ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ನವದೆಹಲಿಯಲ್ಲಿ ʻಮಂಥನ ಶಿಬಿರʼವನ್ನು ಉದ್ಘಾಟಿಸಿದರು. ಇದು ʻಪಿಎಂ-ಜನಮನ ಯೋಜನೆʼಯ ಅನುಷ್ಠಾನ ಮಾರ್ಗಸೂಚಿಯನ್ನು ರೂಪಿಸಲು ಒಂಬತ್ತು ಕೇಂದ್ರ ಸಚಿವಾಲಯಗಳು ಮತ್ತು 18 ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಒಂದೆಡೆ ಸೇರಿದ ಕಾರ್ಯಕ್ರಮವಾಗಿದೆ


ʻಪಿಎಂ-ಜನಮನʼ ಯೋಜನೆಯು  ದೇಶದ ಬಡವರು, ಅವಕಾಶ ವಂಚಿತರು ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಸರ್ಕಾರದ ಬದ್ಧತೆ ಮತ್ತು ಸಂವೇದನೆಯ ಸಮಗ್ರ ಚಿತ್ರಣ:
 ಶ್ರೀ ಅರ್ಜುನ್ ಮುಂಡಾ

ʻಪಿಎಂ ಜನಮನʼ ಯೋಜನೆಯ ಅನುಷ್ಠಾನ ಕಾರ್ಯತಂತ್ರ ಸಿದ್ಧಪಡಿಸಲು ಕೇಂದ್ರ ಸಂಪುಟದ ಹಿರಿಯ ಸಚಿವರು ಮತ್ತು ದೇಶಾದ್ಯಂತ ವಿವಿಧ ರಾಜ್ಯಗಳ 600ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಒಂದು ದಿನದ ಕಾರ್ಯಾಗಾರ ಮತ್ತು ಚಿಂತನಮಥನ ಶಿಬಿರದಲ್ಲಿ ಭಾಗವಹಿಸಿದರು

Posted On: 15 DEC 2023 9:00PM by PIB Bengaluru

ಕೇಂದ್ರ ಬುಡಕಟ್ಟು ವ್ಯವಹಾರಗಳು, ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವರಾದ ಶ್ರೀ ಅರ್ಜುನ್ ಮುಂಡಾ ಅವರು ಇಂದು ನವದೆಹಲಿಯಲ್ಲಿ ʻಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನʼದ(ಪಿಎಂ ಜನಮನ) ಅನುಷ್ಠಾನ ಯೋಜನೆಯನ್ನು ಅಂತಿಮಗೊಳಿಸಲು ʻಮಂಥನ ಶಿಬಿರ-2023ʼ ಅನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು (2023ರ ನವೆಂಬರ್ 15) ʻಜನಜಾತಿ ಗೌರವ್ ದಿವಸ್ʼ ಅಂಗವಾಗಿ ಜಾರ್ಖಂಡ್‌ನ ಖುಂತಿಯಿಂದ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಗೌರವಾನ್ವಿತ ಕೇಂದ್ರ ಬುಡಕಟ್ಟು ವ್ಯವಹಾರಗಳು, ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಇಂದು ದೆಹಲಿಯ ʻಭಾರತ್ ಮಂಟಪʼದಲ್ಲಿ ʻಪಿಎಂ-ಜನಮನʼ ಅನುಷ್ಠಾನಕ್ಕಾಗಿ ವಿಸ್ತೃತ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸುವ ʻಮಂಥನ ಶಿಬಿರʼವನ್ನು ಉದ್ಘಾಟಿಸಿದರು.

