ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಉನ್ನತ ಶಿಕ್ಷಣ ಸಂಸ್ಥೆಗಳ ಮಾನ್ಯತಾ ವಲಯದಲ್ಲಿ ಪ್ರಮುಖ ಸುಧಾರಣೆಗಳು

Posted On: 27 JAN 2024 7:19PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ [ಎನ್ಇಪಿ2020] ಅನುಷ್ಠಾನದ ಮೂಲಕ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ತ್ವರಿತವಾಗಿ ಪರಿವರ್ತನೆಯಾಗುತ್ತಿದೆ. ಬರುವ 2037 ರ ವೇಳೆಗೆ ಉನ್ನತ ಶಿಕ್ಷಣ ವಲಯದಲ್ಲಿ 50% ರಷ್ಟು ಜಿಇಆರ್‌ ತಲುಪುವ ಗುರಿ ಹೊಂದಿದ್ದು, ಈ ಮೂಲಕ ಶಿಕ್ಷಣದಲ್ಲಿ ಗುಣಮಟ್ಟವನ್ನು ಹೆಚ್ಚಿಸುವುದು ದೇಶದ ಪರಮೋಚ್ಚ ಮಹತ್ವವಾಗಿದೆ. ಭಾರತದ ಅಗ್ರಗಣ್ಯ ಶಿಕ್ಷಣ ಸಂಸ್ಥೆಗಳು ಜಗತ್ತಿನಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ. ಉನ್ನತ ಗುಣಮಟ್ಟದ ಬೋಧನೆ – ಕಲಿಕೆ, ಸಂಶೋಧನೆ, ನಾವೀನ್ಯತೆಗೆ ಒತ್ತು, ಪ್ರೇರೇಪಣೆ ಮಾಡುವ ಶಿಕ್ಷಕರು, ಉದ್ಯೋಗದ ಕೌಶಲ್ಯ ಹೆಚ್ಚಿಸುವ, ಸಾಮಾಜಿಕ ಏಕೀಕರಣ, ಶೈಕ್ಷಣಿಕ ವಾತಾವರಣ ಸುಧಾರಿಸುವ, ಮೂಲಸೌಕರ್ಯ ಮತ್ತು ಸುಸ್ಥಿರತೆ ಸಾಧಿಸುವ ಪ್ರಕ್ರಿಯೆಗಳ ಮೇಲೆ ಇವು ಅವಲಂಬಿತವಾಗಿವೆ. 

ಉನ್ನತ ಶಿಕ್ಷಣ ವಲಯದ ಪರಿವರ್ತನೆಯಲ್ಲಿ ಭಾರತದಲ್ಲಿ ಮಾನ್ಯತೆ ಮತ್ತು ಶ್ರೇಯಾಂಕ ನೀಡುವುದು ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ ಸಚಿವಾಲಯ 2022 ರ ನವೆಂಬರ್‌ ನಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣದ ಮಾನ್ಯತೆ ಮತ್ತು ಪರಿವರ್ತನಾತ್ಮಕ ಸುಧಾರಣೆಗಳನ್ನು ಬಲಪಡಿಸುವ ಉದ್ದೇಶದಿಂದ ಇಸ್ರೋ ಮಾಜಿ ಅಧ್ಯಕ್ಷ ಮತ್ತು ಐಐಟಿ ಮಂಡಳಿಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್‌ ಅವರ ಮುಖಂಡತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. 

