ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಸು.ಶ್ರೀ ಶೋಭಾ ಕರಂದ್ಲಾಜೆ ಅವರು 43ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್), 2024ರಲ್ಲಿ "ಎಂ ಎಸ್‌ ಎಂ ಇ ಪೆವಿಲಿಯನ್" ಗೆ ಭೇಟಿ ನೀಡಿದರು

Posted On: 20 NOV 2024 4:56PM by PIB Bengaluru

ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ ಎಸ್‌ ಎಂ ಇ) ರಾಜ್ಯ ಸಚಿವರಾದ ಸು.ಶ್ರೀ ಶೋಭಾ ಕರಂದ್ಲಾಜೆ ಅವರು ಇಂದು ನವದೆಹಲಿಯಲ್ಲಿ 43ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ (ಐಐಟಿಎಫ್) “ಎಂ ಎಸ್‌ ಎಂ ಇ ಪೆವಿಲಿಯನ್”ಗೆ ಭೇಟಿ ನೀಡಿದರು. ಸಚಿವರೊಂದಿಗೆ ಎಂ ಎಸ್‌ ಎಂ ಇ ಸಚಿವಾಲಯ ಮತ್ತು ಅದರ ಅಡಿಯಲ್ಲಿನ ಇತರ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪೆವಿಲಿಯನ್‌ನ ಮುಖ್ಯ ವಿಷಯವೆಂದರೆ “ಹಸಿರು ಎಂ ಎಸ್‌ ಎಂ ಇ ಗಳು”, ಇದು ಎಂ ಎಸ್‌ ಎಂ ಇ ಗಳು ಸ್ವಚ್ಛ/ಹಸಿರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಸಚಿವಾಲಯ ನೀಡುತ್ತಿರುವ ಗಮನವನ್ನು ಒತ್ತಿಹೇಳುತ್ತದೆ. ಇದಲ್ಲದೆ, 18 ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗೆ ಆರಂಭದಿಂದ ಅಂತ್ಯದವರೆಗೆ ಬೆಂಬಲವನ್ನು ಒದಗಿಸುವ ಸಚಿವಾಲಯದ ಪ್ರಮುಖ ಯೋಜನೆಯಾದ “ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ”ಯನ್ನು ಪೆವಿಲಿಯನ್ ಎತ್ತಿ ತೋರಿಸುತ್ತದೆ.

ದೇಶದ 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 200 ಪ್ರದರ್ಶಕರು ಎಂ ಎಸ್‌ ಎಂ ಇ ಪೆವಿಲಿಯನ್‌ ನಲ್ಲಿ ಭಾಗವಹಿಸುತ್ತಿದ್ದಾರೆ, ಜವಳಿ, ಕೈಮಗ್ಗ, ಕರಕುಶಲ, ಕಸೂತಿ, ಚರ್ಮದ ಪಾದರಕ್ಷೆ, ಆಟಗಳು ಮತ್ತು ಆಟಿಕೆಗಳು, ಬಿದಿರಿನ ಕರಕುಶಲ ವಸ್ತುಗಳು, ಬೆತ್ತದ ವಸ್ತುಗಳು, ರತ್ನಗಳು ಮತ್ತು ಆಭರಣಗಳು, ಪಿಂಗಾಣಿ ಉತ್ಪನ್ನಗಳು ಮತ್ತು ಕುಂಬಾರಿಕೆ ಉತ್ಪನ್ನಗಳು, ಯಾಂತ್ರಿಕ ವಸ್ತುಗಳು ಇತ್ಯಾದಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಮೇಳವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ವಿಶೇಷವಾಗಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಒಡೆತನದ ಉದ್ಯಮಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಸಂಭಾವ್ಯ ಗ್ರಾಹಕರ ದೊಡ್ಡ ಗುಂಪಿನ ನಡುವೆ ಪ್ರಚಾರ ಮಾಡಲು ಅವಕಾಶವನ್ನು ಒದಗಿಸುತ್ತದೆ.

ಸು.ಶ್ರೀ ಶೋಭಾ ಕರಂದ್ಲಾಜೆ ಅವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರ ಉತ್ಪನ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕುರಿತು 'ಬೀದಿ ನಾಟಕ'ವನ್ನು ಸಹ ಪ್ರಸ್ತುತಪಡಿಸಲಾಯಿತು. ಐಐಟಿಎಫ್ 2024ರಲ್ಲಿ ಭಾಗವಹಿಸುವವರಲ್ಲಿ ಶೇ.85 ರಷ್ಟು ಜನರು ಮೊದಲ ಬಾರಿಗೆ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಸಚಿವರು ಹೇಳಿದರು. ಎಂ ಎಸ್‌ ಎಂ ಇ ಸಚಿವಾಲಯವು ತನ್ನ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ಎಂ ಎಸ್‌ ಎಂ ಇ ಗಳಿಗೆ ಬೆಂಬಲ ಮತ್ತು ಸಹಾಯವನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಸಚಿವರು ಪ್ರದರ್ಶಕರನ್ನು ಪ್ರೋತ್ಸಾಹಿಸಿದರು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಂ ಎಸ್‌ ಎಂ ಇ ವಲಯದ ಅಭಿವೃದ್ಧಿಗೆ ಎಂ ಎಸ್‌ ಎಂ ಇ ಸಚಿವಾಲಯ ಬದ್ಧವಾಗಿದೆ ಎಂದು ಹೇಳಿದರು.

 

*****


(Release ID: 2075188) Visitor Counter : 11


Read this release in: Tamil , English , Urdu , Hindi