ಉಪರಾಷ್ಟ್ರಪತಿಗಳ ಕಾರ್ಯಾಲಯ
ಮುಂಬೈನ ಎಲ್ಫಿನ್‌ಸ್ಟೋನ್ ತಾಂತ್ರಿಕ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜಿನಲ್ಲಿ ಸಂವಿಧಾನ ಮಂದಿರದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಉಪರಾಷ್ಟ್ರಪತಿ ಅವರ ಭಾಷಣ
Posted On:
15 SEP 2024 3:52PM by PIB Bengaluru
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ರಾಜ್ಯದ ಎಲ್ಲಾ 434 ಐಟಿಐಗಳಲ್ಲಿ ಸಂವಿಧಾನ ಮಂದಿರವನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸುತ್ತಿರುವುದು ನನಗೆ ಸಂತಸ ತಂದಿದೆ.
ಎಂಥ ಅದ್ಭುತವಾದ ದಿನವನ್ನು ಆಯ್ಕೆಮಾಡಲಾಗಿದೆ. ವಿಶ್ವಾದ್ಯಂತ ಇದರ ಪರಿಣಾಮ ಕಂಡುಬರಲಿದೆ.
ನಿಜಕ್ಕೂ ಇದೊಂದು ಮಹತ್ವದ ಸಾಧನೆ. ಇದು ಖಂಡಿತವಾಗಿಯೂ ನಮ್ಮ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಮತ್ತು ಕೆಲವರು ಸಂವಿಧಾನದ ಮೂಲ ಉದ್ದೇಶವನ್ನು ಮರೆತೇ ಬಿಟ್ಟಿರುವುದರಿಂದ ಇಂದು ಇದರ ಬಹಳ ಅಗತ್ಯತೆ ಇದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ಉಪಕ್ರಮಕ್ಕೆ ಮುಂದಾದ ಮಹಾರಾಷ್ಟ್ರದ ಮಾನ್ಯ ಸಚಿವರಾದ ಶ್ರೀ ಮಂಗಲ್ ಪ್ರಭಾತ್ ಲೋಧಾ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಕೇವಲ ಒಂದು ದಿನವಕ್ಕೆ ಸೀಮಿತವಾಗಿರದೆ, ನಿರಂತರ ಪ್ರಕ್ರಿಯೆಯಾಗಿದ್ದು, ನಮ್ಮ ಸಂವಿಧಾನದ ಬಗ್ಗೆ ನಿರಂತರ ಕಲಿಕೆಗೆ ಅನುವು ಮಾಡಿಕೊಡಲಿದೆ. ಇದು ಅತ್ಯಂತ ಶ್ಲಾಘನೀಯವಾದುದು. ಇದು ಸಂವಿಧಾನದ ಬಗ್ಗೆ ಬದ್ಧತೆಯನ್ನು ಎತ್ತಿ ತೋರಿಸುತ್ತದೆ, ಅಭಿನಂದನೆಗಳು. ಮತ್ತು ನಮ್ಮ ಸಂವಿಧಾನದ 75 ನೇ ವರ್ಷಾಚರಣೆಯ ಈ ಪರ್ವ ಅತ್ಯಂತ ಸೂಸಮಯವಾಗಿದೆ.
ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತರುವಂತಹ ಒಂದು ಮಹತ್ವದ ಸಂಗತಿಯನ್ನು ನಾನು ಉಲ್ಲೇಖಿಸಬೇಕಿದೆ. ಈ ಕಾರ್ಯಕ್ರಮ ಯಾವುದೇ ಹೋಮ ಹವನಕ್ಕಿಂತ ಕಡಿಮೆಯಲ್ಲ, ಏಕೆಂದರೆ ಇದು ಭಾರತದ ಸಂವಿಧಾನ ರಚಿಸಿದ ಸ್ಥಳದಲ್ಲೇ ಆಯೋಜಿಸಲಾಗಿದೆ. ಭಾರತದ ಸಂವಿಧಾನ ಶಿಲ್ಪಿ ಇಲ್ಲಿ ಶಿಕ್ಷಣ ಪಡೆದಿದ್ದರು. ಈ ಸ್ಥಳದ ಆಯ್ಕೆ ಬಹಳ ಸ್ಮರಣೀಯ! ಈ ಶಾಲೆಯಲ್ಲಿ ಬಾಬಾ ಸಾಹೇಬ್ ಶಿಕ್ಷಣ ಪಡೆದಿದ್ದು ಅದರ ಪರಿಣಾಮ ನಮಗೆ ಇಷ್ಟು ಅದ್ಭುತವಾದ ಸಂವಿಧಾನ ನೀಡಿದ್ದಾರೆ. ಅಲ್ಲಿಂದ ಇದರ ಆರಂಭವಾಗುತ್ತದೆ.
1989 ರಿಂದ 91 ರವರೆಗೆ ನಾನು ಲೋಕಸಭೆಯ ಸದಸ್ಯನಾಗಿದ್ದುದು ನನ್ನ ಪರಮ ಸೌಭಾಗ್ಯವಾಗಿತ್ತು.
ಬಾಬಾ ಸಾಹಬ್ ಅವರನ್ನು ನಾವು ಮರೆತೇ ಬಿಟ್ಟಿದ್ದೆವು, ಅಲ್ಲದೆ ಹಿಂದಿನ ಸರ್ಕಾರಗಳು ನಿಜವಾದ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಲಿಲ್ಲ ಭಾರತ ರತ್ನ ಪುರಸ್ಕಾರವನ್ನು ನೀಡಲಿಲ್ಲ. ಆದರೆ ಅ ದಿನ ಬಂದಿತು. ಆಗ ನಾನು ಲೋಕಸಭಾ ಸದಸ್ಯನಾಗಿದ್ದೇ. ಅದೇ 31 ಮಾರ್ಚ್ 1990.
ಅಂದು ಬಾಬಾ ಸಾಹೇಬ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದು ತಡವಾಗಿ ನೀಡಲಾದ ಗೌರವವಾಗಿತ್ತು.
ಆದರೆ ತಡವಾಗಿ ಆದರೂ ನೀಡಿದರಲ್ಲ. ತಡವಾದರೂ ಪರವಾಗಿಲ್ಲ ಆದರೆ ನ್ಯಾಯ ದೊರೆಯಬೇಕೆಂಬುದು ಬಾಬಾ ಸಾಹೇಬ್ ಅವರ ಚಿಂತನೆಯಾಗಿತ್ತು. ವಂಚಿತರಿಗೆ ನ್ಯಾಯ ದೊರೆಯಬೇಕೆಂಬುದರತ್ತ ಅವರು ಗಮನ ಕೇಂದ್ರೀಕರಿಸಿದ್ದರು.
ಆದರೆ ಇದನ್ನು ಮೊದಲೇ ಯಾಕೆ ನೀಡಲಾಗಲಿಲ್ಲ ಎಂದು ಒಮ್ಮೆ ಆಲೋಚಿಸಿ. ಬಾಬಾ ಸಾಹೇಬ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಎಲ್ಲರೂ ಗುರುಟಿಸಿದ್ದರು.
