ಹಣಕಾಸು ಸಚಿವಾಲಯ
ಭಾರತೀಯ ಅಧ್ಯಕ್ಷತೆಯ ಅಡಿಯಲ್ಲಿ ಜಿ 20 ಶೃಂಗಸಭೆಯಲ್ಲಿ ಡಿಪಿಐ ಮತ್ತು ಜಿ 20 ಎಫ್ಐಎಪಿ 2023 ಮೂಲಕ ಆರ್ಥಿಕ ಸೇರ್ಪಡೆ ಮತ್ತು ಉತ್ಪಾದಕತೆ ಲಾಭಗಳನ್ನು ಹೆಚ್ಚಿಸಲು ಜಿ 20 ನೀತಿ ಶಿಫಾರಸುಗಳಿಗೆ ಅನುಮೋದನೆ ನೀಡಿರುವುದು ಒಂದು ಮಹತ್ವದ ಸಾಧನೆಯಾಗಿದೆ ಎಂದು ಡಿಇಎ ಸಲಹೆಗಾರ ಚಂಚಲ್ ಸರ್ಕಾರ್ ಹೇಳಿದ್ದಾರೆ.
ಹಣಕಾಸು ಸೇರ್ಪಡೆಗಾಗಿ ನಾಲ್ಕನೇ ಜಿ 20 ಜಾಗತಿಕ ಪಾಲುದಾರಿಕೆ (ಜಿಪಿಎಫ್ಐ) ಸಭೆ 2023 ರ ಸೆಪ್ಟೆಂಬರ್ 14-16 ರವರೆಗೆ ಮುಂಬೈನಲ್ಲಿ ನಡೆಯಲಿದೆ.
ಎಂಎಸ್ಎಂಇಗಳಿಗೆ ಶಕ್ತಿ ತುಂಬಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತ ವಿಚಾರ ಸಂಕಿರಣ ಸಭೆಗೂ ಮುನ್ನ ನಡೆಯಿತು
Posted On:
14 SEP 2023 7:23PM by PIB Bengaluru
ಹಣಕಾಸು ಸೇರ್ಪಡೆಗಾಗಿ ನಾಲ್ಕನೇ ಜಿ 20 ಜಾಗತಿಕ ಪಾಲುದಾರಿಕೆ (ಜಿಪಿಎಫ್ಐ) ಸಭೆ 2023 ರ ಸೆಪ್ಟೆಂಬರ್ 14-16 ರವರೆಗೆ ಮುಂಬೈನಲ್ಲಿ ನಡೆಯಲಿದೆ. ಇದು ಜಿಪಿಎಫ್ಐ ಜಾರಿಗೆ ತರುತ್ತಿರುವ ಮೂರು ವರ್ಷಗಳ ಎಫ್ಐಎಪಿ 2020 ರ ಉಳಿದ ಕಾರ್ಯಗಳ ಬಗ್ಗೆ ಚರ್ಚೆಗಳನ್ನು ಒಳಗೊಂಡಿರುತ್ತದೆ. ಡಿಜಿಟಲ್ ಹಣಕಾಸು ಸೇರ್ಪಡೆ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಿಸಿದ ವಿತರಣೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಸಭೆಗೆ ಮುಂಚಿತವಾಗಿ ಎಂಎಸ್ಎಂಇಗಳಿಗೆ ಶಕ್ತಿ ತುಂಬಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತ ವಿಚಾರ ಸಂಕಿರಣವನ್ನು 2023 ರ ಸೆಪ್ಟೆಂಬರ್ 14, ರಂದು ನಡೆಸಲಾಯಿತು. ಜಿಪಿಎಫ್ಐ ಕಾರ್ಯ ಗುಂಪಿನ ಅಡಿಯಲ್ಲಿ ಜಿ 20 ಇಂಡಿಯಾ ಅಧ್ಯಕ್ಷತೆ ಆಯೋಜಿಸಿರುವ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಹಣಕಾಸು ಸೇರ್ಪಡೆ ಕುರಿತ ಸರಣಿ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ.
