ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದ ಶುಭಸಂದರ್ಭದಲ್ಲಿ 12,850 ಕೋಟಿ ರೂಪಾಯಿ ಮೊತ್ತದ ಬಹುಹಂತದ ಆರೋಗ್ಯ ವಲಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


1,641 ಕೋಟಿ ರೂಪಾಯಿ ಮೊತ್ತದ 55 ಲಕ್ಷ ಜನರಿಗೆ ಅನುಕೂಲವಾಗುವ 7 ಇ.ಎಸ್.ಐ.ಸಿ ಯೋಜನೆಗಳನ್ನು ಉದ್ಘಾಟಿಸಿ
ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

“ಸರ್ವಜನ ಹಿತಾಯ, ಸರ್ವಜನ ಸುಖಾಯ”ಯೋಜನೆ ಮೂಲಕ ಪ್ರಧಾನಮಂತ್ರಿಯವರು ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿ ಮತ್ತು ಕರಕುಶಲತೆಯೊಂದಿಗೆ ಬೆಸೆದಿದ್ದಾರೆ: ಡಾ. ಮಾಂಡವೀಯ

ಎಬಿ-ಪಿಎಂಜೆಎವೈ ನೋಂದಾಯಿತ ಆಸ್ಪತ್ರೆಗಳಲ್ಲಿ ಇಎಸ್ಐ ಫಲಾನುಭವಿಗಳು ಚಿಕಿತ್ಸೆ ಪಡೆಯಬಹುದು: ಕೇಂದ್ರ ಕಾರ್ಮಿಕ ಸಚಿವರು

ಕಳೆದ ಹತ್ತು ವರ್ಷಗಳಲ್ಲಿ ಇಎಸ್ಐಸಿ ಫಲಾನುಭವಿಗಳ ಸಂಖ್ಯೆ ದ್ವಿಗುಣಗೊಂಡಿದೆ: ಕೇಂದ್ರ ಕಾರ್ಮಿಕ ಸಚಿವರು

2014ರಲ್ಲಿ 393 ಜಿಲ್ಲೆಗಳಲ್ಲಿದ್ದ ಇಎಸ್ಐಸಿ ಆಸ್ಪತ್ರೆಗಳ ಸಂಪರ್ಕ ಜಾಲ 2024ರ ವೇಳೆಗೆ 674 ಜಿಲ್ಲೆಗಳಿಗೆ ವಿಸ್ತರಣೆ

ಪ್ರಕಟಣಾ ದಿನಾಂಕ: 29 OCT 2024 5:04PM by PIB Bengaluru

ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದ ಶುಭ ಸಂದರ್ಭದಲ್ಲಿ ನಡೆಯುವ ಮಹತ್ವದ ಸಂದರ್ಭದಲ್ಲಿ ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ [ಎಐಐಎ] ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,850 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹು ಆರೋಗ್ಯ ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಅಡಿಪಾಯ ನೆರವೇರಿಸಿದರು. ಈ ಉಪಕ್ರಮಗಳು ಭಾರತದಾದ್ಯಂತ ಆರೋಗ್ಯ ಮೂಲಸೌಕರ್ಯಕ್ಕೆ ಇದು ಗಣನೀಯವಾದ ಉತ್ತೇಜನವನ್ನು ಒದಗಿಸುತ್ತದೆ. ರಾಷ್ಟ್ರವ್ಯಾಪಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನದಿಂದ ಸಂಯೋಜಿಸಲಾಗಿದೆ. ಗಮನಾರ್ಹವಾಗಿ, ಇವುಗಳಲ್ಲಿ ಏಳು ಯೋಜನೆಗಳು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್ಐಸಿ) ಸಂಬಂಧಿಸಿವೆ. ಇದು ಕಾರ್ಮಿಕರು ಮತ್ತು ಅವರ ಕುಟುಂಬಗಳ ವ್ಯಾಪಕ ವಲಯಗಳಿಗೆ ಪ್ರಯೋಜನವನ್ನು ನೀಡಲಿದೆ.