ಈ ಸಮಿತಿಯ ಪ್ರಾಥಮಿಕ ವರದಿಯನ್ನು ಕೇಂದ್ರ ಸರ್ಕಾರದ ಜಾಲತಾಣದಲ್ಲಿ ಪ್ರಕಟಿಸಿದ್ದು, ಸಾರ್ವನಿಕರ ಸಲಹೆಗಳನ್ನು ಸ್ವೀಕರಿಸಿತ್ತು. ತರುವಾಯ ಪಾಲುದಾರರಿಂದ ಬಂದ ಹಲವಾರು ಸಲಹೆ, ಸೂಚನೆಗಳ ಆಧಾರದ ಮೇಲೆ ಅಂತಿಮ ವರದಿ ಸಿದ್ಧಪಡಿಸಿ 2024 ರ ಜನವರಿ 16 ರಂದು ಭಾರತ ಸರ್ಕಾರದ ಶಿಕ್ಷಣ ಸಚಿವ ‍ಶ್ರೀ ಧರ್ಮೇಂದ್ರ ಪ್ರಧಾನ್‌ ಅವರಿಗೆ ಸಲ್ಲಿಸಿತು. 
ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು – ಎಚ್‌ ಇ ಐ ಗಳಲ್ಲಿ ನಿಗದಿತ ಸಮಯದಲ್ಲಿ ಅನುಮೋದನೆ, ಮೌಲ್ಯಮಾಪನ, ಮಾನ್ಯತೆ, ‍ಶ್ರೇಯಾಂಕವನ್ನು ಬಲಪಡಿಸುವ, ಪರಿವರ್ತನೆಯಲ್ಲಿ ಸುಧಾರಣೆ ತರುವ ಗುಂಪನ್ನು ಪ್ರಸ್ತಾಪಿಸಲಾಗಿದೆ. 

ಎನ್‌ ಇಪಿ 2020 ರ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾರ್ಯತಂತ್ರದಲ್ಲಿ ಸುಧಾರಣೆಯನ್ನು ಪ್ರಸ್ತಾಪಿಸಲಾಗಿದೆ. ತಂತ್ರಜ್ಞಾನ ಚಾಲಿತ, ಆಧುನಿಕ ವ್ಯವಸ್ಥೆಗಳೊಂದಿಗೆ ಎಚ್‌ ಇಐಗಳ ಅನುಮೋದನೆ, ಮಾನ್ಯತೆ ಮತ್ತು ಶ್ರೇಯಾಂಕಕ್ಕಾಗಿ ಸರಳ, ವಿಶ್ವಾಸಾರ್ಹ, ವಸ್ತುನಿಷ್ಠ, ತರ್ಕಬದ್ಧ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ, ಮಾನ್ಯತೆ ಪ್ರಕ್ರಿಯೆಯನ್ನು ಪಾರದರ್ಶಕತೆಗೆ ಒಳಪಡಿಸುವ, ಪಾಲುದಾರರ ಸಲಹೆಗಳನ್ನು ಸಂಯೋಜಿಸಿ ಸುಧಾರಣೆಯನ್ನು ಬಲಪಡಿಸುವ ಗುರಿ ಹೊಂದಲಾಗಿದೆ. ಮಾನ್ಯತೆ ಗುಣಮಟ್ಟ ಹೆಚ್ಚಿಸುವ, ಶ್ರೇಷ್ಠತೆ, ಪ್ರಾಮುಖ್ಯತೆ, ಜಾಗತಿಕ ಮೆಚ್ಚುಗೆಯ ಕಡೆಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗಿದೆ. 

ಕೆಲವು ಪ್ರಮುಖ ಶಿಫಾರಸ್ಸುಗಳ ಮೂಲಭೂತ ಅಂಶಗಳು ಈ ಕೆಳಕಂಡಂತಿವೆ:

ಅವಳಿ ಮಾನ್ಯತೆ [ಮಾನ್ಯತೆ ಪಡೆದಿರಲಿ ಅಥವಾ ಪಡೆಯದೇ ಇರಲಿ] ಎಲ್ಲಾ ಸಂಸ್ಥೆಗಳನ್ನು ಮಾನ್ಯತೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಶ್ರೇಣೀಕರಣದ ಬದಲಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಸಂಸ್ಕೃತಿಯನ್ನು ಉತ್ತೇಜಿಸಬೇಕು. ಅವಳಿ ಮಾನ್ಯತೆ ಜಗತ್ತಿನ ಹಲವು ದೇಶಗಳಲ್ಲಿ ಅನುಸರಿಸುತ್ತಿರುವ ಉತ್ತಮ ಅಭ್ಯಾಸಗಳಿಗೆ ಅನುಗುಣವಾಗಿದೆ.  

