಾಮಾಜಿಕ ಸಾಮರಸ್ಯದ ಉದಾಹರಣೆ.

ನೀವು ಕೂಡ ಮಾತುಕತೆಗೆ ಮುಂದೆ ಬರಬೇಕು. ಆದರೆ ಮಾನ್ಯ ಕೃಷಿ ಸಚಿವರೇ, ನನಗೆ ಸ್ವಲ್ಪ ನೋವಾಗಿದೆ. ನನ್ನ ಚಿಂತನೆ ಮತ್ತು ಚಿಂತೆಯ ವಿಷಯವಾಗಿದೆ. ಈವರೆಗೆ ಈ ಉಪಕ್ರಮ ಏಕೆ ಆಗಿಲ್ಲ. ನೀವು ಕೃಷಿ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು. ನನಗೆ ಸರ್ದಾರ್ ಪಟೇಲ್ ಅವರ ನೆನಪಾಗುತ್ತದೆ, ದೇಶವನ್ನು ಒಂದುಗೂಡಿಸುವ ಅವರ ಜವಾಬ್ದಾರಿಯನ್ನು ಅವರು ಹೇಗೆ ಚೆನ್ನಾಗಿ ನಿಭಾಯಿಸಿದರು? ಇಂತಹ ಸವಾಲು ಇಂದು ನಿಮ್ಮ ಮುಂದಿದೆ, ಇದನ್ನು ಭಾರತದ ಏಕತೆಗಿಂತ ಕಡಿಮೆ ಎಂದು ಭಾವಿಸಬೇಡಿ.

ಮತ್ತು ಈ ತಿಳುವಳಿಕೆ ತುಂಬಾ ಸೀಮಿತವಾಗಿದೆ, ಕಿರಿದಾಗಿದೆ, ರೈತ ಚಳುವಳಿ ಎಂದರೆ ರಸ್ತೆಯಲ್ಲಿರುವ ಜನರು ಮಾತ್ರ ಎಂದಲ್ಲ. ರೈತನ ಮಗ ಇಂದು ಅಧಿಕಾರಿ, ರೈತನ ಮಗ ಸರ್ಕಾರಿ ನೌಕರ. ಅರೆ, ಈ ದೇಶದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಏಕೆ "ಜೈ ಜವಾನ್, ಜೈ ಕಿಸಾನ್" ಎಂದು ಹೇಳಿದರು? ಆ ಜೈ ಕಿಸಾನ್ ಜೊತೆ ನಮ್ಮ ವರ್ತನೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕಲ್ಪನೆಯಂತೆಯೇ ಇರಬೇಕು.

ಮತ್ತು ಅದರಲ್ಲಿ ಏನು ಸೇರಿಸಲಾಯಿತು? ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು - "ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್".

ಮತ್ತು ಈಗಿನ ಪ್ರಧಾನ ಮಂತ್ರಿಯವರು ದೂರದೃಷ್ಟಿ ತೋರಿಸಿ ಅದನ್ನು ಉತ್ತುಂಗಕ್ಕೆ ಕೊಂಡೊಯ್ದರು - "ಜೈ ಜವಾನ್, ಜೈ ಕಿಸಾನ್, ಜೈ ಅನುಸಂಧಾನ್, ಜೈ ವಿಜ್ಞಾನ್".

ಈ ಸಮಯ ನನಗೆ ನೋವಿನಿಂದ ಕೂಡಿದೆ ಏಕೆಂದರೆ ನಾನು ರಾಷ್ಟ್ರಧರ್ಮದಿಂದ ತುಂಬಿದ್ದೇನೆ.