  

Shri Arjun Munda ji, Hon'ble Union Minister of Tribal Affairs and Agriculture and Farmers Welfare inaugurates Manthan Shivir on the finalization of the Detailed Action Plan for the implementation of PM-JANMAN at Bharat Mandapam, Delhi today. #PMJANMAN pic.twitter.com/QeLDht5cYf

— Ministry of Tribal Affairs, Govt. of India (@TribalAffairsIn) December 15, 2023

 

ʻಪಿಎಂ ಜನಮನʼ ಯೋಜನೆಯು ವಿವಿಧ ಸಚಿವಾಲಯಗಳು / ಇಲಾಖೆಗಳ ಯೋಜನೆಗಳಿಂದ ಹೊರಗುಳಿದಿರುವ 75 ʻವಿಶೇಷ ದುರ್ಬಲ ಬುಡಕಟ್ಟು ಗುಂಪುಗಳʼ(ಪಿವಿಟಿಜಿ) ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಈ ಯೋಜನೆ ಸುಮಾರು 24,000 ಕೋಟಿ ರೂ.ಗಳ ಅನುದಾನವನ್ನು ಒಳಗೊಂಡಿದ್ದು, 9 ಪ್ರಮುಖ ಸಚಿವಾಲಯಗಳಿಗೆ ಸಂಬಂಧಿಸಿದ 11 ನಿರ್ಣಾಯಕ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಇದಕ್ಕೆ ನೋಡಲ್ ಮತ್ತು ಸಮನ್ವಯ ಸಚಿವಾಲಯವಾಗಿದ್ದು, ಇತರ 8 ವಲಯ ಸಚಿವಾಲಯಗಳು ಮತ್ತು ಇಲಾಖೆಗಳು ಅವುಗಳಿಗೆ ಸಂಬಂಧಿಸಿದ ಮಧ್ಯಸ್ಥಿಕೆಗಳನ್ನು ಕಾರ್ಯಗತಗೊಳಿಸುತ್ತವೆ.

'ಸರ್ಕಾರದ ಪರಿಪೂರ್ಣ ಕಾರ್ಯವಿಧಾನ – ಇದುವರೆಗೂ ತಲುಪಲಾಗದ ಅಂಚಿನಲ್ಲಿರುವ ಜನರನ್ನು ತಲುಪುವುದುʼ - ಎಂಬ ವಿಷಯಾಧಾರಿತವಾಗಿ ಈ ʻಮಂಥನ ಶಿಬಿರʼ ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ; ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್; ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್; ಬುಡಕಟ್ಟು ವ್ಯವಹಾರಗಳು ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ಶ್ರೀ ಬಿಶ್ವೇಶ್ವರ್ ಟುಡು; ಬುಡಕಟ್ಟು ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಸೇರಿದಂತೆ ಸಂಪುಟದ ಹಿರಿಯ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.

 

Manthan Shivir is being held at Bharat Mandapam, Delhi today for the finalization of the Detailed Action Plan for the implementation of PM-JANMAN. The Shivir comprises sectoral workshops on rural development, drinking water & sanitation, education, (1/2)#pmjanman pic.twitter.com/DTkHBFPK08

— Ministry of Tribal Affairs, Govt. of India (@TribalAffairsIn) December 15, 2023

ʻಪಿಎಂ-ಜನಮನʼ ಅನುಷ್ಠಾನಕ್ಕಾಗಿ ವಿಸ್ತೃತ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲು ಇಂದು ದೆಹಲಿಯ ʻಭಾರತ್ ಮಂಟಪʼದಲ್ಲಿ ಮಂಥನ ಶಿಬಿರ ನಡೆಯುತ್ತಿದೆ. ಈ ಶಿಬಿರವು ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಕುರಿತು ವಲಯ ಕಾರ್ಯಾಗಾರಗಳನ್ನು ಒಳಗೊಂಡಿದೆ

  

