ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಸಿಲ್ವಾಸ್ಸಾದ ಎನ್ಎಎಂಒ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳ ಭಾಷಣ 

Posted On: 21 SEP 2024 3:57PM by PIB Bengaluru

ನನ್ನ ಮಾತುಗಳನ್ನು ಜ್ಞಾಪಕ ಇಟ್ಟುಕೊಳ್ಳಿರಿ : ಪ್ರಧಾನಮಂತ್ರಿಯವರ 'ಮನ್ ಕಿ ಬಾತ್' (ಮನದ ಮಾತು) ನಿಜವಾಗಿ ಭಾರತ ದ ಮಾತು ಆಗಿದೆ! ಇದು ಸಮಾಜದ ಪ್ರತಿಯೊಂದು ವಿಭಾಗವನ್ನು ಮುಟ್ಟುತ್ತದೆ. . ಇದು ಜನರನ್ನು ಕನಸು ಕಾಣುವಂತೆ ಮಾಡುತ್ತದೆ ಮತ್ತು ಏನನ್ನಾದರೂ ಸಾಧಿಸಲು ಹೇಗೆ ಹಾತೊರೆಯಬೇಕು ಎಂದು ಜನರಿಗೆ ಹೇಳುತ್ತದೆ. ಇದು ಅಲ್ಲಿಗೆ ಮುಗಿಯುವುದಿಲ್ಲ. ಜನರು ತಮ್ಮ ಕನಸುಗಳನ್ನು ನನಸಾಗಿಸುವುದು ಹೇಗೆ ಎಂದು ಸಹ ಇದು ಹೇಳುತ್ತದೆ.

ನೀವು ತುಂಬಾ ಅದೃಷ್ಟವಂತರು. ನಮ್ಮ ಬಾಲ್ಯದಲ್ಲಿ ಎಂಥೆಂಥಾ ಸವಾಲುಗಳನ್ನು ನೋಡಿಲ್ಲ? ಬಿರು ಬಿಸಿಲಿನಲ್ಲಿ ನಡೆಯುತ್ತಿದ್ದೆವು, ಕೆಲವೆಡೆ ನೆರಳು ಸಿಗುತ್ತಿರಲಿಲ್ಲ, ಕೆಲವೆಡೆ ಹಸು ಎಮ್ಮೆ ಸಗಣಿ ಇರುತ್ತಿದ್ದವು, ಅಲ್ಲಿ ಕಾಲನ್ನು ಇಟ್ಟಿರುತ್ತಿದ್ದೆವು. ಆದರೆ ಈಗ ನೋಡಿ, ಎಷ್ಟೋ ಹಳ್ಳಿಗಳಲ್ಲಿ ಇಂಟರ್ನೆಟ್ ಇದೆ. ಪ್ರತಿಯೊಬ್ಬ ವ್ಯಕ್ತಿಯು ಬ್ಯಾಂಕ್ ಖಾತೆಯನ್ನು ಹೊಂದಿದ್ದಾನೆ. ಯಾವುದೇ ಮಧ್ಯವರ್ತಿ ಇಲ್ಲದೆ ಸರ್ಕಾರದ ನೆರವು ತಲುಪುತ್ತಿದೆ. ನೀವು ನೋಡುತ್ತಿರುವ ಈ ಬೆಳವಣಿಗೆಯು ಒಂದು ದೊಡ್ಡ ಅಭಿವೃದ್ಧಿಯ ಭಾಗವಾಗಿದೆ.

ನೀವು ಎಲ್ಲಾ ವಿಷಯಗಳಲ್ಲಿ ಕೊಡುಗೆ ನೀಡಬಹುದು. ವಿಶ್ವಸಂಸ್ಥೆ, ಯುಎನ್ ಡಿಪಿ, ವಿಶ್ವ ಬ್ಯಾಂಕ್, ಐಎಂಎಫ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಂತಹ ಜಾಗತಿಕ ಸಂಸ್ಥೆಗಳಲ್ಲಿ ನಿಮ್ಮ ಪಾತ್ರ ಇದೆ ಹಾಗು ಮುಂಚೂಣಿಯಲ್ಲಿದೆ. ದೊಡ್ಡ ಸಲಹಾ ಸಂಸ್ಥೆಗಳಲ್ಲಿ ನಿಮ್ಮ ಪಾತ್ರವಿದೆ. ಅದು ನೀವು ಮಾಡುತ್ತಿರುವ ಒಳ್ಳೆಯ ಕೆಲಸ. ನಾನು ಆಡಳಿತ ಮುಖ್ಯಸ್ಥರಿಗೆ ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್ ಮತ್ತು ನರ್ಸಿಂಗ್ನಿಂದ ತಲಾ 30 ವಿದ್ಯಾರ್ಥಿಗಳ ಗುಂಪನ್ನು ರಚಿಸಬೇಕು ಮತ್ತು  ಆ  ಗುಂಪು ದೆಹಲಿಯ ವೈಸ್ ಪ್ರೆಸಿಡೆಂಟ್ ಎನ್ಕ್ಲೇವ್  ಮತ್ತು ಅಧ್ಯಕ್ಷರು ಮತ್ತು ರಾಜ್ಯಸಭೆಯ ಸಭಾಪತಿಯವರ ಕಚೇರಿಗೆ  ಭೇಟಿ ನೀಡಬೇಕು ಎಂದು ಹೇಳುತ್ತೇನೆ.