ಮೊದಲ ಬಾರಿಗೆ ನಾನು ಭಾರತವನ್ನು ಬದಲಾಗುತ್ತಿರುವುದನ್ನು ನೋಡಿದ್ದೇನೆ. ಮೊದಲ ಬಾರಿಗೆ ನಾನು ಅಭಿವೃದ್ಧಿ ಹೊಂದಿದ ಭಾರತ ನಮ್ಮ ಕನಸಲ್ಲ, ನಮ್ಮ ಗುರಿ ಎಂದು ಭಾವಿಸುತ್ತಿದ್ದೇನೆ. ಜಗತ್ತಿನಲ್ಲಿ ಭಾರತ ಈ ಹಿಂದೆ ಎಂದಿಗೂ ಇಷ್ಟು ಎತ್ತರದಲ್ಲಿರಲಿಲ್ಲ. ಜಗತ್ತಿನಲ್ಲಿ ನಮ್ಮ ಖ್ಯಾತಿ ಈ ಹಿಂದೆ ಎಂದಿಗೂ ಇಷ್ಟಿರಲಿಲ್ಲ.

ಹೀಗಿರುವಾಗ ನನ್ನ ರೈತ ಏಕೆ ಚಿಂತೆಗೀಡಾಗಿದ್ದಾನೆ? ಏಕೆ ನೊಂದಿದ್ದಾನೆ? ರೈತ ಏಕೆ ಒತ್ತಡದಲ್ಲಿದ್ದಾನೆ?

ಇದು ತುಂಬಾ ಗಂಭೀರವಾದ ವಿಷಯ, ಇದನ್ನು ಹಗುರವಾಗಿ ಪರಿಗಣಿಸುವುದು ಎಂದರೆ ನಾವು ಪ್ರಾಯೋಗಿಕವಾಗಿಲ್ಲ, ನಮ್ಮ ನೀತಿ ನಿರೂಪಣೆ ಸರಿಯಾದ ಹಾದಿಯಲ್ಲಿಲ್ಲ ಎಂದರ್ಥ. ಯಾರು ಆ ಜನರು ತಮ್ಮ ರೈತರಿಗೆ ಅವರ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡಿದರೆ ಏನೋ ಪರ್ವತ ಕುಸಿದು ಬೀಳುತ್ತದೆ ಎಂದು ಹೇಳುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ.

ರೈತ ಒಬ್ಬಂಟಿಯಾಗಿದ್ದಾನೆ, ಅಸಹಾಯಕನಾಗಿದ್ದಾನೆ, ಅವನು ಏನು ನಿರ್ಧರಿಸಬಹುದು ಎಂಬುದನ್ನು ಅವನೇ ನಿರ್ಧರಿಸುವುದಿಲ್ಲ. ಕೃಷಿ ಸಚಿವರೇ, ನಿಮ್ಮ ಪ್ರತಿ ಕ್ಷಣವೂ ಅಮೂಲ್ಯವಾದುದು, ನಾನು ನಿಮ್ಮಲ್ಲಿ ವಿನಂತಿಸುತ್ತೇನೆ, ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ, ಎರಡನೇ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯಾಗಿ ನಾನು ನಿಮ್ಮಲ್ಲಿ  ಬೇಡಿಕೊಳ್ಳುತ್ತೇನೆ, ದಯವಿಟ್ಟು ನನಗೆ ತಿಳಿಸಿ, ರೈತರಿಗೆ ಏನು ಭರವಸೆ ನೀಡಲಾಗಿತ್ತು, ಮತ್ತು ಆ ಭರವಸೆಯನ್ನು ಏಕೆ ಈಡೇರಿಸಲಿಲ್ಲ ಮತ್ತು ಆ ಭರವಸೆಯನ್ನು ಈಡೇರಿಸಲು ನಾವು ಏನು ಮಾಡಬೇಕು? ಕಳೆದ ವರ್ಷವೂ ಚಳುವಳಿ ನಡೆಯಿತು, ಈ ವರ್ಷವೂ ಚಳುವಳಿ ನಡೆಯುತ್ತಿದೆ, ಕಾಲಚಕ್ರ ತಿರುಗುತ್ತಿದೆ, ನಾವು ಏನನ್ನೂ ಮಾಡುತ್ತಿಲ್ಲ.