9 ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳು, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಉಪಕ್ರಮಗಳ ಮಾರ್ಗಸೂಚಿಯನ್ನು ಮಂಡಿಸಿದರು. ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ ಮತ್ತು ಬುಡಕಟ್ಟು ಜೀವನೋಪಾಯ ಹಾಗೂ ಮೂಲಸೌಕರ್ಯ ಕುರಿತ 8 ವಲಯ ಕಾರ್ಯಾಗಾರಗಳನ್ನು ಶಿಬಿರ  ಒಳಗೊಂಡಿತ್ತು. ದೇಶದ ವಿವಿಧ ಭಾಗಗಳ 600ಕ್ಕೂ ಹೆಚ್ಚು ಅಧಿಕಾರಿಗಳು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಹಾಗೂ ʻಪಿಎಂ ಜನಮನʼ ಯೋಜನೆಯನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸುವತ್ತ ಗಮನ ಹರಿಸುವ ವಿವಿಧ ಚಿಂಥನ-ಮಂಥನ ಅಧಿವೇಶನಗಳಲ್ಲಿ ಭಾಗವಹಿಸಿದ್ದರು.

ಸಂದರ್ಭದಲ್ಲಿ ತಮ್ಮ ಸಮಾರೋಪ ಭಾಷಣ ಮಾಡಿದ ಶ್ರೀ ಅರ್ಜುನ್ ಮುಂಡಾ ಅವರು, ʻಪಿಎಂ-ಜನಮನʼ ಯೋಜನೆಯು ದೇಶದ ಬಡವರು, ಅವಕಾವಂಚಿತರು ಮತ್ತು ತುಳಿತಕ್ಕೊಳಗಾದವರ ಬಗ್ಗೆ ಸರ್ಕಾರದ ಬದ್ಧತೆ ಮತ್ತು ಸಂವೇದನೆಯ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು. ಈ ಮಂಥನ ಶಿಬಿರದಲ್ಲಿ, ʻಪಿಎಂ-ಜನಮನʼ ಯೋಜನೆಯ ಅನುಷ್ಠಾನ ಮತ್ತು ಮಾರ್ಗಸೂಚಿಯ ಬಗ್ಗೆ ಚರ್ಚಿಸಲು ಎಲ್ಲರೂ ಸೇರಿದ್ದಾರೆ. ಇಂದಿನ ಚಿಂತನ ಮಂಥನದಿಂದ ಹೊರಹೊಮ್ಮಲಿರುವ ಫಲಿತಾಂಶವು ಅಭಿಯಾನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಕಳೆದ 75 ವರ್ಷಗಳಿಂದ ಸಾಧ್ಯವಾಗದ ʻವಿಶೇಷ ದುರ್ಬಲ ಬುಡಕಟ್ಟು ಗುಂಪುಗಳನ್ನುʼ(ಪಿವಿಟಿಜಿ) ಮುಖ್ಯವಾಹಿನಿಗೆ ತರುವ ಗುರಿ ಸಾಧನೆಯ ನಿಟ್ಟಿನಲ್ಲಿ ಮುಂದಿನ 3 ವರ್ಷಗಳು ಅನುಕರಣೀಯವಾಗಲಿವೆ  ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಮಾತನಾಡಿ, ಈ ದುರ್ಬಲ ಗುಂಪುಗಳ ಕಲ್ಯಾಣಕ್ಕಾಗಿ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಗಮನ ಹರಿಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದರು. ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಮಾತನಾಡಿ, ನಮ್ಮ ಬುಡಕಟ್ಟು ಸಮುದಾಯಗಳು ಅಭಿವೃದ್ಧಿ ಮತ್ತು ಸಮೃದ್ಧಿ ಹೊಂದಿದಾಗ ಮಾತ್ರ ಭಾರತವು ಅಭಿವೃದ್ಧಿ ಮತ್ತು ಸಮೃದ್ಧಿ ಹೊಂದುತ್ತದೆ ಎಂಬುದು ಪ್ರಧಾನಿಯವರ ನಂಬಿಕೆಯಾಗಿದೆ ಎಂದು ಹೇಳಿದರು. ʻಪಿವಿಟಿಜಿʼಗಳಿಗೆ ಶಿಕ್ಷಣ ಮತ್ತು ಕೌಶಲ್ಯವೃದ್ಧಿ ಒದಗಿಸುವುದರ ಜೊತೆಗೆ, ಅವರ ಮುಖ್ಯವಾಹಿನಿ ಸೇರ್ಪಡೆಗೆ ನೆರವಾಗುವ ಕ್ರಮಗಳ ಬಗ್ಗೆ ಸಚಿವರು ಒತ್ತಿ ಹೇಳಿದರು. ಬುಡಕಟ್ಟು ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಅಗತ್ಯವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಸಮಾಜದ ಈ ಅವಕಾಶವಂಚಿತ ವರ್ಗವು ಸುಲಭವಾಗಿ ಸಾಕ್ಷರತೆ ಮತ್ತು ಶಿಕ್ಷಣವನ್ನು ಪಡೆಯುವಂತೆ ಖಾತರಿಪಡಿಸಬೇಕು ಎಂದು ಸಚಿವರು ಹೇಳಿದರು. ಶ್ರೀ ರಾಜ್ ಕುಮಾರ್ ಸಿಂಗ್ ಅವರು ಮಾತನಾಡಿ, ಯಾವುದೇ ಕುಗ್ರಾಮಗಳು / ಮನೆಗಳನ್ನು ವಿದ್ಯುತ್‌ ಸಂಪರ್ಕದಿಂದ ಹೊರಗುಳಿಯಲು ಬಿಡುವುದಿಲ್ಲ ಎಂದು ಹೇಳಿದರು. ಗ್ರಿಡ್ ಅಥವಾ ಆಫ್-ಗ್ರಿಡ್ ಸಂಪರ್ಕಗಳ ಮೂಲಕ ಅಂತಹ ಗ್ರಾಮ ಅಥವಾ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದರು. 'ಯಾರೂ ಹಿಂದುಳಿಯದಂತೆ ನೋಡಿಕೊಳ್ಳಲುʼ ಮತ್ತು ʻಪಿಎಂ-ಜನಮನ ಯೋಜನೆʼಯ ಯಶಸ್ವಿಗಾಗಿ ಪ್ರಧಾನಮಂತ್ರಿಯವರು ರೂಪಿಸಿದ ದೃಷ್ಟಿಕೋನವನ್ನು ಸಾಧಿಸಲು ಸಚಿವಾಲಯಗಳು ಸಂಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲಿವೆ ಎಂದು ಸಚಿವರು ಭರವಸೆ ನೀಡಿದರು.