ಇನ್ನೊಂದು ಮಹತ್ವದ ವಿಷಯ ಬಾಬಾ ಸಾಹೇಬ್ ಅವರ ಮನೋವಿಜ್ಞಾನಕ್ಕೆ ಸಂಬಂಧಿಸಿದ್ದು. ಮಂಡಲ ಕಮಿಷನ್ ವರದಿಯನ್ನು ಮಂಡಿಸಿದ ಮೇಲೆ 10 ವರ್ಷಗಳವರೆಗೆ ದೇಶದ ಇಬ್ಬರು ಪ್ರಧಾನಮಂತ್ರಿಗಳು - ಶ್ರೀಮತಿ ಇಂದಿರಾಗಾಂಧಿ ಹಾಗೂ ಶ್ರೀ ರಾಜೀವ್ ಗಾಂಧಿ ಅವರ ಆಡಳಿತದಲ್ಲಿ ಈ ವರದಿ ಕುರಿತು ಯಾವುದೇ ಕೆಲಸವಾಗಲಿಲ್ಲ.
ಸಾಮಾಜಿಕ ನ್ಯಾಯದ ಬಲವಾದ ಬುನಾದಿಯನ್ನು ಮೂಲಭೂತ ಹಕ್ಕುಗಳ ರೂಪದಲ್ಲಿ ಭೀಮರಾವ್ ಅಂಬೇಡ್ಕರ್ ಹಾಕಿದ್ದರು, ಆದರೆ ಅದನ್ನು 1990 ರ ಆಗಸ್ಟ್ ನಲ್ಲಿ ಜಾರಿಗೆ ತರಲಾಯಿತು. ಆಗ ನಾನು ಕೇಂದ್ರ ಸಚಿವನಾಗಿದ್ದು ನನ್ನ ಸೌಭಾಗ್ಯವಾಗಿತ್ತು.
ಸಂವಿಧಾನದ ಆತ್ಮದ ರೂಪದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮನಸ್ಸಿಗೆ ಹತ್ತಿರವಾದ ಈ 2 ಘಟನೆಗಳಲ್ಲಿ ನಾನು ಭಾಗಿಯಾಗುವ ಅವಕಾಶ ದೊರೆತಿದ್ದನ್ನು ನಾನು ಎಂದಿಗೂ ಮರೆಯಲಾರೆ.
ಆದರೆ ಹಿಂದೆ ಯಾಕೆ ಮೀಸಲಾತಿ ದೊರೆಯಲಿಲ್ಲ. ಇದಕ್ಕೆ ಒಂದು ಹಿನ್ನೆಲೆಯಿದೆ. ಯೋಗ್ಯತೆಯ ಮಾನದಂಡ ನಿರ್ಧಾರಿತವಾಗಿರಲಿಲ್ಲ. ಅವರು ಯೋಗ್ಯರಲ್ಲ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ವಿಶ್ವದೆದುರು ಯೋಗ್ಯತೆಯನ್ನು ಡಾ. ಬಿ ಆರ್ ಅಂಬೇಡ್ಕರ್ ಸಾಬೀತುಪಡಿಸಿದರೂ.
ಈ ಮನಸ್ಥಿತಿಯ ಬಗ್ಗೆ ಬೆಳಕು ಚೆಳ್ಳಲು ನಾನು ಬಯಸುತ್ತೇನೆ. ಪಂಡಿತ್ ನೆಹರು ಈ ದೇಶದ ಮೊದಲ ಪ್ರಧಾನಿ, ಅವರು ಏನು ಹೇಳಿದರು? "ನಾನು ಯಾವುದೇ ರೂಪದಲ್ಲಿ ಮೀಸಲಾತಿಯನ್ನು ಇಷ್ಟಪಡುವುದಿಲ್ಲ. ವಿಶೇಷವಾಗಿ ಉದ್ಯೋಗಗಳಲ್ಲಿ ಮೀಸಲಾತಿ". ಅವರ ಪ್ರಕಾರ ಬಹಳ ದುಃಖದಿಂದ ಮತ್ತು ದುರದೃಷ್ಟವಶಾತ್ ನಾನು ಉಲ್ಲೇಖಿಸಬಯಸುತ್ತೇನೆ "ಅಸಮರ್ಥತೆಯನ್ನು ಉತ್ತೇಜಿಸುವ ಮತ್ತು ನಮ್ಮನ್ನು ಸಾಧಾರಣತೆಯ ಕಡೆಗೆ ಕೊಂಡೊಯ್ಯುವ ಯಾವುದೇ ಉಪಕ್ರಮವನ್ನು ನಾನು ವಿರೋಧಿಸುತ್ತೇನೆ " ಎಂದು.
ಇದು ಬಾಬಾ ಸಾಹೇಬರ ವಿಚಾರವಾಗಿದೆ. ಇ ವಿಚಾರಧಾರೆಯಲ್ಲಿ ಮುಂದುವರಿದು ನೋಡಿ, ಇಂದು ಭಾರತದ ಮೊದಲ ಪ್ರಜೆ ರಾಷ್ಟ್ರಪತಿ ಯಾರಿದ್ದಾರೆ, ಪ್ರಧಾನ್ಯಮಂತ್ರಿಗಳು ಯಾವ ವರ್ಗದವರು ಮತ್ತು ಉಪರಾಷ್ಟ್ರಪತಿ ಯಾರಿದ್ದಾರೆ ಎಂದು. ಮೀಸಲಾತಿಯು ಅರ್ಹತೆಗೆ ವಿರುದ್ಧವಾಗಿದೆ ಎಂದು ಭಾವಿಸಿದ ಆ ಮನಸ್ಥಿತಿಯು ಮೀಸಲಾತಿಗೆ ವಿರುದ್ಧವಾಗಿದೆ, ಮೀಸಲಾತಿ ಭಾರತಕ್ಕೆ ಆತ್ಮವಾಗಿದೆ, ಸಂವಿಧಾನದ ಆತ್ಮವಾಗಿದೆ.
ಮೀಸಲಾತಿ ಎನ್ನುವುದು ಸಕಾರಾತ್ಮಕ ಕ್ರಮವಾಗಿದೆ ನಕಾರತ್ಮಕವಾದುದಲ್ಲ, ಮೀಸಲಾತಿ ಯಾರ ಅವಕಾಶವನ್ನು ಕಸಿದುಕೊಳ್ಳುವುದಿಲ್ಲ. ಮೀಸಲಾತಿ ಎನ್ನುವುದು ಸಮಾಜದ ಆಧಾರ ಸ್ತಂಭವಾಗಿರುವ ಮತ್ತು ಶಕ್ತಿ ತುಂಬುವವರನ್ನು ಪ್ರೋತ್ಸಾಹಿಸುವುದಾಗಿದೆ.
ಇದು ಚಿಂತೆಯ ವಿಷಯವಾಗಿದೆ, ಚಿಂತನೆಯ ಮತ್ತು ಮಂತನದ ವಿಷಯವಾಗಿದೆ. ಮೀಸಲಾತೀಯ ವಿರೋಧಿಯಾಗಿದ್ದ ಮನಸ್ಥಿತಿ. ಅದೇ ವ್ಯಕ್ತಿ ಇಂದು ವಿದೇಶಗಳಲ್ಲಿ ಮೀಸಲಾತಿ ಕೊನೆಗೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಮೀಸಲಾತಿ ವಿರುದ್ಧದ ಪೂರ್ವಾಗ್ರಹ ಹೇಗೆ ತಿರುಗುಮುರುಗಾಗಿದೆ ನೋಡಿ.