ಪ್ರಬುದ್ಧತೆ ಆಧಾರಿತ ‍ಶ್ರೇಣೀಕರಣ ಮಾನ್ಯತೆ [ಹಂತ 1 ರಿಂದ 5] ವನ್ನು ಉತ್ತೇಜಿಸಿ, ಶಿಕ್ಷಣ ಸಂಸ್ಥೆಗಳು ಮಾನ್ಯತೆಯನ್ನು ಪಡೆಯುವ ಮೂಲಕ ತನ್ನ ಸಾಮರ್ಥ್ಯವನ್ನು ನಿರಂತರವಾಗಿ ಸುಧಾರಣೆ ಮಾಡಿಕೊಳ್ಳುವ, ರಾಷ್ಟ್ರೀಯ ಉತ್ಕೃಷ್ಟತಾ ಸಂಸ್ಥೆಗಳಾಗಿ ಹಂತ 1 ರಿಂದ ಹಂತ 4, ರವರೆಗೆ ವಿಭಾಗಗಳಲ್ಲಿ ಆಳವಾದ ಅಥವಾ ವಿಶಾಲವಾಗಿ ವಿಕಸನಗೊಳ್ಳಬೇಕಾಗುತ್ತದೆ. ನಂತರ ಹಂತ 5 ಎಂದರೆ ಸಂಸ್ಥೆಗಳು ಬಹು ಶಿಸ್ತಿನ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಜಾಗತಿಕ ಶ್ರೇಷ್ಠತೆ, ಸಮತಟ್ಟಾದ ಮಾನ್ಯತೆ ಪಡೆಯುವುದಾಗಿದೆ. ಭಾರತೀಯ ಸಂಸ್ಥೆಗಳು ತಮ್ಮನ್ನು ತಾವು ತನ್ನ ಗುಣಮಟ್ಟದಲ್ಲಿ ಗಣನೀಯವಾಗಿ ಸುಧಾರಣೆ ಕಂಡುಕೊಳ್ಳುವಂತೆ ಮಾಡಬೇಕೆಂದು ಸೂಚಿಸಿದೆ. 
ಜಾಗತಿಕವಾಗಿ ಅಗ್ರಗಣ್ಯ ಸಂಸ್ಥೆಗಳಲ್ಲಿ. 

ಅವಳಿ ಮಾನ್ಯತೆ ಮತ್ತು ಪ್ರಬುದ್ಧ ಆಧಾರಿತ ಶ್ರೇಣೀಕರ ನೀಡುವ ಮಾನ್ಯತೆಯ ಪ್ರಕ್ರಿಯೆಯಲ್ಲಿ ಹೊರ ಹೊಮ್ಮುವ ಮತ್ತು ಎಚ್‌ ಇ ಐಗಳ ವಿಭಿನ್ನ ಲಕ್ಷಣಗಳ ಪರಿಣಾಮ [ಕೇವಲ ಇನ್‌ ಪುಟ್‌ ಕೇಂದ್ರಿತ ಬದಲಿಗೆ]ದಿಂದ ಹೊಸ ಪ್ರಕ್ರಿಯೆ ದೇಶದಲ್ಲಿ ಎಚ್‌ ಇ ಐಗಳ ವೈವಿಧ್ಯತೆಯನ್ನು ಪರಿಗಣಿಸುತ್ತದೆ. ಅದರ ದೃಷ್ಟಿಕೋನ/ದೃಷ್ಟಿ ಮತ್ತು ಪರಂಪರೆ/ಪರಂಪರೆಯನ್ನು ಆಧಾರಿಸಿ ಅವುಗಳನ್ನು ವರ್ಗೀಕರಿಸುತ್ತದೆ. ನಂತರ ಒಂದು ಪ್ರಮಾಣವನ್ನು ನಿಗದಿಪಡಿಸುವ ಎಲ್ಲಾ ಮಾದರಿಗಳಿಗಿಂತ ಹೆಚ್ಚಾಗಿ ಅದರ ವರ್ಗಕ್ಕೆ ಎಚ್‌ ಇ ಐಗಳಿಂದ ಮಾಹಿತಿ ಪಡೆಯುತ್ತದೆ. ಮಾರ್ಗದರ್ಶನ ಮತ್ತು ಕೈ ಹಿಡಿಯುವ ಮೂಲಕ ಗ್ರಾಮೀಣ ಮತ್ತು ದೂರದ ಸ್ಥಳಗಳ ಸಂಸ್ಥೆಗಳ ಮೇಲೆ ವಿಶೇಷ ಗಮನಹರಿಸಲಾಗುತ್ತದೆ. 