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಗೌರವಾನ್ವಿತ ಶ್ರೀ ಧರ್ಮೇಂದ್ರ ಪ್ರಧಾನ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಗೌರವಾನ್ವಿತ ಶ್ರೀಮತಿ ಸ್ಮೃತಿ ಇರಾನಿ, ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಗೌರವಾನ್ವಿತ ಶ್ರೀ ಆರ್.ಕೆ. ಸಿಂಗ್ ಅವರೊಂದಿಗೆ ಸ್ಮರಣೀಯ ಕ್ಷಣ.

 

 

A momentous occasion as Shri Dharmendra Pradhan ji, Hon'ble Union Minister of Education & Skill Development, Smt Smriti Irani ji, Hon'ble Union Minister of Women and Child Development, Shri R.K. Singh ji, Hon'ble Union Minister of New and Renewable Energy,#PMJANMAN pic.twitter.com/Uj1wYxLZoP

— Ministry of Tribal Affairs, Govt. of India (@TribalAffairsIn) December 15, 2023

 

 

ಕುಡಿಯುವ ನೀರು ಮತ್ತು ನೈರ್ಮಲ್ಯದ ಸಮಸ್ಯೆಯನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಸಚಿವರಾದ ಶ್ರೀ ವಿಶ್ವೇಶ್ವರ್ ಟುಡು ಅವರು, ಈವರೆಗೆ 70%ಕ್ಕಿಂತ ಹೆಚ್ಚು ವ್ಯಾಪ್ತಿಯಲ್ಲಿ ಗುರಿ ಸಾಧಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಕಾಮಗಾರಿಗಳು ವೇಗ ಮತ್ತು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ ಎಂದು ಒತ್ತಿ ಹೇಳಿದರು. ʻಪಿಎಂ-ಜನಮನʼ ಗುರಿಗಳನ್ನು ಸಾಧಿಸುವ ಬಗ್ಗೆ ಅವರು ಮತ್ತಷ್ಟು ಒತ್ತಿ ಹೇಳಿದರು. ಡಾ. ಭಾರತಿ ಪ್ರವೀಣ್ ಪವಾರ್ ಅವರು ಮಾತನಾಡಿ, ಬುಡಕಟ್ಟು ಪ್ರದೇಶಗಳಲ್ಲಿನ ಆರೋಗ್ಯ ಸಮಸ್ಯೆಗಳು ಮತ್ತು ʻಪಿವಿಟಿಜಿʼಗಳ ಕಲ್ಯಾಣಕ್ಕಾಗಿ ʻಪಿಎಂ-ಜನಮನʼ ಅಡಿಯಲ್ಲಿ ನಿಗದಿಪಡಿಸಿದ ಗುರಿಗಳನ್ನು ಎತ್ತಿ ತೋರಿದರು. ಪಿಎಂ ʼಜನಮನʼವು  ʻಜನ ಜೀವನʼವನ್ನು ತಲುಪುವುದನ್ನು ಖಾತರಿಪಡಿಸಿಕೊಳ್ಳಲು ಸಾಮೂಹಿಕ ಮತ್ತು ಒಗ್ಗಟ್ಟಿನ ವಿಧಾನದಲ್ಲಿ ಮುಂದೆ ಬರುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ʻಆಯುಷ್ಮಾನ್ ಕಾರ್ಡ್ʼಗಳ 100% ಗುರಿಸಾಧನೆ, ನಿರ್ದಿಷ್ಟ ಸಮುದಾಯಗಳಲ್ಲಿ ʻಕುಡಗೋಲು ಕೋಶ ರಕ್ತಹೀನತೆʼ ತಪಾಸಣೆಯ ಗುರಿಯನ್ನು ಸಚಿವರು ಮುಂದಿಟ್ಟರು.

ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವರಾದ ಗೌರವಾನ್ವಿತ ಶ್ರೀ ವಿಶ್ವೇಶ್ವರ ಟುಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವೆ ಗೌರವಾನ್ವಿತ ಶ್ರೀಮತಿ ಭಾರತಿ ಪವಾರ್ ಅವರೊಂದಿಗೆ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು, ಹೆಚ್ಚುವರಿ ಕಾರ್ಯದರ್ಶಿಗಳು.

 

Shri Bishweswar Tudu ji, Hon'ble Minister of State for Jal Shakti and Tribal Affairs, Smt Bharati Pawar, Hon'ble Minister of State for Health and Family Welfare and Tribal Affairs, joined by Secretary-level officers, Additional secretaries, pic.twitter.com/dwvlA3vHtP

— Ministry of Tribal Affairs, Govt. of India (@TribalAffairsIn) December 15, 2023

 

 

ಬುಡಕಟ್ಟು ವ್ಯವಹಾರಗಳಕಾರ್ಯದರ್ಶಿ ಶ್ರೀ ವಿಭು ನಾಯರ್ ಅವರು ಪಿಎಂ-ಜನಮನ ನ ಸ್ಥೂಲ ರೂಪುರೇಷೆ, ಯೋಜನೆ ನ ಅಗತ್ಯ, ಅನುಷ್ಠಾನ ಕಾರ್ಯತಂತ್ರ, ಕಾಲಮಿತಿ ಮತ್ತು ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಅಧಿಕಾರಿಗಳನ್ನು ತೊಡಗಿಸಿಕೊಳ್ಳುವಂತೆ ಒಗ್ಗೂಡಿಸುವ ಕಾರ್ಯವಿಧಾನವನ್ನು ಪ್ರಸ್ತುತಪಡಿಸಿದರು.