ನನ್ನ ಸಾಂವಿಧಾನಿಕ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ಮೀಸಲಾತಿಯು ಸಂವಿಧಾನದ ಆತ್ಮವಾಗಿದೆ ಎಂದು ನಿಮಗೆ ಭರವಸೆ ನೀಡುತ್ತೇನೆ, ಸಾಮಾಜಿಕ ಸಮಾನತೆಯನ್ನು ತರಲು ಮತ್ತು ಅಸಮಾನತೆಗಳನ್ನು ತೊಡೆಯಲು ನಮ್ಮ ಸಂವಿಧಾನದಲ್ಲಿ ಮೀಸಲಾತಿಯು ಸಕಾರಾತ್ಮಕತೆಯೊಂದಿಗೆ, ಹೆಚ್ಚಿನ ಅರ್ಥವನ್ನು ಹೊಂದಿದೆ.
ನಮ್ಮ ಪ್ರಜಾತಾಂತ್ರಿಕ ಯಾತ್ರೆಯಲ್ಲಿ ಯಾವ ಯಾವ ಏರಿಳಿತಗಳು ಎಂದು ನೋಡುವ ಕಾಲ ಬಂದಿದೆ. ಸಂವಿಧಾನ ಪ್ರಜಾಸತ್ತಾತ್ಮಕತೆಯ ಆತ್ಮವಾಗಿದೆ ಮತ್ತು ಸಂಸತ್ತು ಅದರ ಪಾಲಕ ಎಂದು ನಿಮಗೆ ಅನ್ನಿಸಬಹುದು. ನಮ್ಮ ಸಂವಿಧಾನವನ್ನು ಮತ್ತು ಪ್ರಜಾಸತ್ತಾತ್ಮಕತೆಯನ್ನು ರಕ್ಷಿಸುವ, ಕಾಪಿಡುವ ಮತ್ತು ಕಾಯುವ ಸಮಯ ಸನ್ನಿಹಿತವಾಗಿದೆ. ನೀವು ಹೀಗೆ ಮಾಡಬೇಕೆಂದುಕೊಂಡಲ್ಲಿ ಈ ದಿನವನ್ನು ಮರೆಯಬೇಡಿ, ಜೂನ್ 25 1975 ನಮ್ಮ ಸ್ವಾತಂತ್ರ್ಯದ ಕರಾಳ ದಿನವಾಗಿದೆ. ಸ್ವಾತಂತ್ರ್ಯಾ ನಂತರದ ನಮ್ಮ ಪಯಣದ ಕರಾಳ ಅಧ್ಯಾಯವಾಗಿದೆ, ನಮ್ಮ ಇತಿಹಾಸಕ್ಕೆ ಮಸಿ ಬಳಿಯುವ ದಿನವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ನಾಗರೀಕರ ವಿರುದ್ಧ, ನಾಗರೀಕರ ಅಧಿಕಾರಗಳ ವಿರುದ್ಧ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. 21 ತಿಂಗಳುಗಳವರೆಗ ದೇಶ ಏನೆಲ್ಲಾ ಸಹಿಸಿತು, ಸಾವಿರಾರು ಜನರನ್ನು ಜೈಲಿಗೆ ಕಳುಹಿಸಲಾಯಿತು. ಕಾನೂನು ಸುವ್ಯವಸ್ಥೆ ಗಳಿಗೆ ತೂರಿ ಹೋಗಿತ್ತು. ಆಡಲಿತಶಾಹಿ ಇನ್ನೂ ಎಂಬುದನ್ನು ಅ ಕಾಲಘಟ್ಟ ವ್ಯಾಖ್ಯಾನಿಸಿತತು. ಡಾ. ಭೀಮರಾವ್ ಅಂಬೇಡ್ಕರ್ ಇನ್ನೂ ಕನಸು ಕಂಡಿದ್ದರೋ ಅದನ್ನು 21 ತಿಂಗಳುಗಳಲ್ಲಿ ನುಚ್ಚು ನೂರು ಮಾಡಲಾಯಿತು.
ಅದು ಪ್ರತಿಕಾರದ ಸರ್ವಾಧಿಕಾರವಾಗಿತ್ತು ಮತ್ತು ಭಯಂಕರವಾದ ಗಾಥೆಯ ತೆರೆ ಸರಿಸಿತು. ಯುವ ಬಾಲಕ ಬಾಲಕಿಯರು ಮತ್ತು ವಿದ್ಯಾರ್ಥಿಗಳು ಆ ಅವಧಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲಿ ಮತ್ತು ಆ ಅವಧಿಯನ್ನು ಎಂದಿಗೂ ಮರೆಯದಿರಲಿ ಎಂದು ನಾನು ಬಯಸುತ್ತೇನೆ. ಆ ಕಲಿಕೆಯೇ ನಿಮಗೆ ಸಂವಿಧಾನವನ್ನು ರಕ್ಷಿಸುವ ಶಕ್ತಿಯನ್ನು ನೀಡುತ್ತದೆ ಮತ್ತು 2015 ರಲ್ಲಿ ಭಾರತದ ಪ್ರಧಾನಮಂತ್ರಿ ನೇತೃತ್ವದ ಸಂವಿಧಾನದ ಆಚರಣೆಯು ಪ್ರತಿ ವರ್ಷ ನವೆಂಬರ್ 6 ರಂದು ನಡೆಯಲಿದೆ.
ನಾವು ಸಂವಿಧಾನ ದಿನವನ್ನು ಏಕೆ ಆಚಾರಿಸುತ್ತೇವೆ, ಏಕೆಂದರೆ ನಮಗೆ ನಮ್ಮ ಸಂವಿಧಾನ ರಚನೆ ಹೇಗೆ ಆಯಿತು, ಇದು ನಮ್ಮ ಅಧಿಕಾರಗಳನ್ನು ಹೇಗೆ ನೀಡುತ್ತದೆ, ಹೇಗೆ ನಮಗೆ ಬಲವನ್ನು ನೀಡುತ್ತದೆ, ಶಕ್ತಿಯನ್ನು ನೀಡುತ್ತದೆ, ಅಲ್ಲದೆ ಸಾಧಾರಣ ಹಿನ್ನೆಲೆಯ ವ್ಯಕ್ತಿ ಪ್ರಧಾನಮಂತ್ರಿಯಾಗುತ್ತಾರೆ, ಒಬ್ಬ ಕೃಷಿಕನ ಮಗ ಉಪರಾಷ್ಟ್ರಪತಿಯಾಗಿದ್ದಾರೆ ಮತ್ತು ಜೀವನದ ಎಲ್ಲ ಹಂತಗಳನ್ನು ಕಂಡ, ವಾಸ್ತವವನ್ನು ಕಂಡರಿತ ಒಬ್ಬ ಪ್ರತಿಭಾನ್ವಿತ ಪ್ರಭೆಯುಳ್ಳ ಬುಡಕಟ್ಟು ಜನಾಂಗದ ಮಹಿಳೆ ನಮ್ಮ ರಾಷ್ಟ್ರಪತಿಯಾಗುವಂತಹ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ವಿಧಿಯಾಟವೂ ವಿಚಿತ್ರವಾಗಿದೆ. ಈ ಮುಂಬೈಯಲ್ಲಿ 2015 ರ ಅಕ್ಟೋಬರ್ 11 ರಂದು ಪ್ರಧಾನಮಂತ್ರಿ ಸಮಾನತೆಯ ಪ್ರತೀಕವಾದ ಡಾ. ಬಿ ಆರ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆ ಸಂದರ್ಭದಲ್ಲಿ ಅವರ ಮನದಲ್ಲಿ ಒಂದೊಳ್ಳೆ ವಿಚಾರ ಮೂಡಿತು ಮತ್ತು ಅಂದು ಅವರು ಸಂವಿಧಾನ ದಿನ ಆಚರಣೆಯ ಘೋಷಣೆ ಮಾಡಿದರು. ಇದಕ್ಕಿಂತ ಪವಿತ್ರವಾದ ಅವಕಾಶ ಮತ್ತೊಂದಿಲ್ಲ.