ಹಣಕಾಸು ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ವ್ಯವಹಾರಗಳು) ಶ್ರೀ ಅಜಯ್ ಸೇಠ್, ಆರ್ ಬಿಐ ಉಪ ಗವರ್ನರ್ ಶ್ರೀ ಟಿ.ರಬಿ ಶಂಕರ್, ಉಪಾಧ್ಯಕ್ಷ (ಅಂತರರಾಷ್ಟ್ರೀಯ ಹಣಕಾಸು ನಿಗಮ) ಶ್ರೀ ಮೊಹಮ್ಮದ್ ಗೌಲ್ಡ್ ಮತ್ತು ಎಲ್ಡಿಸಿ ವಾಚ್ ನ ಜಾಗತಿಕ ಸಂಯೋಜಕ ಮತ್ತು ಅಮೆರಿಕಕ್ಕೆ ನೇಪಾಳದ ಮಾಜಿ ರಾಯಭಾರಿ ಡಾ.ಅರ್ಜುನ್ ಕುಮಾರ್ ಕರ್ಕಿ ಅವರು ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದರು.
"ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಉನ್ನತ ಆರ್ಥಿಕ ಬೆಳವಣಿಗೆಗೆ ಎಂಎಸ್ಎಂಇಗಳನ್ನು ಶಕ್ತಿಯುತಗೊಳಿಸುವುದು " ಮತ್ತು "ಕ್ರೆಡಿಟ್ ಗ್ಯಾರಂಟಿಗಳು ಮತ್ತು ಎಸ್ಎಂಇ ಪರಿಸರ ವ್ಯವಸ್ಥೆಗಳು " ಎಂಬ ಎರಡು ಪ್ರಮುಖ ವಿಷಯಗಳ ಸುತ್ತ ಅಂತಾರಾಷ್ಟ್ರೀಯ ತಜ್ಞರನ್ನು ಒಳಗೊಂಡ ಪ್ಯಾನಲ್ ಚರ್ಚೆಗಳು ಈ ವಿಚಾರ ಸಂಕಿರಣಕ್ಕೆ ಸಾಕ್ಷಿಯಾದವು. ಡಿಪಿಐ ಮೂಲಕ ಎಂಎಸ್ಎಂಇಗಳಿಗೆ ಶಕ್ತಿ ತುಂಬುವ ಕುರಿತು ನಡೆದ ಮೊದಲ ಚರ್ಚೆಯನ್ನು ಎಸ್ಎಂಇ ಫೈನಾನ್ಸ್ ಫೋರಂನ ಸಿಇಒ ಮ್ಯಾಥ್ಯೂ ಗೇಮ್ಸರ್ ನಿರ್ವಹಿಸಿದರು ಮತ್ತು ಪ್ಯಾನೆಲಿಸ್ಟ್ ಗಳಾದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (ಎಸ್ಐಡಿಬಿಐ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಿವಸುಬ್ರಮಣಿಯನ್ ರಾಮನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಿ ಕುಮಾರ್ ತಿವಾರಿ, ಸಹಮತಿಯ ಸಹ ಸಂಸ್ಥಾಪಕ ಮತ್ತು ಸಿಇಒ ಶ್ರೀ ಬಿ ಜಿ ಮಹೇಶ್, ಎಫ್ ಎಂಒನ ಸಿಇಒ ಶ್ರೀ ಮೈಕೆಲ್ ಜೊಂಗೆನಿಲ್, ಮಾಸ್ಟರ್ ಕಾರ್ಡ್ ನ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಶ್ರೀಮತಿ ಜೇನ್ ಪ್ರೊಕೊಪ್ ಪಾಲ್ಗೊಂಡಿದ್ದರು. ಇವರ ಸಮೃದ್ಧ ಚರ್ಚೆಗಳು ಎಂಎಸ್ಎಂಇಗಳ ಆರ್ಥಿಕ ಸೇರ್ಪಡೆಯನ್ನು ತ್ವರಿತವಾಗಿ ಮುನ್ನಡೆಸುವಲ್ಲಿ ಡಿಪಿಐ ಪಾತ್ರದ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಒದಗಿಸಿದವು.
ಸಾಲ ಖಾತರಿಗಳು ಮತ್ತು ಎಸ್ಎಂಇ ಪರಿಸರ ವ್ಯವಸ್ಥೆಗಳ ಕುರಿತ ಎರಡನೇ ಪ್ಯಾನಲ್ ಚರ್ಚೆಯನ್ನು ಈಜಿಪ್ಟ್ ನ ಕ್ರೆಡಿಟ್ ಗ್ಯಾರಂಟಿ ಕಂಪನಿ (ಸಿಜಿಸಿ) ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ನಾಗ್ಲಾ ಬಹ್ರ್ ನಿರ್ವಹಿಸಿದರು. ಎಇಸಿಎಂನ ಪ್ರಧಾನ ಕಾರ್ಯದರ್ಶಿ ಕ್ಯಾಟ್ರಿನ್ ಸ್ಟರ್ಮ್, ಸಿಜಿಟಿಎಸ್ಎಂಇ ಸಿಇಒ ಸಂದೀಪ್ ವರ್ಮಾ, ಕಫಾಲಾ ಸಿಇಒ ಹೋಮಮ್ ಹಾಶೆಮ್ ಮತ್ತು ಕೋಡಿಟ್ ಉಪ ನಿರ್ದೇಶಕ ವೂಯಿನ್ ಪಾರ್ಕ್ ಪ್ಯಾನೆಲಿಸ್ಟ್ ಗಳಾಗಿದ್ದರು.