ಗಣ್ಯ ವಿಜ್ಞಾನಿಗಳೇ, ನಾನು ನಿಮಗೆ ಹೇಳಿದ್ದು ನನ್ನ ಭಾವನೆಗಳಲ್ಲಿ ಕೇವಲ 5% ಮಾತ್ರ ಎಂದು ನಾನು ನಿಮಗೆ ಹೇಳಬಲ್ಲೆ. ನಾನು ಹೊಂದಿರುವ ಸಾಂವಿಧಾನಿಕ ಹುದ್ದೆಗೆ ನಾನು ಬದ್ಧನಾಗಿದ್ದೇನೆ. ನಾನು ನನ್ನನ್ನು ಸಂಪೂರ್ಣವಾಗಿ ವ್ಯಕ್ತಪಡಿಸುತ್ತಿಲ್ಲ, ಆದರೆ ರೈತರಿಗೆ, ಗ್ರಾಮೀಣ ಭಾರತಕ್ಕೆ ಸಂಪೂರ್ಣ ಮತ್ತು ಸಮಗ್ರ ನ್ಯಾಯವನ್ನು ಒದಗಿಸಲು ರಾಷ್ಟ್ರವು ಮುಂದೆ ಬರಬೇಕು. ನಿಮ್ಮ ಅರ್ಥಶಾಸ್ತ್ರಜ್ಞರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.

ನಾನು ಹಣದುಬ್ಬರವಾಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೇನೆ, ಒಂದು ಸರಳವಾದ ವಿಷಯ ಹೇಳುತ್ತೇನೆ. ಬ್ರೆಡ್ ಅನ್ನು ಗೋಧಿಯಿಂದ ತಯಾರಿಸಲಾಗುತ್ತದೆ, ತುಂಬಾ ವ್ಯತ್ಯಾಸವಿದೆ! ಹಾಲಿನಿಂದಲೇ ಐಸ್ ಕ್ರೀಂ ತಯಾರಾಗುತ್ತೆ, ಅಷ್ಟೊಂದು ವ್ಯತ್ಯಾಸ! ಕೊನೆಗೆ ಸ್ವಲ್ಪವಾದರೂ ಜ್ಞಾನ ನಮಗಿರುತ್ತದೆ, ಅನುಭವವಿರುತ್ತದೆ ಮತ್ತು ಬಾಲ್ಯದಲ್ಲಿ ಗೊಬ್ಬರದಲ್ಲಿ ಕಾಲಿಟ್ಟು ಜೀವನ ಸಾಗಿಸಿದ್ದೇನೆ, ಆ ಕಷ್ಟಗಳನ್ನು ನಾನೇ ಅನುಭವಿಸಿದ್ದೇನೆ. ನಿಮ್ಮ ದೊಡ್ಡ ದೊಡ್ಡ ಯೋಜನೆಗಳು ಯಶಸ್ವಿಯಾಗಿವೆ, ನೀವು ಹೆಸರು ಗಳಿಸಿದಂತೆ, ಭಾರತ ಇಂದು ಖ್ಯಾತಿಯ ಉತ್ತುಂಗದಲ್ಲಿದೆ.

ನಾವು 118 ಯುನಿಕಾರ್ನ್‌ಗಳನ್ನು ಹೊಂದಿದ್ದೇವೆ, ನಾವು ಜಾಗತಿಕ ಆರಂಭಿಕ ಕಾರ್ಯವಿಧಾನವನ್ನು ಹೊಂದಿದ್ದೇವೆ. ಇದು ಪ್ರಪಂಚದ ಅಸೂಯೆಯಾಗಿದೆ. ಅರೇ, ಇದರಲ್ಲಿ ರೈತರ ಸಹಭಾಗಿತ್ವವೇಕೆ ಇಲ್ಲ?

