ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವಿಜಯಪುರ ಜಿಲ್ಲೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಪ್ರಕಟಣಾ ದಿನಾಂಕ: 28 DEC 2023 2:58PM by PIB Bengaluru

ಕೇಂದ್ರ ಸರ್ಕಾರದ ಹತ್ತಾರು ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ  ಹಮ್ಮಿಕೊಂಡಿರುವ ವಿಕಸಿತ ಭಾರತ ರಥ ಯಾತ್ರೆ ಯ ಅಭಿಯಾನ ಇಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಹಾಗೂ ನಿಡಗುಂದಿ  ತಾಲೂಕಿನ ಬೀರಲದಿನ್ನಿ ಗ್ರಾಮಗಳಲ್ಲಿ ಯಶಸ್ವಿಯಾಗಿ ಜರುಗಿತು.

ಬೀರಲದಿನ್ನಿ ಹಾಗೂ ಝಳಕಿ ಗ್ರಾಮಗಳಲ್ಲಿ ಜರುಗಿದ ಕಾರ್ಯಕ್ರಮ ದಲ್ಲಿ  ಡೇ ನೋಡಲ್ ಆಫೀಸರ್ ಗಳಾದ ಸಚಿನ್ ಹಾಗೂ ಸುರೇಶ  ಚಾಲನೆ ನೀಡಿ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಜೆ.ಜೆ.ಎಂ. ಮುದ್ರಾ ಯೋಜನೆ,  ಸೇರಿದಂತೆ ಹಲವಾರು  ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಸಿ ಹೇಳಿದರು.

ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಡ್ರೋನ್ ಪ್ರಾತ್ಯಕ್ಷಿಕೆ ಜರುಗಿತು. ವಿವಿಧ ಯೋಜನೆಯ ಚಿತ್ರಗಳನ್ನು ತೋರಿಸಲಾಯಿತು. ಗ್ರಾಮಸ್ಥರಿಗೆ ಕ್ಯಾಲೆಂಡರ್ ಗಳನ್ನು ನೀಡಲಾಯಿತು.  

****
 


(ಪ್ರಕಟಣೆ ಐ.ಡಿ.: 1991234) ವಿಸಿಟರ್ ಕೌಂಟರ್ : 90