ಮುಂಬಯಿಯ ಪವಿತ್ರ ಭೂಮಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಸಮಾನತೆಯ ಪ್ರತೀಕವಾದ ಅವರ ಮೂರ್ತಿ ಸ್ಥಾಪನೆ ಮತ್ತು ಗೆಜೆಟ್ ನೋಟಿಫಿಕೇಶನ್ ಎಂದು ಜಾರಿಯಾಯಿತು? 2015 ನವೆಂಬರ್ ರಂದು ಗೆಜೆಟ್ ನೋಟಿಫಿಕೇಶನ್ ಜಾರಿಯಾಯಿತು. ಬಹಳ ಶುಭದಿನವಾಗಿತ್ತು.
ಯಾರ ಜನ್ಮದಿನವಾಗಿತ್ತು? ಯಾರು ತುರ್ತು ಪರಿಸ್ಥಿತಿ ಹೇರಿದ್ದರು, ಎರಡೂ ದಿನಗಳಲ್ಲಿ ಬಹಳ ದೊಡ್ಡ ಪಾಠವಿದೆ, ಅಕ್ಟೋಬರ್ 11 ರ ಘೋಷಣೆ, ನವೆಂಬರ್ 19 ರಂದು ಜಾರಿಗೊಳಿಸುವುದು. ಇದರರ್ಥ ಯಾರು ಈ ದೇಶವನ್ನು, ಸಂವಿಧಾನವನ್ನು ಕತ್ತಲೆಯ ಕೂಪಕ್ಕೆ ತಳ್ಳಿದರೋ, ಭಾವನೆಗಳನ್ನು ಹೊಸಕಿ ಹಾಕಿದರೋ, ಮೂಲಭೂತ ಅಧಿಕಾರಗಳನ್ನು ಕೊನೆಗೊಳಿಸಿದರೋ, ಜನರನ್ನು ಕಾರಾಗ್ರಹಕ್ಕೆ ತಳ್ಳಿದರೋ ಅದನ್ನು ನೆನಪಿಡಲಿ ಎಂದು.
ಅವರ ಜನ್ಮದಿನದಂದು ಉಜ್ವಲತೆಯನ್ನು ತೋರುವ ಕೆಲಸವನ್ನು ಮಾಡಲಾಯಿತು.
ಜೂನ್ 25 ರಂದು ಸಂವಿಧಾನ ಹತ್ಯಾ ದಿನವನ್ನು ಆಚರಿಸಲಾಗುತ್ತದೆ. ಇದು ಬಹಳ ಅವಶ್ಯಕವಾಗಿದೆ. ನೀವು ಅ ದಿನಗಳನ್ನು ನೋಡಿಲ್ಲ. ನಿಮಗೆ ಇತಿಹಾಸದ ಅರಿವಿರಬೇಕು, 21 ತಿಂಗಳುಗಳಲ್ಲಿ ಏನಾಯಿತು, ಇದ್ದಕ್ಕಿದ್ದಂತೆ ಹೇಗೆ ಬದಲಾಯಿತು, ಕೇವಲ ಅಧಿಕಾರವನ್ನು ಉಳಿಸಿಕೊಳ್ಳಲು ಎಲ್ಲ ಮಿತಿಗಳನ್ನು ಮೀರಲಾಯಿತು. ಅರ್ಧ ರಾತ್ರಿ ಸಂವಿಧಾನದ ಪ್ರಕ್ರಿಯೆಯನ್ನು ಕಡೆಗಣಿಸಿ, ಸಂವಿಧಾನದ ಭಾವನೆಯನ್ನು ತುಳಿದು, ಸಂವಿಧಾನದ ಮೂಲಾಧಾರಕ್ಕೆ ಕೊಡಲಿ ಪೆಟ್ಟು ಹಾಕಿ ತುರ್ತು ಪರಿಸ್ಥಿತಿ ಹೇರಲಾಯಿತು. ಇದು ಎಷ್ಟು ಭಯಾನಕವಾಗಿತ್ತು ಎಂದರೆ ಮೈಯಲ್ಲಿ ನಡುಕ ಹುಟ್ಟಿಸುವಂತಿತ್ತು.
ಹಾಗಾಗಿ ನಾನು ಇದನ್ನು ಸಂವಿಧಾನ ಹತ್ಯಾ ದಿನವೆಂದು ಹೇಳುತ್ತೇನೆ. ಸಂವಿಧಾನ ಹತ್ಯಾ ದಿನ ನಮಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಆತ್ಮವನ್ನು ಕತ್ತು ಹಿಸುಕಿದ ಸರ್ವಾಧಿಕಾರಿ ಮನಸ್ಥಿತಿಯನ್ನು ನಮಗೆ ನೆನಪಿಸುತ್ತದೆ ಮತ್ತು ತುರ್ತುಪರಿಸ್ಥಿತಿಯ ಮಿತಿಮೀರಿದ ದುಷ್ಪರಿಣಾಮದಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಲ್ಲಿಸುವ ದಿನವಾಗಿದೆ. ಭಾರತೀಯ ಇತಿಹಾಸದ ಕರಾಳ ಹಂತವನ್ನು ಎಂದಿಗೂ ಕಾಣದ ಕರಾಳ ಅಧ್ಯಾಯವನ್ನು ಕಾಂಗ್ರೆಸ್ ಬಿಚ್ಚಿಟ್ಟಿತು.
ಯಾವುದೇ ಪ್ರಜಾಸತ್ತಾತ್ಮಕತೆ ಕಂಡರಿಯದಂತಹ ದಿನ. ಮತ್ತು ಬಾಲಕ ಬಾಲಕಿಯರೆ, ಅಂದಿನ ಪತ್ರಿಕೆಗಳು ಇನ್ನೂ ಮಾಡಿದವು ಗೊತ್ತೇ? ಟೈಮ್ಸ್ ಆಫ್ ಇಂಡಿಯಾ ಮುಂಬೈ ಆವೃತ್ತಿ, ಮುಂಬೈ ನೌ ಒಂದು ಶೋಕ ಸಂದೇಶವನ್ನು ಬರೆದವು - “ಪ್ರಜಾಸತ್ತಾತ್ಮಕತೆಯು ಸತ್ಯದ ಪತಿಗೆ, ಸ್ವಾತಂತ್ರ್ಯದ ಪಿತನಿಗೆ, ವಿಶ್ವಾಸದ ಸೋದರಣಿಗೆ ಜನನ ನೀಡಿತು, ಜೂನ್ 26 ರಂದು ನ್ಯಾಯ ಕೊನೆಯುಸಿರೆಳೆಯಿತು”. ಟೈಮ್ಸ್ ಅಫ್ ಇಂಡಿಯಾ ಸ್ವಾತಂತ್ರ್ಯದ ಮರಣವಾಯಿತು ಎಂದು ಬರೆಯಿತು.