ಒಂದು ದೇಶ ಒಂದು ದತ್ತಾಂಶ ವೇದಿಕೆಯನ್ನು ಸುಧಾರಣೆಯ ಭಾಗವಾಗಿ ಪ್ರಸ್ತಾಪಿಸಲಾಗಿದೆ ಮತ್ತು ಸಂಸ್ಥೆಗಳ ದತ್ತಾಂಶದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಾಗಿದೆ. ದತ್ತಾಂಶದ ದೃಢೀಕರಣವನ್ನು ಪರಿಶೀಲಿಸುವ, ಮರು ತಪಾಸಣೆ ಮಾಡುವ, ಅಂತರ್‌ ನಿರ್ಮಿತ ವಿನ್ಯಾಸದೊಂದಿಗೆ [ಅನುಮೋದನೆ, ಮಾನ್ಯತೆ, ಶ್ರೇಯಾಂಕದ] ಎಚ್‌ ಇ ಐಗಳ ದತ್ತಾಂಶವನ್ನು ಹೊಸ ವೇದಿಕೆ ಸಂಗ್ರಹಿಸಬೇಕು. ಇದರ ಜೊತೆಗೆ ದತ್ತಾಂಶದ ಅವಧಿ ವಿಸ್ತರಣೆ ಮತ್ತು ವಿಶ್ವಾಸಾರ್ಹವಾಗಿರುವಂತೆ ಸುಧಾರಣೆ ತರಬೇಕು. “ಪಾಲುದಾರರ ನ್ಯಾಯಸಮ್ಮತ” ಎಂಬುದನ್ನು ಮಾನ್ಯತೆ ಮತ್ತು ಶ್ರೇಯಾಂಕ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. 

ನಂಬಿಕೆ ಮತ್ತು ದತ್ತಾಂಶ ಆಧಾರಿತ ವ್ಯವಸ್ಥೆಯನ್ನು ರೂಪಿಸಬೇಕಾಗಿದ್ದು, ಪರಿಶೀಲನೆಗಾಗಿ ಸಂಸ್ಥೆಗಳಿಗೆ ಕಡಿಮೆ ಭೇಟಿ ನೀಡುವ, ತಪ್ಪು ಮಾಹಿತಿ ನೀಡಿ ಹೆಚ್ಚಿನ ದಂಡ ಕಟ್ಟುವುದನ್ನು ತಪ್ಪಿಸಬೇಕು. ಇದರ ಜೊತೆಗೆ ಹೆಚ್ಚುವರಿಯಾಗಿ ಧನಸಹಾಯ ಪಡೆಯುವ ಸಂಸ್ಥೆಗಳು, ವಿದ್ಯಾರ್ಥಿಗಳು, ಮುಂತಾದ ಪಾಲುದಾರರ ಆಧಾರಿತ ವಲಯದಲ್ಲಿ ಶ್ರೇಯಾಂಕಕ್ಕೆ ಅವಕಾಶವಿರಬೇಕು.