ನಾವು ದಾರಿ ತಪ್ಪಿದ್ದೇವೆ ಎಂದು ಭಾವಿಸೋಣ. ನಾವು ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದ್ದೇವೆ ಮತ್ತು ನನ್ನ ದೃಢವಾದ ನಂಬಿಕೆಯೆಂದರೆ, ಇದಕ್ಕೆ ಪರಿಹಾರವನ್ನು ಪ್ರಧಾನ ಮಂತ್ರಿಯವರು ಈಗಾಗಲೇ ನೀಡಿದ್ದಾರೆ, ಅದೆಂದರೆ ಮಾತುಕತೆ ನಡೆಯಬೇಕು. ಮಾನ್ಯ ಜಗಜೀತ್ ಸಿಂಗ್ ಅವರು ಮೊದಲು ನಾನು ಏನು ಹೇಳಿದ್ದೇನೆ ಎಂಬುದನ್ನು ಸಾರ್ವಜನಿಕವಾಗಿ ಗಮನಿಸಿದಾಗ ಮತ್ತು ನಂತರ ಅವರು ರೈತರಿಗೆ MSP ಗ್ಯಾರಂಟಿ ಕಾನೂನು ಬೇಕು ಎಂದು ಮೂರು ವಿಷಯಗಳನ್ನು ಹೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಮುಕ್ತ ಮನಸ್ಸಿನಿಂದ ನೋಡಿ, ಮುಕ್ತ ಮನಸ್ಸಿನಿಂದ ಯೋಚಿಸಿ,  ಮೌಲ್ಯಮಾಪನ ಮಾಡಿ. ನೀಡುವುದರಿಂದ ಏನು ಪ್ರಯೋಜನಗಳಿವೆ, ನೀಡದಿರುವುದರಿಂದ ಏನು ನಷ್ಟಗಳಿವೆ. ನೀವು ತಕ್ಷಣ ಅದರಲ್ಲಿ ನಷ್ಟಗಳೇ  ನಷ್ಟಗಳಿವೆ ಎಂದು ಕಂಡುಕೊಳ್ಳುವಿರಿ. ಎರಡನೆಯದಾಗಿ, ಕೃಷಿ ಸಚಿವರು ಲಿಖಿತವಾಗಿ ನೀಡಿದ ಭರವಸೆ ಏನಾಯಿತು?

ಮತ್ತು ನನ್ನ ನೋವು ಏನೆಂದರೆ, ರೈತ, ರೈತರ ಹಿತೈಷಿಗಳು ಇಂದು ಮೌನವಾಗಿದ್ದಾರೆ, ಮಾತನಾಡಲು ಹಿಂಜರಿಯುತ್ತಿದ್ದಾರೆ. ದೇಶದ ಯಾವುದೇ ಶಕ್ತಿ ರೈತರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಒಂದು ರಾಷ್ಟ್ರವು ರೈತರ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಿಸಿದರೆ ಅದು ಭಾರಿ ಬೆಲೆ ತೆರಬೇಕಾಗುತ್ತದೆ.

ಸ್ನೇಹಿತರೇ, ನೀವೆಲ್ಲರೂ ಮಹಾನ್ ವಿದ್ವಾಂಸರು, ನೀವು ಸಮಾಜದ ಶ್ರೇಷ್ಠರು. ನಾನು ಇದನ್ನು ತುಂಬಾ ವಿಭಿನ್ನವಾದ ಭಾಷಣವನ್ನಾಗಿ ಮಾಡಬಹುದಿತ್ತು. ನಾನು ನಿಮ್ಮನ್ನು ಆಕಾಶದಷ್ಟು ಹೊಗಳಬಹುದಿತ್ತು, ನೀವು ಹಲವು ಬಾರಿ ಚಪ್ಪಾಳೆ ತಟ್ಟಬಹುದಿತ್ತು, ಆದರೆ ನಾನು ಇರುವ ಸ್ಥಾನದಲ್ಲಿ, ನಾನು ಬಂದ ವರ್ಗದಲ್ಲಿ, ನಾನು ಮಾಡುತ್ತಿರುವ ಕರ್ತವ್ಯನಿಷ್ಠೆಯಲ್ಲಿ, ನಾನು ತೆಗೆದುಕೊಂಡ ಪ್ರಮಾಣಕ್ಕೆ, ನಾನು ನಿಮಗೆ ಈ ಮಾತ್ರೆ ನೀಡಬೇಕಾಗಿದೆ. ಅದು ನೋವಿನಿಂದ ಕೂಡಿರಬಹುದು, ಕಹಿಯಾಗಿರಬಹುದು, ಕನಿಷ್ಠ ಇಂದು ರಾತ್ರಿ ನೀವು ಮಲಗುವ ಮುನ್ನ ಯೋಚಿಸುವಿರಿ. ನಾನು ರಾತ್ರಿ ಮೂರು ಗಂಟೆಗಳ ಕಾಲ ಕಳೆದಿದ್ದೇನೆ, ನನ್ನ ತಂಡವು ಕಳೆದಿದೆ, ಇಬ್ಬರು ಸದಸ್ಯರು ಇಲ್ಲಿದ್ದಾರೆ, ಈ ದೃಷ್ಟಿಕೋನ ದಾಖಲೆಗಳನ್ನು ಯಾರಾದರೂ ನೋಡಿದ್ದಾರೆಯೇ, ಇಷ್ಟೊಂದು ಸಂಸ್ಥೆಗಳಿವೆ, ಹೆಸರು ಕೂಡ ನೆನಪಿಲ್ಲ, ಅವು ಏನಾದರೂ ಮಾಡುತ್ತಿವೆಯೇ?

ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ವಿಷಾದಿಸುತ್ತೇನೆ, ನಾನು ಭೂಮಿಯನ್ನು ಅಳತೆ ಮಾಡಿದ್ದೇನೆ - ರಾಜಸ್ಥಾನದಲ್ಲಿ ನಿಮ್ಮ ಸಂಸ್ಥೆಗಳಿಗೆ ಹೋಗಿ ಅಳತೆ ಮಾಡಿದ್ದೇನೆ. ಹರಿಯಾಣದಲ್ಲಿ ಅಳತೆ ಮಾಡಿದ್ದೇನೆ, ಇತರ ರಾಜ್ಯಗಳಲ್ಲಿಯೂ ಅಳತೆ ಮಾಡಿದ್ದೇನೆ. ನನಗೆ ಒಂದೇ ಒಂದು ವಿಷಯ ಸಿಕ್ಕಿತು, ನಿರಾಶೆ, ಆದರೆ ನಾನು ನಿರಾಶೆಗೊಳ್ಳುವವನಲ್ಲ. ನನಗೆ ಭರವಸೆಯಿದೆ. ಇಂದಿನಿಂದ ಪಾಠಕ್ ಸರ್, ದಯವಿಟ್ಟು ನಿಮ್ಮ ಸಂಸ್ಥೆಗಳಿಗೆ ಶಕ್ತಿ ತುಂಬಿ. ನಾನು ನಿಮ್ಮ ಭಾಷಣವನ್ನು ನೋಡಿದೆ. ಅದರಲ್ಲಿ ನೀವು ನಮ್ಮನ್ನು ಸ್ವಾಗತಿಸುವಲ್ಲಿ ಉತ್ತಮವಾಗಿ ಮಾಡಿದ್ದೀರಿ, ಆದರೆ ಕಂಟೆಂಟ್ ಎಲ್ಲಿ ಇತ್ತು ಪಾಠಕ್ ಸರ್? ಇದು ಜಗತ್ತಿಗೆ ನಾವು 100 ವರ್ಷಗಳನ್ನು ಪೂರೈಸುತ್ತಿದ್ದೇವೆ ಎಂದು ಹೇಳಲು ಸಮಯವಾಗಿತ್ತು - ಶತಮಾನೋತ್ಸವ ಆಚರಣೆ! ಹತ್ತಿ ರಫ್ತಿನಲ್ಲಿ ಜಗತ್ತಿನಲ್ಲಿ ನಾವು ಎಲ್ಲಿದ್ದೇವೆ, ನಮ್ಮ ರೈತ ಎಲ್ಲಿದ್ದಾನೆ?