ಇಂಡಿಯನ್ ಎಕ್ಸ್ ಪ್ರೆಸ್ ನ ದಿಲ್ಲಿ ಆವೃತ್ತಿಯು ಜೂನ್ 28 ರಂದು ತಮ್ಮ ಸಂಪಾದಕೀಯ ಸ್ಥಳವನ್ನು ಖಾಲಿ ಇರಿಸಿತ್ತು. ಅಂದಿನ ಕಲ್ಕತ್ತಾ ಅಂದರೆ ಕೋಲ್ಕತ್ತಾ ಡ ಸ್ಟೇಟ್ಸ್ ಮನ ನೌ ಕೂಡಾ ಸಂಪಾದಕೀಯ ಸ್ಥಳವನ್ನು ಖಾಲಿ ಇರಿಸಿತ್ತು.
ಬಾಲಕ ಬಾಲಕಿಯರೆ, ಮತ್ತು ನನ್ನ ಸ್ನೇಹಿತರೆ, ಇದೆ ದಿನ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರು ಮತ್ತು ವರ್ಣನಾತೀತವಾದ ಅವಮಾನವನ್ನು ಸಹಿಸಿದವರ ನೆನಪನ್ನು ತರುತ್ತದೆ. ಅದಕ್ಕಾಗಿಯೇ ಸಂವಿಧಾನ ಹತ್ಯಾ ದಿನ ನಮಗೆ ಪಾಠ ಕಲಿಸುವ ದಿನವಾಗಿದೆ.
ಸಂವಿಧಾನವನ್ನು ಒಂದು ಪುಸ್ತಕದಂತೆ ಪರಿಗಣಿಸಲಾಗದು.
ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನವನ್ನು ಓದಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು.
ಸಂವಿಧಾನವನ್ನು ಕೇವಲ ಪುಸ್ತಕಡತೆ ತೋರಿಸುವುದು, ಅದರ ಪ್ರದರ್ಶನ ಮಾಡುವುದನ್ನು ಒಬ್ಬ ಸಭ್ಯ ವ್ಯಕ್ತಿ, ಸುಸಂಸ್ಕೃತ ವ್ಯಕ್ತಿ, ಒಬ್ಬ ಜ್ಞಾನಿ, ಸಂವಿಧಾನದ ಬಗ್ಗೆ ಸಮಾರ್ಪಣಾ ಭಾವ ಹೊಂದಿದ ವ್ಯಕ್ತಿ, ಸಂವಿಧಾನವನ್ನು ಪೂಜಿಸುವಂತಹವನು ಒಪ್ಪಿಕೊಳ್ಳುವುದಿಲ್ಲ.
ಸಂವಿಧಾನದಲ್ಲಿ 22 ಭಾಗಗಳಿವೆ, ಇವನ್ನು 22 ವರ್ಣಚಿತ್ರಗಳಿಂದ ಬಿಂಬಿಸಲಾಗಿದೆ. ಅದು ನಮ್ಮ 5000 ವರ್ಷಗಳ ಇತಿಹಾಸವನ್ನು ಪ್ರದರ್ಶಿಸುತ್ತದೆ. ನಮ್ಮ ಮೌಲ್ಯಗಳನ್ನು ಬಿಂಬಿಸುತ್ತದೆ. ಇ ವರ್ಣಚಿತ್ರಗಳು ನಮ್ಮ ನಾಗರಿಕತೆ, ನೀತಿ ಮತ್ತು ಮೌಲ್ಯಗಳನ್ನು ಸಾರುತ್ತವೆ. ಎಲ್ಲಕ್ಕಿಂತ ಮೊದಲು ಒಕ್ಕೂಟಗಳು ಮತ್ತು ಅದರ ಗಡಿಗಳು. ಇಲ್ಲಿ ಜೇಬು ಗೂಳಿಯನ್ನು ತೋರಿಸಿದ್ದಾರೆ. ಇದರರ್ಥ ಸರ್ವ ಶಕ್ತಿ ಒಂದರಲ್ಲೇ ಮಿಳಿತವಾಗಿದೆ. ಭಾರತ ಶಕ್ತಿಶಾಲಿಯಾಗಿರಲಿ ಭಾರತವನ್ನು ವಿಭಜಿಸುವವರ ಕನಸುಗಳು ನುಚ್ಚು ನೂರಾಗಲಿ ಎಂದು ಬರೆದಿದೆ. ನಾವು ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡಿದಾಗ ಅ ವರ್ಣಚಿತ್ರದಲ್ಲಿ ಏನಿದೆಯೆಂದರೆ, ಭಾರತದ ಅಜರಾಮರ ನಾಯಕರಾದ ಸೀತಾದೇವಿ, ಶ್ರೀರಾಮ ಮತ್ತು ಲಕ್ಷ್ಮಣರನ್ನು ಚಿತ್ರಿಸಲಾಗಿದೆ. ಇದರರ್ಥ ರಾಮಾಯಣದ 3 ನೇ ಅಧ್ಯಾಯದ ಒಂದು ದೃಶ್ಯದಲ್ಲಿ ಬಿಂಬಿಸಲಾದ ಅಧರ್ಮದ ವಿರುದ್ಧ ಧರ್ಮದ ಜಯವನ್ನು ಸಾರುತ್ತದೆ.
ಮುಂಡುವರಿದಂತೆ, ರಾಜ್ಯ ನೀತಿ ನಿರ್ದೇಶನ ತತ್ವವನ್ನು ಸಾರುವುದು ಮುಂದಿನ ಚಿತ್ರ. “ಶ್ರೀ ಕೃಷ್ಣನು ಅನಂತವಾದ ಬುದ್ಧಿವಂತಿಕೆಯ ಸಾಗರವನ್ನು ಪ್ರತಿಪಾದಿಸುತ್ತಾನೆ - ಕುರುಕ್ಷೇತ್ರದಲ್ಲಿ ಮಹಾಭಾರತದ ಯುದ್ಧವು ಪ್ರಾರಂಭವಾಗುವ ಮೊದಲು ದಿಗ್ಭ್ರಮೆಗೊಂಡ ಅರ್ಜುನನಿಗೆ ಭಗವತ್ಗೀತೆಯು ಭಾಗ IV ರಲ್ಲಿನ ಬೋಧನೆಯನ್ನು ಸಾರುತ್ತದೆ.
"ಶೌರ್ಯ ಮತ್ತು ಸಾಹಸದ ಮಹಾನ್ ಮರಾಠ ರಾಜ - ಛತ್ರಪತಿ ಶಿವಾಜಿ ಮಹಾರಾಜರು ಭಾಗ XV ರಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದಿದ್ದಾರೆ. ಇದು ಚುನಾವಣೆಗಳ ಕುರಿತು ವ್ಯವಹರಿಸುವುದನ್ನು ಬಿಂಬಿಸುತ್ತದೆ."
ಇಂತಹ ಒಂದು ಕಡತವನ್ನು ಅರಿಯದೆ, ಅದರ ಆಳವನ್ನು ತಿಳಿಯದೆ, ಅದನ್ನು ಪೂಜಿಸದೆ ಹೀಗೆ ತೋರಿಸುವುದು ತಪ್ಪು. ಇಂದಿನ ಕಾರ್ಯಕ್ರಮ ಇದು ಒಂದು ದೇವಸ್ಥಾನ, ಒಂದು ಆಚರನೆ ಇದಕ್ಕೆ ಅವಶ್ಯಕ ಎಂದು ಸಾರುತ್ತದೆ.