ನ್ಯಾಕ್‌ ನ [ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ] ಕಾರ್ಯಕಾರಿ ಸಮಿತಿಯ 104 ನೇ ಸಭೆ 2024 ರ ಜನವರಿ 27 ರಂದು ನಡೆದಿದ್ದು, ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. 

ಸುಧಾರಣೆಗಾಗಿ ಮಾಡಿದ ಶಿಫಾರಸ್ಸುಗಳನ್ನು ಎರಡು ಹಂತಗಳಲ್ಲಿ ಜಾರಿಮಾಡಬೇಕಾಗಿದೆ. ಮೊದಲ ಹಂತದಲ್ಲಿ ಅವಳಿ ಮಾನ್ಯತೆ ವ್ಯವಸ್ಥೆಯನ್ನು ಮುಂದಿನ ನಾಲ್ಕು ತಿಂಗಳಲ್ಲಿ ಜಾರಿಗೊಳಿಸಬೇಕು ಮತ್ತು ನಂತರ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸುವಾಗ ಹಾಲಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಮತ್ತು ಮುಂದಿನ ನಾಲ್ಕು ತಿಂಗಳಲ್ಲಿ ಅರ್ಜಿ ಸಲ್ಲಿಸುತ್ತಿರುವ ಸಂಸ್ಥೆಗಳು, ಹಾಲಿ ಪ್ರಕ್ರಿಯೆ ಮೂಲಕ ಅಥವಾ ಮಾನ್ಯತೆಯ ಹೊಸ ವಿಧಾನದ ಮೂಲಕ ತೆರಳುವ ಆಯ್ಕೆಯ ಅವಕಾಶಗಳನ್ನು ಇವು ಪಡೆಯಲಿವೆ. ಪ್ರಬುದ್ಧತೆ ಆಧಾರಿತ ಶ್ರೇಣೀಕರಣ ಹಂತವನ್ನು 2024 ರ ಡಿಸೆಂಬರ್‌ ನಿಂದ ಜಾರಿಗೊಳಿಸಬೇಕು.  

ಡಾ. ರಾಧಾಕೃಷ್ಣನ್‌ ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ವಿಧಾನಗಳು ಮತ್ತು ಸ್ವರೂಪಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ ಮತ್ತು ಒಂದು ರಾಷ್ಟ್ರ ಒಂದು ದತ್ತಾಂಶ ವೇದಿಕೆಯನ್ನು ಬಳಸಿಕೊಂಡು ದತ್ತಾಂಶ ಸಂಗ್ರಹಣೆ ಮತ್ತು ಊರ್ಜಿತಗೊಳಿಸುವ ಪ್ರಕ್ರಿಯೆಯಲ್ಲಿ ಇದು ಪ್ರತಿಬಿಂಬಿತವಾಗಲಿದೆ ಮತ್ತು ವ್ಯವಸ್ಥೆ ಸ್ನೇಹಿ, ಸುಲಭ ಮತ್ತು ಸುಗಮಗೊಳಿಸಲಿದೆ. 

ಎಲ್ಲಾ ಶಿಫಾರಸ್ಸುಗಳನ್ನು 2024 ರ ಡಿಸೆಂಬರ್‌ ವೇಳೆಗೆ ಸಮಗ್ರವಾಗಿ ಅನುಷ್ಠಾನಗೊಳಿಸಬೇಕಾಗಿದ್ದು, ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯು ಗೌರವಾನ್ವಿತ ಪ್ರಧಾನಮಂತ್ರಿಯವರ ಅಮೃತ ಕಾಲದ ದೃಷ್ಟಿಯ ಭಾಗವಾಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯು ಪರಿವರ್ತನೆಯಾಗುವ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕು. ಆ ಮೂಲಕ ಭಾರತದ ಸಾಮಾಜಿಕ, ಆರ್ಥಿಕತೆಗೆ ಕೊಡುಗೆ ನೀಡುವ ಉದ್ದೇಶವನ್ನು ಇದು ಹೊಂದಿದೆ


*****
 


(Release ID: 2000125)
Read this release in: English