ಎಲ್ಲಾ 8 ವಲಯ ಕಾರ್ಯಾಗಾರಗಳ ಅಧ್ಯಕ್ಷರು ಆಯಾ ಡೊಮೇನ್ ಗಳಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ ಅಂತಿಮಗೊಳಿಸಿದ ಕ್ರಿಯಾ ಯೋಜನೆಯನ್ನು ಪ್ರಸ್ತುತಪಡಿಸಿದ ಸಂಪೂರ್ಣ ಮತ್ತು ಸಮಾರೋಪ ಅಧಿವೇಶನದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

 

ಎಸ್. ನಂ.

ಚಟುವಟಿಕೆ/ಮಧ್ಯಪ್ರವೇಶ

ಫಲಾನುಭವಿ/ಗುರಿಗಳ ಸಂಖ್ಯೆ

1.

ಪಕ್ಕಾ ಮನೆಗಳನ್ನು ಒದಗಿಸುವುದು, ಗ್ರಾಮೀಣಾಭಿವೃದ್ಧಿ ಸಚಿವಾಲಯ

4.90 ಲಕ್ಷ

2.

ಸಂಪರ್ಕ ರಸ್ತೆಗಳು, ಗ್ರಾಮೀಣಾಭಿವೃದ್ಧಿ ಸಚಿವಾಲಯ

8000 ಕಿ.ಮೀ.

3.

ಕೊಳವೆ ನೀರು ಸರಬರಾಜು / ಸಮುದಾಯ ನೀರು ಸರಬರಾಜು, ಜಲ ಜೀವನ್ ಯೋಜನೆ

ಎಲ್ಲಾ ಪಿವಿಟಿಜಿ ಜನವಸತಿಗಳು ಮತ್ತು

ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಗಳು

4.

ಔಷಧ ವೆಚ್ಚದೊಂದಿಗೆ ಸಂಚಾರಿ ವೈದ್ಯಕೀಯ ಘಟಕಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

1000 (10/ಜಿಲ್ಲೆ)

5.

ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಶಾಲಾ ಶಿಕ್ಷಣ ಇಲಾಖೆ

500

6.

ಅಂಗನವಾಡಿ ಕೇಂದ್ರಗಳ ನಿರ್ಮಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

2500

7.

ವಿವಿಧೋದ್ದೇಶ ಕೇಂದ್ರಗಳ ನಿರ್ಮಾಣ (ಎಂಪಿಸಿ), ಬುಡಕಟ್ಟು ವ್ಯವಹಾರಗಳ ಸಚಿವಾಲಯ

1000

 

8. & 9.

 

 

ಎ) ಗ್ರಿಡ್ ಮತ್ತು ಬಿ) ಸೌರ ವಿದ್ಯುತ್ ಆಫ್-ಗ್ರಿಡ್, ವಿದ್ಯುತ್ ಮತ್ತು ಎಂಎನ್ಆರ್ಇ ಮೂಲಕ ಜನವಸತಿಗಳು / ಮನೆಗಳಿಗೆ ಶಕ್ತಿ ತುಂಬುವುದು (ಕೊನೆಯ ಮೈಲಿ ಸಂಪರ್ಕ)

1,00,000 ಕುಟುಂಬಗಳು

1500 ಜನವಸತಿ ಪ್ರದೇಶಗಳು

10.

ವನ್ ಧನ್ ವಿಕಾಸ್ ಕೇಂದ್ರಗಳ ಸ್ಥಾಪನೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯ

500

11.

ಮೊಬೈಲ್ ಟವರ್ ಗಳ ಸ್ಥಾಪನೆ, ದೂರಸಂಪರ್ಕ ಡಿ / ಒ

3000 ಗ್ರಾಮಗಳು

 

******

 


(Release ID: 1987190) Visitor Counter : 89


Read this release in: English , Hindi , Marathi