ನಾವು ಸಂವಿಧಾನದಡಿ ಮೂಲಭೂತ ಹಕ್ಕುಗಳನ್ನು ಆನಂದಿಸುವಾಗ ನಮ್ಮ ಮೂಲಭೂತ ಕರ್ತವ್ಯಗಳು ಇವೆ. ಅಂದರೆ ಅದರಲ್ಲಿ ಎಲ್ಲಕ್ಕಿಂತ ಮೊದಲ ಕರ್ತವ್ಯ ಯಾವುದು?
ಸಂವಿಧಾನಕ್ಕೆ ಬದ್ಧರಾಗಿರಿ ಮತ್ತು ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸಿ. ಸ್ವಾತಂತ್ರ್ಯ ಹೋರಾಟದ ಆದರ್ಶಗಳು, ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಿ.
ಎಂತಹ ದೊಡ್ಡ ವಿಪರ್ಯಾಸವೆಂದರೆ, ಈ ಜವಾಬ್ದಾರಿಯನ್ನು ನಿರ್ವಹಿಸದಿರುವುದೇ ವಿದೇಶ ಪ್ರವಾಸದ ಏಕೈಕ ಉದ್ದೇಶವಾಗಿದೆ. ಸಾರ್ವಜನಿಕವಾಗಿ ಭಾರತದ ಸಂವಿಧಾನದ ಆತ್ಮವನ್ನು ನುಚ್ಚು ನೂರಾಗಿಸುವುದು. ನಾವು ನಮ್ಮ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳಲ್ಲಿ ವಿಶ್ವಾಸ ಹೊಂಡಬೇಕು.
3 ವರ್ಷಗಳ ತಪಸ್ಸಿನ ನಂತರ, ಒಂದು ತಿಂಗಳೊಳಗೆ, ಭಾರತದ ಸಂವಿಧಾನವು 18 ಅಧಿವೇಶನಗಳಲ್ಲಿ ರಚನೆಯಾಯಿತು ಎಂಬುದನ್ನು ನಾನು ನಿಮಗೆ ನೆನಪಿಸಬಯಸುತ್ತೇನೆ. ನವೆಂಬರ್ 25, 1949 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ಹೇಳಿಕೆ ಇತ್ತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಆ ಸಮಯದಲ್ಲಿ ಬಹಳ ಮುಖ್ಯವಾದದ್ದನ್ನು ಹೇಳಿದರು, ನಮ್ಮ ಕಿವಿಗಳು ನವಿರೇಳಬೇಕು, ಆ ಆಲೋಚನೆ ನಮ್ಮ ಹೃದಯದಲ್ಲಿ ಸ್ಥಿರಗೊಳ್ಳಬೇಕು, ನಾನು ಉಲ್ಲೇಖಿಸುತ್ತೇನೆ: “ಭಾರತವು ಕೆಲವು ತನ್ನದೇ ಜನರ ದ್ರೋಹ ಮತ್ತು ವಿಶ್ವಾಸಘಾತದಿಂದ ಮತ್ತೊಮ್ಮೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆ.”
ಭಾರತ ಎಂದಿಗೂ ಸ್ವತಂತ್ರವಾಗಿರಲಿಲ್ಲ, ಅದು ಸ್ವತಂತ್ರವಾಗಿತ್ತು, ಆದರೆ ಏಕೆ ಸ್ವಾತಂತ್ರ್ಯವನ್ನು ಕಳೆದುಕೊಂಡಿತು, ನಮ್ಮಲ್ಲಿ ಕೆಲವರ ಪ್ರಕಾರ, ಅವರ ದ್ರೋಹವೇ ಅದಕ್ಕೆ ಕಾರಣ, ಅವರ ವಿಶ್ವಾಸಘಾತುಕತನವೇ ಅದಕ್ಕೆ ಕಾರಣ. “ಇತಿಹಾಸ ಪುನರಾವರ್ತನೆಯಾಗುತ್ತದೆಯೇ? ಭಾರತೀಯರು ದೇಶವನ್ನು ಧರ್ಮಕ್ಕಿಂತ ಉಚ್ಚ ಸ್ಥಾನದಲ್ಲಿರಿಸುತ್ತಾರೆಯೇ ಅಥವಾ ಅವರು ಧರ್ಮವನ್ನು ದೇಶಕ್ಕಿಂತ ಉಚ್ಚ ಸ್ಥಾನದಲ್ಲಿರಿಸುತ್ತಾರೆಯೇ? ಆದರೆ ಪಕ್ಷಗಳು ಧರ್ಮವನ್ನು ದೇಶಕ್ಕಿಂತ ಉಚ್ಚ ಸ್ಥಾನದಲ್ಲಿರಿಸಿದರೆ, ನಮ್ಮ ಸ್ವಾತಂತ್ರ್ಯವು ಎರಡನೇ ಬಾರಿಗೆ ಅಪಾಯಕ್ಕೆ ಸಿಲುಕುತ್ತದೆ ಮತ್ತು ಬಹುಶಃ ಶಾಶ್ವತವಾಗಿ ಕಳೆದುಹೋಗುತ್ತದೆ."
ಅವರು ಎಷ್ಟು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರು ನಮಗೆ ಮಾರ್ಗದರ್ಶನವನ್ನು ನೀಡಿದ್ದಾರೆ, ಅವರು ಅಂತಹ ಅವಕಾಶ ದೊರೆತಾಗ ನಮಗೆ ನೀತಿಯನ್ನು ಕಲಿಸಿದ್ದಾರೆ, ಅವರು ಹೇಳಿದ್ದನ್ನು ನಾನು ಉಲ್ಲೇಖಿಸುತ್ತೇನೆ “ಈ ಘಟನೆಯ ವಿರುದ್ಧ ನಾವೆಲ್ಲರೂ ದೃಢನಿಶ್ಚಯದಿಂದ ಹೋರಾಡಬೇಕು. ನಮ್ಮ ರಕ್ತದ ಕೊನೆಯ ಹನಿಯಿರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವು ಸಂಕಲ್ಪ ಮಾಡಬೇಕು”.
ಡಾ.ಬಿ.ಆರ್.ಅಂಬೇಡ್ಕರ್ ಇದಕ್ಕಿಂತ ಹೆಚ್ಚು ಇನ್ನೇನು ಹೇಳಬಲ್ಲರು? ಅವರು ವ್ಯಕ್ತಪಡಿಸಿದ ಕಳವಳವನ್ನು ಕೆಲವರು ಮೂಲಭೂತ ವಾಸ್ತವವೆಂದು ಪರಿಗಣಿಸುತ್ತಿದ್ದಾರೆ. ಕೆಲವು ದೇಶದ ಒಳಗೆ ಮತ್ತು ಕೆಲವು ದೇಶದ ಹೊರಗೆ. ನಮ್ಮ ರಕ್ತದ ಕೊನೆಯ ಹನಿಯಿರುವವರೆಗೂ ನಾವು ದೃಢವಾಗಿ ಹೋರಾಡಬೇಕು, ಡಿಆರ್ ಬಿಆರ್ ಅಂಬೇಡ್ಕರ್ ಅವರ ಈ ಸಂದೇಶವು ನಮ್ಮ ಮನಸ್ಸು, ಮೆದುಳು ಮತ್ತು ಹೃದಯದಲ್ಲಿ ಅಳಿಸದಂತೆ ಆಕಹೊತ್ತಬೇಕು. ಈ ಶಕ್ತಿಗಳ ವಿರುದ್ಧ ಹೋರಾಡಲು ನಾವು ಸದಾ ಸಿದ್ಧರಾಗಿರಬೇಕು.