ಮಧ್ಯ ಪ್ರದೇಶದ ಇಂದೋರ್ ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಎಸ್ಐಸಿ ಆಸ್ಪತ್ರೆ ಮತ್ತು ದೇಶದ ಇತರೆ ಭಾಗಗಳಲ್ಲಿ 06 ಹೆಚ್ಚುವರಿ ಇಎಸ್ಐಸಿ ಆಸ್ಪತ್ರೆಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ಒಟ್ಟು 1,641 ಕೋಟಿ ರೂಪಾಯಿ ಮೊತ್ತದ ಈ ಯೋಜನೆಗಳಿಂದ 55 ಲಕ್ಷ ಇಎಸ್ಐ ಫಲಾನುಭವಿಗಳು ಮತ್ತು ಅವರ ಕುಟುಂಬಳಿಗೆ ಅನುಕೂಲವಾಗಲಿದೆ.

ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಳೆದ ದಶಕದಲ್ಲಿ ಭಾರತದ ಆರೋಗ್ಯ ವಲಯದಲ್ಲಿ ಹಿಂದೆಂದೂ ಕಂಡರಿಯದ ಬೆಳವಣಿಗೆಯಾಗಿದ್ದು, ಹಿಂದಿನ ಏಳು ದಶಕಗಳಲ್ಲಿ ಆಗದ ಸಾಧನೆ ಈ ಒಂದು ದಶಕದಲ್ಲಿ ಆಗಿದೆ. “ಕಳೆದ 10 ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಏಮ್ಸ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ” ಎಂದರು. ಇವತ್ತಿನ ಕಾರ್ಯಕ್ರಮದ ಮಹತ್ವ ಕುರಿತ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಆಸ್ಪತ್ರೆಗಳನ್ನು ಕರ್ನಾಟಕ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಉದ್ಘಾಟನೆ ಮಾಡಲಾಗಿದೆ ಎಂದರು.  

ಕರ್ನಾಟಕದ ಬೊಮ್ಮಸಂದ್ರ ಮತ್ತು ನರಸಾಪುರ, ಮಧ್ಯಪ್ರದೇಶದ ಪಾಥಿಂಪುರ್, ಆಂಧ್ರ ಪ್ರದೇಶದ ಆಚ್ಚುತಾಪುರಂ ಮತ್ತು ಹರಿಯಾಣದ ಫರೀದಾಬಾದ್ ನಲ್ಲಿ  ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದರು.  “ಉತ್ತರ ಪ್ರದೇಶದ ಮೀರತ್ ನಲ್ಲಿ ಹೊಸ ಇಎಸ್ಐಸಿ ಆಸ್ಪತ್ರೆಯ ಕಾಮಗಾರಿ ಆರಂಭವಾಗಿದೆ ಮತ್ತು ಇಂದೋರ್ ನಲ್ಲಿ ಹೊಸ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದೆ” ಎಂದು ಹೇಳಿದರು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು ಮಾತನಾಡಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿವರ್ತನೆಯ ದೃಷ್ಟಿಕೋನದ ಬಗ್ಗೆ ಒತ್ತಿ ಹೇಳಿದರು. ಇದು ಭಾರತದ ಅಭಿವೃದ್ಧಿ ಕಾರ್ಯತಂತ್ರದ ಮೂಲಾಧಾರವಾಗಿ ಆರೋಗ್ಯ ರಕ್ಷಣೆಯನ್ನು ಸಂಯೋಜಿಸಿದೆ ಎಂದರು.

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರೋಗ್ಯವನ್ನು ಅಭಿವೃದ್ಧಿ ಮತ್ತು ಕರಕುಶಲತೆಯನ್ನು ಬೆಸೆದಿದ್ದಾರೆ. ಕೈಗೆಕುವ, ಸುಲಭದರದ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಲಭ್ಯವಿರುವ ರೀತಿಯಲ್ಲಿ “ಸರ್ವಜನ ಸುಖಾಯ, ಸರ್ವಜನ ಹಿತಾಯ” ಆರೋಗ್ಯ ಮಾದರಿ ಅನುಸರಿಸಿದ್ದಾರೆ ಎಂದು ಹೇಳಿದರು.