ನೀವು ನಿರ್ಧರಿಸಿದ್ದರೆ, ರೈತರ ಮಕ್ಕಳು ಉದ್ಯಮಿಗಳಾಗುತ್ತಿದ್ದರು, ಹಳ್ಳಿಗಳ ಗುಂಪಿನೊಳಗೆ ಮೌಲ್ಯವನ್ನು ಸೇರಿಸುತ್ತಿದ್ದರು. ಹಳೆಯ ಸಂಸ್ಕೃತಿ ನೆನಪಿಗೆ ಬರುತ್ತದೆ. ನಾವು ದೂರ ಸರಿದಿದ್ದೇವೆ.

ಭಾರತದ ಕೃಷಿ ಕ್ಷೇತ್ರವು ದೇಶದ ಆರ್ಥಿಕತೆಯ ಕೇಂದ್ರಬಿಂದುವಾಗಿದೆ. ಅತ್ಯುತ್ತಮ ಸಂಶೋಧನಾ ಸಂಸ್ಥೆಗಳ ಅಲೆಯೊಂದಿಗೆ ಅದರ ವ್ಯಾಪ್ತಿಯು ಹೋಲಿಸಲಾಗದು, ICAR ಸಾಮರ್ಥ್ಯವನ್ನು ಹೊಂದಿದೆ, ದಯವಿಟ್ಟು ಈ ಸಾಮರ್ಥ್ಯವನ್ನು ಬಳಸಿಕೊಳ್ಳಿ. ನಿಮಗೆ ದೇಶಾದ್ಯಂತ 180 ಕ್ಕೂ ಹೆಚ್ಚು ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳಿವೆ.

ನೀವು ಅತಿದೊಡ್ಡ ರಾಷ್ಟ್ರೀಯ ಕೃಷಿ ವ್ಯವಸ್ಥೆಯಲ್ಲಿ ಒಂದಾಗಿರುವುದು ಮಾತ್ರವಲ್ಲ, ನೀವು ವಿಶ್ವದಲ್ಲೇ ಅತಿದೊಡ್ಡವರು. ಮತ್ತೆ ನಾನು ಹೇಳುತ್ತೇನೆ, ನಮ್ಮ ಬೇರುಗಳು ಗ್ರಾಮೀಣ ಭಾರತದಲ್ಲಿವೆ, ನಮ್ಮ ಬೇರುಗಳು ಕೃಷಿಯಲ್ಲಿವೆ.

ಇವುಗಳ ಅಭಿವೃದ್ಧಿಯಾಗದಿದ್ದರೆ, ಅಭಿವೃದ್ಧಿ ಹೊಂದಿದ ಭಾರತ @ 2047 ಕನಿಷ್ಠ ರೈತರಿಗಾದರೂ ಬರಬೇಕು. ಕೃಷಿ ವಲಯದ ಸಮಸ್ಯೆಗಳ ಪರಿಹಾರವು ಆಡಳಿತದ ಅತ್ಯುನ್ನತ ಆದ್ಯತೆಯಾಗಿರಬೇಕು.

ರೈತರು ಸಂಕಷ್ಟದಲ್ಲಿದ್ದರೆ ಮತ್ತು ಪ್ರತಿಭಟಿಸುವ ರೈತರು ಅದು ರಾಷ್ಟ್ರದ ಒಟ್ಟಾರೆ ಯೋಗಕ್ಷೇಮಕ್ಕೆ  ಒಳ್ಳೆಯ ಸಂಕೇತವಲ್ಲ.

ಭಾರತವು ಬಡತನ ನಿರ್ಮೂಲನೆಯಲ್ಲಿ ಇತರ ವಲಯಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಣಾಮ ಬೀರುವ ಮತ್ತು ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಲೇ ಕೃಷಿ ಸಂಸ್ಕರಣೆ ಮತ್ತು ಗ್ರಾಮೀಣ ಸೇವೆಗಳ ಮೂಲಕ ಭಾರತದ ಅರ್ಧದಷ್ಟು ಬಳಕೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.  ಆದರೆ ನಾವಿದನ್ನು ಯಾಕೆ ಸಾಧಿಸಲು ಸಾಧ್ಯವಾಗುತ್ತಿಲ್ಲ? ರೈತ  ಏನು ಮಾಡುತ್ತಾನೆ? ಅನ್ನದಾತ! ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ! ಪ್ರತಿಕೂಲ ಹವಾಮಾನ,  ಅನಿಶ್ಚಿತ ಪೂರೈಕೆ... ಒಂದು ಕಾಲದಲ್ಲಿ ರೈತರಿಗೆ ವಿದ್ಯುತ್ ಸಿಗಬೇಕೆಂದರೆ ರಾತ್ರಿಯೇ ಕಾಯಬೇಕಿತ್ತು.