ಬಾಲಕ ಬಾಲಕಿಯರ, ರಾಷ್ಟ್ರವಿರೋಧಿ, ರಾಷ್ಟ್ರೀಯತೆಯ ವಿರುದ್ಧ, ಸಂವಿಧಾನಕ್ಕೆ ಅಗೌರವ ತೋರುವ ಇಂತಹ ಕೃತ್ಯಗಳು ನಮ್ಮ ಮುಂದೆ ಬಂದಾಗ, ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಸವಾಲು ಎದುರಾದಾಗ ನಾವು ಧ್ವನಿ ಎತ್ತಬೇಕು.
ಅಸ್ಮಿತೆಯ ಮೇಲೆ ಆಕ್ರಮಣ ಮಾಡಿದರೆ, ಪ್ರತಿಕ್ರಿಯೆ ಅಗತ್ಯವಾಗುತ್ತದೆ. ದೇಶದ ಒಳಗೆ ಮತ್ತು ಹೊರಗೆ ನಮ್ಮ ಸಾಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ಇಂತಹ ಮುಂಚೂಣಿಯ ಆಕ್ರಮಣ ನಡೆದಾಗ ನಾವು ಮೌನವಾಗಿರಲು ಸಾಧ್ಯವಿಲ್ಲ.
ಈಗ ನಾವು ಎಲ್ಲಿಗೆ ತಲುಪಿದಡೆವೆ ಎಂದು ನೋಡಿ, ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯರೊಂದಿಗೆ ಭಯಾನಕ ಬರ್ಬರತೆಯನ್ನು "ಅಸ್ವಸ್ಥತೆ ರೋಗಲಕ್ಷಣ" ಎಂದು ಹೆಸರಿಸಲಾಗುತ್ತದೆ. ಇದು ಯಾವ ರೀತಿಯ ವಿವರಣೆಯಾಗಿದೆ? ಇನ್ನೊಬ್ಬರು "ಬಾಂಗ್ಲಾದೇಶದಂತಹ ಅರಾಜಕತೆ ಇಲ್ಲಿಯೂ ಉದ್ಭವಿಸಬಹುದು" ಎಂದು ಹೇಳುತ್ತಾರೆ ಮತ್ತು ಸಾಂವಿಧಾನಿಕ ಸ್ಥಾನವನ್ನು ಹೊಂದಿರುವ ಮತ್ತೊಬ್ಬರು "ವಿದೇಶಿ ನೆಲದಲ್ಲಿ ನಿಯತಕಾಲಿಕವಾಗಿ 'ಭಾರತ-ವಿರೋಧಿ' ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ನಮ್ಮ ಸಂವಿಧಾನಕ್ಕೆ ಆಗುತ್ತಿರುವ ಇಂತಹ ಅಪಚಾರವನ್ನು ನಾವು ಕಡೆಗಣಿಸಬಹುದೇ? ಇಂತಹ ಕುಕೃತ್ಯಗಳನ್ನು ತಡೆಯುವಂತೆ ನಾನು ಯುವಕರಿಗೆ ಕರೆ ನೀಡುತ್ತೇನೆ. ಅವರು ಭಾರತ ಮಾತೆಗ ನೋವು ನೀಡುತ್ತಿದ್ದಾರೆ.
ಸ್ನೇಹಿತರೇ, ರಾಜ್ಯದ ಎಲ್ಲಾ ಅಂಗಗಳು- ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳಿಗೆ ಒಂದೇ ಒಂದು ಉದ್ದೇಶವಿದೆ - ಸಂವಿಧಾನದ ಮೂಲ ಚೇತನ ಯಶಸ್ವಿಯಾಗಬೇಕು, ಶ್ರೀಸಾಮಾನ್ಯನಿಗೆ ಎಲ್ಲಾ ಹಕ್ಕುಗಳು ಸಿಗಲಿ, ಭಾರತವು ಅಭಿವೃದ್ಧಿ ಹೊಂದಲಿ ಎಂಬುದು.
ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಾಂವಿಧಾನಿಕ ಆದರ್ಶಗಳನ್ನು ಮತ್ತಷ್ಟು ಪೋಷಿಸಲು ಮತ್ತು ಪಸರಿಸಲು ಅವರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗುತ್ತದೆ. ಸಂಸ್ಥೆಗೆ ತನ್ನ ಮಿತಿಗಳ ಬಗ್ಗೆ ಅರಿವಿದ್ದಗ ಮಾತ್ರ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಕೆಲವು ಮಿತಿಗಳು ಸ್ಪಷ್ಟವಾಗಿರುತ್ತವೆ, ಕೆಲವು ಮಿತಿಗಳು ಬಹಳ ಸೂಕ್ಷ್ಮವಾಗಿರುತ್ತವೆ.
ಇದು ನಮ್ಮ ರಾಜ್ಯದ ಅಂಗಗಳ ಉತ್ಕೃಷ್ಟತೆ ಮತ್ತು ಪರಿಣಾಮಕಾರಿತ್ವವನ್ನು ತೋರುತ್ತದೆ. ಈ ಪವಿತ್ರ ವೇದಿಕೆಗಳು- ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗವು ರಾಜಕೀಯ ಪ್ರಚೋದಕ ಚರ್ಚೆ ಅಥವಾ ನಿರೂಪಣೆಯ ಅಂಶಗಳನ್ನು ಪ್ರಚೋದಿಸದಿರಲಿ. ಅಥವಾ ಸವಾಲೇಸೆಯುವಂತಹ ಮತ್ತು ಬೆದರಿಸುವ ವಾತಾವರಣದಲ್ಲಿ ರಾಷ್ಟ್ರಕ್ಕೆ ಉತ್ತಮವಾಗಿ ಸೇವೆ ಸಲ್ಲಿಸುವ ಸ್ಥಾಪಿತ ಸಂಸ್ಥೆಗಳಿಗೆ ಹಾನಿ ಒಡ್ಡದಂತಿರಲಿ.
ನಮ್ಮ ಸಂಸ್ಥೆಗಳು, ಅಂದರೆ ಎಲ್ಲಾ ರೀತಿಯ ಸಂಸ್ಥೆಗಳು- ಚುನಾವಣಾ ಆಯೋಗ, ತನಿಖಾ ಸಂಸ್ಥೆಗಳು ಬಹಳ ಒತ್ತಡದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತವೆ ಮತ್ತು ನಿಗಾವಣೆ ಅವರ ಉತ್ಸಾಹವನ್ನು ಕುಂದಿಸಬಹುದು. ಇದು ರಾಜಕೀಯ ಚರ್ಚೆಗೆ ಗ್ರಾಸವಾಗಬಹುದು. ಇದು ಯಾವುದೇ ವಿವರಣೆಗೆ ಪ್ರಚೋದನೆ ನೀಡಬಹುದು. ನಾವು ನಮ್ಮ ಸಂಸ್ಥೆಗಳ ಬಗ್ಗೆ ಅತ್ಯಂತ ಜಾಗೃತರಾಗಿರಬೇಕು. ಅವು ಸದೃಢವಾಗಿವೆ, ಸ್ವತಂತ್ರವಾಗಿ ಕೆಲಸ ಮಾಡುತ್ತವೇ ಮತ್ತು ಪರಿಶೀಲನೆ ಹಾಗೂ ಸಮತೋಲನೆ ಹೊಂದಿವೆ. ಅವು ಕಾನೂನಿನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಆ ಪರಿಸ್ಥಿತಿಯಲ್ಲಿ, ನಾವು ಸ್ವಲ್ಪ ಸಂವೇದನೆಯನ್ನು ಉಂಟುಮಾಡುವ ರೀತಿಯಲ್ಲಿ ಕೆಲಸ ಮಾಡಿದರೆ. ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗುವುದು ಅಥವಾ ವಾಗ್ವಾದಕ್ಕೆ ಎಡೆಮಾಡಿಕೊಡುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು.