ಪ್ರತಿದಿನ ಕಲಿಯುತ್ತಲೇ ಇರಿ. ಎಂದಿಗೂ ಭಯ  ಪಡದಿರಿ.  ಭಯವು ನಾವೀನ್ಯತೆ ಮತ್ತು ಬುದ್ಧಿಶಕ್ತಿಯ ದೊಡ್ಡ ಕೊಲೆಗಾರ.

ವೈಫಲ್ಯಕ್ಕೆ ಎಂದಿಗೂ ಭಯಪಡಬೇಡಿ. ನೀವು ವೈಫಲ್ಯದ ಬಗ್ಗೆ ಭಯವನ್ನು ಹೊಂದಲು ಪ್ರಾರಂಭಿಸಿದರೆ, ನೀವು ನಿಮಗಾಗಿ ವೈಫಲ್ಯವನ್ನು ಉಂಟುಮಾಡಿಕೊಳ್ಳುತ್ತೀರಿ. ಕೆಲವು ಜನರು ಈ ಬಾಟಲಿಯ ಬಗ್ಗೆ ನಕಾರಾತ್ಮಕವಾಗಿರುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಓಹ್!, 20% ಖಾಲಿಯಾಗಿದೆ. 80% ತುಂಬಿರುವುದರಿಂದ ಅವರನ್ನು ನಿರ್ಲಕ್ಷಿಸಿ, ಸರಿಯಲ್ಲವೇ? ಮತ್ತು 80% ಪ್ರತಿಶತವು ಈ ಬಾಟಲಿಯಲ್ಲಿ ಅತ್ಯುತ್ತಮ ಸ್ಥಿತಿಯಾಗಿದೆ. 80%  ಸೂಕ್ತವಾಗಿದೆ. ನೀವು ಅದನ್ನು 100% ಅನುಭವಿಸುವಿರಿ.   ಈ ಮೂಲಕ ಭಾರತ ಪ್ರಗತಿ ಸಾಧಿಸುತ್ತಿದೆ. ನಕಾರಾತ್ಮಕ ಮನಸ್ಥಿತಿ ಹೊಂದಿರುವ ಕೆಲವರು ಇದ್ದಾರೆ. ಅವರಿಗೆ ಧನಾತ್ಮಕ ಭಾವನೆ ಮೂಡಿಸಿ, ಅವರ ಕಣ್ಣುಗಳನ್ನು ತೆರೆದು ಏನಾಗುತ್ತಿದೆ ಎಂಬುದನ್ನು ನೋಡಲು ಹೇಳಿ.

ವೈಫಲ್ಯಕ್ಕೆ ಎಂದಿಗೂ ಭಯಪಡಬೇಡಿ. ಹೇಳಿ, ಚಂದ್ರಯಾನ-2 ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ, ಶೇಕಡಾ 90 ಕ್ಕಿಂತ ಹೆಚ್ಚು ಯಶಸ್ವಿಯಾಗಿದೆ. ಚಂದ್ರಯಾನ-2 ವಿಫಲವಾಗಿದೆ ಎಂದು ಕೆಲವರು ಭಾವಿಸಿದ್ದರು. ಚಂದ್ರಯಾನ-2, ಚಂದ್ರಯಾನ-3ರ ಯಶಸ್ಸಿಗೆ ಸೋಪಾನವಾಗಿತ್ತು.

ಭಾರತಕ್ಕೆ ಎಂತಹ ಅವಕಾಶ ಸಿಕ್ಕಿದೆ ಎಂದು ಇಡೀ ವಿಶ್ವವೇ ಹೇಳುತ್ತಿದೆ. ಜಗತ್ತು ಇಲ್ಲಿಗೆ ಬರಲು ಬಯಸುತ್ತದೆ ಮತ್ತು ಸರ್ಕಾರಿ ಉದ್ಯೋಗಗಳ ಹೊರತಾಗಿ ನಿರಂತರವಾಗಿ ಹೆಚ್ಚುತ್ತಿರುವ ಅವಕಾಶಗಳ ಬುಟ್ಟಿಯತ್ತ ಗಮನ ಹರಿಸಲು ನಿಮ್ಮ ಸಹೋದ್ಯೋಗಿಗಳಿಗೆ ನೀವು ಹೇಳಬೇಕು. ಅದು ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ, ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳಿ, ನಿಮ್ಮ ದೇಶವನ್ನು ನಂಬಿರಿ ಮತ್ತು ಯಾವಾಗಲೂ ದೇಶ ಮೊದಲು ಎಂದುಕೊಳ್ಳಿರಿ.

 

*****



(Release ID: 2058188) Visitor Counter : 8


Read this release in: English , Urdu , Hindi