ಜಿ 20 ಭಾರತ ಅಧ್ಯಕ್ಷತೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಆರ್ಥಿಕ ಸೇರ್ಪಡೆ ಮತ್ತು ಉತ್ಪಾದಕತೆಯ ಲಾಭಗಳನ್ನು ಹೆಚ್ಚಿಸಲು ವಿಶ್ವ ಬ್ಯಾಂಕ್ ಜಿ 20 ನೀತಿ ಶಿಫಾರಸುಗಳನ್ನು ಪ್ರಸ್ತುತಪಡಿಸಿತು. ಇದನ್ನು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಜಿ 20 ನಾಯಕರು ಅನುಮೋದಿಸಿದರು.
ಮುಂದಿನ ಎರಡು ದಿನಗಳಲ್ಲಿ, ಡಿಜಿಎಫ್ಐ ಸದಸ್ಯರು ಡಿಜಿಟಲ್ ಹಣಕಾಸು ಸೇರ್ಪಡೆಗಾಗಿ ಜಿ 20 ಜಿಪಿಎಫ್ಐ ಉನ್ನತ ಮಟ್ಟದ ತತ್ವಗಳ ಅನುಷ್ಠಾನ, ರಾಷ್ಟ್ರೀಯ ಹಣ ರವಾನೆ ಯೋಜನೆಗಳ ನವೀಕರಣ ಮತ್ತು ಎಸ್ಎಂಇ ಉತ್ತಮ ಅಭ್ಯಾಸಗಳು ಮತ್ತು ಎಸ್ಎಂಇ ಹಣಕಾಸುಗಳಲ್ಲಿನ ಸಾಮಾನ್ಯ ನಿರ್ಬಂಧಗಳನ್ನು ನಿವಾರಿಸಲು ನವೀನ ಸಾಧನಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಪಿಎಫ್ಐ ಕೆಲಸದ ಬಗ್ಗೆ ಚರ್ಚಿಸಲಿದ್ದಾರೆ. ಜಿಪಿಎಫ್ಐ ಸಭೆಯ ಭಾಗವಾಗಿ " ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವುದು: ಡಿಜಿಟಲ್ ಮತ್ತು ಹಣಕಾಸು ಸಾಕ್ಷರತೆ ಮತ್ತು ಗ್ರಾಹಕ ರಕ್ಷಣೆಯ ಮೂಲಕ ಗ್ರಾಹಕರ ಸಬಲೀಕರಣ," ಎಂಬ ವಿಚಾರ ಸಂಕಿರಣವನ್ನು 2023 ಸೆಪ್ಟೆಂಬರ್ 16 ರಂದು ನಡೆಸಲಾಗುವುದು.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ಸಲಹೆಗಾರ ಚಂಚಲ್ ಸರ್ಕಾರ್, ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ, ನಾಯಕರು ಭಾರತ ಅಧ್ಯಕ್ಷತೆ ಅಡಿಯಲ್ಲಿ ಜಿಪಿಎಫ್ಐ ತಯಾರಿಸಿದ ಎರಡು ಮಹತ್ವದ ದಾಖಲೆಗಳನ್ನು ಅನುಮೋದಿಸಿದರು. ಅವುಗಳೆಂದರೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಮೂಲಕ ಹಣಕಾಸು ಸೇರ್ಪಡೆ ಮತ್ತು ಉತ್ಪಾದಕತೆ ಲಾಭಗಳನ್ನು ಹೆಚ್ಚಿಸಲು ಜಿ 20 ನೀತಿ ಶಿಫಾರಸುಗಳು ಮತ್ತು ಜಿ 20 ಹಣಕಾಸು ಸೇರ್ಪಡೆ ಕ್ರಿಯಾ ಯೋಜನೆ (ಎಫ್ಐಎಪಿ) 2023.
****
(Release ID: 1957553)
Visitor Counter : 89