ನಾವು ವಿದೇಶದಲ್ಲಿದ್ದಾಗ ಅಂತಿಮವಾಗಿ ಭಾರತೀಯರು. ಭಾರತೀಯತೆಯೇ ನಮ್ಮ ಗುರುತು. ನಮ್ಮ ರಾಷ್ಟ್ರೀಯತೆಯ ಬಗೆಗಿನ ಭಾವನೆಯನ್ನು ಪ್ರತಿಬಿಂಬಿಸಬೇಕು. ರಾಷ್ಟ್ರೀಯ ಹಿತಾಸಕ್ತಿ ಮುಖ್ಯ. ರಾಷ್ಟ್ರಕ್ಕೆ ಹಾನಿಕಾರಕವಾದ ಅಂಶಗಳನ್ನು ಪ್ರಚಾರ ಮಾಡುವುದು ಸಂಪೂರ್ಣ ತಪ್ಪು ಮತ್ತು ರಾಷ್ಟ್ರ ಧರ್ಮಕ್ಕೆ ಎಸೆಯುವ ಘೋರ ಅವಮಾನವಾಗಿದೆ. ಈ ಶಕ್ತಿಗಳನ್ನು ಹತಾಶಗೊಳಿಸುವುದು ನಮ್ಮ ಅಂತಿಮ ಜವಾಬ್ದಾರಿ ಮತ್ತು ರಾಷ್ಟ್ರೀಯ ಕರ್ತವ್ಯವಾಗಿದೆ. ವಿರುದ್ಧ ದಿಕ್ಕಿನತ್ತ ಸಾಗುತ್ತಿರುವವರು ಚಿಂತನೆ ನಡೆಸಬೇಕಿದೆ. ದೇಶವನ್ನು ಹಾಳು ಮಾಡುವ ಉದ್ದೇಶ ಹೊಂದಿರುವವರಿಗೆ ತಕ್ಕ ಪಾಠ ಕಲಿಸುವುದು ನಮ್ಮ ಉದ್ದೇಶವೇ ಹೊರತು ಅವರನ್ನು ಅಪ್ಪಿಕೊಳ್ಳುವುದಲ್ಲ.
ನಾನು ಒಂದು ಮನವಿಯನ್ನು ಮಾಡುವ ಮೂಲಕ ನನ್ನ ಮಾತಿಗೆ ವಿರಾಮ ನೀಡುತ್ತೇನೆ, ರಾಷ್ಟ್ರದ ಹಿತಾಸಕ್ತಿಯನ್ನು ಸ್ವಯಂ ಮತ್ತು ರಾಜಕೀಯಕ್ಕಿಂತ ಮೇಲಿಡುವಂತೆ ನಾನು ಎಲ್ಲಾ ನಾಗರಿಕರಿಗೆ ಮನವಿ ಮಾಡುತ್ತೇನೆ. ರಾಷ್ಟ್ರೀಯತೆಗೆ ಬದ್ಧವಾಗಿರುವುದು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದೆ. ಎಷ್ಟೇ ಅಡತಡೆಗಳು ಎದುರಾದರೂ ಸಂವಿಧಾನದ ಸಾರವನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ. ದುರದೃಷ್ಟವಶಾತ್ ಇಂತಹ ಸವಾಲುಗಳನ್ನು ಹೊರಗಿನದಕ್ಕಿಂತಲೂ ಹೆಚ್ಚು ಒಳಗಿನಿಂದ ಎದುರಿಸುತ್ತಿದ್ದೇವೆ.
ಬನ್ನಿ ಪರಿಹರಿಸೋಣ, ಇಂದು ನಾನು ನಿಮಗೆಲ್ಲರಿಗೂ ಸ್ಪಷ್ಟ ಕರೆಯನ್ನು ನೀಡುತ್ತೇನೆ, ನಮ್ಮ ರಾಷ್ಟ್ರೀಯತೆಯ ಬಗ್ಗೆ ಧ್ವನಿ ಎತ್ತಿ, ನಮ್ಮ ರಾಷ್ಟ್ರೀಯತೆಯ ಬಗ್ಗೆ ಜೋರಾದ ಧ್ವನಿ ಎತ್ತಿ, ಮತ್ತು ಸಂವಿಧಾನದ ದನಿಯಾಗಿರಿ ಏಕೆಂದರೆ 2047 ರಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದನ್ನು ಖಚಿತಪಡಿಸಿಕೊಳ್ಳಲು ಇದು ಏಕೈಕ ಮಾರ್ಗವಾಗಿದೆ. 2047 ರ ಮ್ಯಾರಥಾನ್ ಓಟ ಮುಂದುವರಿಯುತ್ತಿದೆ, ಈ ರೀತಿಯ ಕಾರ್ಯಕ್ರಮಗಳ ಮೂಲಕ ಇದರ ವೇಗ ಹೆಚ್ಚಿದೆ. ಜನರು ತಮ್ಮಲ್ಲಿ ಸಂವಿಧಾನದ ಮನೋಭಾವವನ್ನು ಮೈಗೂಡಿಸಿಕೊಂಡಾಗ, ಅವರು ನಿಸ್ಸಂಶಯವಾಗಿ ತಮಗಾಗಿ ಕೆಲಸ ಮಾಡುತ್ತಾರೆ ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ರಾಷ್ಟ್ರಕ್ಕಾಗಿ ದುಡಿಯುತ್ತಾರೆ.
ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ದೇಶದೆಲ್ಲೆಡೆ ನಡೆಸುತ್ತಿರುವ ಹವನ, ಇಂದು ನಿಮ್ಮ ಈ ನಡೆ ಅಪಾರ ತ್ಯಾಗ ಮತ್ತು ಕೃತಜ್ಞತೆಗೆ ಅರ್ಹವಾಗಿದೆ.
ದೇಶದಾದ್ಯಂತ ಸಾಗುವ ಈ ಜ್ಯೋತಿಯನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ಶಿಕ್ಷಣ ಪಡೆದ ಸ್ಥಳದಿಂದ ಬೆಳಗಿಸಲು ನನಗೆ ಅವಕಾಶ ಕಲಪಿಸಿದ್ದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಏಕನಾಥ್ ಶಿಂಧೆ ಮತ್ತು ಮಾನ್ಯ ಸಚಿವರಾದ ಶ್ರೀ ಮಂಗಲ್ ಪ್ರಭಾತ್ ಲೋಧಾ ಜೀ ಅವರಿಗೆ ನಾನು ಆಭಾರಿಯಾಗಿದ್ದೇನೆ.
ನಮಸ್ಕಾರ
*****
(Release ID: 2055617)
Visitor Counter : 39