ಸ್ನೇಹಿತರೇ, ನನ್ನ ಮನದಾಳದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಆಲೋಚನೆಗಳನ್ನು ನೀವು ಗಂಭೀರವಾಗಿ ಪರಿಗಣಿಸುವಿರಿ ಎಂಬ ವಿಶ್ವಾಸ ನನಗಿದೆ. ಇವು ನಿಮ್ಮ ಆತ್ಮಸಾಕ್ಷಿಯನ್ನು ಕೆಣಕುತ್ತವೆ. ನಮ್ಮ ರೈತ ಸಮೃದ್ಧಿ ಹೊಂದುವುದನ್ನು ನೋಡಲು ನಾವೆಲ್ಲರೂ ಒಟ್ಟಾಗಿ, ಒಂದೇ ಗುರಿಯೊಂದಿಗೆ ಕೆಲಸ ಮಾಡೋಣ. ನಮ್ಮ ಗ್ರಾಮೀಣ ಆರ್ಥಿಕತೆಯನ್ನು ಪೋಷಿಸೋಣ. ರೈತನಿಗೆ ನಿಜವಾದ ಗೌರವ ಸಲ್ಲಿಸೋಣ. ರೈತರ ಸಮಸ್ಯೆಗಳನ್ನು ಖಂಡಿತವಾಗಿಯೂ ಪರಿಹರಿಸುತ್ತೇವೆ ಎಂದು ಇಂದು ನಾವು  ದೃಢವಾಗಿ ಸಂಕಲ್ಪ ಮಾಡೋಣ. ರೈತರ ಸಮಸ್ಯೆಗಳನ್ನು ಪರಿಹರಿಸಲು ಯಾಕಿಷ್ಟು ಚಿಂತೆ?

ರೈತರೊಂದಿಗೆ ಮಾತನಾಡುವುದೇ ಚಿಂತೆಯ ವಿಷಯವಾಗಿದ್ದರೆ, ನಾವು ಎಲ್ಲಿದ್ದೇವೆ ಎಂದು ಸಾಮಾನ್ಯ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.

ಇದೇ ಭಾವನೆಯೊಂದಿಗೆ, ಈ ಸಂಸ್ಥೆ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಂಗಸಂಸ್ಥೆಗಳು ಇನ್ನು ಮುಂದೆ ರೈತನನ್ನು ತಮ್ಮ ಧ್ರುವತಾರೆಯಾಗಿ, ಮಾರ್ಗದರ್ಶಿಯಾಗಿ ಸ್ವೀಕರಿಸುತ್ತವೆ ಎಂದು ನಾನು ಹಾರೈಸುತ್ತೇನೆ. ಯಾವುದೇ ತೊಂದರೆಗಳು ಎದುರಾದಾಗ, ರಾಷ್ಟ್ರವು ಕಷ್ಟದಲ್ಲಿರುವಾಗ, ಕಿಸಾನ್‌, ರೈತ,  ರಾಷ್ಟ್ರಕ್ಕೆ ದೀಪಸ್ತಂಭವಾಗಿ  ನಿಲ್ಲುತ್ತಾನೆ ಎಂಬುದನ್ನು ನೀವು ಯಾವಾಗಲೂ ನೆನಪಿಟ್ಟುಕೊಳ್ಳಿ.

 

*****


(Release ID: 2080572) Visitor Counter : 10


Read this release in: English , Hindi