ಕಳೆದ ದಶಕದಲ್ಲಿ ಇಎಸ್‌ಐಸಿ ಸೇವೆಗಳ ಗಣನೀಯ ಬೆಳವಣಿಗೆಯನ್ನು ಎತ್ತಿ ತೋರಿಸುತ್ತಾ, ಡಾ. ಮಾಂಡವೀಯ ಅವರು, "ಇಎಸ್‌ಐಸಿ ಸಂಪರ್ಕ ಜಾಲ 2014 ರಲ್ಲಿ 393 ಜಿಲ್ಲೆಗಳಿಂದ ಇದೀಗ  ದೇಶಾದ್ಯಂತ 674 ಜಿಲ್ಲೆಗಳಿಗೆ ವಿಸ್ತರಿಸಿದೆ. 2014 ರ ಮೊದಲು 2 ಕೋಟಿಗಿಂತ ಕಡಿಮೆ ಕುಟುಂಬಗಳು ಆರೋಗ್ಯ ಭದ್ರತೆಯಿಂದ ಪ್ರಯೋಜನ ಪಡೆದಿವೆ, ಆ ಸಂಖ್ಯೆ ಈಗ ಹೆಚ್ಚಾಗಿದೆ. ಇಂದು ಸುಮಾರು 4 ಕೋಟಿ ಕುಟುಂಬಗಳಿಗೆ ಸೌಲಭ್ಯ ದ್ವಿಗುಣಗೊಂಡಿದೆ ಎಂದರು.

"ಇದೇ ರೀತಿ, ಕಳೆದ 10 ವರ್ಷಗಳಲ್ಲಿ ಇ.ಎಸ್.ಐ.ಸಿ ಫಲಾನುಭವಿಗಳ ಸಂಖ್ಯೆಯು ಸುಮಾರು ದ್ವಿಗುಣಗೊಂಡಿದೆ. 2014 ರಲ್ಲಿ 8 ಕೋಟಿಗಿಂತ ಕಡಿಮೆಯಿದ್ದ ಈ ಸಂಖ್ಯೆ 2024 ರಲ್ಲಿ ಸುಮಾರು 15 ಕೋಟಿಗೆ ಏರಿದೆ. ಇದು ಭಾರತದ ಉದ್ಯೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಸುಧಾರಿಸುವಲ್ಲಿ ಸರ್ಕಾರದ ಪ್ರಯತ್ನಗಳ ಯಶಸ್ಸನ್ನು ಒತ್ತಿ ಹೇಳುತ್ತದೆ” ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನೌಕರರ ರಾಜ್ಯ ವಿಮಾ ನಿಗಮವನ್ನು (ಇಎಸ್ಐಸಿ) ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಯೊಂದಿಗೆ ಸಂಯೋಜಿಸಲಾಗುವುದು ಎಂದು ಡಾ. ಮಾಂಡವೀಯ ಹೇಳಿದರು. ಈ ಸಂಯೋಜನೆ ಇಎಸ್‌ಐಸಿ ಫಲಾನುಭವಿಗಳಿಗೆ ರಾಷ್ಟ್ರವ್ಯಾಪಿ ಎಬಿ-ಪಿಎಂಜೆಎವೈ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡುವ ಮೂಲಕ ಆರೋಗ್ಯ ಸೇವೆಯನ್ನು ವಿಸ್ತರಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಇಂದು ಶಂಕುಸ್ಥಾಪನೆಯಾದ ಆರು ಹೊಸ ಇಎಸ್‌ಐ ಆಸ್ಪತ್ರೆಗಳು ಆಧುನಿಕ ಸೌಲಭ್ಯಗಳು ಮತ್ತು ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತವೆ:

  1. ಬೊಮ್ಮಸಂದ್ರ, ಕರ್ನಾಟಕ – 200 ಹಾಸಿಗೆಗಳ ಇಎಸ್ಐ ಆಸ್ಪತ್ರೆ
  2. ನರಸಾಪುರ, ಕರ್ನಾಟಕ – 100 ಇಎಸ್ಐ ಆಸ್ಪತ್ರೆ
  3. ಪಾಥಿಂಪುರ್, ಮಧ್ಯಪ್ರದೇಶ – 100 ಹಾಸಿಗೆಗಳ ಆಸ್ಪತ್ರೆ  
  4. ಮೀರತ್, ಉತ್ತರ ಪ್ರದೇಶ – 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ
  5. ಅಚ್ಚುತಪುರಂ, ಆಂಧ್ರ ಪ್ರದೇಶ – 30 ಹಾಸಿಗೆಗಳ ಆಸ್ಪತ್ರೆ  
  6. ಫರೀದಾಬಾದ್, ಹರ್ಯಾಣ – 650 ರಿಂದ 1150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿದ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ.

ಹೆಚ್ಚುವರಿಯಾಗಿ, ಮಧ್ಯಪ್ರದೇಶದ ಇಂದೋರ್‌ನಲ್ಲಿ 300 ಹಾಸಿಗೆಗಳ ಇಎಎಸ್ಐಸಿ ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು, ಇದನ್ನು 500 ಹಾಸಿಗೆಗಳಿಗೆ ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸುಮಾರು 14 ಲಕ್ಷ ವಿಮಾದಾರರು ಮತ್ತು ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡಲಿದೆ.

ಈ ಇಎಸ್ಐಸಿ ಆರೋಗ್ಯ ಸೌಲಭ್ಯಗಳು ಮಾದರಿ ಶಸ್ತ್ರಚಿಕಿತ್ಸಾ ಕೊಠಡಿ ಸಂಕೀರ್ಣಗಳು, ತೀವ್ರ ನಿಗಾ ಘಟಕಗಳು, ಕಾರ್ಮಿಕ ಕೊಠಡಿ ಸಂಕೀರ್ಣಗಳು, ಎನ್.ಐ.ಸಿ.ಯು, ಪಿ.ಐ.ಸಿ.ಯು ಮತ್ತು ಸುಧಾರಿತ ಇಮೇಜಿಂಗ್ ಸೇವೆಗಳಂತಹ ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತವೆ. ಪ್ರತಿಯೊಂದು ಸೌಲಭ್ಯವು ಹೊರರೋಗಿ (ಒಪಿಡಿ) ಮತ್ತು ಒಳರೋಗಿ (ಐಪಿಡಿ) ಸೇವೆಗಳನ್ನು ಪೂರೈಸುವ ವೈದ್ಯಕೀಯ ಆಮ್ಲಜನಕ ಘಟಕಗಳು, ಸಿಎಸ್ಎಸ್ಡಿ/ಟಿಎಸ್.ಎಸ್.ಯು ಘಟಕಗಳು ಮತ್ತು ದಾದಿಯರ ಸೇವೆ  ಒಳಗೊಂಡಂತೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಜೆ ಪಿ ನಡ್ಡಾ, ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು, ಶ್ರೀ ಪ್ರತಾಪ್ರಾವ್ ಜಾಧವ್, ಕೇಂದ್ರ ಆರೋಗ್ಯ ರಾಜ್ಯ ಸಚಿವರು ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀಮತಿ ಅನುಪ್ರಿಯಾ ಪಟೇಲ್ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪೂರ್ಣ ಪ್ರಮಾಣದ ಕಾರ್ಯಕ್ರಮ ಇಲ್ಲಿ ಲಭ್ಯವಿದೆ. https://www.youtube.com/watch?v=rlxy0QfqOZA

 

*****


(ಪ್ರಕಟಣೆ ಐ.ಡಿ.: 2069411) ವಿಸಿಟರ್ ಕೌಂಟರ್ : 133
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी